ADVERTISEMENT

ದಿನ ಭವಿಷ್ಯ: ಈ ರಾಶಿಯವರು ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡುವುದರಿಂದ ಶುಭವಾಗಲಿದೆ

ಶುಕ್ರವಾರ – ಸೆಪ್ಟೆಂಬರ್ 13, 2024

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 12 ಸೆಪ್ಟೆಂಬರ್ 2024, 19:30 IST
Last Updated 12 ಸೆಪ್ಟೆಂಬರ್ 2024, 19:30 IST
   
ಮೇಷ
  • ಮಾನಸಿಕ ಒತ್ತಡವು ಕಡಿಮೆಯಾಗದ ಹೊರತು ಇತರರೊಂದಿಗೆ ವಾಗ್ವಾದಕ್ಕೆ ಇಳಿಯಬೇಡಿ. ವಾಹನಗಳ ಬಿಡಿ ಭಾಗಗಳ ಮಾರಾಟಗಾರರಿಗೆ ಮತ್ತು ರಿಪೇರಿ ಮಾಡುವವರಿಗೆ ಬಿಡುವಿಲ್ಲದ ದಿನವಾಗುವುದು.
  • ವೃಷಭ
  • ಅನಿವಾರ್ಯ ಕಾರಣದಿಂದಾಗಿ ಕುಟುಂಬದವರೊಂದಿಗೆ ಕಳೆಯಬೇಕೆಂದುಕೊಂಡ ಸಮಯವನ್ನು ತಪ್ಪಿಸಿಕೊಳ್ಳುವಿರಿ. ವಾದ-ವಿವಾದಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿ. ಹೆಂಡತಿಯ ಆರೋಗ್ಯದಲ್ಲಿ ಸುಧಾರಣೆ.
  • ಮಿಥುನ
  • ತೆಗೆದುಕೊಂಡ ದಿಟ್ಟ ಹೆಜ್ಜೆಗಳು ನಿಮ್ಮ ಯಶಸ್ಸಿನ ಕಡೆಗೆ ಕರೆದುಕೊಂಡು ಹೋಗುವುದು. ವ್ಯವಹಾರದಲ್ಲಿ ಗೆಳೆಯನ ಮಾತುಗಳನ್ನು ಕೇಳಿದರೆ ಲಾಭವಾಗುವುದು. ಧನಲಾಭವನ್ನು ತರಲಿದೆ.
  • ಕರ್ಕಾಟಕ
  • ರಚನಾತ್ಮಕ ಕಾರ್ಯಕ್ರಮಗಳ ಕುರಿತು ದೂರದರ್ಶನ ಮಾಧ್ಯಮದವರಿಂದ ಮೆಚ್ಚುಗೆಯ ಮಾತು ಕೇಳಲಿದ್ದೀರಿ. ಶಿಕ್ಷಕ ವರ್ಗದವರಿಗೆ ಹೆಚ್ಚಿನ ಜವಾಬ್ದಾರಿಯುತ ಕೆಲಸಗಳು ಬರಲಿವೆ. ಆದಾಯವಿರುವುದು.
  • ಸಿಂಹ
  • ಮನೆಗೆ ಸಂಬಂಧಿಸಿದ ಕೆಲಸಗಳನ್ನು ಮಾಡಿಸುವುದಕ್ಕಾಗಿ ಹಣ ಖರ್ಚು ಮಾಡಬೇಕಾಗಿ ಬರುವುದು. ಕೆಲಸಗಳಿಗೆ ಇಂದು ಪ್ರಭಾವಿ ವ್ಯಕ್ತಿಗಳ ಸಹಾಯವು ದೊರಕುವುದು.
  • ಕನ್ಯಾ
  • ಜೀವನದ ಎಲ್ಲ ರೀತಿಯ ಕ್ಷಣಗಳನ್ನು ಅನುಭವಿಸಿದ ನಿಮಗೆ ಇತರರಿಗೆ ಜೀವನವನ್ನು ಹೇಳಿಕೊಡುವುದು ಕಷ್ಟವಾಗುವುದಿಲ್ಲ. ವ್ಯವಹಾರದಲ್ಲಿ ಮಧ್ಯಮ ಮಟ್ಟದ ಲಾಭ ಹೊಂದುವಿರಿ.
  • ತುಲಾ
  • ಮುಂಜಾಗರೂಕತೆ ಇಲ್ಲದೇ ಮಾಡಿದ ಕೆಲಸಗಳು ಅಪಾಯವನ್ನು ತಂದೊಡ್ಡಬಹುದು. ಸ್ವಂತ ಮನೆಯ ಕನಸು ನನಸು ಮಾಡುವ ದಾರಿ ಕಾಣುವುದು. ಸಂಸಾರದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ.
  • ವೃಶ್ಚಿಕ
  • ಸ್ಥಿರ ಅಥವಾ ಚರ ಆಸ್ತಿಯನ್ನು ಮಾರಲು ಯೋಚನೆ ನಡೆಸಿದ್ದಲ್ಲಿ ಹಿರಿಯರಿಂದ ಸರಿಯಾದ ಮಾರ್ಗದರ್ಶನ ಕೇಳಿ ಪಡೆದುಕೊಳ್ಳಿ. ಎದುರು ನೋಡುತ್ತಿದ್ದ ಜೀವನವನ್ನು ಅನುಭವಿಸುವ ಸಮಯ ಹತ್ತಿರವಿದೆ.
  • ಧನು
  • ದೊರೆತಿರುವ ಖ್ಯಾತಿ ಉಳಿಸಿಕೊಳ್ಳುವತ್ತ ಗಮನ ಹರಿಸುವುದು ಉತ್ತಮ. ಹೊಸ ಕನಸು ಹಾಗೂ ಉತ್ಸಾಹದಿಂದ ಕೆಲಸವನ್ನು ಶುರು ಮಾಡುವಿರಿ. ಮನೆಯ ಹೆಣ್ಣು ಮಗಳಿಗೆ ಮದುವೆಗೆ ಹುಡುಗ ಸಿಗುವ ಸಾಧ್ಯತೆ.
  • ಮಕರ
  • ಎಲ್ಲಾ ಆಲೋಚನೆಗಳಿಗೂ ಸಂಗಾತಿಯ ಸಂಪೂರ್ಣ ಬೆಂಬಲ ಇರುವುದು. ಆಹಾರದಿಂದ ಆರೋಗ್ಯ ಹದಗೆಡಲು ಕಾರಣವಾಗುತ್ತದೆ. ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡುವುದರಿಂದ ಶುಭವಾಗುವುದು.
  • ಕುಂಭ
  • ಅಧಿಕ ಒತ್ತಡದ ಕೆಲಸದ ನಡುವೆಯೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಿರಿ. ಜವಳಿ ವ್ಯಾಪಾರದ ಅಭಿವೃದ್ಧಿಗೆ ಸಹಾಯವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಬಿಳಿ ಬಣ್ಣ ಶುಭವನ್ನು ಉಂಟುಮಾಡಲಿದೆ.
  • ಮೀನ
  • ತಾಯಿಯ ಆರೋಗ್ಯ ಹದಗೆಟ್ಟಿದ್ದಲ್ಲಿ ಹಂತ ಹಂತವಾಗಿ ಚೇತರಿಕೆ ಕಾಣುವುದು. ಪ್ರೀತಿಪಾತ್ರರ ಜೊತೆ ಸಂತಸದ ಸಮಯ ಕಳೆಯುವಿರಿ. ಸಾಲ ಕೊಡುವಂಥ ವ್ಯವಹಾರಗಳು ಬೇಡ. ವಿದ್ಯಾರ್ಥಿಗಳಿಗೆ ಪರಿಶ್ರಮ ಅಗತ್ಯ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.