ದಿನ ಭವಿಷ್ಯ: ಈ ರಾಶಿಯವರ ಪಾಲಿಗೆ ಜೀವನದಲ್ಲಿ ಹೊಸ ಅಧ್ಯಾಯ ಇಂದು ಸೃಷ್ಟಿಯಾಗುತ್ತದೆ
ಸೋಮವಾರ, 22 ಜನವರಿ 2023
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 21 ಜನವರಿ 2024, 20:42 IST
Last Updated 21 ಜನವರಿ 2024, 20:42 IST
ದಿನ ಭವಿಷ್ಯ
ಮೇಷ
ಬಹುಕಾಲದಿಂದ ಅನುಭವಿಸುತ್ತಿರುವ ರೋಗಬಾಧೆಯು ಹಂತಹಂತವಾಗಿ ಚೇತರಿಕೆಯ ಮೆಟ್ಟಿಲನ್ನು ನೋಡಲಿದೆ. ಭಾವನಾತ್ಮಕ ಸಂಬಂಧಗಳಿಂದ ದೂರ ಉಳಿಯುವ ಸ್ಥಿತಿ ಬರಲಿದೆ.
ವೃಷಭ
ಮನೆ ಜಾಗದ ಪಾಲುದಾರಿಕೆ ವಿಷಯದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳಬೇಕಾಗುವ ಪರಿಸ್ಥಿತಿ ಬರುವುದು. ಸಾಮಾಜಿಕ ಚಟುವಟಿಕೆಗಳಲ್ಲಿನ ಕೊಡುಗೆಯು ಎಲ್ಲರ ಪ್ರಶಂಸೆಗೆ ಪಾತ್ರವಾಗುವುದು.
ಮಿಥುನ
ಅತಿ ಖರ್ಚು ಮಾಡುವ ಮನಸ್ಥಿತಿಯನ್ನು ಹೊಂದಿದ ನಿಮಗೆ ಹಣದ ಮೌಲ್ಯದ ಅರಿವಾಗುವುದು. ಹಣದ ಪರಿಸ್ಥಿತಿ ಸುಧಾರಿಸಿ ನೆಮ್ಮದಿ ಇರುವುದು. ಜೀವನದಲ್ಲಿ ಹೊಸ ಅಧ್ಯಾಯ ಸೃಷ್ಟಿಯಾಗುತ್ತದೆ.
ಕರ್ಕಾಟಕ
ಸಮಯ ಮತ್ತು ಅನುಕೂಲತೆಯ ಮೇಲೆ ಹೊಸ ಕೆಲಸಗಳನ್ನು ಒಪ್ಪಿಕೊಳ್ಳಬಹುದು. ರಿಯಲ್ ಎಸ್ಟೇಟು ಕಸುಬುದಾರರು ಹೆಚ್ಚಿನ ಬಂಡವಾಳ ತೊಡಗಿಸಲು ಈ ದಿನ ಸಮಂಜಸವಲ್ಲ. ಎಚ್ಚರದಿಂದ ಕಾರ್ಯ ನಿರ್ವಹಿಸಿ.
ಸಿಂಹ
ಗ್ರಹಗಳ ಚಲನೆಯು ಸುಖಮಯವಾಗಿ ಜೀವನ ನಡೆಸಲು ಅನುಕೂಲಕರವಾಗಿದೆ. ತಪ್ಳು ತಿಳಿವಳಿಕೆಯಿಂದಾಗಲಿ ಅಥವಾ ಅತಿಯಾದ ಆಸೆಯಿಂದಾಗಲೀ ಹಣ ಕಳೆದುಕೊಳ್ಳುವ ಸನ್ನಿವೇಶ ಬರಬಹುದು.
ಕನ್ಯಾ
ಅನಿವಾರ್ಯವಾಗಿ ಸಂಕಷ್ಟ ಪರಿಸ್ಥಿತಿಯಲ್ಲಿ ಕುಟುಂಬದ ಮುಂದು ವರಿಸುವಂತಾಗಲಿದೆ. ಸಾಂಸಾರಿಕ ವಿಷಯದಲ್ಲಿ ಹಿರಿಯರ ಮಾತು ಮೀರದಿರುವುದು ಲೇಸು. ವಿದೇಶ ಪ್ರಯಾಣದ ಸಿದ್ಧತೆ ನಡೆಯಲಿದೆ.
ತುಲಾ
ವ್ಯಾಪಾರ ವ್ಯವಹಾರದಲ್ಲಿನ ಪ್ರತಿ ಹೆಜ್ಜೆಯನ್ನು ಎದುರಾಳಿಯು ಗಮನಿಸುತ್ತಿರುವ ಕಾರಣ ಬಹಳಷ್ಟು ಎಚ್ಚರದಿಂದ ವ್ಯವಹರಿಸಿ. ತಂದೆ-ತಾಯಿಯ ಶುಭ ಆಶೀರ್ವಾದದೊಂದಿಗೆ ಈ ದಿನವನ್ನು ಪ್ರಾರಂಭಿಸಿ.
ವೃಶ್ಚಿಕ
ಆಗಾಧ ಜ್ಞಾನ ಶಕ್ತಿ ಹೊರ ಹೊಮ್ಮಲು ಸೂಕ್ತ ಕಾಲವಿದು. ಅದನ್ನು ವಿವೇಕರಹಿತ ಕೆಲಸದಲ್ಲಿ ತೊಡಗಿಸಿಕೊಳ್ಳದಿರಿ. ಈ ದಿನ ಹಣ್ಣು-ತರಕಾರಿಗಳ ವ್ಯಾಪಾರಿಗಳಿಗೆ ಲಾಭಾಂಶ ವೃದ್ಧಿಯಾಗುತ್ತದೆ.
ಧನು
ದೇವರ ದಯೆಯಿಂದ ಮತ್ತು ನಿಮಗಿರುವ ಜನಬಲದಿಂದಾಗಿ ಕೆಲಸದ ಒತ್ತಡವನ್ನು ಸಮರ್ಥವಾಗಿ ನಿಭಾಯಿಸುವಿರಿ. ಮೀನುಗಾರರು ಉದ್ಯೋಗದಲ್ಲಿ ಅಗತ್ಯ ಜಾಗರೂಕತೆ ವಹಿಸಬೇಕಾಗುತ್ತದೆ.
ಮಕರ
ಕುಟುಂಬದಲ್ಲಿ ಶುಭಕಾರ್ಯಗಳ ಸಂಭ್ರಮದಿಂದ ಹಿರಿಯರ ಮನಸ್ಸಿಗೆ ನೆಮ್ಮದಿ ಉಂಟಾಗುವುದು. ಮಗಳ ವಿವಾಹ ನಡೆಯಲಿದೆ. ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆಯಿರಿ.
ಕುಂಭ
ಗೃಹ ಕೈಗಾರಿಕೆ ಕೆಲಸಗಳಲ್ಲಿ ಮನೆಯವರ ಪರಿಶ್ರಮ ಅನಿವಾರ್ಯವಾಗುತ್ತದೆ. ದಲ್ಲಾಳಿಗಳಿಗೆ ಮತ್ತು ವೃತ್ತಿ ವ್ಯಾಪಾರಗಳಲ್ಲಿ ಮುನ್ನುಗ್ಗಿ ಕೆಲಸ ಮಾಡುವವರಿಗೆ ಕನಸುಗಳು ನನಸಾಗಲಿದೆ. ಕಾಫಿ ಬೆಳೆಗಾರರಿಗೆ ಲಾಭವಿದೆ.
ಮೀನ
ಆಲೋಚನೆಯನ್ನು ಇನ್ನೊಬ್ಬರಲ್ಲಿ ಹಂಚಿಕೊಳ್ಳಬೇಡಿ. ಸಣ್ಣ ಸಣ್ಣ ವಿಚಾರಗಳೂ ದೊಡ್ಡ ರಾದ್ಧಾಂತವಾಗಿ ಪರಿಣಮಿಸಲಿದೆ. ಮಿತ್ರರ ಭೇಟಿಯಿಂದ ನಿಮಗೆ ಕೆಲವು ಅಚ್ಚರಿಯ ವಿಚಾರ ತಿಳಿಯುವುದು.