ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ಕಂಕಣ ಭಾಗ್ಯದ ಸಾಧ್ಯತೆ ಇದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 17 ಜುಲೈ 2024, 22:45 IST
Last Updated 17 ಜುಲೈ 2024, 22:45 IST
   
ಮೇಷ
  • ಏಕಾಗ್ರತೆ ಕೊರತೆಯಿಂದಾಗಿ ಕೆಲಸ ಕಾರ್ಯಗಳಲ್ಲಿ ತಪ್ಪುಗಳು ಉಂಟಾಗುತ್ತವೆ. ಆತ್ಮೀಯನಿಗೆ ಸಾಂತ್ವನ ಹೇಳಬೇಕಾದ ಸಂದರ್ಭ ಬರಲಿದೆ. ಉದ್ಯೋಗದ ವಿಷಯದಲ್ಲಿದ್ದ ಚಿಂತೆ ದೂರಾಗಲಿದೆ.
  • ವೃಷಭ
  • ಧನಾಗಮನ ಹೆಚ್ಚಿದ್ದರೂ ಬಹುಪಾಲು ಅನಾವಶ್ಯಕವಾಗಿ ಖರ್ಚಾಗಲಿದೆ. ಸಿವಿಲ್ ಎಂಜಿನಿಯರುಗಳಿಗೆ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಸಿಗಲಿದೆ. ಷೇರು ವ್ಯಾಪಾರವು ಅದೃಷ್ಟದಾಯಕವಾಗಿರುತ್ತದೆ.
  • ಮಿಥುನ
  • ವಿವಾಹ ಪ್ರಸ್ತಾಪಗಳು ಬಲಗೊಂಡು ಕಂಕಣ ಭಾಗ್ಯದ ಸಾಧ್ಯತೆ ಇದೆ. ಮೊಂಡುತನ ಬಿಟ್ಟು ಪೋಷಕರ ಮಾತುಗಳನ್ನು ಕೇಳುವುದು ಉತ್ತಮ. ನಾಯಕತ್ವದ ಗುಣಗಳನ್ನು ಪ್ರದರ್ಶಿಸುವುದರಿಂದ ಲಾಭವಿದೆ.
  • ಕರ್ಕಾಟಕ
  • ಗೃಹ ನಿರ್ಮಾಣದ ಬಗ್ಗೆ ಹಿರಿಯರ ಹಾಗೂ ಮನೆಯವರ ಅಭಿಪ್ರಾಯ ಸಂಗ್ರಹಿಸಿ. ಇತರರಿಗೆ ಕಹಿಯಾಗುವ ಕೆಲವು ನಿರ್ಧಾರಗಳನ್ನು ನೀವು ತೆಗೆದುಕೊಳ್ಳುತ್ತೀರಿ. ಸಾಂಕ್ರಾಮಿಕ ರೋಗಗಳು ಬಾಧಿಸಬಹುದು.
  • ಸಿಂಹ
  • ಹಿರಿಯರ ಮುಂದೆ ಕೌಟುಂಬಿಕ ಪರಂಪರೆ ಹಾಗೂ ನೀತಿ ನಿಯಮಗಳನ್ನು ಮೀರಿ ನಡೆದು ಅವರ ಅಸಮಾಧಾನಕ್ಕೆ ಕಾರಣವಾಗುವಿರಿ. ಸಾಹಿತ್ಯ ವಲಯದಲ್ಲಿರುವವರಿಗೆ ಹೆಚ್ಚಿನ ಮನ್ನಣೆ ಸಿಗಲಿದೆ.
  • ಕನ್ಯಾ
  • ವೈಯಕ್ತಿಕ ಜೀವನದಲ್ಲಿ ಕೆಲವೊಂದು ಬದಲಾವಣೆಗೆ ಹೊಂದಿಕೊಳ್ಳ ಬೇಕಾದ ಅನಿವಾರ್ಯತೆ ಉಂಟಾಗಲಿದೆ. ನಿರುದ್ಯೋಗಿಗಳು ಬಂದ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ.
  • ತುಲಾ
  • ಕೆಲಸ ಕಾರ್ಯಗಳಿಗೆ ಅಡ್ಡಿಯಾಗುತ್ತಿದ್ದವರು ದೂರ ಸರಿಯಲಿದ್ದಾರೆ. ಪ್ರಾಣಿ ಚರ್ಮದಿಂದ ವಸ್ತುಗಳನ್ನು ತಯಾರಿಸುವವರಿಗೆ ಹೆಚ್ಚಿನ ಬೇಡಿಕೆ ಬರಲಿದೆ. ಸಹೋದ್ಯೊಗಿಗಳೊಡನೆ ಸಹನೆಯಿಂದ ನಡೆದುಕೊಳ್ಳಿ.
  • ವೃಶ್ಚಿಕ
  • ಆತ್ಮ ಗೌರವದ ರಕ್ಷಣೆಯ ದೃಷ್ಟಿಯಿಂದ ಸಂದರ್ಭಗಳೊಡನೆ ರಾಜಿ ಮಾಡಿಕೊಳ್ಳುವುದು ಸರಿ ಎನಿಸಲಿದೆ. ಸಾಂಸಾರಿಕ ವಿಷಯದಲ್ಲಿ ಹಿರಿಯರ ಮಾತು ಮೀರದಿರುವುದು ಲೇಸು. ನೀರಾವರಿ ಬೆಳೆಗಳು ಲಾಭ ತರಲಿದೆ.
  • ಧನು
  • ನಿಮ್ಮ ನಡೆ ಮೇಲಧಿಕಾರಿ ಅಥವಾ ಪಾಲುದಾರರಿಗೆ ಇಷ್ಟವಾಗುವ ರೀತಿಯಲ್ಲಿ ಇರುವುದು ಉತ್ತಮ. ಹಲವು ದಿನಗಳ ನಂತರ ನಿಮ್ಮಿಷ್ಟದ ಕೆಲಸವನ್ನು ಸಂತಸದಿಂದ ಮಾಡುವಿರಿ. ಆರೋಗ್ಯದ ಬಗ್ಗೆ ಜಾಗ್ರತೆವಹಿಸಿ.
  • ಮಕರ
  • ಕೌಟುಂಬಿಕವಾಗಿ ಖರ್ಚುಗಳು ಅಧಿಕವೆನಿಸಿದರೂ ಆರ್ಥಿಕವಾಗಿ ನಿಮ್ಮ ಆದಾಯ ಯಾವುದೇ ರೀತಿಯ ಏರಿಳಿತಗಳಿಲ್ಲದೆ ಸಮನಾಗಿರುವುದು. ನಿಮ್ಮ ವಾಹನಕ್ಕೆ ಸಣ್ಣ ಪ್ರಮಾಣದಲ್ಲಿ ಅವಘಡಗಳಾಗುವ ಸಾಧ್ಯತೆ ಇದೆ.
  • ಕುಂಭ
  • ನ್ಯಾಯಾಲಯದಲ್ಲಿ ನಡೆಯುತ್ತಿರುವ ವ್ಯಾಜ್ಯಗಳ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ವಕೀಲರ ಬಳಿ ವೈಯಕ್ತಿವಾಗಿ ಮಾತನಾಡುವುದು ಉತ್ತಮ. ಆಗು ಹೋಗುಗಳ ಮೇಲೆ ಹೆಚ್ಚು ಚಿಂತೆಗೊಳಗಾಗದಿರಿ.
  • ಮೀನ
  • ಧನಾಗಮನದಲ್ಲಿ ವ್ಯತ್ಯಯ ಅಥವಾ ವಿಳಂಬ ತೋರಿಬರಲಿದೆ. ಸಂಘ ಸಂಸ್ಥೆಗಳ ಹುದ್ದೆಯನ್ನು ಅಲಂಕರಿಸುವ ಅವಕಾಶ ಇದೆ. ರಾಸಾಯನಿಕ ವಸ್ತುಗಳ ಮಾರಾಟದಿಂದ ಹೆಚ್ಚಿನ ಲಾಭ ಕಾಣುವಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.