ADVERTISEMENT

ದಿನ ಭವಿಷ್ಯ: ಕೆಲವರ ಮಾತುಗಳು ಕಿವಿಯ ಮೇಲೆ ಬಿದ್ದರೂ ನಿರ್ಲಕ್ಷಿಸುವುದು ಉತ್ತಮ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 18 ಜನವರಿ 2026, 23:30 IST
Last Updated 18 ಜನವರಿ 2026, 23:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ವೃತ್ತಿಜೀವನದಲ್ಲಿ ಹಣಕಾಸಿನ ಪರಿಸ್ಥಿತಿ ಉತ್ತಮ ಪಡಿಸಿಕೊಳ್ಳುವ ಸನ್ನಿವೇಶಗಳು ನಡೆಯಲಿವೆ. ನಿರುದ್ಯೋಗಿ ಯುವಕರು ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗಕ್ಕೆ ಪ್ರಯತ್ನ ಪಡಬಹುದು. ಕಪ್ಪುಬಣ್ಣ ಶುಭ ತರುವುದು.
  • ವೃಷಭ
  • ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರ ಬೇಜವಾಬ್ದಾರಿತನದಿಂದ ಲಾಭಕ್ಕೆ ತೊಂದರೆ ಉಂಟಾಗಬಹುದು. ನೀವೇ ಖುದ್ದಾಗಿ ನಿಂತು ಮೇಲುಸ್ತುವಾರಿ ನೋಡಿಕೊಳ್ಳುವುದು ಸೂಕ್ತ.
  • ಮಿಥುನ
  • ಪಿತ್ರಾರ್ಜಿತ ಆಸ್ತಿಯ ವ್ಯವಹಾರಗಳು ಒಂದು ಹಂತ ತಲುಪಿದ್ದಕ್ಕೆ ಸಮಾಧಾನವಾಗುವುದು. ಆಡುವ ಸುಳ್ಳು ಮಾತಿನ ಫಲವನ್ನು ತಕ್ಷಣದಲ್ಲಿ ಅನುಭವಿಸುವಂತಾಗುವುದು. ಮುಂದಿನ ನಡೆಯ ಬಗ್ಗೆ ಗಮನಹರಿಸಿ.
  • ಕರ್ಕಾಟಕ
  • ನಡವಳಿಕೆಯು ಮನೆಯವರಲ್ಲಿ ಸಂತಸವನ್ನು ಮೂಡಿಸುತ್ತದೆ. ದಿನದ ಗ್ರಹಗಳ ಚಲನೆಯು ಸುಖಮಯವಾಗಿ ಜೀವನ ನಡೆಸಲು ಅನುಕೂಲವಾಗಿದೆ.ಆರ್ಥಿಕ ಭಾಗವು ತುಂಬಿಕೊಂಡಿರುತ್ತದೆ.
  • ಸಿಂಹ
  • ಮನೆಯ ಪರಿಸ್ಥಿತಿ ಅರಿವಿದ್ದರೂ ಪ್ರಕಾರದ ಆದರ್ಶ ವೃತ್ತಿಗಾಗಿಯೇ ಹಲವು ದಿನಗಳ ಕಾಯುವಿಕೆ ಸರಿಯಾದುದಲ್ಲ. ಅಪೇಕ್ಷಿಗಳಿಗೆ ಸಂತಾನ ಭಾಗ್ಯ ದೊರೆಯುವುದು. ವಿವೇಕರಹಿತ ಕೆಲಸದಲ್ಲಿ ತೊಡಗಿಸಿಕೊಳ್ಳದಿರಿ.
  • ಕನ್ಯಾ
  • ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಿ, ಜಯ ನಿಮ್ಮದಾಗುತ್ತದೆ. ಧೈರ್ಯಗೆಡುವ ಪ್ರಸಂಗವಿಲ್ಲ. ಹಾಲು, ಮೊಸರು, ತುಪ್ಪದಂತಹ ಗೋ ಉತ್ಪನ್ನ ವಸ್ತುಗಳ ಮಾರಾಟಗಾರರಿಗೆ ಲಾಭವಾಗಲಿದೆ.
  • ತುಲಾ
  • ಕೆಲಸ ಮಾಡುವ ಮೊದಲು ಅದರ ಬಗ್ಗೆ ಸಾಕಷ್ಟು ಯೋಚಿಸಿ ನಂತರ ತೀರ್ಮಾನಿಸಿ. ಕಾರ್ಯಕ್ಷೇತ್ರದಲ್ಲಿ ಕೆಲವು ಮೂಲಭೂತ ಬದಲಾವಣೆಗಳಾಗುವ ಸಾಧ್ಯತೆ ಇದೆ. ನಿರ್ದಿಷ್ಟ ಕೆಲಸಗಳಿಗೆ ಗಮನ ಕೊಡುವುದು ಒಳ್ಳೆಯದು.
  • ವೃಶ್ಚಿಕ
  • ವ್ಯಾಪಾರ ವ್ಯವಹಾರದಲ್ಲಿ ಲಾಭ, ನಷ್ಟ ಏನೇ ಅದನ್ನು ಮುಕ್ತವಾಗಿ ಸ್ವೀಕರಿಸುವ ಭಾವನೆ ಇರಲಿ. ಅನಿರೀಕ್ಷಿತ ಪ್ರಯಾಣವು ಬದುಕಿನ ಹೊಸ ದಾರಿಗೆ ಕಾರಣವಾಗಲಿದೆ. ಚರ್ಮದ ಒರಟಾಗುವಿಕೆಯು ಬಾಧಿಸಬಹುದು.
  • ಧನು
  • ಕುಟುಂಬ ಸದಸ್ಯರ ಮುಂದೆ ಬಾಯಿ ತಪ್ಪಿ ಹೇಳಿದ ಸತ್ಯದಿಂದ ಯುದ್ಧದ ಪರಿಸ್ಥಿತಿ ಎದುರಾಗಬಹುದು. ಹಿಂಜರಿಕೆಯ ಸ್ವಭಾವದಿಂದ ಬೇಕಾದಂಥ ವೃತ್ತಿ ಸಂಪಾದಿಸಲು ಕಷ್ಟವಾಗುತ್ತದೆ.
  • ಮಕರ
  • ವ್ಯವಹಾರ ಪರಊರಿನಲ್ಲಿ ವಿಸ್ತರಿಸುವ ಹೊಸ ಯೋಜನೆಗಳಿಗೆ ಚಾಲನೆ ನೀಡುವ ವಿಚಾರವನ್ನು ಸ್ವಲ್ಪದಿನ ಮುಂದಕ್ಕೆ ತಳ್ಳುವುದು ಸೂಕ್ತವೆನ್ನಿಸುವುದು. ಭೋಜನದ ಸಮಯವನ್ನು ಸ್ನೇಹಿತರೊಂದಿಗೆ ಕಳೆಯುವಿರಿ.
  • ಕುಂಭ
  • ಮಗನ ನೂತನ ಕೆಲಸದ ವಿಚಾರವಾಗಿ ಆಪ್ತರೊಬ್ಬರಲ್ಲಿ ಸಲಹೆ ಕೇಳಿಕೊಳ್ಳುವಿರಿ. ಕೆಲವರ ಮಾತುಗಳು ಕಿವಿಯ ಮೇಲೆ ಬಿದ್ದರೂ ನಿರ್ಲಕ್ಷಿಸುವುದು ಉತ್ತಮ. ಪ್ರತಿಷ್ಠಿತ ಅಧಿಕಾರಕ್ಕಾಗಿ ಸಮಬಲ ಹೋರಾಟ ನಡೆಸುವಿರಿ.
  • ಮೀನ
  • ವಾಹನಗಳ ಬಿಡಿ ಭಾಗಗಳ ಮಾರಾಟಗಾರರಿಗೆ ಮತ್ತು ಕಥೆ, ಕವನದ ಬರಹಗಾರರಿಗೆ ಅವಕಾಶಗಳ ಸುರಿಮಳೆ ಎದುರಾಗುವುದು. ಕರಿದ ತಿಂಡಿ ತಿನಿಸು ಪದಾರ್ಥಗಳ ಮಾರಾಟಗಾರರಿಗೆ ಲಾಭ ಸಿಗುವುದು.