ADVERTISEMENT

ದಿನ ಭವಿಷ್ಯ: ಉದ್ಯೋಗದಲ್ಲಿದ್ದ ಅನಿಶ್ಚಿತತೆ ದೂರಾಗಲಿದೆ; ಆದರೆ...

ಸೋಮವಾರ, 10 ನವೆಂಬರ್ 2025

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 9 ನವೆಂಬರ್ 2025, 20:34 IST
Last Updated 9 ನವೆಂಬರ್ 2025, 20:34 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಹೊಸ ಉದ್ಯಮ ಅಥವಾ ವ್ಯಾಪಾರ ಪ್ರಾರಂಭಿಸಲು ಆಲೋಚಿಸುತ್ತಿರುವವರಿಗೆ ಸಕಾಲ. ಯೋಜನೆಯಂತೆ ಕೆಲಸಗಳು ನಡೆಸಲು ಕಷ್ಟ. ಆದರೆ ಸರಿಯಾಗಿ ನೋಡಿಕೊಂಡರೆ, ಊಹೆಗೂ ಮೀರಿದ ಲಾಭ ಪಡೆದು ಕೊಳ್ಳುವಿರಿ.
  • ವೃಷಭ
  • ಮೊದಲು ತಲುಪಬೇಕಾಗಿರುವ ಗುರಿಯ ಕಡೆಗೆ ಲಕ್ಷ್ಯ ಹರಿಸಿ. ಕೈಗೊಂಡಿರುವ ಕೆಲಸದ ಸಾಧನೆ ಸುಲಭ ಸಾಧ್ಯವೆನಿಸಲು ಜಾಣ್ಮೆ ಪ್ರದರ್ಶಿಸಿ. ತುಸು ಮೃದು ಧೋರಣೆ ಬೆಳೆಸಿಕೊಳ್ಳಿರಿ.
  • ಮಿಥುನ
  • ವ್ಯವಹಾರಗಳ ವಿಷಯಕ್ಕೆ ಸಂಬಂಧಿಸಿದಂತೆ ಸ್ನೇಹಿತನೊಂದಿಗೆ ಚರ್ಚಿಸಿದರೆ ನಷ್ಟಕ್ಕೆ ಕಾರಣ ತಿಳಿಯುತ್ತದೆ. ಧಾರ್ಮಿಕ ಕೆಲಸಗಳಿಗಾಗಿ ಹಣ ವಿನಿಯೋಗವಾಗುವುದು.
  • ಕರ್ಕಾಟಕ
  • ಕೆಲಸ ಕಾರ್ಯಗಳು ಮೇಲಧಿಕಾರಿಗಳಿಗೆ ಅಸಮಾಧಾನ ಉಂಟುಮಾಡಬಹುದು. ಜಾಗ್ರತರಾಗಿರಿ. ವಾಹನ ಮಾರಾಟಗಳಿಂದ ಲಾಭ ಪಡೆಯುವಿರಿ. ಉದ್ಯೋಗದಲ್ಲಿದ್ದ ಅನಿಶ್ಚಿತತೆ ದೂರಾಗಲಿದೆ.
  • ಸಿಂಹ
  • ಉನ್ನತ ಶಿಕ್ಷಣದಲ್ಲಿ ಶ್ರಮ ವಹಿಸಿ ಉತ್ತಮ ಶ್ರೇಣಿ ಪಡೆದುಕೊಳ್ಳು ವಲ್ಲಿ ಯಶಸ್ವಿಯಾಗುವಿರಿ. ತಂದೆ ತಾಯಿ ಆಶೀರ್ವಾದ ಅನಿವಾರ್ಯ. ಜಾಹೀರಾತಿನಲ್ಲಿ ಅಭಿನಯಿಸಲು ಬೇಡಿಕೆ ಬರಲಿದೆ.
  • ಕನ್ಯಾ
  • ಮಾಡುತ್ತಿರುವ ಪರೋಪಕಾರದ ಕೆಲಸಗಳಿಗೆ ಸಕಾರಾತ್ಮಕ ಪ್ರತಿಫಲ ಕಟ್ಟಿಟ್ಟ ಬುತ್ತಿ . ಹಿಡಿದ ಕೆಲಸಗಳು ಹಂತ ಹಂತವಾಗಿ ಅಥವಾ ಒಂದೊಂದಾಗಿ ಮುಗಿಸುವ ಪ್ರಯತ್ನವಿರಲಿ. ವಿಶ್ವಾಸವಿರಲಿ.
  • ತುಲಾ
  • ಕೆಲವು ವಸ್ತುಗಳ ದರ್ಶನದಿಂದ ಪೂರ್ವಾಶ್ರಮದ ಘಟನೆಗಳು ನೆನಪಾಗುತ್ತವೆ. ಬದಲಾದ ಕೆಲವು ಗೃಹೋಪಯೋಗಿ ವಸ್ತುಗಳು ಅಡ್ಡ ಪರಿಣಾಮವನ್ನು ಉಂಟುಮಾಡುವುದು.
  • ವೃಶ್ಚಿಕ
  • ಪ್ರಭಾವದಿಂದ ಬೇರೆಯವರು ಲಾಭ ಪಡೆಯುವಷ್ಟು ಯೋಗ್ಯತೆ ನಿಮ್ಮದಾಗುತ್ತದೆ. ಲಾಭದಾಯಕವಾಗಿ ನಡೆಯುವ ವ್ಯವಹಾರದ ಮೇಲೆ ನಿಗಾ ಇರಲಿ. ಮುಖ್ಯವಾದ ವಿಚಾರ ಮರೆಯದಿರಿ.
  • ಧನು
  • ಉದ್ಯೋಗದಲ್ಲಿ ವೈಯಕ್ತಿಕ ಅನಿಸಿಕೆಯು ಉತ್ತಮ ರೀತಿಯಲ್ಲಿ ಸಹಾಯಕಾರಿ ಆಗುವುದು. ಅಪರೂಪದ ಅತಿಥಿಯ ಆಗಮನ ಸಂತೋಷ ತರಲಿದೆ. ಕೊಂಕು ಮಾತುಗಳಿಗೆ ಬೇಸರಿಸದಿರಿ.
  • ಮಕರ
  • ಪ್ರಯಾಣದಲ್ಲಿ ವಂಚನೆ,ನಷ್ಟದ ಪ್ರಸಂಗಗಳಿವೆ. ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಂಡುಬರುತ್ತದೆ. ಉದ್ಯೋಗ ಬದಲಿಸುವ ವಿಚಾರದಲ್ಲಿ ಚೆನ್ನಾಗಿ ಯೋಚಿಸುವುದು ಉತ್ತಮ.
  • ಕುಂಭ
  • ರಾಜಕೀಯ ವ್ಯಕ್ತಿಗಳಿಗೆ ನಂಬಿಕೆ ದ್ರೋಹ ಅಥವಾ ಅಪಪ್ರಚಾರ ಎದುರಾಗಬಹುದು. ವ್ಯಾಪಾರಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸಬೇಕಾದೀತು.
  • ಮೀನ
  • ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ ಇಂದು ಆಪತ್ತು ಉಂಟಾದಾಗ ನಿಮ್ಮ ಹಳೆಯ ಹರಕೆಗಳ ನೆನಪು ಬರಬಹುದು. ಸಿಹಿ ತಿಂಡಿಗಳ ಉತ್ಪನ್ನಗಳಿಂದ ಲಾಭ ಗಳಿಸುವಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.