ದಿನ ಭವಿಷ್ಯ: ಈ ರಾಶಿಯವರಿಗೆ ಧಾರ್ಮಿಕ ಆಚರಣೆಯ ಬಗ್ಗೆ ಒಲವು ಮೂಡಲಿದೆ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 19 ಡಿಸೆಂಬರ್ 2023, 23:30 IST
Last Updated 19 ಡಿಸೆಂಬರ್ 2023, 23:30 IST
ಮೇಷ
ವ್ಯವಹಾರದಲ್ಲಿ ಪಾಲುದಾರರನ್ನಾಗಿ ಸೇರಿಸಿಕೊಳ್ಳಲು ಸೂಕ್ತ ವ್ಯಕ್ತಿಯ ಹುಡುಕಾಟ ನಡೆಸುವಿರಿ. ಯಾವುದೇ ಜವಾಬ್ದಾರಿಯಿಂದ ವಿಮುಖರಾಗಬೇಡಿ. ಮೇಲಧಿಕಾರಿಗಳ ವಿಶ್ವಾಸವನ್ನು ಗಳಿಸುವಲ್ಲಿ ಯಶಸ್ವಿಯಾಗುವಿರಿ.
ವೃಷಭ
ನಿರ್ಮಾಣ ಕೆಲಸಗಳ ಗುತ್ತಿಗೆಯನ್ನು ಹಿಡಿಯುವವರು ವಸ್ತುಗಳ ಬೆಲೆ ಏರಿಕೆಯನ್ನು ನೋಡಿಕೊಂಡು ವ್ಯವಹಾರ ಮುಂದುವರೆಸುವುದು ಉತ್ತಮ. ಕೆಲಸಗಳಲ್ಲಿ ನಿಯಮ ಉಲ್ಲಂಘಿಸುವಂತೆ ಅನ್ಯರಿಂದ ಒತ್ತಡ ಹೆಚ್ಚಲಿದೆ.
ಮಿಥುನ
ಪ್ರತಿಯೊಂದರಲ್ಲೂ ಯಶಸ್ಸು ಕಾಣಬಯಸುವ ನೀವು ಅದಕ್ಕಾಗಿ ಶ್ರಮಪಡಬೇಕಾದ ಅಗತ್ಯವಿದೆ. ಶುಭ ಕಾರ್ಯ ನಡೆಸಿಕೊಡುವಲ್ಲಿ ಪ್ರಮುಖ ಪಾತ್ರ ನಿಮ್ಮದಾಗಲಿದೆ. ಬರಹಗಾರರಿಗೆ ವಿಶೇಷ ವಿಷಯ ಸಂಗ್ರಹವಾಗುವುದು.
ಕರ್ಕಾಟಕ
ಸಮಸ್ಯೆ ಹೆಚ್ಚಳಕ್ಕೆ ಮುಂಚೆಯೇ ಜಾಣ್ಮೆಯಿಂದ ಪರಿಹಾರದ ಮಾರ್ಗವನ್ನು ಕಂಡುಕೊಳ್ಳಿರಿ. ಕೆಲಸ ಕಾರ್ಯಗಳನ್ನು ಮುಗಿಸಿಕೊಳ್ಳಲು ಮನೆಯವರಿಗೆಲ್ಲ ಆತುರ ತೋರುವಿರಿ. ಆರ್ಥಿಕ ಪರಿಸ್ಥಿತಿ ಸ್ವಲ್ಪ ವ್ಯತ್ಯಾಸವಾಗಲಿದೆ.
ಸಿಂಹ
ಇನ್ನೊಬ್ಬರನ್ನು ನಿಮಗೆ ಹೋಲಿಸಿಕೊಳ್ಳದೇ, ಯಾವುದೇ ಅತಿಯಾಸೆ ಇಲ್ಲದೆ, ನಿಶ್ಚಿಂತೆಯಿಂದ ದುಡಿದಲ್ಲಿ ಹೆಚ್ಚಿನ ಆದಾಯವನ್ನು ಹೊಂದುವಿರಿ. ಕೆಲವು ಅಸಾಮಾನ್ಯ ವ್ಯಕ್ತಿಗಳನ್ನು ವ್ಯಾಪಾರ ನಿಮಿತ್ತ ಭೇಟಿ ಮಾಡುವಿರಿ.
ಕನ್ಯಾ
ರಾಸಾಯನಿಕ ವಸ್ತುಗಳ ಬಳಕೆಯಲ್ಲಿ ಅಥವಾ ರಾಸಾಯನಿಕ ಶಾಸ್ತ್ರದ ಅಧ್ಯಯನದಲ್ಲಿ ಜಾಗ್ರತರಾಗಿರಿ. ವೈಯಕ್ತಿಕ ಕೆಲಸಗಳಿಗೆ ಯಾವುದೇ ಅಡಚಣೆ ಇರುವುದಿಲ್ಲ. ಸುಬ್ರಹ್ಮಣ್ಯನ ಸೇವೆ ಮಾಡುವುದರಿಂದ ಶುಭವಿರುವುದು.
ತುಲಾ
ಗಣ್ಯ ವ್ಯಕ್ತಿಗಳಿಗೆ ಸಮಾಜದಲ್ಲಿ ಅಥವಾ ರಾಜಕೀಯ ಕ್ಷೇತ್ರದಲ್ಲಿ ಸ್ಥಾನ-ಮಾನ, ಗೌರವ, ಪುರಸ್ಕಾರ ಲಭಿಸಲಿದೆ. ವಕೀಲಿ ವೃತ್ತಿಯವರಿಗೆ ಅಧ್ಯಯನದ ಕೊರತೆ ಕಾಣಲಿದೆ. ಈ ದಿನ ನಿಮ್ಮ ಆರೋಗ್ಯ ಸುಧಾರಿಸುವುದು.
ವೃಶ್ಚಿಕ
ನಿಮ್ಮನ್ನು ಕಂಡು ಅಸೂಯೆ ಪಡುವ ಸಹೋದ್ಯೋಗಿಗಳು ಹಾಗೂ ಮೇಲಧಿಕಾರಿಗಳೊಂದಿಗೆ ಜಾಣ್ಮೆಯಿಂದ ವ್ಯವಹರಿಸಿ. ವ್ಯವಹಾರದಲ್ಲಿನ ಲಾಭ ನಿಮ್ಮ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಹಳೇ ಬಾಕಿ ಸಂದಾಯವಾಗುವುದು.
ಧನು
ನಿಮ್ಮ ಆತ್ಮ ವಿಶ್ವಾಸವನ್ನು ರೂಢಿಸಿಕೊಂಡು ಪರಿಶ್ರಮದಿಂದ ಪ್ರಗತಿಯ ಹಾದಿಗೆ ಹೋಗಬೇಕು. ಮಾನಸಿಕ ಪೀಡೆಗಳಿಗೆ ಒಳಗಾಗದಂತೆ ಕಾಳಜಿವಹಿಸಿ. ಮನೆಯಲ್ಲಿ ಸಮಾರಂಭ ನಡೆಸಲು ತಯಾರಿ ನಡೆಸಬಹುದು.
ಮಕರ
ಸಿವಿಲ್ ಎಂಜಿನಿಯರ್‌ಗಳಿಗೆ ಕೀರ್ತಿ ಸಂಪಾದನೆ ಜೊತೆ ಆರ್ಥಿಕತೆಗೆ ಸಹಾಯವಾಗುವ ಉತ್ತಮ ಅವಕಾಶಗಳು ಸಿಗುವುದು. ಕಾರ್ಯವನ್ನು ಜಯಿಸುವ ಹಂಬಲದಲ್ಲಿ ಆರೋಗ್ಯವನ್ನು ಕಳೆದುಕೊಳ್ಳಬೇಡಿ.
ಕುಂಭ
ವೈದ್ಯಕೀಯ ವಿದ್ಯಾರ್ಥಿಗಳಿಗೆ ಓದಿನಲ್ಲಿ ಪರಿಶ್ರಮ ಅಗತ್ಯವಾಗುವುದು. ಗುರಿ ತಲುಪಲು ತಾಳ್ಮೆ ಮತ್ತು ವಿಶ್ವಾಸ ಅತಿ ಅಗತ್ಯ ಎಂದು ತಿಳಿಯುವಿರಿ. ಅನುಭವದಿಂದ ಧಾರ್ಮಿಕ ಆಚರಣೆಯ ಬಗ್ಗೆ ಒಲವು ಮೂಡುವುದು.
ಮೀನ
ಈ ದಿನದಂದು ಷರತ್ತುಗಳುಳ್ಳ ಯಾವುದೇ ವ್ಯವಹಾರಗಳಿಗೂ ಕೈ ಹಾಕಬೇಡಿ. ತಂದೆ ತಾಯಿಯ ಆಶೀರ್ವಾದದೊಂದಿಗೆ ಹೊಸ ವ್ಯವಹಾರ ಪ್ರಾರಂಭಿಸಿ. ನೂತನ ಉದ್ಯೋಗ ದೊರೆತು ಸಮಾಧಾನವಾಗುವುದು.