ADVERTISEMENT

ದಿನ ಭವಿಷ್ಯ: ಈ ರಾಶಿಯವರ ಬಹುದಿನಗಳ ಕನಸು ಸಾಕಾರಗೊಳ್ಳುವುದು

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 7 ಅಕ್ಟೋಬರ್ 2024, 23:30 IST
Last Updated 7 ಅಕ್ಟೋಬರ್ 2024, 23:30 IST
   
ಮೇಷ
  • ವೃತ್ತಿ ಜೀವನದಲ್ಲಿ ಬಹಳಷ್ಟು ಬದಲಾವಣೆ ಮಾಡಿಕೊಳ್ಳುವ ತೀರ್ಮಾನ ಅಭಿವೃದ್ಧಿಗೆ ಕಾರಣವಾಗುವುದು.ರಾಜಕೀಯ ಪಿತೂರಿ ನಡೆಸುತ್ತಿರುವವರು ಯಾರು ಎಂಬುದು ತಿಳಿದುಬರಲಿದೆ.
  • ವೃಷಭ
  • ಹರಾಜಿನಲ್ಲಿ ಆಸ್ತಿ ಖರೀದಿ ಎನ್ನುವ ರೀತಿಯಲ್ಲಿ ಸಂಪತ್ತು ಅಭಿವೃದ್ಧಿಯಾಗಲಿದೆ. ಜಾಮೀನು ವಿಷಯಕ್ಕೆ ಸಂಬಂಧಿಸಿದಂತೆ ನೆರೆಯವರಲ್ಲಿ ಮಾತುಕತೆ ನಡೆಯಲಿದೆ. ಉಪಾಯದಿಂದ ಉತ್ತರಿಸಿ. ಮಕ್ಕಳಿಂದ ಸಂತೋಷ ಸಿಗಲಿದೆ.
  • ಮಿಥುನ
  • ಮನೆಯಲ್ಲಿ ನಡೆದ ಅಹಿತಕರ ಘಟನೆಯಿಂದಾಗಿ ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯಕ್ಕೆ ಹಾನಿಯುಂಟಾಗಲಿದೆ. ಸುತ್ತಲಿನ ವಾತಾವರಣ ಸಂತಸದಾಯಕವಾಗಿ ಇರುತ್ತದೆ. ಸಮಸ್ಯೆ ನೀವಾಗಿಯೇ ಪರಿಹರಿಸಿಕೊಳ್ಳುವಿರಿ.
  • ಕರ್ಕಾಟಕ
  • ಬಾಲ್ಯಸ್ನೇಹಿತನಿಗಾಗಿ ಮನೆಯಲ್ಲಿ ವಿಶೇಷ ಭೋಜನದ ವ್ಯವಸ್ಥೆ ನಡೆಯುವುದು. ಆಹಾರದಲ್ಲಿ ಆಗುವ ಬದಲಾವಣೆಯಿಂದಾಗಿ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ.
  • ಸಿಂಹ
  • ಸ್ವಂತ ಉದ್ಯೋಗಿಗಳಿಗೆ ಬರುವ ನೂತನ ಯೋಚನೆಗಳನ್ನು ಕೈ ಬಿಟ್ಟು ಈಗಿನ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳುವುದು ಉತ್ತಮ. ಪ್ರೀತಿ ಪಾತ್ರರಿಂದ ನೆಮ್ಮದಿ ತರುವಂಥ ಸನ್ನಿವೇಶಗಳು ನಡೆಯುತ್ತವೆ.
  • ಕನ್ಯಾ
  • ಸಾಮಾಜಿಕ ಕಾರ್ಯಗಳಲ್ಲಿ ಚಟುವಟಿಕೆಯಿಂದ, ಆಕರ್ಷಕಾ ರೀತಿಯಲ್ಲಿ ಭಾಗವಹಿಸುವಿರಿ. ಗೃಹ ಬಳಕೆಯ ಸಾಮಗ್ರಿ ಖರೀದಿಯಿಂದ ಸಂತಸ. ಸೋದರರನ್ನು ಸರಿಹಾದಿಗೆ ತರುವಲ್ಲಿ ಶ್ರಮ ವಹಿಸುವಿರಿ.
  • ತುಲಾ
  • ಬಹುದಿನಗಳ ಕನಸು ಸಾಕಾರಗೊಳ್ಳುವುದು. ಪ್ರಾಮಾಣಿಕತೆ, ಬುದ್ಧಿವಂತಿಕೆ, ಕೆಲಸದಲ್ಲಿನ ಶಿಸ್ತು ಗೌರವಯುತ ಹುದ್ದೆಯನ್ನು ಅಲಂಕರಿಸಲು ಸಹಾಯ ಮಾಡಲಿದೆ. ರಾಜಕೀಯ ಚಟುವಟಿಕೆಗಳಲ್ಲಿ ಓಡಾಟ ಇರುವುದು.
  • ವೃಶ್ಚಿಕ
  • ಕುಟುಂಬದ ಸದಸ್ಯರ ಜೊತೆಗೆ ಕಳೆಯುವ ಈ ದಿನದ ಸಮಯವು ಹಾಸ್ಯಮಯವಾಗಿರಲಿದೆ. ಪ್ರಾಪಂಚಿಕ ವಿಷಯಗಳಲ್ಲಿ ಮಹತ್ವಾಕಾಂಕ್ಷೆ ಇರುವವರಿಗೆ ಶುಭ ದಿನ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಯಶಸ್ಸು ಲಭ್ಯ.
  • ಧನು
  • ಮಹತ್ವಾಕಾಂಕ್ಷೆ ಈಡೇರಿಕೆಯತ್ತ ಮನುಷ್ಯ ಪ್ರಯತ್ನದ ಜತೆಯಲ್ಲಿ ಸಕಾರಾತ್ಮಕ ದೃಷ್ಟಿಕೋನವಿರಲಿ. ಉದ್ಯೋಗಾಕಾಂಕ್ಷಿಗಳಿಗೆ ವಿದ್ಯಾರ್ಹತೆಗೆ ಸರಿಯಾದ ಕೆಲಸಗಳು ದೊರಕುವಲ್ಲಿ ವ್ಯತ್ಯಾಸಗಳಾಗಬಹುದು.
  • ಮಕರ
  • ಒಡಹುಟ್ಟಿದವರ ಸಹಾಯ, ಸಹಕಾರದಿಂದ ಮಾನಸಿಕ ನೆಮ್ಮದಿ ಮತ್ತು ಸಂಸಾರದಲ್ಲಿ ಸಮತೋಲನ ಹೊಂದುವಿರಿ. ಬಂಧುವರ್ಗದವರ ಸಹಾಯ ಸ್ವೀಕರಿಸುವುದು ಅಗೌರವವೆಂದು ಭಾವಿಸಬೇಡಿ.
  • ಕುಂಭ
  • ಅದೃಷ್ಟ ನಿಮ್ಮೆಡೆಗಿದ್ದರೂ ಎಲ್ಲಾ ಕಾರ್ಯಗಳನ್ನು ಎಚ್ಚರಿಕೆಯಿಂದ ನಿರ್ವಹಿಸುವುದು ಉತ್ತಮ. ಸದುದ್ದೇಶ ಕಾರಣದಿಂದ ಕೆಲವು ಕೆಲಸವನ್ನು ಗೌಪ್ಯವಾಗಿ ನಿರ್ವಹಿಸಬೇಕಾಗುವುದು. ಆಹಾರದಲ್ಲಿ ಪಥ್ಯವಿರಲಿ.
  • ಮೀನ
  • ನಿಯಮ ಉಲ್ಲಂಘನೆ ಮಾಡುವುದು, ದಬ್ಬಾಳಿಕೆ ನಡೆಸುವ ನಿಮ್ಮ ರೀತಿ ನೀತಿಯನ್ನು ಬದಲಿಸಿಕೊಳ್ಳುವ ಹಾದಿಯನ್ನು ಹುಡುಕಿಕೊಳ್ಳಿರಿ. ವಿನಾಯಕನ ದರ್ಶನದಿಂದ ಅನುಕೂಲ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.