ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ಸಾಮರ್ಥ್ಯಕ್ಕೆ ಅನುಗುಣವಾದ ಕೆಲಸಗಳು ದೊರೆಯಲಿವೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 30 ಅಕ್ಟೋಬರ್ 2025, 23:30 IST
Last Updated 30 ಅಕ್ಟೋಬರ್ 2025, 23:30 IST
   
ಮೇಷ
  • ಇನ್ನೊಬ್ಬರಿಗೆ ಮೋಸ ಮಾಡುವ ಮನಸ್ಥಿತಿ ದೂರಮಾಡಿಕೊಂಡು ಜೀವನ ನಡೆಸಿ, ಅದರಿಂದಾಗಿ ನಿಮಗೆ ಶ್ರೇಯಸ್ಸು ಪ್ರಾಪ್ತಿಯಾಗುವುದು. ಸಜ್ಜನರ ಭೇಟಿಯಾಗಲಿದೆ. ಗೃಹ ನಿರ್ಮಾಣದ ಆರಂಭಕ್ಕೆ ದಿನ ನಿಶ್ಚಯ.
  • ವೃಷಭ
  • ಸವಿತೃ ಸೂರ್ಯ ನಾರಾಯಣನಿಗೆ ನಮಸ್ಕರಿಸುವುದರಿಂದ ಮನಸ್ಸಿನಲ್ಲಿ ಯಾವುದೇ ಗೊಂದಲಗಳಿಗೆ ಆಸ್ಪದಗಳಿರುವುದಿಲ್ಲ. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾದ ಕೆಲಸಗಳು ದೊರೆಯಲಿವೆ.
  • ಮಿಥುನ
  • ಕೆಲಸಗಳನ್ನು ಶ್ರದ್ಧೆಯಿಂದ ಮಾಡಿ ಮುಗಿಸುವಿರಿ. ಮುಂದಾಳತ್ವವಿರುವ ಸಾಮಾಜಿಕ ಚಟುವಟಿಕೆಯಲ್ಲಿ ಅಡ್ಡಿ-ಆತಂಕಗಳು ಎದುರಾಗಲಿವೆ. ಗೆಳೆಯರ ಒತ್ತಾಯದಿಂದ ಸಂಘ-ಸಂಸ್ಥೆ ಅಥವಾ ರಾಜಕೀಯಕ್ಕೆ ಸೇರುವಿರಿ.
  • ಕರ್ಕಾಟಕ
  • ವಾಹನ ರಿಪೇರಿಯಂಥ ವಿಚಾರದಲ್ಲಿ ಅಧಿಕ ಖರ್ಚು ಸಂಭವಿಸಲಿದೆ. ವಿದ್ಯಾರ್ಥಿಗಳು ಉದಾಸೀನ ಮಾಡದೆ ಶಾಲಾ ತರಗತಿಯಲ್ಲಿ ಭಾಗವಹಿಸಿ. ಗುರುಗಳ ಮಾತನ್ನು ಮೀರುವುದರಲ್ಲಿ ಶ್ರೇಯಸ್ಸು ಇರುವುದಿಲ್ಲ.
  • ಸಿಂಹ
  • ಮಾತನ್ನು ತಿರಸ್ಕರಿಸಿ ಬೇರೆಯ ಮಾರ್ಗವನ್ನು ಹಿಡಿದಂಥ ಮಕ್ಕಳು ಪಶ್ಚ್ತಾತಾಪ ಪಡುವರು. ಮಕ್ಕಳ ಓದಿಗೆ ಅಡ್ಡಿಯಾಗಿರುವ ಸಮಸ್ಯೆಗೆ ಪರಿಹಾರ ಸಿಕ್ಕಿ ನೆಮ್ಮದಿ ಮೂಡುತ್ತದೆ. ನೂತನ ವಸ್ತ್ರ ಖರೀದಿಯ ಯೋಗವಿದೆ.
  • ಕನ್ಯಾ
  • ವೃತ್ತಿಯಲ್ಲಿ ಬದಲಾವಣೆ ಮಾಡುವವರು ಲಕ್ಷ್ಮಿ ಸಮೇತನಾದ ಶ್ರೀನಿವಾಸ ದೇವರ ಸೇವೆಯನ್ನು ಮಾಡುವುದರಿಂದ ಅಭಿವೃದ್ಧಿಯನ್ನು ಕಾಣಬಹುದು. ಮನೆಯಲ್ಲಿ ದೇವತಾಕಾರ್ಯ ಮಾಡುವ ತೀರ್ಮಾನ ಮಾಡಿರಿ.
  • ತುಲಾ
  • ಮಾತುಗಾರರಿಗೆ, ವಾಗ್ಮಿಗಳಿಗೆ, ಬೋಧಕ ವರ್ಗದವರಿಗೆ ವೃತ್ತಿಯಲ್ಲಿ ಮುಂಬಡ್ತಿ ಅಥವಾ ಸನ್ಮಾನಗಳು ದೊರಕಲಿವೆ. ನಿಮ್ಮ ಮನೋಭಿಲಾಷೆಗಳನ್ನು ವ್ಯಕ್ತಪಡಿಸಲು ಹಿಂಜರಿಯಬೇಡಿ. ವ್ಯಾಪಾರದಲ್ಲಿ ಮಿಶ್ರಫಲವಿರುವುದು.
  • ವೃಶ್ಚಿಕ
  • ಆನುವಂಶಿಕ ಬಹುಕಾಲದ ಬೇಡಿಕೆಯೊಂದು ಈಡೇರುವುದರಿಂದ ನೆಮ್ಮದಿ ಸಿಗಲಿದೆ. ತಂದೆ ತಾಯಿ ಅಥವಾ ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ತಪಾಸಣೆ ಅಗತ್ಯವೆನಿಸಲಿದೆ. ನಂಬಿಕೆ ಪ್ರತಿಪಾದಿಸಲು ಅಂಜಿಕೆ ಬೇಡ.
  • ಧನು
  • ಸಂಪೂರ್ಣ ಜ್ಞಾನವನ್ನು ಹೊಂದದೆ ವಾದಿಸಿದ ವಿಷಯದಲ್ಲಿ ಹಾಸ್ಯಾಸ್ಪ ದರಾಗಬಹುದು. ವಸ್ತ್ರ ವಿನ್ಯಾಸ, ಚಿತ್ರಕಲೆ, ಕಥೆ-ಕವನಗಳ ಬರವಣಿಗೆಯಲ್ಲಿ ಆಸಕ್ತಿ ಮೂಡಲಿದೆ.
  • ಮಕರ
  • ಪ್ರಮುಖ ಗುರಿ ಸಾಧನೆಗಳಿಗೆ ಕುಟುಂಬ ವರ್ಗದವರಿಂದ ಒಳ್ಳೆಯ ಬೆಂಬಲ ಸಿಗುವುದು. ಮಲ್ಲಿಕಾರ್ಜುನನ ಅನುಗ್ರಹ ಸಂಪಾದಿಸಿದಲ್ಲಿ ಮತ್ತಷ್ಟು ಉತ್ತಮ ಫಲಗಳನ್ನು ಅನುಭವಿಸುವ ಯೋಗವಿದೆ.
  • ಕುಂಭ
  • ಸಣ್ಣ ಸಣ್ಣ ವಿಚಾರಗಳನ್ನು ದೊಡ್ಡ ದೊಡ್ಡ ಸಮಸ್ಯೆ ಮಾಡುವ ಮನಸ್ಥಿತಿಯನ್ನು ತಕ್ಷಣದಲ್ಲಿಯೇ ಬದಲಾಯಿಸಿಕೊಳ್ಳುವುದು ಉತ್ತಮ. ಕೆಲಸಗಳು ಮಂದಗತಿಯಲ್ಲಿ ಸಾಗಲಿವೆ.
  • ಮೀನ
  • ಕೃಷಿಕರು ಕೈ ಬಿಟ್ಟಿರುವ ಯೋಜನೆಗಳನ್ನು ಮತ್ತೆ ಮುಂದುವರಿಸುವ ಅವಕಾಶ ಬರಲಿದೆ. ಪೂರಕವಾದ ವಾತಾವರಣ ನಿರ್ಮಾಣವಾಗುವುದು. ಶ್ರಮಕ್ಕೆ ಹೋಲಿಸಿದರೆ ದುಪ್ಪಟ್ಟು ಸಂಪಾದನೆಯಾಗುವ ಯೋಗವಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.