ADVERTISEMENT

ದಿನ ಭವಿಷ್ಯ: ಕುಟುಂಬದ ಆಂತರಿಕ ಸಮಸ್ಯೆಯೊಂದು ಸಾಮರಸ್ಯದಿಂದ ಬಗೆಹರಿಯಲಿದೆ

ಶನಿವಾರ, 27 ಜನವರಿ 2024

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 26 ಜನವರಿ 2024, 19:30 IST
Last Updated 26 ಜನವರಿ 2024, 19:30 IST
   
ಮೇಷ
  • ಕಚೇರಿಯ ಕೆಲಸಗಳನ್ನು ಶೀಘ್ರವೇ ಮುಗಿಸಿ, ಮನೆಯಲ್ಲಿ ತಂಗಿಯ ಅಥವಾ ತಮ್ಮನ ಮದುವೆಯ ಕೆಲಸದ ಒತ್ತಡ ಹಾಗೂ ಜವಾಬ್ದಾರಿ ಹೆಚ್ಚಲಿದೆ. ಕುಟುಂಬದ ಆಂತರಿಕ ಸಮಸ್ಯೆಯೊಂದು ಸಾಮರಸ್ಯದಿಂದ ಬಗೆಹರಿಯಲಿದೆ.
  • ವೃಷಭ
  • ಈ ದಿನದ ಕೆಲಸ ಪ್ರಾರಂಭಕ್ಕೆ ಆತ್ಮಸ್ಥೆರ್ಯ ಬಹಳ ಮುಖ್ಯ. ಯಾವುದೇ ಒತ್ತಡಕ್ಕೆ ಮಣಿಯದೆ ಮುನ್ನುಗ್ಗಿ, ಜಯ ನಿಮ್ಮದಾಗಲಿದೆ. ನಿಮ್ಮ ಮನೋಭಿಲಾಷೆಗಳನ್ನು ವ್ಯಕ್ತಪಡಿಸಲು ಹಿಂಜರಿಯಬೇಡಿ.
  • ಮಿಥುನ
  • ಹವ್ಯಾಸಿ ಕಲಾವಿದರಾದ ನೀವು ಕತೆ ಕವನಗಳ ಬರವಣಿಗೆಯಲ್ಲಿ ಹೆಚ್ಚಿನ ಸಮಯ ಕಳೆಯುವಿರಿ. ಯಾವುದೇ ಹೊಸ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಮಯಾವಕಾಶ ತೆಗೆದುಕೊಂಡು ಯೋಚಿಸಿ ನಿರ್ಧಾರ ಕೈಗೊಳ್ಳಿ.
  • ಕರ್ಕಾಟಕ
  • ಇಂದು ನಿಮಗೆ ಕಷ್ಟದ ದಿನ ಎನಿಸಬಹುದು. ಅದರೆ ಇದೇ ನಿಮಗೆ ನಾಳಿನ ಸುಖಕ್ಕೆ ನಾಂದಿಯಾಗಲಿದೆ. ತಾಳ್ಮೆ ಜಯದ ಮಂತ್ರವಾಗಿರಲಿದೆ. ಹರಿತವಾದ ಆಯುಧಗಳ ಬಳಕೆಯ ವಿಷಯದಲ್ಲಿ ಜಾಗ್ರತೆ ವಹಿಸಿ.
  • ಸಿಂಹ
  • ಈ ದಿನ ನಿಮ್ಮ ಪ್ರತಿಭೆಯ ತೀಕ್ಷ್ಣತೆಯು ಸಂಬಂಧಪಟ್ಟವರ ಗಮನ ಸೆಳೆಯಲಿದೆ. ನಿಮ್ಮ ಎಲ್ಲ ಪ್ರಾಮಾಣಿಕ ಪ್ರಯತ್ನಗಳು ಯಶಸ್ಸು ಕಾಣುವ ಹಾದಿಯಲ್ಲಿರುವುದು. ನೆರೆಹೊರೆಯವರ ವೈಷಮ್ಯಗಳು ಅನುಭವಕ್ಕೆ ಬರಲಿವೆ.
  • ಕನ್ಯಾ
  • ವಿನಾಕಾರಣ ಅಲೆದಾಟದಿಂದ ಬೇಸರ ಪಡುವ ಅವಶ್ಯಕತೆ ಇಲ್ಲ. ಇಂದಿನ ನಿಮ್ಮ ಶ್ರಮ ಮುಂದಿನ ದಿನಕ್ಕೆ ಒಂದು ಅಡಿಪಾಯವಾಗಲಿದೆ. ವಿವಾದದ ಗೊಡವೆಗಳಿಂದ ದೂರ ಉಳಿಯುವುದರಿಂದ ಗೌರವ ಕಾಪಾಡಿಕೊಳ್ಳಹುದು.
  • ತುಲಾ
  • ಅಧಿಕಾರಸ್ಥರು ಹಾಗೂ ನಿಮ್ಮ ಹಿರಿಯ ನೌಕರರ ಜತೆ ನಿಮ್ಮ ಸ್ನೇಹ ಸಂಬಂಧ ಹೆಚ್ಚಾಗಿ ವೃತ್ತಿಯಲ್ಲಿ ನವ ಉಲ್ಲಾಸ ಮೂಡಲಿದೆ. ಸಾರ್ವಜನಿಕ ಸ್ಥಳದಲ್ಲಿ ನಿಮ್ಮ ಗೌರವ ಕಾಪಾಡಿಕೊಳ್ಳುವ ಬಗ್ಗೆ ಗಮನವಿರಲಿ.
  • ವೃಶ್ಚಿಕ
  • ಔದ್ಯೋಗಿಕ ವ್ಯವಹಾರದಲ್ಲಿ ನಿರೀಕ್ಷೆಗೆ ತಕ್ಕ ಫಲಗಳು ಪಡೆದುಕೊಳ್ಳಲು ಕಷ್ಟವಾಗಬಹುದು. ನಿಮ್ಮ ಪ್ರತಿಭೆ ಗುರುತಿಸಿಲ್ಲ ಎಂಬ ನಿಮ್ಮ ನೋವು ಇಂದೇ ಕೊನೆಯಾಗಲಿದೆ. ಉಡುಗೊರೆ ಲಭ್ಯವಾಗುವ ಸಾಧ್ಯತೆಯಿದೆ.
  • ಧನು
  • ಎದುರಾಗಿರುವ ಸದ್ಯದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಅದು ನಿಮ್ಮನ್ನು ಸಂತಸಗೊಳಿಸಲಿದೆ. ಏನೇ ಆದರೂ ಅದನ್ನು ಮುಕ್ತವಾಗಿ ಸ್ವೀಕರಿಸುವ ಭಾವನೆ ಇರಲಿ, ನಿಮ್ಮ ಮನೋಭಿಲಾಷೆ ಈಡೇರಲಿದೆ.
  • ಮಕರ
  • ಹಿರಿಯ ಮಗನ ಸಹಾಯದಿಂದ ಗಣ್ಯರ ಪರಿಚಯ ಹಾಗೂ ಸಹಾಯ ದೊರೆತು ನಿಮ್ಮ ಹೊಸ ಯೋಜನೆಗಳಿಗೆ ಅನುಕೂಲವಾಗಲಿದೆ. ನಿಮ್ಮ ಅದೃಷ್ಟವನ್ನು ಇಂದು ಪರೀಕ್ಷಿಸಿಕೊಳ್ಳಬಹುದು. ಆರೋಗ್ಯ ವೃದ್ಧಿಯಾಗಲಿದೆ.
  • ಕುಂಭ
  • ಹೊಸ ಪೀಠೋಪಕರಣಗಳ ಖರೀದಿಗೆ ಇಂದು ಧನವ್ಯಯವಾಗಲಿದೆ. ರಾಜಕೀಯ ವಲಯದ ಕಾರ್ಯಕರ್ತರಿಗೆ ಮುನ್ನಡೆಯುವ ಅವಕಾಶಗಳು ತಪ್ಪುವ ಸಾಧ್ಯತೆ ಇದೆ. ವಾಹನ ಚಾಲನೆಯಲ್ಲಿ ಮುತುವರ್ಜಿ ವಹಿಸಿ.
  • ಮೀನ
  • ಸಂತೋಷ ಕೂಟಗಳಲ್ಲಿ ನಿಮ್ಮ ಗೌರವ ಹೆಚ್ಚಿಸಿಕೊಳ್ಳುವ ಬಗ್ಗೆ ಗಮನವಿರಲಿ. ನಿಮ್ಮ ಆಪ್ತರು ನಿಮ್ಮ ಸಕಾಲಿಕ ನೆರವಿಗಾಗಿ ನಿಮಗೆ ಧನ್ಯವಾದ ಹೇಳಲಿದ್ದಾರೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.