ದಿನ ಭವಿಷ್ಯ: ಈ ರಾಶಿಯವರು ಉದ್ಯೋಗದಲ್ಲಿ ಹೆಚ್ಚಿನ ಅಧಿಕಾರ ಪಡೆದುಕೊಳ್ಳಬಹುದು
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 8 ಅಕ್ಟೋಬರ್ 2025, 23:41 IST
Last Updated 8 ಅಕ್ಟೋಬರ್ 2025, 23:41 IST
ದಿನ ಭವಿಷ್ಯ
ಮೇಷ
ಉದ್ಯೋಗದಲ್ಲಿ ಹೆಚ್ಚಿನ ಅಧಿಕಾರ ಪಡೆದುಕೊಳ್ಳುವ ಸಂದರ್ಭ ಇದೆ. ಮನೆ ಕಟ್ಟಲು ಅಥವಾ ನವೀಕರಿಸಲು ಹಣದ ವ್ಯವಸ್ಥೆಯಾಗಲಿದೆ. ತಾಯಿಯ ಆರೋಗ್ಯದಲ್ಲಿ ಸುಧಾರಣೆ ಕಾಣುವುದು.
ವೃಷಭ
ಮನೆಯ ವ್ಯವಹಾರಗಳು ಒಂದು ಹಂತ ತಲುಪುತ್ತವೆ. ಸ್ನೇಹಿತರ ಮೇಲಿನ ದೃಷ್ಟಿಕೋನ ಬದಲಾಯಿಸುವುದರಿಂದ ಅನುಕೂಲ. ಉತ್ತಮ ಧನಾಗಮನವಿದ್ದೂ ಸಂತಸ ಹೆಚ್ಚಲಿದೆ. ಯೋಜನೆಗಳಿಗೆ ಶೀಘ್ರ ಫಲಿತಾಂಶ ಸಿಗಲಿದೆ.
ಮಿಥುನ
ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆ ಆರಂಭಗೊಳ್ಳಲಿದೆ. ಹಿರಿಯರ ಆಶೀರ್ವಾದದಿಂದ ಕಾರ್ಯಗಳಲ್ಲಿ ಜಯ. ಸಹೋದ್ಯೋಗಿಗಳ ಸಂಯಮದ ವರ್ತನೆಯಿಂದ ಅನುಕೂಲವಾಗಲಿದೆ.
ಕರ್ಕಾಟಕ
ಇಂದಿನ ಎಲ್ಲಾ ಬೆಳವಣಿಗೆಯಲ್ಲಿ ನಾಯಕತ್ವ ವಹಿಸುವುದರಿಂದ ಕೆಟ್ಟ ಜನಗಳ ದೃಷ್ಟಿದೋಷಕ್ಕೆ ಗುರಿಯಾಗಲಿದ್ದೀರಿ. ವಿದ್ಯಾರ್ಥಿಗಳ ಮನೋಕಾಮನೆ ಪೂರ್ಣಗೊಳ್ಳಲಿದೆ.
ಸಿಂಹ
ದೇವರ ಅನುಗ್ರಹದಿಂದ ಎಲ್ಲಾ ಕೆಲಸದಲ್ಲೂ ಜಯಶಾಲಿಯಾಗುವ ಲಕ್ಷಣವಿರುವುದು. ರಾಜಕಾರಣಿಗಳು ಸುತ್ತಲಿನ ಜನರ ಸಹಾಯ ಪಡೆಯುವಲ್ಲಿ ಸೋಲನ್ನು ಕಾಣುವ ಸ್ಥಿತಿ ಬರಲಿದೆ.
ಕನ್ಯಾ
ಧೀಮಂತರ ಸಹಕಾರದಿಂದ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಉತ್ತಮವಾಗಿ ನೆರವೇರಿಸಿಕೊಳ್ಳುವಿರಿ. ಅನಿರೀಕ್ಷಿತ ಕೆಲಸಗಳಿಂದ ಸಂತಸ ಹೆಚ್ಚುವುದು. ಆತ್ಮವಿಶ್ವಾಸ ಹೆಚ್ಚುವುದು
ತುಲಾ
ವ್ಯವಹಾರಗಳಲ್ಲಿ ಜಯ ಇರಲಿದೆ. ಮಕ್ಕಳ ಜೊತೆ ದೂರದ ಪ್ರವಾಸ ಸಾಧ್ಯತೆ. ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಹಣಕಾಸು ನಿರ್ವಹಣೆಯಲ್ಲಿ ಕುಶಲಮತಿ ಸಹಾಯಕ್ಕೆ ಬರಲಿದೆ.
ವೃಶ್ಚಿಕ
ಹಿಂದೆ ರೂಪಿಸಿದ್ದ ಯೋಜನೆಗಳು ಯಶಸ್ಸು ಕಾಣುವುದನ್ನು ಕಂಡು ಸಂತಸಪಡುವಿರಿ. ಮಕ್ಕಳ ಓದಿನ ವಿಷಯದಲ್ಲಿ ಗಮನ ಕೊಡಿ. ವಿದ್ಯಾರ್ಥಿಗಳಿಗೆ ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಲು ಅವಕಾಶಗಳಿವೆ.
ಧನು
ನ್ಯಾಯವಾದಿಗಳಿಗೆ ಉತ್ತಮ ದಿನ. ನಿರುದ್ಯೋಗಿಗಳಿಗೆ ಅನಿರೀಕ್ಷಿತ ಉದ್ಯೋಗ ಫಲ. ಬಂಧುಗಳಿಂದ ಮನೆಯಲ್ಲಿ ಉಂಟಾದ ಸಹೋದರರ ದ್ವೇಷ ಮನೋಭಾವಗಳು ಸರಿಯಾಗಲಿವೆ.
ಮಕರ
ಅಭಿವೃದ್ಧಿಗೆ ಬೇಕಾದ ಅದ್ಭುತ ಅವಕಾಶ ಸಿಗಲಿದೆ. ಕೆಲಸ-ಕಾರ್ಯವನ್ನು ಜಾಣ್ಮೆಯಿಂದ ಸೂಕ್ಷ್ಮವಾಗಿ ನಿರ್ವಹಿಸುವ ಬುದ್ಧಿವಂತಿಕೆಯನ್ನು ತೋರುವಿರಿ.
ಕುಂಭ
ಹಳೆಯ ದುರ್ಘಟನೆಗಳನ್ನು ಮರೆತು ಭವಿಷ್ಯದತ್ತ ಗಮನ ಹರಿಸಿ. ಆರ್ಥಿಕವಾಗಿ ಚೇತರಿಕೆ ಕಂಡುಬರದಿದ್ದರೂ ಜೀವನಕ್ಕೆ ಕೊರತೆ ಇರಲಾರದು. ಮಕ್ಕಳನ್ನು ವಂಚನೆ ಕಡೆಗೆ ಕರೆದೊಯ್ಯದಂತೆ ಗಮನಹರಿಸಿ.
ಮೀನ
ಹೊಸದಾಗಿ ಉದ್ಯೋಗಕ್ಕೆ ಸೇರಲು ಸಿದ್ಧತೆ ನಡೆಸುವಿರಿ. ತಂದೆಯಾಗಲಿರುವ ಸುದ್ದಿ ಕೇಳಿ ಸಂಭ್ರಮಿಸುವಿರಿ. ಅನಿರೀಕ್ಷಿತ ಪ್ರಯಾಣದ ಸಂಭವ. ಮಕ್ಕಳಿಗೆ ವ್ಯವಹಾರ ಒಪ್ಪಿಸಿ ನೆಮ್ಮದಿಯಿಂದ ಇರಲು ಇಚ್ಛಿಸುವಿರಿ.