ದಿನ ಭವಿಷ್ಯ: ಈ ರಾಶಿಯವರು ನಿಸ್ವಾರ್ಥ, ತ್ಯಾಗದ ಮನೋಭಾವ ಬೆಳೆಸಿಕೊಳ್ಳುವಿರಿ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 24 ಜನವರಿ 2026, 23:30 IST
Last Updated 24 ಜನವರಿ 2026, 23:30 IST
ಮೇಷ
ಪ್ರಭಾವಿ ವ್ಯಕ್ತಿಗಳ ಸಹಾಯ ಬಳಸಿಕೊಂಡು ನಿಮ್ಮ ಉದ್ಯೋಗದಲ್ಲಿ ಬರಬಹುದಾದ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವ ಯೋಚನೆಯನ್ನು ನಡೆಸುವಿರಿ. ನಿಸ್ವಾರ್ಥ, ತ್ಯಾಗದ ಮನೋಭಾವ ಬೆಳೆಸಿಕೊಳ್ಳುವಿರಿ.
ವೃಷಭ
ಅವಿವಾಹಿತರು ಮನೆಯಲ್ಲಿ ತೋರಿಸಿರುವ ಎಲ್ಲಾ ಸಂಬಂಧಗಳಿಗೆ ನಕಾರ ಮಾಡುತ್ತಿರುವುದರ ಬದಲು ನಿಮ್ಮ ಅಪೇಕ್ಷಿತ ವ್ಯಕ್ತಿಯನ್ನೇ ಮನೆಯವರ ಮುಂದೆ ಪ್ರಸ್ಥಾಪಿಸುವುದು ಒಳ್ಳೆಯದು.
ಮಿಥುನ
ಅರಿಷಡ್ವರ್ಗಗಳ ನಿವಾರಣೆಗಾಗಿ ಅಧಿಕ ಮಟ್ಟದಲ್ಲಿ ಸಾಧನೆ ಮಾಡಲು ಪ್ರಾರಂಭಿಸಬಹುದು. ವ್ಯವಹಾರದಲ್ಲಿ ಅಡ್ಡಿ ಆತಂಕ ಎದುರಾದರೂ ದುರ್ಗಾದೇವಿಯ ಆರಾಧನೆಯಿಂದಾಗಿ ಸಹಜವಾಗಿ ಮುಂದುವರೆಯುವುದು.
ಕರ್ಕಾಟಕ
ಮನೆಯಲ್ಲಿರುವ ಸೂಕ್ಷ್ಮ ವ್ಯಕ್ತಿಯ ಆರೋಗ್ಯದ ನಿಗಾವಹಿಸುವುದು ನಿಮ್ಮ ಪ್ರಮುಖ ಕಾರ್ಯವಾಗುವುದು. ಪ್ರವಾಸಕ್ಕಾಗಿ ಹೋದ ಪ್ರದೇಶದಲ್ಲಿ ಕೆಲವು ತೊಂದರೆಗಳಾಗುವಂತಹಾ ಸಂದರ್ಭಗಳಿವೆ.
ಸಿಂಹ
ಮೋಸದಿಂದಾಗಿ ಬೇರೆಯವರ ಕೈ ಸೇರಿದ ನಿಮ್ಮ ಹಣ ನಿಮಗೆ ಹಿಂತಿರುಗುವ ಸೂಚನೆಗಳು ಕಾಣುತ್ತವೆ. ಹಿರಿಯರ ಮಾತಿನಂತೆ ಕೆಲಸ ಕೈಗೊಳ್ಳುವುದು ಉತ್ತಮ. ವೃಥಾ ಅಲೆದಾಟದಿಂದ ಆಯಾಸ ಆಗುವುದು.
ಕನ್ಯಾ
ಮಧ್ಯದಲ್ಲಿ ನಿಂತ ವಿದ್ಯಾಭ್ಯಾಸವನ್ನು ಮುಂದುವರೆಸುವ ಪ್ರಯತ್ನ ಮಾಡಿದಲ್ಲಿ ಸಫಲವಾಗುವುದು. ಉದ್ಯೋಗಕ್ಕಾಗಿ ಹೆಚ್ಚಿನ ಪರಿಶ್ರಮ, ದೇವರ ಕೃಪಾ ಕಟಾಕ್ಷ ಬೇಕಾಗುವುದು. ಪತಿ ಪತ್ನಿಯರಲ್ಲಿ ಸಾಮರಸ್ಯ ಇರುವುದು.
ತುಲಾ
ನಿಮ್ಮ ನಿಷ್ಕಪಟ ಸಮಾಜ ಸೇವೆಯನ್ನು ಕುಟುಂಬದವರು ಹಾಗೂ ಸಮಾಜದವರು ಗುರುತಿಸಿ ಶ್ಲಾಘಿಸುವರು ಹಾಗು ಅನೇಕ ಕಡೆಯಿಂದ ಸಹಾಯ ಹಸ್ತಗಳು ಸಿಗುವವು. ಲೇವಾದೇವಿ ವ್ಯವಹಾರಗಳು ಮುಂದುವರೆಯುವುದು.
ವೃಶ್ಚಿಕ
ನಿಮಗೆ ಇಷ್ಟವಿಲ್ಲದ ಸಂಬಂಧವನ್ನು ಹೊತ್ತು ತಂದ ಮಗಳ ಮೇಲೆ ಕೋಪ ಸಹಜವಾದರು ಸಹ ಜೀವನ ಆಕೆಯದ್ದು ಎಂಬುದನ್ನು ಅರ್ಥೈಸಿಕೊಳ್ಳು ವುದು ಸೂಕ್ತ. ಸಾಮಾಜಿಕ ವಲಯದಲ್ಲಿ ನಿಮ್ಮ ವರ್ಚಸ್ಸು ಬೆಳೆಯಲಿದೆ.
ಧನು
ದಾಯಾದಿಗಳು ಕಲಹಗಳನ್ನು ಬಿಟ್ಟು ರಾಜಿ ಮಾಡಿಕೊಳ್ಳುವ ಮನೋಭಾವಕ್ಕೆ ಬಂದಾರು. ನೀವು ನಿಮ್ಮ ವೈಯಕ್ತಿಕ ಮನೋಭಾವವನ್ನು ಬದಲಿಸಿಕೊಳ್ಳುವಂತೆ ಆಗಲಿದೆ. ಹೊಸ ವಾಹನ ಖರೀದಿಸುವ ಯೋಗವಿದೆ.
ಮಕರ
ಪ್ರಭಾವಿ ವ್ಯಕ್ತಿಗಳ ಒಡನಾಟ ನಿಮಗೆ ಹೆಚ್ಚಿನ ಸ್ಥಾನಮಾನವನ್ನು ಜೊತೆಯಲ್ಲಿ ಆಯಾಸವನ್ನು ತಂದು ಕೊಡಲಿದೆ. ಇಂದು ಕೈಗೊಂಡ ಪ್ರವಾಸದಿಂದ ನಿಮಗೆ ಅನಿರೀಕ್ಷಿತವಾದ ಲಾಭದ ಅನುಭವ ಉಂಟಾಗುವುದು.
ಕುಂಭ
ಕಷ್ಟ ಕಾರ್ಪಣ್ಯಗಳ ಜೀವನವನ್ನು ಈಗಷ್ಟೇ ಕಳೆದ ನಿಮಗೆ ಈಗ ಮಗನು ಹೊಸಾ ತಲೆನೋವನ್ನು ತರುವಂತಹಾ ಸಾಧ್ಯತೆ ಇದೆ. ಚರ್ಮಕ್ಕೆ ಸಂಬಂಧಿಸಿದ ಅಪರೂಪದ ಕಾಯಿಲೆಯೊಂದು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಮೀನ
ಇದ್ದಂಕ್ಕಿದ್ದಂತೆಯೇ ನಿಮ್ಮ ಮೇಲೆ ಪ್ರೀತಿಯನ್ನು ತೋರಿಸಲು ಶುರು ಮಾಡಿದ ನೆಂಟರ ಬುದ್ಧಿಯು ಕಪಟ ಎಂದು ಅರಿತುಕೊಳ್ಳಿ. ಹಿರಿಯರೊಂದಿಗೆ ವಿನಯವನ್ನು ಬಿಟ್ಟು ಮಾತನಾಡಿದಲ್ಲಿ ನಿಮ್ಮ ಗೌರವ ಕಳೆದುಕೊಳ್ಳುವಿರಿ.