ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ಆಫೀಸಿನಲ್ಲಿ ಸ್ಥಾನಮಾನಗಳು ದೊರೆಯಲಿವೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 13 ಜನವರಿ 2026, 23:59 IST
Last Updated 13 ಜನವರಿ 2026, 23:59 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಈ ಹಿಂದೆ ಪ್ರಾರಂಭವಾಗಿರುವ ಕಾರ್ಯಗಳು ಮನುಷ್ಯ ಪ್ರಯತ್ನದ ಕೊರತೆಯಿಂದ ಸ್ತಬ್ಧವಾದಂತಾಗಲಿದೆ. ನಿರೀಕ್ಷಿತ ಧನಾಗಮನವಿದ್ದರೂ ಆರ್ಥಿಕ ವಿಷಯಗಳಲ್ಲಿ ಎಚ್ಚರವಹಿಸಿ.
  • ವೃಷಭ
  • ಸಂದರ್ಭಕ್ಕೆ ಅನುಗುಣವಾಗಿ ತೀರ್ಮಾನ ಅನಿವಾರ್ಯ ಮತ್ತು ಸರಿ ಆಗುವುದು. ಬಂಧುಗಳ ಸಹಾಯದಿಂದ ಪುತ್ರನಿಗೆ ಕಾರ್ಯಾನುಕೂಲ. ಸ್ವಂತ ಕೆಲಸವನ್ನು ಜರೂರಾಗಿ ಮಾಡಬೇಕಾಗುತ್ತದೆ.
  • ಮಿಥುನ
  • ಧಾರ್ಮಿಕ ವಿಚಾರಗಳತ್ತ ಮನಸ್ಸು ಹರಿಯುವುದು.ಮನೆಯಲ್ಲಿ ದೇವತಾ ಕಾರ್ಯಕ್ರಮಗಳನ್ನು ಏರ್ಪಡಿಸುವಿರಿ. ವಾಯುಬಾಧೆ ಉಂಟಾಗುವುದರಿಂದ ಸಣ್ಣ-ಪುಟ್ಟ ಅನಾರೋಗ್ಯ ಎದುರಾಗುವುದು.
  • ಕರ್ಕಾಟಕ
  • ಸಂಶೋಧಕರರಿಗೆ ಅನುಕೂಲಕರ ಪುಸ್ತಕ ದೊರೆಯಲಿದೆ. ಸರ್ವರಂಗದಲ್ಲೂ ಜಯಶಾಲಿಯ ಪಟ್ಟ ಹೊಂದುವ ಯೋಗವಿದೆ. ಬೇಕರಿ ಪದಾರ್ಥಗಳ ಮಾರಾಟದಿಂದಲಾಭ ಇರುವುದು.
  • ಸಿಂಹ
  • ಸಂಬಂಧಿಕರಲ್ಲಿ ಆರ್ಥಿಕ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತುಗಳು ಬರಬಹುದು. ಉದ್ಯೋಗದಲ್ಲಿನ ವರ್ಗಾವಣೆ ರದ್ದು ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಸ್ಥೈರ್ಯ ಇರಲಿ.
  • ಕನ್ಯಾ
  • ದಾರಿಹೋಕರ ಟೀಕೆಗಳಿಗೆ ಹೆದರದೆ ಕೆಲಸದಲ್ಲಿ ಸಕಾರಾತ್ಮಕವಾಗಿ ಮುಂದುವರಿಯಿರಿ. ನಟನಾ ವೃತ್ತಿಯವರಿಗೆ ಸಂಪತ್ತು ಹರಿದು ಬರಲಿದೆ. ಸಂತಸದ ವಾತಾವರಣದಿಂದ ನೆಮ್ಮದಿ ಇರುವುದು.
  • ತುಲಾ
  • ಯಾವುದೇ ನಿಯಮ ಉಲ್ಲಂಘನೆಯಾಗದೇ ಇರುವ ರೀತಿಯಲ್ಲಿ ಇರುವುದು ಉತ್ತಮ. ಶನೈಶ್ಚರನ ಆರಾಧನೆಯಿಂದ ಜಟಿಲ ಸಮಸ್ಯೆ ಇತ್ಯರ್ಥಗೊಂಡು ಪ್ರತಿವಾದಿಗಳು ನಿರುತ್ತರರಾಗುವರು.
  • ವೃಶ್ಚಿಕ
  • ವ್ಯವಹಾರವನ್ನು ವಿಸ್ತರಿಸುವ ಯೋಜನೆ ಹಾಕಿಕೊಂಡಿದ್ದರೆ ಅದನ್ನು ಅನುಷ್ಠಾನಕ್ಕೆ ತರಲು ಸಕಾಲ. ರಕ್ತದ ಅಶುದ್ಧಿಯಿಂದ ಸಮಸ್ಯೆಗಳು ಕಾಡಬಹುದು. ಜೀವನದ ಬಗ್ಗೆ ನಿರುತ್ಸಾಹ ತಾಳದಿರಿ.
  • ಧನು
  • ಟ್ರಾವೆಲ್ಸ್ ಏಜೆನ್ಸಿ ಉದ್ಯೋಗದವರಿಗೆ ಲಾಭದಾಯಕ ಬೆಳವಣಿಗೆ ಇರುತ್ತದೆ. ಆಫೀಸಿನಲ್ಲಿ ಸ್ಥಾನಮಾನಗಳು ದೊರೆಯಲಿವೆ. ಉತ್ತಮ ಕಾರ್ಯಗಳಿಗೆ ಎಂದಿನಂತೆ ಶ್ಲಾಘನೆ ಸಿಗುತ್ತದೆ.
  • ಮಕರ
  • ಹೆಚ್ಚಿನ ಉತ್ಸಾಹ ಕಾಣಿಸುತ್ತಿದ್ದು ಹೊಸದೊಂದು ಹಾದಿಯಲ್ಲಿ ನಡೆಯಲಿದ್ದೀರಿ. ತಂದೆಯವರ ಮನಸ್ಸನ್ನು ನೋಯಿಸದೇ, ತಂದೆಯವರ ಮಾತಿನಂತೆ ನಡೆಯುವುದು ಶ್ರೇಯಸ್ಕರ.
  • ಕುಂಭ
  • ವ್ಯಾಪಾರದಲ್ಲಿ ಸಹಚರರಿಂದ ಮೋಸವಾಗುತ್ತಿರುವ ವಿಚಾರ ಅನುಭವಕ್ಕೆ ಬಂದು ದುಃಖವಾಗಬಹುದು. ಬದುಕಿನ ಕವಲುದಾರಿಯಲ್ಲಿರುವ ನಿಮಗೆ ಮಾರ್ಗದರ್ಶನ ದೊರೆಯಲಿದೆ.
  • ಮೀನ
  • ಕೆಲಸದಲ್ಲಿ ವಿಘ್ನಗಳು ಎದುರಾದರೂ, ಅಪೇಕ್ಷಿತ ಫಲ ದೊರಕುವುದು. ದೂರ ಪ್ರಯಾಣದ ಕಾರ್ಯಗಳನ್ನು ಮುಂದೂಡುವುದು ಒಳ್ಳೆಯದು. ಸಮಾಜದಲ್ಲಿ ಮೃದುಭಾಷಿಗಳು ಎನಿಸಿಕೊಳ್ಳುವಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.