ದಿನ ಭವಿಷ್ಯ: ಈ ರಾಶಿಯವರ ನಿಷ್ಠೆ, ಬುದ್ಧಿವಂತಿಕೆಗೆ ಒಳ್ಳೆಯ ಪ್ರತಿಫಲ ಸಿಗಲಿದೆ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 18 ಜೂನ್ 2024, 23:30 IST
Last Updated 18 ಜೂನ್ 2024, 23:30 IST
ದಿನ ಭವಿಷ್ಯ
ಮೇಷ
ಸಂಪೂರ್ಣ ಜ್ಞಾನವನ್ನು ಹೊಂದದೆ ವಾದಿಸಿದ ವಿಷಯದಲ್ಲಿ ಹಾಸ್ಯಾಸ್ಪದರಾಗಬಹುದು. ವಸ್ತ್ರ ವಿನ್ಯಾಸ, ಚಿತ್ರಕಲೆ, ಕಥೆ-ಕವನಗಳ ಬರವಣಿಗೆಯಲ್ಲಿ ಹೆಚ್ಚಿನ ಆಸಕ್ತಿ ಮೂಡಲಿದೆ.
ವೃಷಭ
ಸಂದರ್ಭವನ್ನು ನೋಡಿಕೊಂಡು ಮನೋಭಿಲಾಷೆಯ ಬೇಡಿಕೆಯನ್ನು ಅಧಿಕಾರಿಗಳ ಮುಂದಿಡುವುದರಿಂದ ಈಡೇರುತ್ತದೆ. ಮುಗ್ಧ ವರ್ತನೆಯಿಂದಾಗಿ ಹಲವರಿಗೆ ಸಹಾಯವಾಗುವುದು.
ಮಿಥುನ
ಆತ್ಮೀಯರೊಂದಿಗೆ ವ್ಯವಹಾರಗಳ ಕುರಿತು ಅಥವಾ ವ್ಯವಹಾರದಲ್ಲಿನ ಪಾಲುದಾರಿಕೆಯ ಸಲುವಾಗಿ ಚರ್ಚಿಸಬಹುದು. ಸಹವರ್ತಿಗಳ ಜತೆಯಲ್ಲಿ ಉತ್ತಮ ಸಂಪರ್ಕ ಬೆಳೆಸಿಕೊಳ್ಳುವುದು ಸಾಧ್ಯವಾಗುವುದು.
ಕರ್ಕಾಟಕ
ಕೆಲವು ವಿಷಯಗಳು ಬೇಸರ ಹುಟ್ಟಿಸಿದರೂ ಪ್ರೀತಿ ಪಾತ್ರರೊಂದಿಗೆ ಕಳೆಯುವ ಸಮಯ ಲವಲವಿಕೆ ಮೂಡಿಸುತ್ತದೆ. ರುದ್ರಾರಾಧನೆಯಿಂದಾಗಿ ಬಯಸಿದ ದ್ರವ್ಯವು ಶೀಘ್ರ ಪ್ರಾಪ್ತಿಯಾಗುತ್ತದೆ.
ಸಿಂಹ
ಪ್ರಮುಖ ಗುರಿ ಸಾಧನೆಗಳಿಗೆ ಕುಟುಂಬ ವರ್ಗದವರಿಂದ ಒಳ್ಳೆಯ ಬೆಂಬಲ ಸಿಗುವುದು. ಮಲ್ಲಿಕಾರ್ಜುನನ ಅನುಗ್ರಹ ಸಂಪಾದಿಸಿದಲ್ಲಿ ಮತ್ತಷ್ಟು ಉತ್ತಮ ಫಲಗಳನ್ನು ಅನುಭವಿಸುವ ಯೋಗವಿದೆ.
ಕನ್ಯಾ
ಖರ್ಚಿನ ವಿಚಾರದಲ್ಲಿ ಮಿತವ್ಯಯಿಗಳಾಗುವ ಪ್ರಯತ್ನದಿಂದಾಗಿ ಹಾಗೂ ಸರಳ ಜೀವನವನ್ನು ನಡೆಸುವುದರಿಂದಾಗಿ ಶ್ರೀಮಂತಿಕೆ ಗಳಿಸಬಹುದು. ರುಚಿಸದ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳಲು ಹೋಗದಿರಿ.
ತುಲಾ
ಹುಡುಕಾಟದಲ್ಲಿ ಸತತ ಪ್ರಯತ್ನದಿಂದ ಕಳೆದು ಹೋಗಿದ್ದ ವಸ್ತುಗಳು ಸಿಕ್ಕಿ ಮನಸ್ಸಿಗೆ ಸಮಾಧಾನವಾಗುವುದು. ಸಾಂಸಾರಿಕವಾಗಿ ಅಭಿವೃದ್ಧಿಯ ವಿಷಯದಲ್ಲಿ ಶುಭ ವಾರ್ತೆ ಕೇಳುವಿರಿ.
ವೃಶ್ಚಿಕ
ಕೃಷಿಕರು ಕೈ ಬಿಟ್ಟಿರುವ ಯೋಜನೆಗಳನ್ನು ಮತ್ತೆ ಮುಂದುವರಿಸುವ ಅವಕಾಶ ಬರಲಿದೆ. ಪೂರಕವಾದ ವಾತಾವರಣ ನಿರ್ಮಾಣವಾಗುವುದು. ಕೌಟುಂಬಿಕ ಕಲಹಗಳು ಆಗಾಗ ಗೋಚರಕ್ಕೆ ಬಂದಾವು.
ಧನು
ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಸಂತೋಷ ಇಮ್ಮಡಿಗೊಳ್ಳಲಿದೆ. ನಿಷ್ಠೆ ಹಾಗೂ ಬುದ್ಧಿವಂತಿಕೆಗೆ ಒಳ್ಳೆಯ ಪ್ರತಿಫಲ ಸಿಗಲಿದೆ. ಮಾಡಿದ ಕೆಲಸಕ್ಕೆ ದುಪ್ಪಟ್ಟು ಸಂಪಾದನೆಯಾಗುವ ಯೋಗವಿದೆ.
ಮಕರ
ವೃತ್ತಿ ಜೀವನದಲ್ಲಿ ಧೈರ್ಯದಿಂದ ಪರಿಣಾಮಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಕುಟುಂಬದ ಸಮಸ್ಯೆಯತ್ತ ಗಮನ ನೀಡುವುದನ್ನು ಮರೆಯದಿರಿ. ನ್ಯಾಯಾಲಯದ ಮೊರೆ ಹೋಗುವಂಥ ಕೃತ್ಯಗಳು ನಡೆಯಲಿದೆ.
ಕುಂಭ
ಸಣ್ಣ ಸಣ್ಣ ವಿಚಾರಗಳನ್ನು ದೊಡ್ಡ ದು ಮಾಡುವ ಮನಸ್ಥಿತಿಯನ್ನು ತಕ್ಷಣದಲ್ಲಿಯೇ ಬದಲಾಯಿಸಿಕೊಳ್ಳುವುದು ಉತ್ತಮ. ವಿದ್ಯಾಭ್ಯಾಸದಲ್ಲಿ ನಿರೀಕ್ಷೆಗೂ ಮೀರಿದ ಫಲಿತಾಂಶವನ್ನು ಹೊಂದುತ್ತೀರಿ.
ಮೀನ
ಮುಂದಾಲೋಚನೆ ಇಲ್ಲದೆ ಶುರುಮಾಡಿದ ಕಾರ್ಯವು ಅನಿರೀಕ್ಷಿತ ಫಲವನ್ನು ಕೊಡುವುದರಿಂದ ಸಂತೋಷ ಹೊಂದುವಿರಿ. ಕೆಲಸಗಳು ಮಂದಗತಿಯಲ್ಲಿ ಸಾಗಲಿವೆ.