ADVERTISEMENT

ದಿನ ಭವಿಷ್ಯ: ಸಮಸ್ಯೆಗಳು ಬಗೆ ಹರಿದು ಮನೆಯವರಿಗೆ ನೆಮ್ಮದಿ ಉಂಟಾಗುವುದು

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 12 ಜುಲೈ 2025, 23:32 IST
Last Updated 12 ಜುಲೈ 2025, 23:32 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಅನಾವಶ್ಯಕ ಚಿಂತೆಯಿಂದ ಆರೋಗ್ಯದಲ್ಲಿ ಏರುಪೇರು ಕಂಡುಬರಲಿದೆ. ಈ ದಿನ ನಿಮಗೆ ಬರುವ ನೂತನ ಯೋಚನೆಗಳು ಖರ್ಚಿಗೆ ದಾರಿಯಾದರೂ ಮುಂದಿನ ದಿನಗಳಲ್ಲಿ ಉಪಕಾರಿಯಾಗಿರುತ್ತದೆ. ಅದೃಷ್ಟದಾಯಕ ದಿನವಾಗಿರುತ್ತದೆ.
  • ವೃಷಭ
  • ಈ ದಿನ ನಿಮಗೆ ಹೆಚ್ಚಿನ ನಿರಾಶೆಯನ್ನು ತರದು. ಕರ್ತವ್ಯ ದೃಷ್ಟಿಯಿಂದ ವೃತ್ತಿಕ್ಷೇತ್ರದಲ್ಲಿ ಒಂದೇ ಮನಸ್ಸಿನಲ್ಲಿ ದುಡಿದರೆ ಸಮಾಧಾನ ಹೆಚ್ಚುತ್ತದೆ. ಅವಿವಾಹಿತರಿಗೆ ವಿವಾಹದ ವಿಚಾರದಲ್ಲಿ ಶುಭವಾಗುವ ಲಕ್ಷಣವಿದೆ.
  • ಮಿಥುನ
  • ಹಿತಶತ್ರುಗಳ ದ್ವೇಷ ಅಸೂಯೆಯಿಂದ ಉಂಟಾಗುತ್ತಿದ್ದ ನೋವು ದೂರಾಗುತ್ತದೆ. ಕಿಂಚಿತ್ ಕಾರ್ಯಸಿದ್ದಿಯಿಂದಲೂ ನೆಮ್ಮದಿ ಕಂಡುಬರಲಿದೆ. ಅನೇಕ ಬಗೆಯ ಶುಭವಾರ್ತೆಗಳು ನೆಮ್ಮದಿಗೆ ಕಾರಣವಾದೀತು.
  • ಕರ್ಕಾಟಕ
  • ಪ್ರಭಾವಿ ವ್ಯಕ್ತಿಗಳೊಂದಿಗೆ ಸಂಪರ್ಕ ಉಪಕಾರಕ್ಕಿಂತ ತೊಂದರೆಗೆ ಹೆಚ್ಚು ದಾರಿಯಾಗುವುದು. ಆದ್ದರಿಂದ ಜೋಪಾನವಾಗಿರಿ. ನಿಸ್ವಾರ್ಥ ಸೇವೆಯಿಂದ ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಯಾಗಲಿದ್ದೀರಿ.
  • ಸಿಂಹ
  • ನೂತನ ಸ್ನೇಹಿತನಿಂದ ಅಥವಾ ಅಪರಿಚಿತರ ಸಹಕಾರದಿಂದ ನಿಮ್ಮ ಕಾರ್ಯ ವ್ಯವಸ್ಥಿತವಾಗಿ ನಡೆಯಲಿದೆ. ಗೃಹದಲ್ಲಿ ಸಂಭ್ರಮದ ಆಚರಣೆಯಿಂದಾಗಿ ಅಥವಾ ವೃಥಾ ತಿರುಗಾಟದಿಂದಾಗಿ ಖರ್ಚು ಹೆಚ್ಚಾಗಲಿದೆ.
  • ಕನ್ಯಾ
  • ನಿಮ್ಮ ಕೆಲಸಗಳನ್ನು ಸಾಧಿಸಿಕೊಳ್ಳಲೇ ಬೇಕಿದ್ದರೆ ಅವಿರತ ಶ್ರಮ ಅಗತ್ಯ ಮತ್ತು ಅನಿವಾರ್ಯ. ನಿಮ್ಮ ಹಿತಾಸಕ್ತಿಗಳಿಗೆ ಹೆಚ್ಚಿನ ಗಮನವನ್ನು ಕೊಡಿ. ಬಿಳಿಯಾದದ್ದಲ್ಲಾ ಹಾಲು ಎಂದು ನಂಬುವ ನಿಮ್ಮ ಮನೋಧರ್ಮದಿಂದ ಈ ದಿನ ಮೋಸ ಹೋಗುವಿರಿ.
  • ತುಲಾ
  • ಶುಭ ಮಂಗಲ ಕಾರ್ಯಗಳಿಗೆ ಅಡ್ಡಿ-ಆತಂಕ ಯಾವುದು ಇರುವುದಿಲ್ಲ. ಜಟಿಲ ಸಮಸ್ಯೆಗಳು ಬಗೆ ಹರಿದು ಮನೆಯವರಿಗೆ ನೆಮ್ಮದಿ ಉಂಟಾಗುವುದು. ನಿಮ್ಮ ಮನೋಭಿಲಾಷೆಗೆ ಕುಟುಂಬ ವರ್ಗದವರು ಅಭಿವೃದ್ಧಿ ದಾರಿಯನ್ನು ಕಲ್ಪಿಸುವರು.
  • ವೃಶ್ಚಿಕ
  • ವ್ಯಾಪಾರದ ಬಂಡವಾಳ ಹೆಚ್ಚಿಸಿಕೊಳ್ಳುವ ಬಗ್ಗೆ ಯೋಚಿಸಬಹುದು. ಅಧಿಕ ಜವಾಬ್ದಾರಿ ಅಥವಾ ಒತ್ತಡ ತರುವಂತಹ ಕೆಲಸಗಳಿಂದ ದೂರವಿರಿ. ಈ ದಿನದ ಸಂಜೆಯ ವೇಳೆಯ ನಂತರದಲ್ಲಿ ವಾಹನ ಚಾಲನೆಯಲ್ಲಿ ಜಾಗರೂಕತೆ ಇರಲಿ.
  • ಧನು
  • ನಿಮ್ಮ ಸಮಸ್ಯೆಗಳು ಮು0ದಿನ ದಿನಗಳಲ್ಲಿ ಸ್ವಲ್ಪ ಸ್ವಲ್ಪವಾಗಿ ದೂರವಾಗಲಿದೆ. ಬೇಕರಿ ಪದಾರ್ಥಗಳ ಮಾರಾಟದಿಂದ ಹೆಚ್ಚಿನ ಲಾಭ ಇರುವುದು. ಸಂಗತಿಗಳನ್ನು ಹಗುರವಾಗಿ ಪರಿಗಣಿಸುವ ಸ್ವಭಾವ ಬದಲಿಸಿಕೊಳ್ಳ ಬೇಕಾಗುವುದು.
  • ಮಕರ
  • ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗುವುದು. ನಿಸ್ವಾರ್ಥ, ತ್ಯಾಗದ ಮನೋಭಾವ ಬೆಳೆಸಿಕೊಳ್ಳುವಿರಿ. ಯಾವುದೇ ಅನವಶ್ಯಕ ಚಿಂತೆ ಬೇಡ. ಮನೆಯಲ್ಲಿ ಪತ್ನಿ, ಮಕ್ಕಳ ಅರೋಗ್ಯದ ಬಗ್ಗೆ ಗಮನ ಹರಿಸಬೇಕಾಗುತ್ತದೆ.
  • ಕುಂಭ
  • ಅನಾವಶ್ಯಕವಾಗಿ ಅವಮಾನ, ಮಾನಸಿಕ ಅಶಾಂತಿ, ದಾಂಪತ್ಯದಲ್ಲಿ ಕಲಹ, ಕುಟುಂಬ ವರ್ಗದವರಲ್ಲಿ ಭಿನ್ನಾಭಿಪ್ರಾಯದಂತಹ ಸನ್ನಿವೇಶಗಳು ಕಂಡುಬಂದು ಮನಸ್ಸಿಗೆ ನೋವಾಗಲಿದೆ. ಉದಾಸೀನತೆ ತೋರಿದರೆ ಹಿನ್ನಡೆಯನ್ನು ಎದುರಿಸಬೇಕಾಗುವುದು.
  • ಮೀನ
  • ಗಣಪತಿಯ ಅನುಗ್ರಹದಿಂದ ಗೊಂದಲಗಳು ಸರಳವಾಗಿ ನಿವಾರಣೆಗೊಂಡು ಮನಸ್ಸು ತಿಳಿಯಾಗುವುದು. ಹತ್ತಾರು ಜನರಿಗೆ ಮಾರ್ಗದರ್ಶಿಕ ವ್ಯಕ್ತಿಯಾಗಿ ನೇಮಕಗೊಳ್ಳುವ ಯೋಗವಿದೆ. ವಿದ್ಯಾರ್ಥಿಗಳಿಗೆ ಒಳ್ಳೆಯ ಫಲಿತಾಂಶ ಪ್ರಾಪ್ತಿಯಾಗುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.