ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ವಿದೇಶ ಪ್ರವಾಸದ ಯೋಗವಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 30 ಆಗಸ್ಟ್ 2024, 23:30 IST
Last Updated 30 ಆಗಸ್ಟ್ 2024, 23:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ನಿರುದ್ಯೋಗಿಗಳು ಸಾಧಾರಣವಾದ ಉದ್ಯೋಗ ದೊರಕಿದರೂ ಯಾವುದೇ ಕಾರಣಕ್ಕೂ ತಿರಸ್ಕರಿಸಬೇಡಿ. ಸ್ವಂತ ಉದ್ಯೋಗದಲ್ಲಿ ಆಭಿವೃದ್ಧಿ ಹೊಂದುವಿರಿ. ಯೋಗಾಭ್ಯಾಸ ಮನೋಲ್ಲಾಸವನ್ನು ಹೆಚ್ಚಿಸುತ್ತದೆ.
  • ವೃಷಭ
  • ಕೃತಕ ಅಂಗಾಂಗಗಳ ಅಳವಡಿಕೆ ಮಾಡಿಸಿಕೊಂಡವರು ಆರೋಗ್ಯದಲ್ಲಿ ಉಂಟಾಗುವ ಯಾವುದೇ ಬದಲಾವಣೆಗಳನ್ನು ಸಸಾರ ಮಾಡದಿರಿ. ನೀವು ಬಯಸಿದ ಕ್ಷೇತ್ರದಲ್ಲಿ ಹೊಸ ತಿರುವನ್ನು ಪಡೆಯುವಲ್ಲಿ ಯಶಸ್ವಿಯಾಗುವಿರಿ.
  • ಮಿಥುನ
  • ಸೇತುವೆ ನಿರ್ಮಾಣಕ್ಕೆ ಗುತ್ತಿಗೆ ಸಿಗಬಹುದು ಅಥವಾ ಕಾರ್ಮಿಕರಾಗುವ ಅವಕಾಶ ಸಿಗಬಹುದು. ನಿಮ್ಮ ಕೆಲಸಗಳ ಬಗ್ಗೆ  ಅವಲೋಕನ ಮಾಡುವಂತಹ ಪದ್ಧತಿಯನ್ನು ರೂಢಿಸಿಕೊಳ್ಳಿರಿ. ಅತಿಥಿ ಸತ್ಕಾರ ಮಾಡುವಿರಿ.
  • ಕರ್ಕಾಟಕ
  • ನೀವು ಅಂತರ್ಮುಖಿಯಾಗಿದ್ದರೂ ಅತಿಥಿಗಳನ್ನು ಶಿಷ್ಟಾಚಾರಕ್ಕಾಗಿ ಸತ್ಕರಿಸಲೇಬೇಕಾಗುತ್ತದೆ. ವ್ಯವಸಾಯಗಾರರಿಗೆ ಹೆಚ್ಚಿನ ಬೆಳೆ ಕೈ ಸೇರುವ ನಿರೀಕ್ಷೆ ಇರುವುದು. ಮುಂದಿನ ಹಾದಿ ಏನೆಂಬುದು ಈ ದಿನ ಸ್ಪಷ್ಟವಾಗಿರಲಿ.
  • ಸಿಂಹ
  • ನಂಬಿ ಕೆಟ್ಟವರಿಲ್ಲ ಎಂಬ ಮಾತು ನಿಮ್ಮ ಪಾಲಿಗೆ ಅಕ್ಷರಷಃ ಸತ್ಯವಾಗು ವಂತಹ ಘಟನಾವಳಿಗಳು ನಡೆಯುತ್ತವೆ. ಪರಿಸ್ಥಿತಿಯನ್ನು ಜಾಣತನದಿಂದ ಉಪಯೋಗಿಸಿಕೊಂಡಲ್ಲಿ, ಜೀವನದಲ್ಲಿ ಸ್ಥಿರತೆಯು ಪ್ರಾಪ್ತಿಯಾಗುವುದು.
  • ಕನ್ಯಾ
  • ಪಾರಂಪರಿಕ ಔಷಧಗಳ ಕಲೆಯನ್ನು ಕಲಿಯುವ ಸದವಕಾಶಗಳು ಸಿಗಬಹುದು. ವ್ಯವಹಾರದಲ್ಲಿ ಸಂಭವಿಸುವ ಲಾಭನಷ್ಟಗಳನ್ನು ಸುಧಾರಿಸಿಕೊಂಡು ಹೋಗುವ ಮನಸ್ಸು ಬರಲಿದೆ.
  • ತುಲಾ
  • ಮನೆಗೆ ವಿಶೇಷ ಕಾರಣದಿಂದಾಗಿ ಬರುತ್ತಿರುವ ಮಗಳಿಗೆ ಪ್ರಿಯವಾಗುವ ಖಾದ್ಯಗಳನ್ನು ತಯಾರು ಮಾಡುವಿರಿ. ಆಫೀಸಿನಲ್ಲಿ ಉಂಟಾಗಿದ್ದ ಸಮಸ್ಯೆಗಳು ತನ್ನಿಂತಾನೆ ಬಗೆಹರಿದು ಮನಸ್ಸು ನಿರಾಳವಾಗಲಿದೆ.
  • ವೃಶ್ಚಿಕ
  • ಹೂಡಿಕೆ ವಿಚಾರದಲ್ಲಿ ಆಳವಾಗಿ ಯೋಚಿಸಿ ತೀರ್ಮಾನ ಕೈಗೊಳ್ಳುವಂತೆ ಮಿತ್ರರ ಸಲಹೆ ಸರಿಯಾಗಿರುತ್ತದೆ. ಅವಿವಾಹಿತರಿಗೆ ಕುಟುಂಬದವರು ನೋಡುವ ಸಂಬಂಧಗಳು ಸರಿ ಹೋಗದಿರಬಹುದು.
  • ಧನು
  • ಉದ್ಯೋಗದಲ್ಲಿನ ಸಮಸ್ಯೆಯಿಂದಾಗಿ ಬದಲಾವಣೆಯ ಮನಸ್ಸು ಬರಲಿದೆ. ಹಣಕಾಸಿನ ವಿಚಾರದಲ್ಲಿ ಭವಿಷ್ಯದ ಕುರಿತು ಯೋಚಿಸಿ ನಿರ್ಧಾರ ಕೈಗೊಳ್ಳುವುದರಿಂದ ಮುಂದಿನ ದಿನಗಳು ನೆಮ್ಮದಿದಾಯಕವಾಗಿ ಇರುವುದು.
  • ಮಕರ
  • ಅನಿರೀಕ್ಷಿತವಾಗಿ ಹಾಗೂ ಅನಿವಾರ್ಯವಾಗಿ ಸಂಘ-ಸಂಸ್ಥೆಗಳಲ್ಲಿ ಅಧಿಕಾರ ವಹಿಸಿಕೊಳ್ಳಬೇಕಾಗಬಹುದು. ಕಾರ್ಯರಂಗದಲ್ಲಿ ಅಪವಾದದ ಭೀತಿ ಕಳವಳ ಮೂಡಿಸಲಿದೆ. ವಿದೇಶ ಪ್ರವಾಸದ ಯೋಗವಿದೆ.
  • ಕುಂಭ
  • ಆರೋಗ್ಯದಲ್ಲಿ ವಾಯು ಸಂಬಂಧವಾಗಿ ತೊಂದರೆಗಳುಕಾಣಿಸಿಕೊಳ್ಳಬಹುದು. ಗುತ್ತಿಗೆದಾರರಿಗೆ ಬಿಡುವಿಲ್ಲದಂತಾದೀತು. ವಿವಾಹ ಸಂಬಂಧದ ಮಾತುಕತೆಗಳು ಫಲಕಾರಿಯಾಗುವುದು.
  • ಮೀನ
  • ವೈಯಕ್ತಿಕ ಕಾರ್ಯಗಳನ್ನು ಸಾಧಿಸಿಕೊಳ್ಳುವ ಸಲುವಾಗಿ ವಾಮಮಾರ್ಗ ವನ್ನು ಹಿಡಿಯುವುದು ಸರಿಯಲ್ಲ. ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸುವಿಕೆ ಯಿಂದ ಮಾನಸಿಕ ಶಾಂತಿ, ಜೀವನೋಲ್ಲಾಸ ಹೆಚ್ಚಾಗಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.