ADVERTISEMENT

ದಿನ ಭವಿಷ್ಯ: ಈ ರಾಶಿಯವರು ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ ಕಾಪಾಡಿಕೊಳ್ಳಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 21 ಮೇ 2024, 23:30 IST
Last Updated 21 ಮೇ 2024, 23:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ವಾಹನ ಖರೀದಿಗಾರರಿಗೆ ಸೂಕ್ತ ಸಮಯವಲ್ಲದಿದ್ದರೂ ಮಾರಾಟಗಾರಿಗೆ ಲಾಭದ ದಿನ. ಉನ್ನತ ಅಧಿಕಾರಿಗಳ ಸಂಪರ್ಕ ಉಂಟಾಗುವುದು. ನೀಲಿ ಬಣ್ಣವು ಶುಭ ಉಂಟುಮಾಡುತ್ತದೆ.
  • ವೃಷಭ
  • ನಿರುದ್ಯೋಗಿಗಳು ಬಂದ ಅವಕಾಶವನ್ನು ಒಪ್ಪಿಕೊಳ್ಳುವುದು ಸದ್ಯದ ಪರಿಸ್ಥಿತಿಗೆ ಉತ್ತಮವಾಗಿ ಕಾಣುತ್ತದೆ. ಶಿಕ್ಷಕ ವೃತ್ತಿ ಆರಂಭಿಸುವ ಬಗ್ಗೆ ಆಲೋಚಿಸಿ. ತಂದೆ ಅಥವಾ ಹಿರಿಯ ಸಹೋದರರಲ್ಲಿ ಸಂಯಮದ ನಡವಳಿಕೆ ಅಗತ್ಯ.
  • ಮಿಥುನ
  • ಮಗನ ಕೆಲಸ ನೆರವೇರಿದ ಕಾರಣಕ್ಕೆ ಹೇಳಿಕೊಂಡ ಹರಕೆ ಪೂರ್ಣ ಗೊಳಿಸುವ ಬಗ್ಗೆ ಮಗನಲ್ಲಿ ಪ್ರಸ್ತಾಪಿಸಿ. ಬಂಧುಗಳ ಸಲಹೆ-ಸಹಕಾರ ನೂತನ ಕಾರ್ಯಗಳಿಗೆ ಫಲ ಕೊಡುವುದು. ಸಣ್ಣ ಪ್ರಮಾಣದ ಪ್ರಯಾಣ ಮಾಡುವಿರಿ.
  • ಕರ್ಕಾಟಕ
  • ಕೆಲವು ದಿನಗಳ ಬಳಿಕ ಸಮಾನಮನಸ್ಕರ ಜತೆ ಕಳೆದ ಸಮಯ ಜ್ಞಾನವನ್ನು ವರ್ಧನೆ ಮಾಡಿಕೊಳ್ಳಲು ಸಹಾಯಕಾರಿ. ಸ್ವಂತವಾಗಿ ಉದ್ಯೋಗ ಮಾಡುವವರು ಪ್ರಗತಿ ಕಾಣಲಿದ್ದೀರಿ.
  • ಸಿಂಹ
  • ಒಳ್ಳೆಯತನದಿಂದಾಗಿ ನೀವು ನುಂಗಿಕೊಂಡ ಸಿಟ್ಟು, ತಪ್ಪು ಮಾಡಿದವರ ನಿರ್ಲಕ್ಷ್ಯಕ್ಕೆ ಕಾರಣವಾಗುತ್ತದೆ. ಮನೆ ಖರೀದಿಸುವ ವಿಷಯದ ಬಗ್ಗೆ ಮನೆಯವರಿಂದ ಮಾಹಿತಿಯನ್ನು ಕೇಳಬೇಕಾಗುತ್ತದೆ.
  • ಕನ್ಯಾ
  • ಇಷ್ಟು ದಿನ ಇದ್ದಂತಹ ಕೆಲವು ಜವಾಬ್ದಾರಿಗಳ ಭಾರ ಕಡಿಮೆ ಆಗಿ ನಿರಾಳದ ಜೀವನವನ್ನು ನಡೆಸುವಿರಿ. ಕಣ್ಣಿನ ದೃಷ್ಟಿಯಲ್ಲಿ ಬದಲಾವಣೆಗಳು ಅನುಭವಕ್ಕೆ ಬಂದಲ್ಲಿ ತಡಮಾಡದೆ ವೈದ್ಯರನ್ನು ಭೇಟಿ ಮಾಡಿ.
  • ತುಲಾ
  • ಉರಿಯುವಂಥ ಬೆಂಕಿಗೆ ತುಪ್ಪ ಸುರಿಯುವಂಥ ಮಾತುಗಳನ್ನಾಡಿ ಸಂಗಾತಿಯೊಂದಿಗಿನ ಸಂಬಂಧವನ್ನು ಕೆಡಿಸಿಕೊಳ್ಳಬೇಡಿ. ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಉದಾಸೀನತೆ ತೋರಬೇಡಿ. 
  • ವೃಶ್ಚಿಕ
  • ಯಾವುದೇ ಪರಿಸ್ಥಿತಿಯಲ್ಲಿಯೂ ಮನಸ್ಸಿನ ಭಾವನೆಗಳಿಗೆ ಮಾನ್ಯತೆ ನೀಡದಿರುವ ತೀರ್ಮಾನವನ್ನು ಮಾಡದಿರಿ. ತಂದೆಯವರ ವ್ಯವಹಾರದ ವಿಷಯಗಳನ್ನು ತಿಳಿದು ಮುಂದುವರಿಯುವಿರಿ.
  • ಧನು
  • ಸ್ವಪ್ರಯತ್ನದಿಂದಾಗಿ ತಲುಪಿದ ಸ್ಥಾನವು ಇತರರ ಸಹಾಯದಿಂದ ಪಡೆದದ್ದು ಎನ್ನುವ ಮಾತು ಜನರ ಬಾಯಲ್ಲಿ ಕೇಳಿ ನಿಮ್ಮ ಅಸಮಾಧಾನಕ್ಕೆ ಕಾರಣವಾಗುತ್ತದೆ. ರಾಜಕೀಯ ವಿದ್ಯಮಾನಗಳಿಂದ ವಿಶ್ರಾಂತಿ ಪಡೆಯಿರಿ.
  • ಮಕರ
  • ಆಪ್ತರ ಕಷ್ಟಗಳ ಕಡೆಗೆ ನೆರವಾಗುವ ತೀರ್ಮಾನಕ್ಕೆ ಬನ್ನಿ. ಅದರಿಂದಾಗಿ ನಿಮ್ಮ ಸ್ನೇಹಕ್ಕೆ ಅರ್ಥ ಇರುವುದು ಹಾಗೂ ಪುಣ್ಯ ಸಂಪಾದನೆಯಾಗುವುದು. ಅತಿ ಹಟವು  ಹೆತ್ತವರನ್ನು ಕಂಗಾಲು ಪಡಿಸುತ್ತದೆ.
  • ಕುಂಭ
  • ಒಂದೇ ಸಮಯದಲ್ಲಿ ಹೆಚ್ಚಿನ ವಿಷಯಗಳ ಮೇಲೆ ಗಮನ ಹರಿಸುವುದು ಕಲೆ ಎಂದು ಭಾವಿಸಿದ್ದರೂ ಇತರರು ಚಂಚಲತೆ ಎಂದು ದೂಷಿಸುವ ಸಾಧ್ಯತೆ ಇದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರಲಿದೆ.
  • ಮೀನ
  • ಮಗನು ಅನಿವಾರ್ಯ ಕಾರಣಗಳಿಂದ ಪರ ಊರಿಗೆ ತೆರಳುವುದು ದುಃಖಕರ ಸಂಗತಿಯಾಗಬಹುದು. ಎದುರಾಳಿಗೆ ಪರಿಣಾಮಕಾರಿಯಾಗುವ ನಿರ್ಧಾರಗಳನ್ನು ಅಗತ್ಯವಾಗಿ ತೆಗೆದುಕೊಳ್ಳಿ. ಬಿಳಿ ಬಣ್ಣ ಶುಭವನ್ನು ತರಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.