ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ವೃತ್ತಿ ಬದುಕಿನಲ್ಲಿ ಉನ್ನತ ಸ್ಥಾನಕ್ಕೇರಲು ಇದು ಸಕಾಲ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 9 ಅಕ್ಟೋಬರ್ 2024, 23:30 IST
Last Updated 9 ಅಕ್ಟೋಬರ್ 2024, 23:30 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ಹುಟ್ಟೂರಿನಲ್ಲಿ ಕೃಷಿ ಮಾಡುವ ಅಥವಾ ಕೃಷಿ ಭೂಮಿ ಖರೀದಿಸುವ ಆಲೋಚನೆ ನೆರವೇರುವುದು. ವ್ಯಾಪಾರ ವಿಸ್ತರಿಸಲು ಬೇಕಾದ ತಯಾರಿಯನ್ನು ಮಾಡಿಕೊಳ್ಳಿ. ವೃತ್ತಿ ಬದುಕಿನಲ್ಲಿ ಉನ್ನತ ಸ್ಥಾನರಕ್ಕೇರಲು ಇದು ಸಕಾಲವಾಗಿದೆ.
  • ವೃಷಭ
  • ನಿಮ್ಮ ಪ್ರಗತಿಯನ್ನು ಎಲ್ಲೆಡೆಯೂ ಪ್ರಶಂಸಿಸುತ್ತಿರುವುದರಿಂದ ಕಾರ್ಯ ಕ್ಷೇತ್ರದಲ್ಲಿ ಹೊಸದೊಂದು ಹುಮ್ಮಸ್ಸು ಬರುವುದರ ಜೊತೆಗೆ ವೃತ್ತಿಪರ ಶತ್ರುಗಳ ಸಂಖ್ಯೆಯು ಗಗನ ಮುಟ್ಟಲಿದೆ. ವಾಹನ ರಿಪೇರಿಗಾಗಿ ಖರ್ಚು ಸಂಭವಿಸಲಿದೆ.
  • ಮಿಥುನ
  • ನೀವು ನಂಬಿರುವ ವ್ಯಕ್ತಿಗಳ ಬಗ್ಗೆ ನಿಮ್ಮ ನಿಲುವುಗಳನ್ನು ಬದಲಾಯಿಸಿ ಕೊಳ್ಳಬೇಕೆನಿಸಿದ್ದರೂ ಹಾಗೆ ಮಾಡದಿರಿ, ಅದು ಈ ದಿನಕ್ಕೆ ಫಲ ಪ್ರದವಲ್ಲ. ಆರಕ್ಷಕ ಸಿಬ್ಬಂದಿಗೆ ಕೆಲಸದ ಒತ್ತಡ ಅಥವಾ ಕೆಲಸದ ಸಮಯ ಹೆಚ್ಚಲಿದೆ.
  • ಕರ್ಕಾಟಕ
  • ಸಂಘ ಸಂಸ್ಥೆಗಳ ಸಭೆಗಳಲ್ಲಿ ನಿಮ್ಮ ಮಾತಿಗೆ ಬೆಲೆ ಇಲ್ಲದಂತೆ ಅಥವಾ ನಿಮ್ಮ ಮಾತನ್ನು ಅಪಾರ್ಥವಾಗಿ ಕಲ್ಪಿಸಿಕೊಂಡು ನಿಮ್ಮನ್ನು ದೂಷಿಸುವಂತಹ ಘಟನೆಗಳು ಸಂಭವಿಸಬಹುದು. ಆರೊಗ್ಯದ ಬಗ್ಗೆ ಗಮನ ನೀಡಬೇಕಾಗುತ್ತದೆ.
  • ಸಿಂಹ
  • ನಿಮ್ಮೆದುರಿಗಿರುವ ಸವಾಲನ್ನು ಎದುರಿಸುವ ಶಕ್ತಿ ಹಾಗೂ ಪರಿಸ್ಥಿತಿಗೆ ಹೊಂದಿಕೊಳ್ಳುವ ಸ್ವಭಾವವು ನಿಮ್ಮಲ್ಲಿದೆ. ಎಲ್ಲಾ ವಿಷಯಗಳಲ್ಲಿಯೂ ಸಮಾಧಾನದಿಂದಿರುವುದು ಉತ್ತಮ.
  • ಕನ್ಯಾ
  • ಉತ್ತಮ ಭವಿಷ್ಯಕ್ಕಾಗಿ ಯೋಜನೆಗಳನ್ನು ರೂಪಿಸುವಲ್ಲಿ ಪತ್ನಿಯ ಸಹಾಯವನ್ನು, ಸಲಹೆಯನ್ನು ಸ್ವೀಕರಿಸಿ. ದಾಂಪತ್ಯದಲ್ಲಿ ಹೊಂದಾಣಿಕೆಯ ಮನೋಭಾವದಿಂದ ಸಾಮರಸ್ಯ ವೃದ್ಧಿಯಾಗುವುದು.
  • ತುಲಾ
  • ಬೇಜವಾಬ್ದಾರಿತನದಿಂದ ಮಾಡಿದ ತಪ್ಪುಗಳಿಗೆ ಶಿಕ್ಷೆ ಅನುಭವಿಸಬೇಕಾಗುತ್ತದೆ. ಸಂಶೋಧನಾ ಕಾರ್ಯಗಳಲ್ಲಿ ಆಸಕ್ತಿ ವೃದ್ಧಿಯಾಗುವುದು. ಸಾಧು ಸಂತರ ಭೇಟಿಯಿಂದ ಮನಸ್ಸಿಗೆ ಸಮಾಧಾನ ಕಂಡುಕೊಳ್ಳಬಹುದು.
  • ವೃಶ್ಚಿಕ
  • ಮನೆಯವರ ಸಹಾಯದಿಂದ ನಿಮ್ಮ ಹಣಕಾಸಿನ ತೊಂದರೆಗಳು ದೂರಾಗಿ ಈ ದಿನ ಹೊಸ ಯೋಜನೆಗೆ ಚಾಲನೆಯು ದೊರೆಯಲಿದೆ. ನಿಮ್ಮನ್ನು ಅವಲಂಬಿಸಿರುವರನ್ನು ನೋಡಿಕೊಳ್ಳುವ ಜವಾಬ್ದಾರಿ ಹೆಚ್ಚಲಿದೆ.
  • ಧನು
  • ಬರುವ ಅವಕಾಶಗಳನ್ನು ನಿಮ್ಮತ್ತ ತಿರುಗಿಸಿಕೊಂಡು ಸದುಪಯೋಗ ಪಡೆದುಕೊಳ್ಳುವುದು ನಿಮಗೆ ಬಿಟ್ಟ ವಿಷಯಗಳಗಿರುತ್ತದೆ. ಷೇರುಪೇಟೆಯ ವ್ಯವಹಾರಗಳಲ್ಲಿ ಲಾಭಾಂಶ ಕಡಿಮೆ ಇರುವುದು.
  • ಮಕರ
  • ನಿಮ್ಮ ಶತ್ರುಗಳಿಗೂ ಶುಭವನ್ನು ಹಾರೈಸುವ ರೀತಿಯಲ್ಲಿ ನಿಮ್ಮ ವ್ಯಕ್ತಿತ್ವ ರೂಪಿಸಿಕೊಂಡಲ್ಲಿ ನಿಮಗೆ ಶ್ರೇಯಸ್ಸು ಉಂಟಾಗುವುದು. ಬರಬೇಕಾಗಿದ್ದ ಹಣ ವಸೂಲು ಮಾಡಿಕೊಳ್ಳಲು ನಿಷ್ಠುರವಾಗಿ ವರ್ತಿಸಬೇಕಾಗುವುದು.
  • ಕುಂಭ
  • ಆಲೋಚಿಸಿದಂತೆ ಕೆಲಸಗಳು ನಡೆಯದೇ ಹಿನ್ನಡೆ ಎಂಬಂತೆ ನಿಮ್ಮ ಮನಸ್ಸಿಗೆ ಕಾಣಬಹುದು, ಆದರೆ ದೇವರ ಆಶೀರ್ವಾದ ನಿಮ್ಮ ಮೇಲಿರುವ ಕಾರಣ ನಿಮ್ಮ ಕೆಲಸಗಳು ಪೂರ್ಣಗೊಳ್ಳುತ್ತವೆ.
  • ಮೀನ
  • ಮಳೆಯಲ್ಲಿ ನೆನೆಯುವುದು ಅಥವಾ ನಿಮ್ಮ ದೇಹಕ್ಕೆ ಅಹಿತಕರವಾದ ಕೆಲಸದ ಕಾರಣದಿಂದ ಜ್ವರಾದಿ ಬಾಧೆಗಳು ಕಾಣಿಸಿಕೊಳ್ಳಬಹುದು. ಇಂದು ನಿಮ್ಮ ಗ್ರಹಗತಿಗಳು ಉತ್ತಮವಾಗಿದ್ದು ಅದೃಷ್ಟ ಹುಡುಕಿಕೊಂಡು ಬರಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.