ADVERTISEMENT

ದಿನ ಭವಿಷ್ಯ:ಈ ರಾಶಿಯವರು ಸಾಮಾಜಿಕವಾಗಿ ಬದುಕಿನಲ್ಲಿ ಹೊಸ ಹುರುಪನ್ನು ಕಾಣಲಿದ್ದೀರಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 1 ಸೆಪ್ಟೆಂಬರ್ 2025, 23:30 IST
Last Updated 1 ಸೆಪ್ಟೆಂಬರ್ 2025, 23:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಒಡಹುಟ್ಟಿದವರ ಸಹಕಾರದಿಂದ ಮಾನಸಿಕ ನೆಮ್ಮದಿ ಪಡೆಯುವಿರಿ. ಮನೋಭಿಲಾಷೆಗಳನ್ನು ವ್ಯಕ್ತಪಡಿಸಲು ಹಿಂಜರಿಯಬೇಡಿ. ಸಾಮಾಜಿಕವಾಗಿ ಬದುಕಿನಲ್ಲಿ ಹೊಸ ಹುರುಪನ್ನು ಕಾಣಲಿದ್ದೀರಿ.
  • ವೃಷಭ
  • ವಿನಾಕಾರಣ ಅಲೆದಾಟದಿಂದ ಬೇಸರ ಪಡುವ ಅವಶ್ಯಕತೆ ಇಲ್ಲ. ಮಗಳಿಗೆ ಆತ್ಮೀಯರೊಬ್ಬರ ಸಹಾಯದಿಂದ ಉದ್ಯೋಗ ದೊರೆಯಲಿದೆ. ಸಾಧು–ಸಂತರ ದರ್ಶನ ಮಾಡುವಿರಿ.
  • ಮಿಥುನ
  • ಲೇವಾದೇವಿ ವ್ಯವಹಾರದಲ್ಲಿ ಅಡ್ಡಿ ಆತಂಕ ಎದುರಾದರೂ ದುರ್ಗಾದೇವಿಯ ಆರಾಧನೆಯಿಂದ ಸರಿಯಾಗುವುದು. ಆರೋಗ್ಯದ ವಿಚಾರದಲ್ಲಿ ಉದಾಸೀನತೆ ತೋರುವುದು ಸರಿಯಲ್ಲ.
  • ಕರ್ಕಾಟಕ
  • ಭಾತೃ ವರ್ಗದವರಲ್ಲಿ ಮೃದುವಾಗಿ ವರ್ತಿಸುವುದು ಒಳ್ಳೆಯದು. ಇದರಿಂದಾಗಿ ಹಲವು ಕಾರ್ಯಗಳು ಕೈಗೂಡಲಿವೆ. ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಅನುಕೂಲ ತೋರಿ ಬರುವುದು.
  • ಸಿಂಹ
  • ದೇಹದಲ್ಲಿ ವಾತದ ಬಾಧೆಯು ತುಸು ಉಪಶಮನವಾಗುವುದು. ವೃಥಾ ಅಲೆದಾಟದಿಂದ ಆಯಾಸ. ಕಾರ್ಯಕ್ಷೇತ್ರದಲ್ಲಿ ಕೆಲಸದ ಹೊರೆ ಬೆಟ್ಟದಂತೆ ಇರುವುದು. ಮಾನಸಿಕ ಶಾಂತಿ ಹೆಚ್ಚಾಗಲಿದೆ.
  • ಕನ್ಯಾ
  • ಸುಖ-ದುಃಖ, ಲಾಭ-ನಷ್ಟಗಳೆರಡೂ ಸಮಾನವಾಗಿದ್ದರೂ ಪ್ರತಿಷ್ಠಿತರ ಸಹಕಾರದಿಂದ ಸುಧಾರಣೆ ಕಂಡುಬರಲಿದೆ. ರೈತರಿಗೆ ಹೆಚ್ಚಿನ ಲಾಭಾಂಶ ಅದರಲ್ಲೂ ತೆಂಗಿನಕಾಯಿ ಬೆಳೆಗಾರರಿಗೆ ಅಧಿಕ ಬೆಲೆ ಕಂಡು ಬರುತ್ತದೆ.
  • ತುಲಾ
  • ಅಭಿವೃದ್ಧಿಯಲ್ಲಿ ಹಲವು ಅಡೆತಡೆಗಳು ಎದುರಾಗಲಿವೆ. ಸದಾಕಾಲ ಪಕ್ಕದಲ್ಲಿಯೇ ಇರುವ ಪರಿಚಿತರಿಂದ ವಂಚನಾ ಪ್ರಸಂಗ ಇರಲಿದೆ. ನೂತನ ಗೃಹ ನಿರ್ಮಾಣದ ಯೋಜನೆಗೆ ಯೋಚಿಸಬಹುದು.
  • ವೃಶ್ಚಿಕ
  • ದೈಹಿಕ ಸಹಾಯ ನಿರೀಕ್ಷಿಸಿದ ಕಡೆಯಿಂದ ದೊರಕಲಿದೆ. ಅಪರಿಚಿತರ ಹತ್ತಿರ ಗೌಪ್ಯ ವಿಚಾರಗಳನ್ನು ಹಂಚಿಕೊಳ್ಳಬೇಡಿ. ಹೊಸ ಜವಾಬ್ದಾರಿಗಳು ಅರಸಿ ಬರಲಿವೆ. ಹೊಸತನದಲ್ಲಿ ಜಯ ಕಾಣುವಿರಿ.
  • ಧನು
  • ಪ್ರೀತಿಸುವವರ ಮಾರ್ಗದರ್ಶನ ದೊರೆಯಲಿದ್ದು , ಹೊಸ ಚೈತನ್ಯ ತುಂಬಿಬರಲಿದೆ. ವೃತ್ತಿಯ ಪರವಾಗಿ ಬಹಳ ಮುಖ್ಯ ಕೆಲಸವನ್ನು ಮಾತ್ರ ಈ ದಿನ ಕೈಗೆತ್ತಿಕೊಳ್ಳಿ. ವಿವೇಕರಹಿತ ಕೆಲಸದಲ್ಲಿ ತೊಡಗಿಸಿಕೊಳ್ಳದಿರಿ.
  • ಮಕರ
  • ಸರ್ಕಾರಿ ನೌಕರರಿಗೆ ನಾನಾ ರೀತಿಯಲ್ಲಿ ಅಡ್ಡಿ-ಆತಂಕಗಳು ಕಾಡಬಹುದು. ವ್ಯಕ್ತಿತ್ವವು ವಿಶೇಷವಾಗಿ ಆಕರ್ಷಿಸುವುದು. ಮಾನಸಿಕ ಒತ್ತಡ ಹೆಚ್ಚಾಗಿರುವುದು, ತಪ್ಪುಗಳು ಆಗದಂತೆ ಎಚ್ಚರವಹಿಸಿ.
  • ಕುಂಭ
  • ಅನಗತ್ಯ ಖರ್ಚು-ವೆಚ್ಚಗಳಿಗೆ ಕಡಿವಾಣ ಹಾಕುವುದರಿಂದ ಆರ್ಥಿಕ ಸಂಕಷ್ಟ ಅರ್ಧದಷ್ಟು ಕಳೆಯುವುದು. ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿರಿ. ಸಂಜೆಯ ವೇಳೆ ಸಣ್ಣಮಟ್ಟಿನ ಪ್ರಯಾಣ ಸಂಭವಿಸಲಿದೆ.
  • ಮೀನ
  • ಅಧಿಕವಾದ ಆತ್ಮ ವಿಶ್ವಾಸದಿಂದ ಸಾಮರ್ಥ್ಯಕ್ಕಿಂತ ಹೆಚ್ಚಿನ ಕೆಲಸವನ್ನು ಮಾಡಲು ಹೋಗುವುದು ಸರಿಯಲ್ಲ. ಮಧ್ಯವರ್ತಿಗಳ ಸಹಾಯದಿಂದಾಗಿ ವಿವಾಹದ ವಿಷಯದಲ್ಲಿ ಅನುಕೂಲವಾಗಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.