ADVERTISEMENT

ದಿನ ಭವಿಷ್ಯ: ಈ ರಾಶಿಯವರು ಸಂಗಾತಿಯ ಜೊತೆ ಉತ್ತಮ ಸಮಯವನ್ನು ಕಳಿಯುತ್ತೀರಿ

ಶುಕ್ರವಾರ, 26 ಏಪ್ರಿಲ್ 2024

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 25 ಏಪ್ರಿಲ್ 2024, 20:01 IST
Last Updated 25 ಏಪ್ರಿಲ್ 2024, 20:01 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ಬಹಳವಾಗಿ ಹಚ್ಚಿಕೊಂಡ ಸಾಕುಪ್ರಾಣಿಯ ಅನಾರೋಗ್ಯವು ತೀರ ಬೇಸರ ಪಡಿಸುವ ಸಾಧ್ಯತೆ ಇದೆ. ಇಂದು ನಿಮ್ಮ ಸುತ್ತ ನಡೆಯುವ ಕೆಲವು ಸನ್ನಿವೇಶಗಳು ನಿಮ್ಮನ್ನಗಲಿದ ಹಿರಿಯರ ನೆನಪು ತರಿಸಲಿದೆ.
  • ವೃಷಭ
  • ಅನಿರೀಕ್ಷಿತವಾಗಿ ಪರಿಚಯವಾಗುವ ವ್ಯಕ್ತಿಯು ನಿಮ್ಮ ಮನಸ್ಸಿಗೆ ತುಂಬಾ ಹತ್ತಿರವಾಗುತ್ತಾರೆ. ಯೋಗ್ಯತೆಗೆ ಮೀರಿದ ಕಾರ್ಯವೊಂದು ಇಂದು ನಿಮ್ಮನ್ನು ತಲುಪಲಿದೆ. ಹತ್ತಿ ಮಾರಟಗಾರರಿಗೆ ಲಾಭವಿದೆ.
  • ಮಿಥುನ
  • ಮಕ್ಕಳ ಸಂತೋಷಕ್ಕಾಗಿ ರಹಸ್ಯವಾಗಿ ಅವರಿಗೆ ನೀವು ಸಹಾಯವನ್ನು ಮಾಡುತ್ತೀರಿ. ಈಶ್ವರನ ಕೃಪೆಯಿಂದಾಗಿ ಉತ್ತಮವಾಗಿ ನೆಡೆಯುತ್ತಿರುವ ನಿಮ್ಮ ಕೆಲಸಗಳಲ್ಲಿ ಔನ್ನತ್ಯವು ನಿಮಗೆ ನಿಶ್ಚಿತವಾದದ್ದು.
  • ಕರ್ಕಾಟಕ
  • ನಿಮ್ಮ ಆತ್ಮವಿಶ್ವಾಸವು ಒಳ್ಳೆಯದು. ಆದರೆ ಅತಿಯಾದ ಆತ್ಮವಿಶ್ವಾಸ ನೀವು ಮಾಡುವ ಕೆಲಸದ ಗುಣಮಟ್ಟವನ್ನು ಕುಂಠಿತಗೊಳಿಸುತ್ತದೆ. ನಿಮಗೆ ಒದಗಿಬರಲಿರುವ ಅವಕಾಶಗಳನ್ನು ಕೈತಪ್ಪಿ ಹೋಗದಂತೆ ನೋಡಿಕೊಳ್ಳಿ.
  • ಸಿಂಹ
  • ಅಧಿಕಾರಿಗಳೊಂದಿಗೆ ವಾದಿಸದೆ ಅವರು ಹೇಳುವ ಕಾರ್ಯಗಳನ್ನು ಮಾಡುವುದು ನಿಮಗೆ ಒಳ್ಳೆಯದು. ಮಗಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ. ಅಂತರ್ಜಾಲದಲ್ಲಿ ಸಿಗುವ ಮಾಹಿತಿಗಳನ್ನು ನಂಬಿ ಮೋಸ ಹೋಗದಿರಿ.
  • ಕನ್ಯಾ
  • ಯಾಂತ್ರಿಕ ಬದುಕಿನ ಭಾಗವಾದ ನಿಮ್ಮ ಜೀವನದಲ್ಲಿ ಸ್ವಲ್ಪವಾದರೂ ಭರವಸೆ ಇಟ್ಟುಕೊಳ್ಳಿ. ವಿದ್ಯುತ್ ಉಪಕರಣಗಳ ಖರೀದಿ ಸಾಧ್ಯತೆ ಇದೆ. ಸಂಗಾತಿಯ ಜೊತೆ ಉತ್ತಮ ಸಮಯವನ್ನು ಕಳಿಯುತ್ತೀರಿ.
  • ತುಲಾ
  • ನಿಮ್ಮ ವ್ಯವಹಾರಗಳು ಮೋಸದ ಹಾದಿಯಲ್ಲಿ ಹೋಗುವಂತಿದ್ದಲ್ಲಿ ಅವುಗಳನ್ನು ಶೀಘ್ರ ಕೈಬಿಡುವುದು ಸೂಕ್ತ. ನಿಮ್ಮ ಕಾರ್ಯವೈಖರಿ ಲಾಭಕರವಾಗಿರಲಿದೆ. ತಾಯಿಯ ಸಂಬಂಧಿಕರ ಆಗಮನವಾಗಲಿದೆ.
  • ವೃಶ್ಚಿಕ
  • ಯುವಕ ಯುವತಿಯರಿಗೆ ಇಂದು ನಿಮ್ಮ ಸುತ್ತಮುತ್ತ ನಡೆಯುವ ಕೆಲವು ಘಟನೆಗಳಿಂದ ದೇಶಭಕ್ತಿ ಗರಿಗೆದರಬಹುದು. ವಿಶೇಷ ಕೌಶಲ ಹೊಂದಿದ ವಿಕಲಾಂಗ ಚೇತನರಿಗೆ ಪ್ರಶಸ್ತಿ ಪ್ರದಾನವಾಗಬಹುದು.
  • ಧನು
  • ಅಗತ್ಯದ ಸಂದರ್ಭದಲ್ಲಿಯೂ ವಿರಾಮ ನೀಡದೇ ದುಡಿಯುತ್ತಿದ್ದರೆ ನಿಮ್ಮ ದೇಹ ನಿಮಗೆ ಅಗತ್ಯವಿರುವ ಸಮಯದಲ್ಲಿ ಕೈಕೊಡುವ ಸಾಧ್ಯತೆಗಳಿವೆ. ಆತುರಗತಿಯಲ್ಲಿ ಓಡುವ ನಿಮ್ಮ ಯೋಚನೆಗೆ ಕಡಿವಾಣ ಹಾಕಿ.
  • ಮಕರ
  • ನಿಮ್ಮಲ್ಲಿ ವಿದ್ಯೆ ಹೇರಳವಾಗಿದ್ದರೂ ವಿನಯದ ಕೊರತೆ ಇದ್ದಲ್ಲಿ ಪಾಂಡಿತ್ಯಕ್ಕೆ ಬೆಲೆ ಸಿಗದೆ ಹೋಗಬಹುದು. ವೈರುಧ್ಯಗಳನ್ನು ಮೀರಿ ವ್ಯವಹರಿಸಿದಲ್ಲಿ ಸಂಬಂಧವು ಉಳಿಯಲಿದೆ. ಹಾಕಿದ ಯೋಜನೆಗಳು ಸಫಲವಾಗಲಿವೆ.
  • ಕುಂಭ
  • ಇಂದು ಯಾರಾದರೂ ನಿಮಗೆ ಹಿತವಲ್ಲದಿದ್ದರೂ ಸಲಹೆ ಕೊಡಲು ಬಂದರೆ ಕೋಪಿಸಿಕೊಳ್ಳದೆ ಸಮಾಧಾನದಿಂದ ಸುಮ್ಮನೆ ಕೇಳಿಸಿಕೊಳ್ಳಿ. ಇಂದು ಧಾರ್ಮಿಕ ಕಾರ್ಯಕ್ರಮದ ಕರೆ ಇದ್ದಲ್ಲಿ ತಪ್ಪದೇ ಭೇಟಿ ನೀಡಿ.
  • ಮೀನ
  • ಕಣ್ಣಿಗೆ ಹಿತವೆನ್ನಿಸುವುದ್ದೆಲ್ಲವನ್ನು ತಿನ್ನುವ ನಿಮ್ಮ ಪ್ರವೃತ್ತಿಯಿಂದ ಜೀರ್ಣಾಂಗ ವ್ಯೂಹ ಸರಿಯಾಗಿ ಕಾರ್ಯ ನಿರ್ವಹಿಸದೆ ಇರುವುದು ನಿಮ್ಮ ಗಮನಕ್ಕೆ ಬರಲಿದೆ. ನಿದ್ದೆಯನ್ನು ನಿರ್ವಹಣೆ ಮಾಡುವ ಬಗ್ಗೆ ಯೋಚಿಸಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.