ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ಸಂಗಾತಿಯಿಂದ ಉಡುಗೊರೆ ದೊರೆಯಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 25 ಮೇ 2024, 23:30 IST
Last Updated 25 ಮೇ 2024, 23:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಅನುಷ್ಠಾನದ ಉತ್ತಮ ಫಲಗಳು ನಿಮ್ಮ ವರ್ಚಸ್ಸನ್ನು ಅಧಿಕಗೊಳಿಸುತ್ತದೆ. ವಿದ್ಯಾವಂತರಾಗಿದ್ದರು ಸಹ ಪ್ರಜ್ಞಾವಂತಿಕೆಯನ್ನು ಕಳೆದುಕೊಂಡರೆ ವಿದ್ಯೆಗೆ ಬೆಲೆ ಬರುವುದಿಲ್ಲ. ಅಭಿಮಾನಿಗಳ ಅಭಿಲಾಶೆಯನ್ನು ಕಡೆಗಣಿಸದಿರಿ.
  • ವೃಷಭ
  • ಇಂಜಿನಿಯರಿಂಗ್ ಮುಗಿಸುವ ಹಂತದ ವಿದ್ಯಾರ್ಥಿಗಳು ಪರದೇಶಕ್ಕೆ ಹೋಗುವುದಿದ್ದಲ್ಲಿ ಆದಷ್ಟು ಬೇಗ ಕೆಲವು ಕೋರ್ಸ್‌ಗಳನ್ನು ಮಾಡಿಕೊಳ್ಳುವ ಯೋಚನೆ ಮಾಡಿ. ಕೆಲಸದ ನಿರ್ವಹಣೆಯನ್ನು ಉತ್ತಮವಾಗಿ ಮಾಡುವಿರಿ.
  • ಮಿಥುನ
  • ನಿಮ್ಮ ಹರಿತವಾದ ಮಾತುಗಳು ಕೆಲವರ ತೇಜೋವಧೆಯನ್ನು ಮಾಡಬಹುದು ಆದರೆ ಅದಕ್ಕೆ ಅವಕಾಶವನ್ನು ಕೊಡದಿರಿ. ನಿಷ್ಠಾವಂತ ಸಂಗಾತಿಯಾಗಿರುವ ನಿಮಗೆ ಉಡುಗೊರೆ ದೊರೆಯುವ ಸಂಭವವಿದೆ.
  • ಕರ್ಕಾಟಕ
  • ಹಲವಾರು ಕೆಲಸಗಳಲ್ಲಿ ಅಡೆತಡೆ ಉಂಟಾಗುತ್ತಿರುವುದು ಜನ್ಮಸ್ಥಾನದ ದೇವರ ಹರಕೆಯನ್ನು ತೀರಿಸದ ಪ್ರಭಾವ ಇದ್ದಿರಬಹುದು. ಸಕಲ ವಿಘ್ನಗಳನ್ನು ಕಳೆದುಕೊಂಡು ಕಾರ್ಯಸಾಧನೆಗಾಗಿ ಗಣಪತಿಯನ್ನು ಪ್ರಾರ್ಥಿಸಿ.
  • ಸಿಂಹ
  • ಕೆಲವೊಂದು ವಿಷಯಗಳು ಹೀಗಾಗಬಹುದು ಎಂಬ ಅನುಭವ ನಿಮಗಾಗುತ್ತಿದ್ದರು ಸಹ ಆಗುವ ಅವಘಡವನ್ನು ತಪ್ಪಿಸಲು ಸಾಧ್ಯವಾಗುವುದಿಲ್ಲ. ಹೆಚ್ಚು ಜ್ಞಾನ ಪಡೆಯುವ ಮನಸ್ಸಿನಿಂದ ಪರ ಊರಿಗೆ ತೆರಳುವ ಸಾಧ್ಯತೆ ಇದೆ.
  • ಕನ್ಯಾ
  • ದಾಯದಿವರ್ಗದ ಜನರಿಗೆ ಅವರು ನಿಮ್ಮನ್ನು ಸತ್ಕರಿಸುವಷ್ಟು ಸತ್ಕಾರವು ಸಾಕಾಗುತ್ತದೆ. ನೀವು ಮಾಡಿದ ವ್ಯವಹಾರ ವಿಶ್ಲೇಷಣೆಗೂ ವಾಸ್ತವ ಪರಿಸ್ಥಿತಿಗೂ ಹಲವಾರು ವ್ಯತ್ಯಾಸಗಳು ಉಂಟಾಗಬಹುದು.
  • ತುಲಾ
  • ಪ್ರಾರ್ಥನೆಯನ್ನು ಮಾಡದೆ ಪ್ರಾರಂಭ ಮಾಡಿದ ಕೆಲಸಗಳಿಗೆ ಹಲವಾರು ವಿಘ್ನಗಳು ಬಂದೊದಗಬಹುದು. ಮಕ್ಕಳ ಆಟಿಕೆ ಸಾಮಾನು ಮಾರಾಟಗಾರರಿಗೆ ಲಾಭವಿದೆ. ನಿತ್ಯದ ಕೆಲಸ ಕಾರ್ಯಗಳಿಂದ ಸ್ವಲ್ಪ ಮುಕ್ತಿ ಸಿಗುವ ಅವಕಾಶವಿದೆ.
  • ವೃಶ್ಚಿಕ
  • ಮನೆಯಲ್ಲಿನ ಸಂತೋಷವು ಇಂದು ನಿಮ್ಮ ಅನಿರೀಕ್ಷಿತ ಭೇಟಿಯಿಂದ ಇಮ್ಮುಡಿಯಾಗುತ್ತದೆ. ಪುಷ್ಪವಿನ್ಯಾಸಕರ ಅಪರೂಪದ ಪುಷ್ಪ ಸಂಯೋಜನೆಯು ಪ್ರಸಿದ್ಧಿಯನ್ನು ಗಳಿಸುವುದು. ತವರಿನ ಸೆಳೆತ ಹೆಚ್ಚಾಗುತ್ತದೆ.
  • ಧನು
  • ಸಸ್ಯ ಶಾಸ್ತ್ರಜ್ಞರು ಶಿಲೀಂದ್ರಗಳ ಅಧ್ಯಯನ ನಡೆಸುವುದಿದ್ದಲ್ಲಿ ಮುಂಜಾಗ್ರತೆ ವಹಿಸಿ. ಅಮೂಲ್ಯವಾದ ವಸ್ತುವಿನ ಪ್ರಾಪ್ತಿಯಿಂದಾಗಿ ಸಂತೋಷ ಹೊಂದುವಿರಿ. ಊಟ ಉಪಹಾರಗಳನ್ನು ಇಂದು ಸ್ವಗೃಹದಲ್ಲಿ ಮಾಡಿ.
  • ಮಕರ
  • ಕೆಲವು ಕೆಲಸಗಳನ್ನು ನೀವೊಬ್ಬರೆ ಮಾಡಬಹುದೆಂದು ತಿಳಿದರು ಸಹ ಇತರರ ಸಹಾಯದಿಂದ ಕಡಿಮೆ ಸಮಯದಲ್ಲಿ ಮುಗಿಸಬಹುದೆಂಬುದನ್ನು ಕಂಡುಕೊಳ್ಳಿ. ಕುಲದೇವರ ದರ್ಶನ ಮಾಡುವ ಮನಸ್ಸಾಗಬಹುದು.
  • ಕುಂಭ
  • ಇಂದು ನೀವು ನಡೆಸಿದ ಅವಘಡವನ್ನು ಸರಿಪಡೆಸಿಕೊಂಡು ಮರೆಯಲು ಹೆಚ್ಚಿನ ಸಮಯ ಹಿಡಿಯಬಹುದು. ಸಹೋದರರ ನಡುವಿನ ವ್ಯಾಜ್ಯಗಳು ಮನೆಯಿಂದ ಹೊರಗೆ ಹೋಗುವುದು ಸರಿಯಲ್ಲ.
  • ಮೀನ
  • ಮೊಮ್ಮಗನ ವಯಸ್ಸಿಗೆ ಮೀರಿದ ಕೆಲವು ಆಟೋಟಗಳನ್ನು ನೋಡಿ ಮನಸ್ಸು ಪ್ರಫುಲ್ಲವಾಗುವುದು. ವ್ಯವಹಾರದ ಪಾರದರ್ಶಕತೆಯು ಶುಭ ತರುತ್ತದೆ. ಚರ್ಮ ಸಂಬಂಧಿ ತೊಂದರೆಗಳು ಪೀಡಿಸಬಹುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.