ADVERTISEMENT

ದಿನ ಭವಿಷ್ಯ | ಸೆ.5: ಈ ರಾಶಿಯವರು ಸಾಂಸಾರಿಕ ಗೌಪ್ಯತೆಗಳನ್ನು ಕಾಪಾಡಿಕೊಳ್ಳಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 4 ಸೆಪ್ಟೆಂಬರ್ 2023, 20:02 IST
Last Updated 4 ಸೆಪ್ಟೆಂಬರ್ 2023, 20:02 IST
   
ಮೇಷ
  • ಸಂಸ್ಥೆಯ ಅಭಿವೃದ್ಧಿಗೆ ನೀವು ತೆಗೆದುಕೊಳ್ಳಬೇಕಾಗಿರುವ ನಿರ್ಧಾರಕ್ಕಾಗಿ ಈ ದಿನ ವಿಷಯದ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸುವುದು ಉತ್ತಮ. ಸಾಧು ಸಂತರ ಭೇಟಿಯಿಂದ ಮನಸ್ಸಿಗೆ ಸಮಾಧಾನ ಕಂಡುಕೊಳ್ಳಬಹುದು.
  • ವೃಷಭ
  • ವಸ್ಥಿತವಾಗಿ ದಿನಚರಿ ರೂಪಿಸಿಕೊಂಡರೆ ಈಗಾಗಲೇ ಆರಂಭಿಸಿ ರುವ ಯೋಜನೆ ಪೂರ್ಣಗೊಳ್ಳಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಚರ್ಚೆಗೆ ಆಸ್ಪದ ನೀಡದಿರಿ. ಸೋದರರನ್ನು ಸರಿಹಾದಿಗೆ ತರುವಲ್ಲಿ ಶ್ರಮ ವಹಿಸುವಿರಿ.
  • ಮಿಥುನ
  • ಮಗನ ಸಂಪಾದನೆಯನ್ನು ನೋಡಿ ಹರ್ಷವಾಗುವುದು. ಪ್ರೀತಿ ಪಾತ್ರರಲ್ಲಿನ ಅಭಿಪ್ರಾಯ ವಿನಿಮಯಗಳಿಂದ ಮನಸ್ಸಿಗೆ ಆನಂದ, ನೆಮ್ಮದಿ ಮೂಡುವುದು. ಸಮಸ್ಯೆ ಪರಿಹರಿಸಿಕೊಳ್ಳುವಿರಿ.
  • ಕರ್ಕಾಟಕ
  • ದಾಂಪತ್ಯದಲ್ಲಿ ಹೊಂದಾಣಿಕೆಯ ಮನೋಭಾವದಿಂದ ಸಾಮರಸ್ಯ ವೃದ್ಧಿಯಾಗುವುದು. ಮೂತ್ರಕೋಶಕ್ಕೆ ಸಂಬಂಧಿಸಿದಂತೆ ಅನಾರೋಗ್ಯ ಕಂಡು ಬಂದಲ್ಲಿ ನಿರ್ಲಕ್ಷಿಸುವುದು ಅಥವಾ ಮನೆಮದ್ದು ಮಾಡುವುದು ಸರಿಯಲ್ಲ.‌
  • ಸಿಂಹ
  • ಒಡಹುಟ್ಟಿದವರ ಸಹಾಯ ಸಹಕಾರದಿಂದ ಮಾನಸಿಕ ನೆಮ್ಮದಿ ಮತ್ತು ಸಂಸಾರದಲ್ಲಿ ಸಮತೋಲನ ಹೊಂದುವಿರಿ. ಅಧಿಕಾರಿಗಳ ಮನಸ್ಸಿನ ಪರಿಸ್ಥಿತಿ ಅವಲೋಕಿಸಿಕೊಂಡು ಮುಂದಿನ ಹೆಜ್ಜೆ ಇರಿಸಿ.
  • ಕನ್ಯಾ
  • ಷೇರುಪೇಟೆಯ ವ್ಯವಹಾರಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿ, ಲಾಭಾಂಶ ಕಡಿಮೆ ಇರುವುದು. ಸಾಂಸಾರಿಕವಾದ ಕೆಲ ವಿಷಯಗಳ ಗೌಪ್ಯತೆ ಕಾಪಾಡಿಕೊಂಡು ಹೋಗುವುದು ನಿಮ್ಮ ಕುಟುಂಬಕ್ಕೆ ಒಳ್ಳೆಯದು.
  • ತುಲಾ
  • ಜಾಮೀನು ವಿಷಯಕ್ಕೆ ಸಂಬಂಧಿಸಿದಂತೆ ನೆರೆಯವರಲ್ಲಿ ಮಾತುಕತೆ ನಡೆಯಲಿವೆ, ಉಪಾಯದಿಂದ ಉತ್ತರಿಸಿ. ತಾಂತ್ರಿಕ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವವರಿಗೆ ಕನಸಿನ ಉತ್ತಮ ಅವಕಾಶಗಳು ಅರಸಿ ಬರಲಿವೆ.
  • ವೃಶ್ಚಿಕ
  • ಬೆಳೆದ ವಸ್ತುಗಳ ಮಾರಾಟದಿಂದ ಆರ್ಥಿಕ ಅನುಕೂಲವಾಗಿ ನಿಮ್ಮ ಮೇಲಿದ್ದ ಸಾಲದ ಹೊರೆ ಕಡಿಮೆಯಾಗಲಿದೆ. ರಾಜಕೀಯ ಪಿತೂರಿ ನಡೆಸುತ್ತಿರುವವರು ಯಾರು ಎಂಬುವುದು ತಿಳಿದುಬರಲಿದೆ.
  • ಧನು
  • ಲೋಪ ದೋಷಗಳನ್ನು ತಿದ್ದಿಕೊಳ್ಳುವಂತೆ ಹಿರಿಯರಿಂದ ಸೂಚನೆ, ಅವರ ಅನುಭವದ ಮಾತು ಒದಗಿಬರುವುದು. ಬರಬೇಕಾಗಿದ್ದ ಹಣ ವಸೂಲು ಮಾಡಿಕೊಳ್ಳಲು ನಿಷ್ಠೂರವಾಗಿ ವರ್ತಿಸಬೇಕಾಗುವುದು.
  • ಮಕರ
  • ಬಾಲ್ಯ ಸ್ನೇಹಿತನಿಗಾಗಿ ಮನೆಯಲ್ಲಿ ವಿಶೇಷ ಭೋಜನದ ವ್ಯವಸ್ಥೆ ಸಂತೋಷ ಪೂರ್ವಕವಾಗಿ ನಡೆಯುವುದು. ಬಟ್ಟೆ ವ್ಯಾಪಾರಿಗಳಿಗೆ ಇಂದು ಒಳ್ಳೆಯ ದಿನ. ಸಾಮಾಜಿಕ ಕೆಲಸಗಳಿಗಾಗಿ ನಿಮ್ಮ ಓಡಾಟ ಹೆಚ್ಚುವುದು.
  • ಕುಂಭ
  • ಕೆಲವು ಕೆಲಸಗಳನ್ನು ನಿರ್ವಹಿಸಲು ದೀರ್ಘ ಪ್ರಯಾಣ ಕೈಗೊಳ್ಳಬೇಕಾದ ಅನಿವಾರ್ಯತೆ ಮೂಡಲಿದೆ. ನಾಯಕತ್ವದ ಗುಣ ಸಹೋದ್ಯೋಗಿಗಳಸಹಕಾರದಿಂದ ವೃದ್ಧಿ. ಮಕ್ಕಳಿಂದ ಸಂತೋಷ, ಸೌಖ್ಯವಿರುವುದು.
  • ಮೀನ
  • ಸಾಮಾಜಿಕ ಕಾರ್ಯಗಳಲ್ಲಿ ಚಟುವಟಿಕೆಯಿಂದ ಭಾಗವಹಿಸುವಿರಿ. ವಾಹನ ರಿಪೇರಿಗಾಗಿ ಸಣ್ಣ-ಪುಟ್ಟ ಖರ್ಚು ಸಂಭವಿಸಲಿದೆ. ಸಾಂಸಾರಿಕವಾಗಿ ತಪ್ಪುಗಳು ಪುನರಾವರ್ತನೆಯಾಗದಂತೆ ಎಚ್ಚರವಹಿಸಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.