ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ವಿದ್ಯಾಭ್ಯಾಸ ನಿಶ್ಚಿಂತೆಯಿಂದ ಸಾಗಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 18 ಡಿಸೆಂಬರ್ 2023, 23:30 IST
Last Updated 18 ಡಿಸೆಂಬರ್ 2023, 23:30 IST
   
ಮೇಷ
  • ಇಂದು ನೀವು ಶುಭ ಸಮಾಚಾರಗಳನ್ನು ಕೇಳುವುದಲ್ಲದೆ ಪ್ರಯತ್ನಿಸಿದ ಎಲ್ಲಾ ಕಾರ್ಯಗಳಲ್ಲಿಯೂ ಯಶಸ್ಸು ಪಡೆಯುವಿರಿ. ಗಿಡಗಳ ನರ್ಸರಿ ಮಾಡುವವರಿಗೆ ಕೀಟ ಬಾಧೆ ಬಹಳ ಪ್ರಮಾಣದಲ್ಲಿ ಉಂಟಾಗುವುದು.
  • ವೃಷಭ
  • ದಿನಾಂತ್ಯದಲ್ಲಿ ಆಭರಣ ಅಥವಾ ಕಲಾವಸ್ತುಗಳನ್ನು ಖರೀದಿಸುವ ಮನಸ್ಸು ಬರಲಿದೆ. ನೆಮ್ಮದಿಯ ವಿಷಯವೇನೆಂದರೆ ಧನಾಗಮದಲ್ಲಿ ಚಿಂತೆ ಇರದು. ಸಹೋದ್ಯೋಗಿಗಳಿಂದ ಉತ್ತಮ ಸಹಕಾರ ಸೌಲಭ್ಯವಿರಲಿದೆ.
  • ಮಿಥುನ
  • ಪ್ರಾಮಾಣಿಕವಾಗಿ ಹಾಗೂ ನಿಷ್ಠೆಯಿಂದ ಕೆಲಸದಲ್ಲಿ ತೊಡಗಿಸಿಕೊಂಡಲ್ಲಿ ಯಶಸ್ಸು ಪ್ರಾಪ್ತಿಯಾಗುವುದು. ತೀರ್ಥಯಾತ್ರೆ ಕೈಗೊಳ್ಳುವ ಬಗ್ಗೆ ಮನೆಯವರೊಡನೆ ಸಮಾಲೋಚನೆ ನಡೆಸಿ. ಆತ್ಮೀಯರ ಸಮಾಗಮವಾಗಲಿದೆ.
  • ಕರ್ಕಾಟಕ
  • ನಿರ್ಧಾರ ತೆಗೆದುಕೊಳ್ಳುವ ಸಮಯದಲ್ಲಿ ಸಹವರ್ತಿಗಳ ಅಭಿಪ್ರಾಯ ಪಡೆದುಕೊಳ್ಳಿ. ಎಲ್ಲ ಕಷ್ಟಗಳೂ ನಿವಾರಣೆಯಾಗಲಿವೆ. ಮನರಂಜನೆಗಾಗಿ ಕೆಲ ಸಮಯವನ್ನು ಕಳೆಯುವಂತಾಗಲಿದೆ.
  • ಸಿಂಹ
  • ಜೀವನದಲ್ಲಿ ಬೇರೆಯವರ ಹಿಡಿತದಿಂದ ಬಳಲಿರುವ ನಿಮಗೆ ಆ ಸಮಸ್ಯೆಯಿಂದ ಹೊರಬರುವ ಅವಕಾಶಗಳು ಎದುರಾಗುವುದು. ವ್ಯವಹಾರ ರಂಗದಲ್ಲಿ ಆತ್ಮೀಯರ ಸಲಹೆ ಸ್ವೀಕರಿಸಿ ನಷ್ಟವು ತೋರಿ ಬರುವುದು.
  • ಕನ್ಯಾ
  • ದೇವರ ಕೃಪೆ ಹಾಗೂ ಹಿರಿಯರ ಆಶೀರ್ವಾದದಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೂ ಸುಲಭವಾಗಿ ಪರಿಹಾರ ಸಿಗಲಿದೆ. ಮಾನಸಿಕ ಸ್ಥಿತಿ ಏರುಪೇರಾದ ಸಮಯದಲ್ಲಿ ಹಿರಿಯರ ಸಲಹೆ ಸಮಾಧಾನ ತರಲಿದೆ.
  • ತುಲಾ
  • ಮಕ್ಕಳ ಹೆಸರಿನಲ್ಲಿ ನಿವೇಶನ ಖರೀದಿಸುವ ಯೋಜನೆಯನ್ನು ಈ ದಿನ ಕಾರ್ಯರೂಪಕ್ಕೆ ತರಬಹುದು. ಹಣಕಾಸಿನ ವ್ಯವಹಾರ ನಡೆಸುವವರು ನೂತನ ಯೋಜನೆಗಳನ್ನು ವಿಸ್ತರಿಸಬಹುದು. ವಿದ್ಯಾಭ್ಯಾಸ ನಿಶ್ಚಿಂತೆಯಿಂದ ಸಾಗಲಿದೆ.
  • ವೃಶ್ಚಿಕ
  • ಸಹೋದ್ಯೋಗಿಗಳಲ್ಲಿ ಪ್ರೀತಿಯಿಂದ ವರ್ತಿಸುವುದರಿಂದ ನಿಮ್ಮ ಕೆಲಸ ಸರಾಗವಾಗಿ ಸಾಗಲಿದೆ. ದೇಹಾರೋಗ್ಯದ ಸಲುವಾಗಿ ಎಲ್ಲ ಕೆಲಸ ಬಿಟ್ಟು ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಬೇಕೆಂದು ನಿಮಗೆ ಅನಿಸಲಿದೆ.
  • ಧನು
  • ನಿಮ್ಮ ಮೇಲುಸ್ತುವಾರಿಯಲ್ಲಿ ಕೆಲಸ ಕಾರ್ಯಗಳು ಸುಗಮವಾಗಿ ಸಾಗುವುದು. ಸಹವರ್ತಿಗಳೊಡನೆ ಸಂಯಮದಿಂದ ವರ್ತಿಸಿ. ಬಂದ ಸಮಸ್ಯೆಗಳು ಆಂಜನೇಯನ ಅನುಗ್ರಹದಿಂದ ಸರಾಗವಾಗಿ ದೂರಾಗಲಿವೆ.
  • ಮಕರ
  • ಏರುಪೇರಾಗಿದ್ದ ನಿಮ್ಮ ವ್ಯಾಪಾರ ವ್ಯವಹಾರಗಳನ್ನು ಉತ್ತಮ ರೀತಿಯಲ್ಲಿ ಸರಿಪಡಿಸಿಕೊಳ್ಳಲು ಅವಕಾಶ ಸಿಗಲಿದೆ. ಹಣಕಾಸು ಸಂಸ್ಥೆಗಳ ನೆರವಿನಿಂದ ಸ್ವಂತ ಉದ್ದಿಮೆ ಪ್ರಾರಂಭಿಸುವ ಯೋಜನೆ ಕೈಗೂಡುವುದು.
  • ಕುಂಭ
  • ಆರ್ಥಿಕವಾಗಿ ಲಾಭ ಪಡೆಯುವುದಕ್ಕೆ ಹೋರಾಟ ನೆಡೆಸಬೇಕಾಗುವ ಪರಿಸ್ಥಿತಿ ಎದುರಾಗಬಹುದು. ಈ ದಿನ ಯಾರಲ್ಲಿಯೂ ಯಾವ ವಿಚಾರವನ್ನೂ ಮುಚ್ಚಿಡಬೇಡಿ. ಕುಟುಂಬದವರ ಹೆಚ್ಚಿನ ಜವಾಬ್ದಾರಿ ನಿಮ್ಮ ಮೇಲಿರುತ್ತದೆ.
  • ಮೀನ
  • ನೀವಿಂದು ಇನ್ನೊಬ್ಬರ ಅಧೀನದಿಂದ ಹೊರಬಂದು ಸ್ವತಂತ್ರ ಮನೋಭಾವದಿಂದ ಜೀವನವನ್ನು ನೆಡೆಸುವಂತಾಗಲಿದೆ. ನಿಮಗೆ ಒದಗಿಬರಲಿರುವ ಅವಕಾಶಗಳನ್ನು ಕೈತಪ್ಪಿ ಹೋಗದಂತೆ ನೋಡಿಕೊಳ್ಳಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.