ADVERTISEMENT

ದಿನ ಭವಿಷ್ಯ: ಸಹೋದ್ಯೋಗಿಗಳಲ್ಲಿ ವೈಮನಸ್ಸು ಬರುವ ಲಕ್ಷಣವಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 10 ಸೆಪ್ಟೆಂಬರ್ 2025, 0:30 IST
Last Updated 10 ಸೆಪ್ಟೆಂಬರ್ 2025, 0:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ನೇರ ನುಡಿಯ ಸ್ವಭಾವದಿಂದ ಸಹೋದ್ಯೋಗಿಗಳಲ್ಲಿ ವೈಮನಸ್ಸು ಬರುವ ಲಕ್ಷಣವಿದೆ. ಸ್ವಭಾವತಃ ಖುಷಿಯಾಗಿ ಇರುವುದನ್ನು ಬಯಸುವ ನೀವು ಪರಜನರ ಮಾತುಗಳಿಗೆ ಕಿವಿ ಕೊಟ್ಟು ಬೇಸರಿಸಿಕೊಳ್ಳಬೇಡಿ.
  • ವೃಷಭ
  • ಹೊಸ ಕ್ಲಿನಿಕ್ ಆರಂಭದ ಶುಭ ಕಾರ್ಯಗಳ ಬಗ್ಗೆ ಹಿರಿಯರೊಡನೆ ಸಮಾಲೋಚನೆ ನಡೆದು ತೀರ್ಮಾನ ಸಿಗಲಿದೆ. ಕರ-ಕುಶಲ ವಸ್ತುಗಳ ತಯಾರಿಕೆಯಲ್ಲಿ ಆಸಕ್ತಿ ಹೆಚ್ಚುವುದು. ಮಾರಾಟದಲ್ಲಿ ಲಾಭವೂ ಇದೆ.
  • ಮಿಥುನ
  • ಜೀವನದ ಬಗ್ಗೆ ಹೆಚ್ಚಿನ ಉತ್ಸಾಹವನ್ನು ತಾಳುವಿರಿ. ಸಂಗೀತಗಾರರಿಗೆ ಹಾಗೂ ನೃತ್ಯ ಕಲೆಗಳಿಗೆ ಪ್ರಾಮುಖ್ಯ ದೊರಕುವುದು. ಸ್ವಸಾಮರ್ಥ್ಯದಿಂದ ಆಗುವ ಕೆಲಸಗಳಿಗೆ ಇತರರ ಸಹಾಯವನ್ನು ಅಪೇಕ್ಷಿಸದೆ ಮಾಡಿ.
  • ಕರ್ಕಾಟಕ
  • ಎರಡನೇ ದರ್ಜೆಯ ನೌಕರರಿಗೆ ವರ್ಗಾವಣೆಯಿಂದ ಆರ್ಥಿಕವಾಗಿ ಅನುಕೂಲವಾಗುವುದು. ದಿನಸಿ ವ್ಯಾಪಾರಿಗಳು ಮಾರಾಟದ ಕ್ಷೇತ್ರವನ್ನು ಹೆಚ್ಚಿಸಿಕೊಳ್ಳಬಹುದು. ತೈಲ ಲೇಪನದಿಂದ ನೋವುಗಳು ಮರೆಯಾಗುವುದು.
  • ಸಿಂಹ
  • ಜವಾಬ್ದಾರಿಯುತ ಯೋಜನೆಯ ಸ್ಪಷ್ಟ ವಿಷಯ ಆಳವಾಗಿ ಅಧ್ಯಯನ ಮಾಡಬೇಕಾಗುತ್ತದೆ. ಮನಸ್ಸಿಗೆ ಬಂದ ಮಾತುಗಳನ್ನು ಆಡದೆ ಯೋಚನೆ ಮಾಡಿ ತೂಕದ ಮಾತುಗಳನ್ನು ಆಡಿದಲ್ಲಿ ಗೌರವಗಳು ಹೆಚ್ಚಾಗುವುದು.
  • ಕನ್ಯಾ
  • ಮಾಡುತ್ತಿರುವ ಕೆಲಸದಲ್ಲಿ ಹಣದ ಕೊರತೆ ಕಂಡುಬಂದರೆ ತುಂಬಾ ಸಂಕೋಚ ಮಾಡಿಕೊಳ್ಳದೆ ಆತ್ಮೀಯರಲ್ಲಿ ಕೇಳಿ, ತೀರಿಸುವ ಸಾಮರ್ಥ್ಯ ಇದೆ. ಉತ್ತಮ ಬುದ್ಧಿಶಕ್ತಿಯಿಂದ ಜನ ಮನ್ನಣೆ ಗಳಿಸಬಹುದು.
  • ತುಲಾ
  • ಕಾರ್ಯಗಳಲ್ಲಿ ಜಯಭೇರಿಯು ಎದುರಾಳಿಗಳ ಅಸೂಯೆಗೆ ಕಾರಣವಾಗುವುದು. ತೊಂದರೆಯ ಸಾಧ್ಯತೆ ಇರುವುದಿಲ್ಲ. ದೀರ್ಘಕಾಲದ ಕಾಯುವಿಕೆಯ ಬಳಿಕ ಜೀವನ ಸಂಗಾತಿಯು ಜೊತೆಯಾಗುವರು.
  • ವೃಶ್ಚಿಕ
  • ಜಾಗತಿಕವಾಗಿ ವ್ಯವಹಾರವನ್ನು ಹೊಂದಿರುವವರು ಸಣ್ಣ ಮಟ್ಟದ ವ್ಯಾಪಾರಿಗಳ ಚಾಕಚಕ್ಯತೆಯನ್ನು ನೋಡಿ ಕಲಿಯುವಂತಾಗಲಿದೆ. ನೆರೆಹೊರೆಯವರ ಜತೆಗಿನ ಅನಗತ್ಯ ಮಾತುಕತೆ ಸಮಸ್ಯೆ ತರಬಹುದು.
  • ಧನು
  • ವಾಹನ ಖರೀದಿಗಾರರಿಗೆ ಸೂಕ್ತ ಸಮಯವಲ್ಲದಿದ್ದರೂ ಮಾರಾಟಗಾರಿಗೆ ಲಾಭದ ದಿನ ಪರಿಣಮಿಸಬಹುದು. ಉನ್ನತ ಅಧಿಕಾರಿಗಳ ಸಂಪರ್ಕ ಉಂಟಾಗುವುದು. ನೀಲಿ ಬಣ್ಣವು ಶುಭ ಉಂಟುಮಾಡುತ್ತದೆ.
  • ಮಕರ
  • ಆಪ್ತರ ಕಷ್ಟಗಳ ಕಡೆಗೆ ನೆರವಾಗುವ ತೀರ್ಮಾನಕ್ಕೆ ಬನ್ನಿ. ಸ್ನೇಹಕ್ಕೆ ಅರ್ಥ ಇರುವುದು ಹಾಗೂ ಪುಣ್ಯ ಸಂಪಾದನೆಯಾಗುವುದು. ಹಟವು ಹೆತ್ತವರನ್ನು ಕಂಗಾಲು ಪಡಿಸುತ್ತದೆ.
  • ಕುಂಭ
  • ಉರಿಯುವಂಥ ಬೆಂಕಿಗೆ ತುಪ್ಪ ಸುರಿಯುವಂಥ ಮಾತುಗಳನ್ನಾಡಿ ಸಂಗಾತಿಯೊಂದಿಗಿನ ಸಂಬಂಧವನ್ನು ಕೆಡಿಸಿಕೊಳ್ಳಬೇಡಿ. ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಉದಾಸೀನತೆ ತೋರಿಸಿಕೊಳ್ಳಬೇಡಿ.
  • ಮೀನ
  • ಸ್ನೇಹಿತರಿಗೆ ನೀಡಿದ ವಾಗ್ದಾನವನ್ನು ಮರೆಯದಿರಿ. ಕಾಮ್ಯಗಳು ಆದಷ್ಟು ಶೀಘ್ರ ಸಿದ್ಧಿಸಲು ಅಶ್ವತ್ಥ ವೃಕ್ಷಕ್ಕೆ ಪ್ರದಕ್ಷಿಣೆ ಹಾಕಿ. ವ್ಯವಹಾರಿಕ ವಿಚಾರಕ್ಕಿಂತ ವೈಯಕ್ತಿಕ ವಿಚಾರಗಳನ್ನು ಒಳ್ಳೆಯದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.