ದಿನ ಭವಿಷ್ಯ: ಈ ರಾಶಿಯವರು ಉನ್ನತ ವ್ಯಾಸಂಗದ ಕಡೆ ಗಮನ ಹರಿಸುವುದು ಒಳಿತು
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 29 ಆಗಸ್ಟ್ 2024, 22:30 IST
Last Updated 29 ಆಗಸ್ಟ್ 2024, 22:30 IST
ದಿನ ಭವಿಷ್ಯ
ಮೇಷ
ಅಧಿಕವಾಗಿ ಎಣ್ಣೆಯಲ್ಲಿ ಕರಿದ ಪದಾರ್ಥ ದೇಹಪ್ರಕೃತಿಗೆ ಸರಿ ಹೊಂದುವುದಿಲ್ಲ. ಗುಪ್ತಚರ ದಳ ಮಂದಿಗೆ ಕಾರ್ಯಭಾರಗಳು ಹೆಚ್ಚಲಿವೆ. ಮನೆಯಲ್ಲಿನ ಆಗು ಹೋಗುಗಳ ಬಗೆಗೆ ಹೆಚ್ಚು ಗಮನ ನೀಡಬೇಕಾಗುವುದು.
ವೃಷಭ
ಗುತ್ತಿಗೆ ವ್ಯವಹಾರಗಳಲ್ಲಿ ಎಡವಿ ಬೀಳಬಹುದು. ಜಾಗ್ರತರಾಗಿರಿ. ಸುತ್ತಲಿನ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಪರಿಗಣಿಸಿ ವ್ಯವಹರಿಸಿ. ವಿಷ್ಣುಸಹಸ್ರನಾಮದ ಪಠಣೆಯಿಂದ ನೆಮ್ಮದಿ.
ಸತ್ಯದ ಹಾದಿಗೆ ಅಡೆತಡೆಗಳಿರುತ್ತವೆ ಎಂಬುದನ್ನು ಮರೆಯದಿರಿ. ಜಯ ಇದೆ ಎಂಬುದನ್ನು ಅರಿಯಿರಿ. ವೈದ್ಯ ವಿದ್ಯಾರ್ಥಿಗಳಿಗೆ ವ್ಯಾಸಂಗದಲ್ಲಿ ಪ್ರಗತಿ ಕಂಡು ಬರುವುದು. ಮಗಳ ಮಾತಿಗೆ ಬೆಲೆ ಕೊಡಿ.
ಸಿಂಹ
ಈ ದಿನ ಗ್ರಹಗಳು ಪೂರಕವಾಗಿವೆ. ನಿಮ್ಮಿಚ್ಛೆಯಂತೆ ಚಟುವಟಿಕೆಗಳು ನಡೆಯುವುದು. ಈ ಫಲವನ್ನು ಸದುಪಯೋಗಪಡಿಸಿಕೊಳ್ಳಿರಿ. ಕೆಲವು ಘಟನಾ ವಳಿಗಳು ಶಕುನಗಳಂತೆ ಕಂಡು ಕೆಲವು ದುರ್ಘಟನೆಗಳಿಂದ ಪಾರಾಗುವಿರಿ.
ಕನ್ಯಾ
ಕೆಲಸವನ್ನು ಹುಡುಕುವ ಬದಲು ಉನ್ನತ ವಿದ್ಯಾಭ್ಯಾಸದ ಬಗ್ಗೆ ಒಲವು ತೋರಿಸುವುದು ಈ ಸಮಯದಲ್ಲಿ ಸೂಕ್ತ ಕಾಣುತ್ತದೆ. ಆಯುರ್ವೇದದ ಔಷಧಿಯ ಸೇವನೆಯಿಂದ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುವುದು.
ತುಲಾ
ಬಹುಜನರಲ್ಲಿ ಮಾಡಿದ ಸಾಲಗಳು ತೀರಿದ್ದರಿಂದ ನೆಮ್ಮದಿಯ ವಾತಾವರಣ ಸೃಷ್ಟಿಯಾಗಲಿದೆ. ಅವಿವಾಹಿತರ ಮನೋಕಾಮನೆಗಳು ಪೂರ್ಣಗೊಳ್ಳುವ ದಿನವಾಗುವುದು. ಗುರುವಿನ ಮಾರ್ಗದರ್ಶನ ಪಡೆಯುವಿರಿ.
ವೃಶ್ಚಿಕ
ಪ್ರಯಾಣ ಅಂದುಕೊಂಡಂತೆ ಸುಗಮವಾಗಿರುವುದಿಲ್ಲ. ರಾಹುಕಾಲದ ನಂತರ ಸಂಚಾರ ಮಾಡಿ. ಕುಟುಂಬದಲ್ಲಿ ನಡೆದ ದುರ್ಘಟನೆಗಳಿಂದ ಮನಸ್ಸು ದುರ್ಬಲವಾಗಬಹುದು.
ಧನು
ಉದ್ಯೋಗದಲ್ಲಿನ ಪ್ರಯತ್ನಗಳು ವ್ಯಕ್ತಿಯೊಬ್ಬರ ಬೆಂಬಲದಿಂದ ನೆರವೇರುವುದು. ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವಿರಿ. ದೃಢ ನಿರ್ಧಾರವನ್ನು ಕೈಗೊಂಡ ಫಲದಿಂದಾಗಿ ಒಳ್ಳೆಯ ಫಲಿತಾಂಶ ಪಡೆಯುವಿರಿ.
ಮಕರ
ಹೊಸ ನಿರ್ಮಾಣ ಕಾರ್ಯದಂಥ ಯೋಜನೆಗಳು ನಿರಾತಂಕವಾಗಿ ಮುಂದುವರೆಯಲಿವೆ. ಆಂಜನೇಯನ ಆರಾಧನೆಯಿಂದ ಭಯವನ್ನು ಹೋಗಲಾಡಿಸಿಕೊಳ್ಳಬಹುದು. ಹೈನುಗಾರರಿಗೆ ಬೇಡಿಕೆ ಹೆಚ್ಚಲಿದೆ.
ಕುಂಭ
ಸಾಮರ್ಥ್ಯ, ಸೇವಾ ಮನೋಭಾವಗಳಿಂದಾಗಿ ಸಂಸ್ಥೆಯಲ್ಲಿ ಜವಾಬ್ದಾರಿಯುತ ಹುದ್ದೆ ನಿಮ್ಮದಾಗಲಿದೆ. ಬದಲಾವಣೆ ಬಯಸಿದಲ್ಲಿ ಕಾಯುವುದು ಅವಶ್ಯ. ಕುಟುಂಬದ ಕಿರಿಯ ಸೋದರನಿಗೆ ವಿವಾಹ ನಿಶ್ಚಯವಾಗುವುದು.
ಮೀನ
ಸರ್ಕಾರಿ ಕೆಲಸಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿಕೊಳ್ಳುವ ಯೋಚನೆಯನ್ನು ಮಾಡಿ. ಮಕ್ಕಳನ್ನು ಮಳೆಯಲ್ಲಿ ನೆನೆಯದಂತೆ ,ಆಡದಂತೆ ನೋಡಿಕೊಳ್ಳುವುದೇ ಸವಾಲಾಗುವುದು.