ADVERTISEMENT

ದಿನ ಭವಿಷ್ಯ: ಈ ರಾಶಿಯ ನವ ವಿವಾಹಿತರಿಗೆ ಸಂತಾನ ಭಾಗ್ಯ ಲಭ್ಯವಾಗಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 6 ಸೆಪ್ಟೆಂಬರ್ 2025, 23:30 IST
Last Updated 6 ಸೆಪ್ಟೆಂಬರ್ 2025, 23:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಕೆಲಸಕ್ಕಾಗಿ ಬೇರೆ ಸ್ಥಳದಲ್ಲಿ ವಾಸಿಸಬೇಕಾಗುವುದು. ಅಪರೂಪದ ವ್ಯಕ್ತಿಯೊಬ್ಬರನ್ನು ಭೇಟಿಯಾಗುವ ಸಂದರ್ಭ ಒದಗಿಬರಲಿದೆ. ಯೋಗಾಭ್ಯಾಸ ಮನೋಲ್ಲಾಸವನ್ನು ಹೆಚ್ಚಿಸುತ್ತದೆ, ಚೈತನ್ಯವು ಮೂಡಿಬರಲಿದೆ.
  • ವೃಷಭ
  • ಮದುವೆಯ ವಿಷಯಕ್ಕೆ ಸಂಬಂಧಿಸಿದಂತೆ ತಾಯಿ ಮತ್ತು ಅಣ್ಣಂದಿರ ಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗುವಿರಿ. ಸಗಟು ವ್ಯಾಪಾರಿಗಳಿಗೆ ವ್ಯಾಪಾರ ಇರುವುದು. ದೀರ್ಘಕಾಲೀನ ಯೋಜನೆಗಳು ಫಲದಾಯಕವೆನಿಸಲಿವೆ.
  • ಮಿಥುನ
  • ತಾವು ಬಯಸಿದ ಕ್ಷೇತ್ರದಲ್ಲಿ ಹೊಸ ತಿರುವನ್ನು ಪಡೆಯುವಲ್ಲಿ ಯಶಸ್ವಿ ಯಾಗುವಿರಿ. ಶತ್ರು ಬಾಧೆ ಈ ದಿನದಿಂದ ಹಂತ ಹಂತವಾಗಿ ನಿವಾರಣೆ ಆಗಲಿದೆ. ಆರೋಗ್ಯದಲ್ಲಿ ವಾಯು ಸಂಬಂಧವಾಗಿ ತೊಂದರೆಗಳು ಕಾಣಿಸಿಕೊಳ್ಳಬಹುದು.
  • ಕರ್ಕಾಟಕ
  • ಸಾಲಗಳು ತೀರಿದ್ದರಿಂದ ಮನೆಯಲ್ಲಿ ನೆಮ್ಮದಿಯ ವಾತಾವರಣ ಇರಲಿದೆ. ನಿಮ್ಮ ಮುಂದಿನ ಹಾದಿ ಏನೆಂಬುದು ನಿಮಗೆ ಈದಿನ ಸ್ಪಷ್ಟವಾಗಿರಲಿ. ಕುಟುಂಬದ ಜವಾಬ್ದಾರಿ ವಹಿಸಿಕೊಳ್ಳುಬೇಕಾಗುವುದು.
  • ಸಿಂಹ
  • ಉದ್ಯೋಗದಲ್ಲಿನ ಸಮಸ್ಯೆಯಿಂದಾಗಿ ಬದಲಾವಣೆಯ ಮನಸ್ಸು ಬರಲಿದೆ. ಬಹಳ ದಿನಗಳ ನಂತರ ಇಂದು ಹಣದ ಹರಿವು ನಿಧಾನವಾಗಿ ಅನುಭವಕ್ಕೆ ಬರಲಿದೆ. ದುರ್ಗಾ ದೇವಿಯನ್ನು ಆರಾಧಿಸಿ ಶುಭ ಪ್ರಾಪ್ತಿ.
  • ಕನ್ಯಾ
  • ಹೂಡಿಕೆ ವಿಚಾರದಲ್ಲಿ ಯೋಚಿಸಿ ತೀರ್ಮಾನ ಕೈಗೊಳ್ಳುವಂತೆ ಮಿತ್ರರಿಂದ ಬಂದಿರುವ ಸಲಹೆ ಸರಿಯಾಗಿದೆ. ಈ ದಿನ ಕೊಟ್ಟ ಹಣ ಹಿಂದಿರುಗುವುದು ಕಷ್ಟಸಾಧ್ಯ. ಆದ್ದರಿಂದ ಯಾರಿಗೂ ಸಾಲ ಕೊಡದಿರುವುದು ಉತ್ತಮ.
  • ತುಲಾ
  • ನಿಮ್ಮ ಅತಿಯಾದ ಪರಿಶ್ರಮದ ದುಡಿಮೆ ದೃಷ್ಟಿದೋಷಕ್ಕೆ ಗುರಿಯಾಗುವುದು. ಕುಶಲಕರ್ಮಿಗಳಿಗೆ ಪ್ರದರ್ಶನ ಮಾರಾಟಗಳಿಂದ ಅಧಿಕ ಆದಾಯ. ನವ ವಿವಾಹಿತರಿಗೆ ಸಂತಾನ ಭಾಗ್ಯ ಲಭ್ಯವಾಗಲಿದೆ.
  • ವೃಶ್ಚಿಕ
  • ಒಂಟಿತನ ಹೋಗಲಾಡಿಸಿಕೊಳ್ಳಲು ಕೆಲಸಗಳತ್ತ ಮನಸ್ಸು ಹರಿಸುವಿರಿ. ಸಂಸಾರದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳಬೇಕಾಗುವುದು ಅನಿವಾರ್ಯವಾಗುತ್ತದೆ. ಕುಟುಂಬದಲ್ಲಿ ನೆಮ್ಮದಿ ಮೂಡುವುದು.
  • ಧನು
  • ನೀವು ತೆಗೆದುಕೊಂಡಿರುವ ನಿರ್ಧಾರ ಸರಿಯಾದುದೆಂದು ಈ ದಿನ ನಿಮಗೆ ಮನವರಿಕೆಯಾಗುವುದು. ಕೃಷಿಕರಿಗೆ ಹವಾಮಾನದ ವೈಪರೀತ್ಯದಂತಹ ಸಮಸ್ಯೆ ಎದುರಾಗಬಹುದು. ವಸ್ತ್ರಾಭರಣ ಖರೀದಿ ಯೋಗವಿದೆ.
  • ಮಕರ
  • ಕೆಲಸದ ಪ್ರದೇಶಗಳು ನಿಮ್ಮ ಅಭಿವೃದ್ಧಿಗೆ ಪೂರಕವಾಗಿರುತ್ತವೆ. ಕಬ್ಬಿಣ ಅಥವಾ ಗ್ಲಾಸ್‌ಗಳಿಂದ ಗಾಯಗಳಾಗುವ ಲಕ್ಷಣಗಳಿವೆ. ಗಮನವಿರಲಿ. ಕ್ರೀಡಾಪಟುಗಳಿಗೆ ಸಂತಸ ಸುದ್ದಿ ಕೇಳಿ ಬರಲಿದೆ.
  • ಕುಂಭ
  • ಹಾಲಿನ ಪದಾರ್ಥ ಮಾರಾಟಗಾರರಿಗೆ ಲಾಭವಾಗುವುದು. ಚರ್ಚೆ ಹಾಗೂ ವ್ಯಾಪಾರ ವ್ಯವಹಾರಗಳಲ್ಲಿ ಬಹಳ ಜಾಗರೂಕತೆಯನ್ನು ವಹಿಸಿರಿ. ಇಂದು ನಿಮ್ಮ ವಿರುದ್ಧವಾಗಿ ರಾಜಕೀಯ ಚಟುವಟಿಕೆಗಳು ಹೆಚ್ಚಾಗುವುವು.
  • ಮೀನ
  • ವೈದ್ಯರ ತಪಾಸಣೆಯಿಂದ ಬಂದ ಫಲಿತಾಂಶ ಆತಂಕವನ್ನು ಸೃಷ್ಟಿ ಮಾಡಲಿದೆ. ಇನ್ನೊಬ್ಬರ ಅಭಿಪ್ರಾಯ ಪಡೆದು ಚಿಕಿತ್ಸೆ ತೆಗೆದುಕೊಳ್ಳಿ. ಕಾರ್ಯದೊತ್ತಡ ಸದ್ಯಕ್ಕೆ ಕಡಿಮೆಯಾಗಿ ಮನಸ್ಸಿಗೆ ನಿರಾಳವಾಗುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.