ADVERTISEMENT

ದಿನ ಭವಿಷ್ಯ: ಈ ರಾಶಿಯ ರಿಯಲ್ ಎಸ್ಟೇಟ್ ಏಜೆಂಟರಿಗೆ ಅಧಿಕ ಲಾಭ ದೊರೆಯಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 22 ಜುಲೈ 2025, 22:30 IST
Last Updated 22 ಜುಲೈ 2025, 22:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ವೃತ್ತಿಭೂಮಿಕೆಯಲ್ಲಿ ಕೆಲವರು ನಾಯಕರಾಗುವ ಸಂಭವವಿದೆ. ಹಿತಶತ್ರುಗಳ ಮೇಲೆ ಗಮನವಿರಲಿ. ಹಣ್ಣು ಹಾಗೂ ತರಕಾರಿ ವ್ಯಾಪಾರಿಗಳಿಗೆ ಸರಕು ಸಾಗಣೆಯಲ್ಲಿ ತೊಂದರೆಗಳಾಗಬಹುದು. ಮುನ್ನೆಚ್ಚರಿಕೆ ತೆಗೆದುಕೊಳ್ಳಿ.
  • ವೃಷಭ
  • ಚಿತ್ರರಂಗಕ್ಕೆ ಸೇರಿದ ಕಲಾವಿದರಿಗೆ ವಿಭಿನ್ನವಾದ ಕಲೆ, ಸಾಮರ್ಥ್ಯದಿಂದ ದೊಡ್ಡ ಮಟ್ಟದ ಪ್ರಚಾರ ದೊರೆಯುವುದು. ವ್ಯಾಪಾರ ಕ್ಷೇತ್ರದಲ್ಲಿರುವವರಿಗೆ ಗುರಿ ಮುಟ್ಟುವ ವಿಚಾರವಾಗಿ ಸವಾಲುಗಳು ಎದುರಾಗುತ್ತವೆ.
  • ಮಿಥುನ
  • ವಿದ್ಯಾಭ್ಯಾಸಕ್ಕಾಗಿ ಮನೆಯಿಂದ ದೂರ ಇರುವ ವ್ಯಕ್ತಿಗಳಿಗೆ ಮನೆಗೆ ಹೋಗಿಬರುವ ಅವಕಾಶ ಶೀಘ್ರ ಲಭಿಸಲಿದೆ. ವಿದ್ಯಾರ್ಥಿಗಳು ಓದಿನಲ್ಲಿ ಏಕಾಗ್ರತೆ ಸಾಧಿಸದಿದ್ದರೆ ಅಭ್ಯುದಯ ಅಸಾಧ್ಯ.
  • ಕರ್ಕಾಟಕ
  • ಮಾತಿನಲ್ಲಿ ಹಿಡಿತವಿರಲಿ. ನೀವಾಡಿದ ಮಾತುಗಳಲ್ಲಿ ನೀವೇ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಇದೆ. ಗೌರವವನ್ನು ಕಳೆದುಕೊಳ್ಳುವ ಲಕ್ಷಣವೂ ಇದೆ. ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆಯನ್ನು ಕಾಣಬಹುದು.
  • ಸಿಂಹ
  • ವಿಜ್ಞಾನ, ಶಿಕ್ಷಣ ಹಾಗೂ ಸಂಶೋಧನೆ ಕ್ಷೇತ್ರದಲ್ಲಿರುವ ವೃತ್ತಿಪರರು ಅಭಿವೃದ್ಧಿ ಕಾಣುವ ಲಕ್ಷಣಗಳಿವೆ. ವ್ಯಾಪಾರಕ್ಕೆ  ಬಂಡವಾಳ ಹೂಡುವಂತೆ ಮಗನಿಂದ ಒತ್ತಾಯ ಹೆಚ್ಚಲಿದೆ. ಬುದ್ಧಿವಂತಿಕೆಯಿಂದ ಬದುಕಬೇಕಾದ ದಿನ.
  • ಕನ್ಯಾ
  • ಧರ್ಮ ಕಾರ್ಯಗಳಿಗಾಗಿ ಧನ ವಿನಿಯೋಗಿಸುವ ಬಗ್ಗೆ ಯೋಚಿಸಿ. ವ್ಯಾಪಾರ, ವ್ಯವಹಾರಗಳಲ್ಲಿ ಪೈಪೋಟಿ ಎದುರಾಗಿ ಆತಂಕಕ್ಕೆ ಕಾರಣವಾಗಲಿದೆ. ಕಾರ್ಮಿಕರ ಬೇಡಿಕೆಗಳನ್ನು ಪೂರೈಸುವ ತೀರ್ಮಾನ ಅನಿವಾರ್ಯ.
  • ತುಲಾ
  • ರಾಜಕೀಯ ಭವಿಷ್ಯದಲ್ಲಿ ಜನಪ್ರಿಯತೆ ಹೆಚ್ಚಿಸಿಕೊಳ್ಳಲು ಪ್ರಯತ್ನ ನಡೆಸಿ. ಸಾಧಿಸಲೇಬೇಕೆಂಬ ಛಲವಿರುವವರಿಗೆಕಾರ್ಯಗಳೆಲ್ಲವೂ ಸಿದ್ಧಿಸಲಿವೆ.ಧನಾಗಮನದಲ್ಲಿ ವಿಳಂಬ. ಸಿದ್ಧಉಡುಪು ಮಾರಾಟಗಾರರಿಗೆ ಶುಭದಿನ.
  • ವೃಶ್ಚಿಕ
  • ವೈದ್ಯಕೀಯ ಖರ್ಚು ಹೆಚ್ಚಲಿದೆ. ಆದಾಯ ವೃದ್ಧಿಯೂ ವ್ಯಯಾಧಿಕ್ಯವೂ ಸಮತೋಲನವನ್ನು ಸಾಧಿಸುವುದು. ಅವಿವಾಹಿತರು ಬಾಳಸಂಗಾತಿಯನ್ನು ಪಡೆಯಲು ಧಾರ್ಮಿಕ ಮಾರ್ಗದಲ್ಲೂ ಯೋಚಿಸಿ.
  • ಧನು
  • ಪ್ರಾರಂಭಿಕ ಸಫಲತೆಯ ಬಗ್ಗೆ ಸಂತಸಗೊಳ್ಳುವಿರಿ. ಎಲ್ಲಾ ಕಾರ್ಯಗಳನ್ನು ಸಫಲತೆಗೆ ಮಾರ್ಪಡಿಸುವತ್ತ ಪ್ರಯತ್ನಿಸುವಿರಿ. ಈಶ್ವರನ ಆರಾಧನೆಯಿಂದ ಕೆಲಸದಲ್ಲಿ ತೊಡಕನ್ನುಂಟುಮಾಡುವ ಶತ್ರುಗಳ ಪ್ರಯತ್ನ ವಿಫಲವಾಗುವುದು.
  • ಮಕರ
  • ವಿದೇಶದಿಂದ ಶುಭ ಸಂದೇಶ ಬರಲಿದೆ. ಅನವಶ್ಯಕ ತಿರುಗಾಟ ಇದ್ದರೂ ರಿಯಲ್ ಎಸ್ಟೇಟ್ ಏಜೆಂಟರಿಗೆ ಅಧಿಕ ಲಾಭ. ತಾಯಿಯವರ ದೇಹಾರೋಗ್ಯ ತಪಾಸಣೆ ನಡೆಸಲು ವೈದ್ಯರನ್ನು ಸಂದರ್ಶಿಸುವುದು ಉತ್ತಮ.
  • ಕುಂಭ
  • ಹೊಸ ಜನರ ಸಂಪರ್ಕವು ಉತ್ತಮ ಧನಲಾಭ ತರಲಿದೆ. ಚರ್ಮದ ವಸ್ತುಗಳ ತಯಾರಿ ಅಥವಾ ಮಾರಾಟದಿಂದ ಲಾಭ ಬರಲಿದೆ. ಗಣ್ಯ ವ್ಯಕ್ತಿಗಳಿಗೆ ಸಮಾಜದಲ್ಲಿ ಅಥವಾ ರಾಜಕೀಯ ಕ್ಷೇತ್ರದಲ್ಲಿ ಗೌರವ ಲಭಿಸಲಿದೆ.
  • ಮೀನ
  • ದೇವರ ಕೃಪೆ ಹಾಗೂ ಹಿರಿಯರ ಆಶೀರ್ವಾದದಿಂದ ಸಮಸ್ಯೆಗಳಿಗೂ ಸುಲಭವಾಗಿ ಪರಿಹಾರ ಸಿಗಲಿದೆ. ಆಭರಣ ಅಥವಾ ಕಲಾವಸ್ತುಗಳನ್ನು ಖರೀದಿಸಲಿದ್ದೀರಿ. ನೂತನ ಸಂಸ್ಥೆಯೊಂದರಲ್ಲಿ ಉದ್ಯೋಗ ಪಡೆದುಕೊಳ್ಳುವಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.