ADVERTISEMENT

ದಿನ ಭವಿಷ್ಯ: ಈ ರಾಶಿಯವರು ಪ್ರೀತಿಯಿಂದ ಕುಟುಂಬದವರ ಮನಸ್ಸನ್ನು ಗೆಲ್ಲುವಿರಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 22 ಜೂನ್ 2024, 23:30 IST
Last Updated 22 ಜೂನ್ 2024, 23:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಪ್ರಾಮಾಣಿಕವಾಗಿ ಹಾಗೂ ನಿಷ್ಠೆಯಿಂದ ಕೆಲಸದಲ್ಲಿ ತೊಡಗಿಸಿಕೊಂಡಲ್ಲಿ ನಿಧಾನವಾಗಿ ಯಶಸ್ಸು ಪ್ರಾಪ್ತಿ. ಊರಿನಲ್ಲಿ ನಡೆಯುವ ಸುಗಮ ಸಂಗೀತದಲ್ಲಿ ಭಾಗವಹಿಸುವಿರಿ.
  • ವೃಷಭ
  • ಬಹುಜನರ ಅಭಿಪ್ರಾಯವನ್ನು ಕೇಳಿ ಆರಂಭಿಸಲು ಹೊರಟ ಕೆಲಸದಲ್ಲಿ ವಿಭಿನ್ನ ಅಭಿಪ್ರಾಯದಿಂದಾಗಿ ಗೊಂದಲಕ್ಕೆ ಒಳಗಾಗುವಿರಿ. ಮತ್ತೊಬ್ಬರನ್ನು ಗೌರವಿಸುವುದರಿಂದ ನಿಮ್ಮ ಗೌರವವೂ ಹೆಚ್ಚುವುದು.
  • ಮಿಥುನ
  • ಜೀವನದ ಹಳೆಯ ನೆನಪುಗಳನ್ನು ಮರೆತು ಭವಿಷ್ಯದತ್ತ ಗಮನಹರಿಸಿ. ಕಾರ್ಮಿಕರ ಅಸಹಕಾರದಿಂದ ಗೃಹ ನಿರ್ಮಾಣ ಕಾರ್ಯ ವಿಳಂಬವಾಗುತ್ತದೆ. ಉತ್ತಮ ಆಹಾರವನ್ನು ಸವಿಯುವಿರಿ.
  • ಕರ್ಕಾಟಕ
  • ಮುಖ್ಯವಿಷಯವನ್ನು ಮಾತನಾಡಲು ಮರೆತುದರಿಂದ ದಿನಚರಿಯಲ್ಲಿ ವಿಳಂಬ ಅನುಭವಿಸುವಂತೆ ಆಗುವುದು. ದೂಳಿನಿಂದಾಗಿ ಕಣ್ಣಿನ ಸಮಸ್ಯೆ ಉಂಟಾಗಬಹುದು.
  • ಸಿಂಹ
  • ಗುರುವಿನ ಸಾನ್ನಿಧ್ಯ ಹಾಗೂ ನಿಶ್ಚಲವಾದ ಭಕ್ತಿಯು ಮನಶ್ಶಾಂತಿ ತಂದುಕೊಡುವುದು. ವಾತ್ಸಲ್ಯ ಹಾಗೂ ಪ್ರೀತಿಯಿಂದ ಕುಟುಂಬದವರ ಮನಸ್ಸನ್ನು ಗೆಲ್ಲುವಿರಿ. ನಟನಾ ವೃತ್ತಿಯವರಿಗೆ ಸಂಪತ್ತು ಹರಿದು ಬರಲಿದೆ.
  • ಕನ್ಯಾ
  • ಕೈಯಲ್ಲಿರುವ ಹಣವನ್ನು ಪೂರ್ಣ ಪ್ರಮಾಣದಲ್ಲಿ ಖಾಲಿ ಮಾಡಿ ಕೊಳ್ಳುವುದು ಸರಿಯಲ್ಲ. ಮಾತು ಅತಿರೇಕ ತಲುಪದಂತೆ ಎಚ್ಚರ ವಹಿಸುವಿರಿ. ಸದ್ಗುರು ದತ್ತಾತ್ರೇಯರ ಆರಾಧನೆಯಿಂದ ಜ್ಞಾನ ಸಂಪಾದಿಸಿಕೊಳ್ಳಿರಿ.
  • ತುಲಾ
  • ಮನೆಯ ಹತ್ತಿರದಲ್ಲಿ ಅತಿ ಜನಸಂಖ್ಯೆ ಸೇರುವ ಕಾರ್ಯಕ್ರಮವು ಶಾಂತ ಚಿತ್ತಕ್ಕೆ ಭಂಗ ತರುವುದು. ಉದ್ಯಮಿಗಳಿಗೆ ಕಾರ್ಮಿಕರ ಕೊರತೆ ಕಾಣಲಿದೆ. ಕಂಕಣ ಭಾಗ್ಯ ಕೂಡಿಬಂದಾಗ ವಿನಾಕಾರಣ ತಳ್ಳಿಹಾಕುವುದು ತರವಲ್ಲ.
  • ವೃಶ್ಚಿಕ
  • ತಾಂತ್ರಿಕ ವಿದ್ಯಾರ್ಥಿಗಳಿಗೆ ಉದ್ಯೋಗಕ್ಕಾಗಿ ಹೆಚ್ಚಿನ ಪರಿಶ್ರಮ ಮತ್ತು ದೇವರ ಕೃಪೆ ಬೇಕಾಗುವುದು. ದೈನಂದಿನ ಆಗುಹೋಗಿನ ಬಗ್ಗೆ ಹೆಚ್ಚಿನ ಗಮನಹರಿಸಿ. ಪ್ರಾಪಂಚಿಕ ಬದುಕಿನ ಬಗ್ಗೆ ತಿಳಿದುಕೊಳ್ಳಿ.
  • ಧನು
  • ಜಮೀನು ಖರೀದಿ ಅಥವಾ ನಿವೇಶನಗಳ ಖರೀದಿಯ ವ್ಯವಹಾರಗಳಿಂದ ಹೆಚ್ಚಿನ ಲಾಭ ಪಡೆದುಕೊಳ್ಳುವಿರಿ. ಕಂಪನಿಯ ಕೆಲಸಕ್ಕಾಗಿ ತುರ್ತು ಪ್ರಯಾಣ ಮಾಡಬೇಕಾದ ಸಂದರ್ಭ ಬರುವುದು.
  • ಮಕರ
  • ಯಾವ ವಿಷಯದ ಬಗ್ಗೆಯೇ ಆದರೂ ಆಳವಾದ ಯೋಚನೆ ಬೇಡ. ಉದ್ಯಮದ ವಿಚಾರದಲ್ಲಿ ಹಿತಶತ್ರುಗಳ ಭಯ ಕಾಡುತ್ತದೆ. ಐಷಾರಾಮಿ ಜೀವನದ ಬಗ್ಗೆ ಹೇವರಿಕೆ ಹುಟ್ಟುವುದು.
  • ಕುಂಭ
  • ಬಹುವಾಗಿ ಬೇಕಾದ ವ್ಯಕ್ತಿಗಳ ಅನುಪಸ್ಥಿತಿಯಿಂದಾಗಿ ಮಾಡುವ ಎಲ್ಲಾ ಕೆಲಸಗಳಲ್ಲೂ ಸಣ್ಣಪುಟ್ಟ ಗಡಿಬಿಡಿಗಳುಂಟಾಗುವುದು. ಸ್ಥಿರವಾಗಿ ನಡೆಯುತ್ತಿದ್ದ ಉದ್ಯೋಗದಲ್ಲಿ ಅಭದ್ರತೆ ಕಾಡಬಹುದು.
  • ಮೀನ
  • ಗಣಪತಿಗೆ ಸಂಬಂಧಿಸಿದಂತೆ ಹರಕೆಯ ರೂಪದಲ್ಲಿರುವ ಅಥವಾ ಬಹಳ ದಿನಗಳಿಂದ ಅಂದುಕೊಂಡಿದ್ದ ದೇವರ ಕೆಲಸಗಳನ್ನು ಮುಗಿಸುವ ಪ್ರಯತ್ನಮಾಡಿ. ಅಧಿಕಾರದ ಜಂಜಾಟದಿಂದ ಪಾರಾಗುವ ಸಾಧ್ಯತೆ ಇದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.