ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ಅನವಶ್ಯಕ ಖರ್ಚು ಹೆಚ್ಚಾಗಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 6 ಜೂನ್ 2024, 0:39 IST
Last Updated 6 ಜೂನ್ 2024, 0:39 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಹಿಂದಿನಿಂದ ಬಾಕಿ ಇದ್ದ ಆಫೀಸಿನ ಕೆಲಸಗಳನ್ನು ಪೂರ್ತಿಗೊಳಿಸುವ ಪ್ರಯತ್ನ ಮಾಡಿ. ಕಬ್ಬಿಣದ ಮತ್ತು ತಾಮ್ರದ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ. ಹೊಲದ ಅಥವಾ ಜಮೀನಿನ ಕೆಲಸಕ್ಕೆ ಆಳನ್ನು ಗೊತ್ತು ಮಾಡಿಕೊಳ್ಳುವಿರಿ.
  • ವೃಷಭ
  • ಇಂದಿನ ದಿನದ ಪರಿಸ್ಥಿತಿಗಳನ್ನು ಅನುಕೂಲಕ್ಕೆ ತಕ್ಕಂತೆ ರೂಪಿಸಿಕೊಳ್ಳುವ ಪ್ರಯತ್ನದಲ್ಲಿ ಸಫಲರಾಗುವಿರಿ. ಬೋಧನೆಯಲ್ಲಿ ವಿಶೇಷ ಪರಿಣತಿ ಹೊಂದಿರುವ ನಿಮಗೆ ಶಿಷ್ಯರ ಸಂಖ್ಯೆ ವೃದ್ಧಿಯಾಗಲಿದೆ.
  • ಮಿಥುನ
  • ಮನೆಯಲ್ಲಿ ನಡೆಯಬೇಕಾದ ಮಂಗಳ ಕಾರ್ಯದ ಕುರಿತು ಹಿರಿಯೊರೊಂದಿಗೆ ಸಮಾಲೋಚನೆ ನಡೆಸುವಿರಿ. ವರ್ತಮಾನ ಸ್ಥಿತಿಯನ್ನು ಅರಿತು ಇಂದಿನ ವ್ಯವಹಾರವಿರಲಿ. ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆಯಿರಿ.
  • ಕರ್ಕಾಟಕ
  • ತಾಂತ್ರಿಕ ವಿದ್ಯೆಯಲ್ಲಿ ಯಶಸ್ಸನ್ನು ಹೊಂದುವ ಎಲ್ಲಾ ಲಕ್ಷಣಗಳೂ ಕಂಡರೂ ವಿದ್ಯಾಭ್ಯಾಸಕ್ಕೆ ತೊಂದರೆಯಾಗುವ ಪರಿಸ್ಥಿತಿ ಎದುರಾಗಬಹುದು. ಉದ್ಯೋಗದಲ್ಲಿ ಸಣ್ಣದಾಗಿ ಬದಲಾವಣೆ ಕಂಡುಬರಲಿದೆ.
  • ಸಿಂಹ
  • ಅನವಶ್ಯಕ ಖರ್ಚು ಹೆಚ್ಚಾಗಲಿದೆ. ಹಳೆಯ ಕಾರಿನ ಮಾರಾಟ ವಿಷಯ ಕೈಬಿಡುವುದು ಉತ್ತಮ. ಬೆನ್ನು ನೋವು ಹೋಗಲಾಡಿಸಿಕೊಳ್ಳುವ ಸಲುವಾಗಿ ಯೋಗದಲ್ಲಿ ಆಸಕ್ತಿ ಮೂಡಲಿದೆ.
  • ಕನ್ಯಾ
  • ಕೋರ್ಟಿನ ಕೆಲಸಗಳನ್ನು ತ್ವರಿತ ಗತಿಯಲ್ಲಿ ನಡೆಸಿಕೊಡುವಂತೆ ವಕೀಲರಲ್ಲಿ ಕೇಳಿಕೊಳ್ಳುವಿರಿ. ಮಾರುಕಟ್ಟೆಯಲ್ಲಿ ಆಗುತ್ತಿರುವ ಬದಲಾವಣೆ ಗಮನಿಸಿ ಷೇರುಗಳನ್ನು ಕೊಳ್ಳುವ ಯೋಜನೆಗೆ ಮುಂದಾಗಿ.
  • ತುಲಾ
  • ಮಕ್ಕಳ ವಿಷಯದಲ್ಲಿ ಅಸಡ್ಡೆ ತೋರಿಸಬಾರದು ಎಂಬುವುದು ಅರಿವಾ ಗಲಿದೆ. ಕುಟುಂಬದಲ್ಲಿ ಹಿಂದೆ ನಡೆದ ಕೆಟ್ಟ ವಿಚಾರಗಳ ಬಗ್ಗೆ ಮಾತನಾಡುವುದು ಸಹೋದರರಲ್ಲಿ ಭಿನ್ನಾಭಿಪ್ರಾಯ ಬೆಳೆಯಲು ಕಾರಣವಾಗುತ್ತದೆ.
  • ವೃಶ್ಚಿಕ
  • ರಾಜಕಾರಣಿಗಳಿಗೆ ಮತ್ತು ಸರ್ಕಾರಿ ನೌಕರರಿಗೆ ಈ ದಿನ ಸುಯೋಗ. ಎಲ್ಲರೊಂದಿಗೆ ಸಹಕಾರ ಮನೋಭಾವನೆಯಿಂದ ಮತ್ತು ಸರಳತೆಯಿಂದ ಮುಂದುವರಿದಲ್ಲಿ ಯಶಸ್ಸು ಕಂಡುಬರುತ್ತದೆ.
  • ಧನು
  • ನೀತಿ ನಿಯಮಗಳಿಗೆ ಬದ್ಧರಾದರೆ, ಉದ್ಯೋಗದಲ್ಲಿ ಹೆದರುವ ಅವಶ್ಯಕತೆ ಕಂಡುಬಾರದು. ಮಾತಿನ ಮೇಲೆ ಆತ್ಮವಿಶ್ವಾಸ ಮತ್ತು ಹಿಡಿತವಿರಲಿ. ಧಾರ್ಮಿಕ ವ್ಯಕ್ತಿಗಳಿಗೆ ಶುಭವಾಗುವುದು.
  • ಮಕರ
  • ಸರಕು ಸಾಗಾಣೆದಾರರಿಗೆ ಆದಾಯದಲ್ಲಿ ಹೆಚ್ಚಳ ಕಂಡುಬಂದರೂ, ಕಾರ್ಯದ ಒತ್ತಡದಿಂದ ವೃತ್ತಿಯಲ್ಲಿ ನಿರಾಶೆಯಾಗುವುದು. ಜೀವನ ರೂಪಿಸಿ ಕೊಳ್ಳಲು ನಿರ್ಧರಿಸಿದ ಪ್ರೇಮಿಗಳಿಗೆ ಸ್ಪಂದನೆ ಸಿಗುವ ಅವಕಾಶಗಳಿವೆ.
  • ಕುಂಭ
  • ಸ್ನೇಹಿತನಿಗಾಗಿ ಸಮಯ ಮತ್ತು ಹಣವನ್ನು ಖರ್ಚು ಮಾಡುವ ಪರಿಸ್ಥಿತಿ ಬರುವುದು. ಕುಟುಂಬದ ಅಭಿವೃದ್ಧಿಯಲ್ಲಿ ನಿಮ್ಮ ಅವಿರತ ಪ್ರಯತ್ನವು ಫಲಕಾರಿಯಾಗುವುದು.
  • ಮೀನ
  • ಆಹಾರ ಪದಾರ್ಥಗಳ ವ್ಯಾಪಾರ ಮಾಡುವವರಿಗೆ ಶ್ರಮಕ್ಕೆ ತಕ್ಕಷ್ಟು ಆದಾಯ ಲಭಿಸಲಿದೆ. ಮನುಷ್ಯ ಪ್ರಯತ್ನದ ಜತೆ ಮಹಾಗಣಪತಿಯ ಮೊರೆ ಹೋಗುವುದರಿಂದ ಕಾರ್ಯ ಸಿದ್ಧಿಯಾಗಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.