ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ಷೇರು ಮಾರುಕಟ್ಟೆಯ ವ್ಯವಹಾರಗಳಲ್ಲಿ ಲಾಭ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 21 ಜುಲೈ 2025, 22:30 IST
Last Updated 21 ಜುಲೈ 2025, 22:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಅಡಿಕೆ ಬೆಳೆಗಾರರಿಗೆ ನಷ್ಟದ ಸಲುವಾಗಿ ಬೇರೆ ಬೆಳೆ ಮುಂದುವರಿಸುವುದು ಸೂಕ್ತ ಎಂಬ ಯೋಚನೆಗಳು ಬರಬಹುದು. ಇತಿ–ಮಿತಿಯ ಬಗ್ಗೆ ಮೇಲಿನ ಅಧಿಕಾರಿಗಳು ಅರಿವು ಮೂಡಿಸುವರು.
  • ವೃಷಭ
  • ನಿತ್ಯದ ವಸ್ತುಗಳ ಖರೀದಿಯಲ್ಲಿ ಅತಿಯಾದ ಕೃಪಣತೆ ತೋರಿ ಸಮಾಜದಲ್ಲಿ ಸಣ್ಣವರಾಗಬೇಡಿ. ಸ್ವಯಂ ನಿರ್ಧಾರವನ್ನು ತೆಗೆದುಕೊಳ್ಳುವುದರಿಂದ ಕುಟುಂಬದವರ ದೂಷಣೆಗೆ ಒಳಗಾಗುವ ಲಕ್ಷಣವಿದೆ.
  • ಮಿಥುನ
  • ಗೆಳೆಯರ ಸವಾಲಿನಲ್ಲಿ ಸದಾ ವಿಜಯ ನಿಮ್ಮದೇ ಆದ್ದರಿಂದ ಬೇಸರವಿಲ್ಲದೇ ಸಂತಸದಿಂದಿರುವಿರಿ. ದುಶ್ಚಟಗಳಿಗೆ ಒಳಗಾಗಿ ಅದರಿಂದ ಹೊರ ಬರಬೇಕೆಂದು ಇರುವವರು ಸಜ್ಜನರಾಗುವ ಪ್ರಯತ್ನ ಮಾಡಿ.
  • ಕರ್ಕಾಟಕ
  • ಹೊಸ ಗೆಳೆಯರು ನಿಮಗೆ ಪ್ರಯೋಜನಕಾರಿ ಎನಿಸಲಿದ್ದಾರೆ. ಷೇರು ಮಾರುಕಟ್ಟೆಯ ವ್ಯವಹಾರಗಳು ಲಾಭದತ್ತ ಸಾಗುವುದು. ಹಿಂಜರಿಕೆಯ ಸ್ವಭಾವ ಬಿಟ್ಟು ಕಾರ್ಯ ಕೈಗೊಳ್ಳಲು ಮುಂದಾಗಿ. ಅವಕಾಶಗಳು ಸಿಗಲಿವೆ.
  • ಸಿಂಹ
  • ಬೌದ್ಧಿಕ ಸಾಮರ್ಥ್ಯದಿಂದ ಕೆಲಸಗಳನ್ನು ನಿರ್ವಹಿಸುವಿರಿ. ರಚನಾತ್ಮಕ ಕೆಲಸಗಳ ನಿರ್ವಹಣೆಯಿಂದ ಸತ್ಕೀರ್ತಿ ದೊರೆಯುವುದು. ಸಾಲ ಮರುಪಾವತಿಗೆ ಸುಲಭ ಸೌಲಭ್ಯಗಳನ್ನು ನಿಮ್ಮದಾಗಿಸಿಕೊಳ್ಳುವಿರಿ.
  • ಕನ್ಯಾ
  • ದೀರ್ಘಕಾಲೀನ ಯೋಜನೆಗಳು ಫಲದಾಯಕವಾಗಿ ವೃತ್ತಿಪರರಿಗೆ ಕಾರ್ಯರಂಗದಲ್ಲಿ ಪ್ರಗತಿ. ನಿಮ್ಮ ವ್ರತ ಹಾಗೂ ಅನುಷ್ಠಾನದ ಫಲವಾಗಿ ಮಗ ಅಥವಾ ಮಗಳಿಗೆ ಶ್ರೇಯಸ್ಸಾಗುವುದು  ಅನುಭವಕ್ಕೆ ಬರುತ್ತದೆ.
  • ತುಲಾ
  • ಉದ್ಯೋಗ ಸಂಬಂಧಿತ ಚಟುವಟಿಕೆಯಲ್ಲಿ ಈ ದಿನ ಅಸಮಾಧಾನ, ನಿರಾಸಕ್ತಿ ಕಾಡಲಿದೆ. ಆದರೆ ಶ್ರೇಯಸ್ಸಿಗಾಗಿ ಸೋಮಾರಿತನ  ದೂರಮಾಡಿ. ಅನಿರೀಕ್ಷಿತ ಬದಲಾವಣೆಗಳು ಸಮಸ್ಯೆಗಳನ್ನು ಕಡಿಮೆ ಮಾಡಲಿವೆ.
  • ವೃಶ್ಚಿಕ
  • ಮೃದು ಧೋರಣೆ ಸ್ವಭಾವವನ್ನು ವ್ಯವಹಾರಿಕ ವಿಷಯದಲ್ಲಿ ತ್ಯಜಿಸುವುದು ಉತ್ತಮ. ವ್ಯವಹಾರದಲ್ಲಿ ಗೌಪ್ಯತೆಯನ್ನು ಕಾಪಾಡಿಕೊಳ್ಳಿ. ಯೋಜನೆಗಳಿಗೆ ಪಾಲುದಾರರಿಂದ ಉತ್ತೇಜನಕಾರಿ ಪ್ರತಿಕ್ರಿಯೆ ಸಿಗುವುದು.
  • ಧನು
  • ಅಧಿಕಾರಿಗಳೊಂದಿಗೆ ವಾದಿಸದೆ ಅವರು ಹೇಳುವ ಕಾರ್ಯಗಳನ್ನು ಮಾಡುವುದು ನಿಮಗೆ ಒಳ್ಳೆಯದು. ಮಗಳ ಆರೋಗ್ಯದ ಹೆಚ್ಚಿನ ಗಮನ ಹರಿಸಿ. ಅಂತರ್ಜಾಲದಲ್ಲಿ ಸಿಗುವ ಮಾಹಿತಿಗಳನ್ನು ನಂಬಿ ಮೋಸ ಹೋಗದಿರಿ.
  • ಮಕರ
  • ಯಾಂತ್ರಿಕ ಬದುಕಿನ ಭಾಗವಾದ ನಿಮ್ಮ ಜೀವನದಲ್ಲಿ ಸ್ವಲ್ಪವಾದರೂ ಭರವಸೆ ಇಟ್ಟುಕೊಳ್ಳಿ. ವಿದ್ಯುತ್ ಉಪಕರಣಗಳ ಖರೀದಿ ಮಾಡುವ ಸಾಧ್ಯತೆ ಇದೆ. ಸಂಗಾತಿಯ ಜೊತೆ ಉತ್ತಮ ಸಮಯವನ್ನು ಕಳೆಯುತ್ತೀರಿ.
  • ಕುಂಭ
  • ಕುಟುಂಬದವರು ಬಯಸುವ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುವ ಕಡೆ ಹೆಚ್ಚಿನ ಗಮನ ಹರಿಸಿ. ಕೃಷ್ಣ –ಸುಧಾಮನಂತಹ  ಸ್ನೇಹಕ್ಕೆ  ಇಲ್ಲದ ವಿಚಾರಗಳಿಗೆ ಜಗಳವೇಳುವ ಸಾಧ್ಯತೆಗಳಿವೆ.
  • ಮೀನ
  • ಮನೆ ಕಟ್ಟುವ ವಿಚಾರದಲ್ಲಿ ಮನೆಯ ಹಿರಿಯರೊಂದಿಗೆ ಗಂಭೀರವಾದ ಚರ್ಚೆ ಮಾಡುವುದು ಉಚಿತ. ಪ್ರಶಸ್ತವಾದ ಸಲಹೆ ಸಿಗುವುದು. ಸಂಸಾರದಲ್ಲಿ ಅಂತಃಕಲಹಗಳು ನಡೆದು, ಅಸಮಾಧಾನಕ್ಕೆ ಕಾರಣವಾಗುವಂತೆ ಆಗಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.