ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ಉದ್ಯೋಗದಲ್ಲಿ ಬದಲಾವಣೆಯ ಸಂಭವವಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 8 ಏಪ್ರಿಲ್ 2024, 23:30 IST
Last Updated 8 ಏಪ್ರಿಲ್ 2024, 23:30 IST
   
ಮೇಷ
  • ಸಲಹೆ ಸೂಚನೆಗಳನ್ನು ಹೆಚ್ಚು ಚರ್ಚಿಸದೆ ಮೇಲಧಿಕಾರಿಗಳು ಒಪ್ಪಿಕೊಳ್ಳುವರು. ಗದ್ದೆ ಅಥವಾ ತೋಟದ ಕೆಲಸಗಳಿಗೆ ಮಗನಿಂದ ದೈಹಿಕ ಮತ್ತು ಆರ್ಥಿಕ ಸಹಾಯ ಸಿಗುವುದು. ರುಚಿಯಾದ ಭರ್ಜರಿ ಊಟ ಸವಿಯುವಿರಿ.
  • ವೃಷಭ
  • ಹಿರಿಯರ ಆಶೀರ್ವಾದದೊಂದಿಗೆ ಕಾರ್ಯವನ್ನು ಆರಂಭಿಸಿ. ಒಳ್ಳೆಯದಾಗುತ್ತದೆ. ಸಮಸ್ಯೆಗಳನ್ನು ಶೀಘ್ರವಾಗಿ ಬಗೆ ಹರಿಸಿಕೊಳ್ಳಲು ಪ್ರಯತ್ನಿಸುವಿರಿ. ಸ್ವ ಉದ್ಯೋಗಿಗಳಿಗೆ ಪರಿಶ್ರಮದಿಂದ ಅಧಿಕ ಸಂಪಾದನೆ ಇರುವುದು.
  • ಮಿಥುನ
  • ಪೂರ್ವ ಆಲೋಚನೆಯ ಕೌಟುಂಬಿಕ ಅಭಿವೃದ್ಧಿಯ ಕೆಲಸಗಳು ಮಂದಗತಿಯಲ್ಲಿ ಸಾಗಲಿದೆ. ಮಂಗಳ ಕಾರ್ಯಗಳು ಸುಗಮವಾಗಿ ನಡೆಯಲೆಂದು ಮನೆ ದೇವರಿಗೆ ಪೂಜೆ ಸಲ್ಲಿಸುವ ಬಗ್ಗೆ ವಿಚಾರ ಮಾಡಿ.
  • ಕರ್ಕಾಟಕ
  • ಉದ್ಯೋಗದಲ್ಲಿ ಬದಲಾವಣೆಯ ಸಂಭವವಿದೆ. ಆರ್ಥಿಕ ಪ್ರಭಾವದಿಂದ ವಿನೂತನ ಅವಕಾಶಗಳು ದೊರೆಯುವುದು. ದುರ್ಗಾದೇವಿ ಯಲ್ಲಿ ಶರಣಾಗುವುದರಿಂದ ಸಂತೋಷ ಪ್ರಾಪ್ತಿ.
  • ಸಿಂಹ
  • ಮಗನಿಗೆ ಸಂಸ್ಥೆಯಿಂದ ವಿದೇಶದಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ನೆರವು ಸಿಗುವುದು. ಖಾಸಗಿ ಗುಮಾಸ್ತ ಕೆಲಸದಲ್ಲಿದ್ದವರಿಗೆ ಬೇಜವಾಬ್ದಾರಿತನ ತೋರಿದಲ್ಲಿ ಪೂರ್ಣ ವಿರಾಮ ಸಿಗುವಂತಾಗಲಿದೆ.
  • ಕನ್ಯಾ
  • ಬಾಕಿ ಇರುವ ಕೆಲಸಗಳನ್ನು ಆದಷ್ಟು ಬೇಗ ಪೂರ್ತಿಗೊಳಿಸುವುದಕ್ಕೆ ಸಹೋದ್ಯೋಗಿ ನೆರವಾಗುವರು. ಕಾರ್ಯಗಳಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ. ಗುಪ್ತಚರ ದಳ ಮಂದಿಗೆ ಕಾರ್ಯಭಾರಗಳು ಹೆಚ್ಚಲಿವೆ.
  • ತುಲಾ
  • ಪೊಲೀಸ್‌ ವೃತ್ತಿಯಲ್ಲಿರುವವರಿಗೆ ಮಹತ್ವದ ಕಾರ್ಯಾಚರಣೆಗಾಗಿ ದೂರ ಸಂಚಾರ ಕಂಡುಬರಲಿದೆ. ಧೈರ್ಯದಿಂದ ಮತ್ತು ಅಧಿಕ ಪ್ರಯತ್ನ ಬಲದಿಂದ ಕಾರ್ಯದಲ್ಲಿ ಮುನ್ನುಗ್ಗಿ. ಮಕ್ಕಳ ವಿದ್ಯಾಭ್ಯಾಸ ಉತ್ತಮವಾಗಿರುತ್ತದೆ .
  • ವೃಶ್ಚಿಕ
  • ಜನರ ಜೊತೆ ನಗು-ನಗುತ್ತಾ ಬೆರೆಯುವ ನಿಮ್ಮ ವರ್ತನೆಯಿಂದ ಜನರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗುತ್ತೀರಿ. ನಿಜ ಮಾರ್ಗದಿಂದ ಕಾರ್ಯಪ್ರವೃತ್ತರಾದಲ್ಲಿ ಹೆಚ್ಚಿನ ಅಭಿವೃದ್ಧಿ ಅನುಭವಕ್ಕೆ ಬರಲಿದೆ.
  • ಧನು
  • ಎಲ್ಲ ಸವಾಲುಗಳನ್ನು ಎದುರಿಸುವ ಆತ್ಮಸ್ಥೈರ್ಯ ನಿಮಗೆ ಬಂದಿದೆ. ಆದರೂ ಮುನ್ನೆಚ್ಚರಿಕೆ ಅಗತ್ಯ. ಆಡಿಟಿಂಗ್ ಕೆಲಸಗಳಿಂದ ಹೆಚ್ಚಿನ ವರಮಾನಗಳಿಸುವಿರಿ. ಇತರರ ಮಾತಿಗೆ ಕಿವಿಗೊಡದೆ ಇರುವುದು ಉತ್ತಮವಾಗಿರುತ್ತದೆ.
  • ಮಕರ
  • ಅನಗತ್ಯವಾಗಿ ಮಾಡುತ್ತಿರುವಂಥ ಖರ್ಚು-ವೆಚ್ಚಗಳಿಗೆ ಕಡಿವಾಣ ಹಾಕುವುದರಿಂದ ಆರ್ಥಿಕ ಸಂಕಷ್ಟ ಅರ್ಧದಷ್ಟು ಕಳೆಯುವುದು. ಅಮೂಲ್ಯವಾದ ವಸ್ತುವೊಂದನ್ನು ಉಡುಗೊರೆಯಾಗಿ ಪಡೆಯಲಿದ್ದೀರಿ.
  • ಕುಂಭ
  • ಸ್ನೇಹಿತರು ಹಾಗೂ ಹಿತಚಿಂತಕರು ನಿಮ್ಮ ಸಹಾಯಕ್ಕೆ ಎಂದಿಗೂ ಇರುವರೆಂಬ ನಂಬಿಕೆ ಬರುವುದು. ವರ್ಗಾವಣೆಗಾಗಿ ಮಾಡಿದ ಭಾರಿ ಪ್ರಯತ್ನ ವ್ಯರ್ಥವಾಗುವ ಸಂಭವವಿದೆ. ಹುಟ್ಟೂರಿನಿಂದ ಶುಭ ಸುದ್ದಿಯನ್ನು ಕೇಳುವಿರಿ.
  • ಮೀನ
  • ಮೇಲಧಿಕಾರಿಗಳಲ್ಲಿ ವೇತನದ ಬಗ್ಗೆ ನಿಮ್ಮ ಮನೋಭಿಲಾಷೆಗಳನ್ನು ವ್ಯಕ್ತ ಪಡಿಸಲು ಹಿಂಜರಿಯಬೇಡಿ. ಪುಸ್ತಕ ಮುದ್ರಣಾಲಯದವರಿಗೆ ಅಥವಾ ಪುಸ್ತಕದ ವ್ಯಾಪಾರಿಗಳಿಗೆ ಒಳ್ಳೆಯ ಲಾಭವಾಗುವ ಸಂಭವವಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.