ದಿನ ಭವಿಷ್ಯ: ಜೀವನಶೈಲಿಯಲ್ಲಿ ಮಹತ್ತರ ಬದಲಾವಣೆ ತಂದುಕೊಳ್ಳುವ ಸನ್ನಿವೇಶ ಬರಲಿದೆ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 22 ಜನವರಿ 2026, 23:30 IST
Last Updated 22 ಜನವರಿ 2026, 23:30 IST
ಮೇಷ
ಜೀವನಶೈಲಿಯಲ್ಲಿ ಮಹತ್ತರ ಬದಲಾವಣೆಗಳನ್ನು ತಂದುಕೊಳ್ಳುವ ಸನ್ನಿವೇಶ ಬರಲಿದೆ. ಉತ್ತಮ ಕಾರ್ಯ ಮಾಡಿದವರನ್ನು ಮುಕ್ತವಾಗಿ ಶ್ಲಾಘಿಸುವ ಮನಸ್ಥಿತಿ ವೃದ್ಧಿಸಿಕೊಳ್ಳಿ. ಉತ್ತಮ ಪರಿಶ್ರಮಕ್ಕೆ ಲಾಭ ಸಿಗುತ್ತದೆ.
ವೃಷಭ
ಹೊಸ ಜವಾಬ್ದಾರಿಗಳು ಅಂದುಕೊಂಡಷ್ಟು ಸುಲಭವಾದದ್ದಲ್ಲದೇ ಇರುವುದರಿಂದ ಹೊಂದಿಕೊಳ್ಳಲು ಅಧಿಕ ಪರಿಶ್ರಮ ಬೇಕಾಗುತ್ತದೆ. ತಾಂತ್ರಿಕ ವಿದ್ಯಾಭ್ಯಾಸದಲ್ಲಿ ಉನ್ನತ ಯಶಸ್ಸು ದೊರೆತು ಆನಂದವಾಗುತ್ತದೆ.
ಮಿಥುನ
ವಕೀಲಿ ವೃತ್ತಿಯವರಿಗೆ ನಿಗೂಢ ಅಥವಾ ಅಗತ್ಯವಿರುವ ವಿಷಯ ಸಂಗ್ರಹಣೆಗೆ ಅತ್ಯಂತ ಸೂಕ್ತವಾಗಿರುತ್ತದೆ. ಗುಂಪು ಚಟುವಟಿಕೆಗಳಿಗೆ ಮುಂದಾಳತ್ವವು ಅನಗತ್ಯ.
ಕರ್ಕಾಟಕ
ಹೃದಯ ಸಂಬಂಧ ಅನಾರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ತೋರುವುದು ಸರಿಯಲ್ಲ. ಮನೆ ನಿರ್ಮಾಣ ಕಾರ್ಯವನ್ನು ಅನಿವಾರ್ಯಕ್ಕೆ ನಿಲ್ಲಿಸಬೇಕಾಗುತ್ತದೆ. ವಾದವಿವಾದಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿ.
ಸಿಂಹ
ಶ್ರೀಮಂತಿಕೆಯ ಬದುಕಿಗೆ ಮನಸ್ಸು ಹಾತೊರೆಯುವುದು. ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬುವ ಮಾತನ್ನು ಮರೆಯದಿರಿ. ಔದಾರ್ಯ ಬುದ್ಧಿ ತೋರಿದಲ್ಲಿ ವಂಚನೆಗೆ ಒಳಗಾಗುವ ಸನ್ನಿವೇಶಗಳಿವೆ.
ಕನ್ಯಾ
ಜವಳಿ ವ್ಯಾಪಾರಿಗಳಿಗೆ ವಿಶೇಷ ರಿಯಾಯಿತಿ ಮಾರಾಟಗಳಿಂದ ಲಾಭ ಉಂಟಾಗುವುದು. ದವಸ ಧಾನ್ಯಗಳ ದಾಸ್ತಾನಿಗಾಗಿ ಬಂಡವಾಳ ಹೂಡುವುದು ಸರಿಯಲ್ಲ. ಮಿತ್ರರಿಂದ ಸಂತಸ ಹೊಂದುವಿರಿ.
ತುಲಾ
ಸಾಧ್ಯವಾದಷ್ಟು ತಾಳ್ಮೆಯಿಂದ ಮುಂದುವರಿದಲ್ಲಿ ನೆಮ್ಮದಿ ಕಾಣುವಿರಿ. ಅಚ್ಚರಿಯ ಸುದ್ದಿ ಕೇಳಲಿರುವಿರಿ. ಇಂದಿನ ಆಫೀಸಿನ ಕೆಲಸಗಳೂ ಬೇಗನೇ ಮುಗಿಯುವುದು.
ವೃಶ್ಚಿಕ
ಹಿರಿಯ ಅಧಿಕಾರಿಗಳ ಅಥವಾ ಆಪ್ತರ ಸಹಾಯ ಸಿಗುವುದು. ಮತ್ತೊಬ್ಬರ ಅವಲಂಬನೆ ಬೇಡವೆನಿಸುತ್ತದೆ. ದೈವಾನುಕೂಲದಿಂದ ನಡೆಯಬೇಕಾದ ಶುಭ ಕಾರ್ಯಗಳನ್ನು ನಿಶ್ಚಯ ಮಾಡಬಹುದು.
ಧನು
ವಾಹನ ಮಾರಾಟದ ಯೋಚನೆಯಲ್ಲಿರುವವರು ಸದ್ಯದ ಮಟ್ಟಿಗೆ ಆ ಯೋಚನೆ ಕೈಬಿಡಿ. ವಿದ್ಯುತ್ತಿನ ಜೊತೆಯಲ್ಲಿ ಕಾರ್ಯ ನಿರ್ವಹಿಸುವವರು ಜಾಗರೂಕತೆ ವಹಿಸಬೇಕು.
ಮಕರ
ಆಲಸ್ಯದಿಂದಾಗಿ ಅಧಿಕಾರ ಹೋಗುವ ಪರಿಸ್ಥಿತಿ ಉಂಟಾಗುವುದು. ಎಚ್ಚರದಿಂದಿರಿ. ನೂತನ ವ್ಯಾಪಾರಿಗಳು ವ್ಯಾಪಾರದಲ್ಲಿ ಪ್ರಬುದ್ಧತೆಯಿಂದ ವ್ಯವಹರಿಸಿ. ಜಮೀನಿನ ಖರೀದಿ ವಿಚಾರದ ಮಾತುಕತೆಗಳು ನಡೆಯಲಿವೆ.
ಕುಂಭ
ಲೇವಾದೇವಿ ವ್ಯವಹಾರ ಮಾಡುವವರಿಗೆ ಜವಾಬ್ದಾರಿಯ ಹೊರೆ, ಮಾನಸಿಕ ಒತ್ತಡ ಹೆಚ್ಚಲಿದೆ. ಬಂಧುಗಳ ಮನೆಯ ಶುಭಕಾರ್ಯಗಳಲ್ಲಿ ಜವಾಬ್ದಾರಿ ಮತ್ತು ಓಡಾಟವಿರುವುದು. ಸಂತಸದ ಸುದ್ಧಿ ಕೇಳುವಿರಿ.
ಮೀನ
ಯಾರಿಗೂ ಶಕ್ತಿಯಿಂದ ಗೆಲ್ಲಲಾಗದ ಕೆಲವು ಸವಾಲುಗಳನ್ನು ಯುಕ್ತಿಯಿಂದ ಸರಳವಾಗಿ ಗೆದ್ದು ಬೀಗುವಿರಿ. ವ್ಯವಹಾರ ಒಪ್ಪಂದಗಳು ಲಾಭ ತರಲಿವೆ. ಸ್ನೇಹಿತರಿಗೆ ಸಹಾಯ ಮಾಡುವ ಬಗ್ಗೆ ನಿರ್ಧರಿಸಿ.