ದಿನ ಭವಿಷ್ಯ: ಈ ರಾಶಿಯವರಿಗೆ ದೇವರ ಅನುಗ್ರಹದಿಂದ ಜಯಶಾಲಿಯಾಗುವ ಲಕ್ಷಣವಿರುವುದು
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 23 ಜನವರಿ 2026, 23:30 IST
Last Updated 23 ಜನವರಿ 2026, 23:30 IST
ಮೇಷ
ಜವಳಿ ಮಾರಾಟಗಾರರು ಹೊಸ ದಾಸ್ತಾನು ತರಲು ಒಪ್ಪಂದಗಳನ್ನು ಮಾಡಿಕೊಳ್ಳಬಹುದು. ಉದ್ಯೋಗಕ್ಕಾಗಿ ವಿದೇಶ ಪ್ರಯಾಣದ ಅವಕಾಶಗಳು ಸಿಗಬಹುದು
ವೃಷಭ
ಸುಖಕರವಾಗಿರುವ ದಾಂಪತ್ಯದಲ್ಲಿ ಬೇರೆಯವರ ಮಾತಿಗೆ ಆಸ್ಪದ ಕೊಟ್ಟು ಮೋಸ ಹೋಗುವುದು ಬೇಡ. ನಿಮ್ಮ ಕೈಗೆ ಎಟಕುವ ವಿಷಯಗಳ ಬಗ್ಗೆ ಮಾತ್ರ ಚಿಂತಿಸಿ. ಕುಟುಂಬದ ಸಂತೋಷ ವೃದ್ಧಿ.
ಮಿಥುನ
ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಯಾಗಿರಲು ಶಿಸ್ತಿನ ಜೀವನ ನಡೆಸಬೇಕಾಗುತ್ತದೆ. ಮನೆಯಲ್ಲಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ದೂರಾಗುವುದು.
ಕರ್ಕಾಟಕ
ಉತ್ಸಾಹದಿಂದ ಕೆಲಸ ಆರಂಭಿಸಿದಲ್ಲಿ ಸಮಸ್ಯೆಗಳು ತಾನಾಗಿಯೇ ಪರಿಹಾರಗೊಳ್ಳಲಿವೆ. ಧರ್ಮ ಕಾರ್ಯಗಳಲ್ಲಿ ಭಾಗವಹಿಸುವುದು ಅಥವಾ ಆಸಕ್ತಿ ಬೆಳೆಸಿಕೊಳ್ಳುವುದು ಅಗತ್ಯ. ಹಿತಾಸಕ್ತಿಗಳಿಗೆ ಹೆಚ್ಚು ಗಮನ ಕೊಡಿ.
ಸಿಂಹ
ಅದೃಷ್ಟವು ಚೆನ್ನಾಗಿರುವ ಕಾರಣ ಬಂದ ಅವಕಾಶಗಳನ್ನು ಸದುಪಯೋಗಿಸಿಕೊಂಡಲ್ಲಿ ಅಧಿಕ ಲಾಭ ಕಾಣಬಹುದು. ಉನ್ನತ ವ್ಯಾಸಂಗದವರಿಗೆ ನೇರ ಆಯ್ಕೆಗೊಳ್ಳುವ ಸಂಭವವಿದೆ.
ಕನ್ಯಾ
ಸಂತಸದ ಸುದ್ದಿಯನ್ನು ಮಾತ್ರ ತಿಳಿಸಿ ದುಃಖದ ವಿಷಯವನ್ನು ತಿಳಿಸದಿರುವುದು ಪ್ರವೃತ್ತಿಗೆ ಸರಿ ಎನ್ನಿಸುವುದಿಲ್ಲ. ಹೊಸ ಉದ್ಯೋಗಕ್ಕಾಗಿ ಪರಿಚಿತರಿಂದ ಅವಕಾಶಗಳು ಸಿಗಲಿವೆ. ಪುಣ್ಯ ಸಂಪಾದನೆ ಧ್ಯೇಯವಾಗಿರಲಿ.
ತುಲಾ
ಸರ್ಕಾರಿ ಕೆಲಸಗಳನ್ನು ಆದಷ್ಟು ಬೇಗ ಪೂರ್ಣಗೊಳಿಸುವ ಯೋಚನೆಯನ್ನು ಮಾಡಿ. ನಿರುದ್ಯೋಗಿಗಳಿಗೆ ಜೀವನ ನಿರ್ವಹಿಸಲು ಸಾಕಾಗುವಂಥ ವರಮಾನವಿರುವ ಸಣ್ಣಮಟ್ಟದ ಕೆಲಸ ದೊರೆಯಲಿದೆ.
ವೃಶ್ಚಿಕ
ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ದೊರೆತು ಮುಂದಿನ ವಿದ್ಯಾಭ್ಯಾಸಕ್ಕೆ ಅವಕಾಶಗಳು ದೊರೆಯುತ್ತವೆ. ವರಿಷ್ಠರೊಡನೆ ಗಣಿಗಾರಿಕೆ ವಿಷಯಗಳ ಬಗ್ಗೆ ಚರ್ಚೆ ಸಂಭವಿಸಬಹುದು. ನೀಲಿ ಬಣ್ಣ ಶುಭ ತರಲಿದೆ.
ಧನು
ಹಣದ ಆಸೆಯಿಂದ ಹೊರಬರುವ ಪ್ರಯತ್ನವು ನೆಮ್ಮದಿಯ ಜೀವನವನ್ನು ನಡೆಸಲು ಕಾರಣವಾಗುತ್ತದೆ. ದೇವರ ಅನುಗ್ರಹದಿಂದ ಜಯಶಾಲಿಯಾಗುವ ಲಕ್ಷಣವಿರುವುದು.
ಮಕರ
ಕಾರ್ಖಾನೆಯಲ್ಲಿ ಹೊಸ ವಿದ್ಯುತ್ ಉಪಕರಣಗಳನ್ನು ಅಳವಡಿಸುವಲ್ಲಿ ಅಧಿಕ ಬಂಡವಾಳವನ್ನು ಹೂಡುವಿರಿ. ಯುವ ಕಲಾವಿದರಿಗೆ ಅವಕಾಶಗಳು ಲಭಿಸುವುದು. ಅನಿವಾರ್ಯದ ಪ್ರಯಾಣಗಳು ಹೆಚ್ಚಾಗಲಿದೆ.
ಕುಂಭ
ಶ್ರೀಕೃಷ್ಣನ ಸ್ಮರಣೆಯನ್ನು ನಿರಂತರವಾಗಿ ಮಾಡುವುದರಿಂದ ಬಂದಿರುವಂಥ ಸಕಲ ದುರಿತಗಳು ದೂರವಾಗುವು. ನೈತಿಕ ಶಕ್ತಿ ಹೆಚ್ಚುವುದರಿಂದ ಕೆಲಸದಲ್ಲಿ ಉತ್ತಮ ಅಭಿವೃದ್ಧಿಯನ್ನು ಕಾಣುವಿರಿ.
ಮೀನ
ಆತುರದ ಸ್ವಭಾವವನ್ನು ಸುಧಾರಿಸಿಕೊಂಡು ಮತ್ತೊಬ್ಬರ ಭಾವನೆಗಳಿಗೆ ಹೇಗೆ ಪ್ರತಿಕ್ರಿಯಿಸಬೇಕೆಂಬುದನ್ನು ತಿಳಿದುಕೊಂಡರೆ ಉತ್ತಮ ವ್ಯಕ್ತಿಯಾಗುವಿರಿ. ಸಮಸ್ಯೆ ಬಗೆಹರಿದು ನೆಮ್ಮದಿ ಮೂಡಲಿದೆ.