ADVERTISEMENT

ದಿನ ಭವಿಷ್ಯ: ಈ ರಾಶಿಯವರು ಕೌಟುಂಬಿಕ ವಿಷಯಗಳ ಗೋಪ್ಯತೆ ಕಾಪಾಡಿಕೊಳ್ಳುವುದು ಉತ್ತಮ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 8 ಅಕ್ಟೋಬರ್ 2024, 23:30 IST
Last Updated 8 ಅಕ್ಟೋಬರ್ 2024, 23:30 IST
   
ಮೇಷ
  • ಕೌಟುಂಬಿಕ ವಿಷಯಗಳ ಗೋಪ್ಯತೆಯನ್ನು ಕಾಪಾಡಿಕೊಂಡು ಹೋಗುವುದು ಉತ್ತಮ. ಬಾಕಿ ಕೆಲಸಗಳ ಈಡೇರಿಕೆಗೆ ದೀರ್ಘ ಪ್ರಯಾಣ ಕೈಗೊಳ್ಳಬೇಕಾದ ಅನಿವಾರ್ಯತೆ ಮೂಡಲಿದೆ.
  • ವೃಷಭ
  • ಹಲವಾರು ವಿಚಾರಗಳಲ್ಲಿ ಪದೇಪದೆ ತೊಂದರೆ ಕಂಡುಬಂದರೂ, ಎಲ್ಲಾ ಸಮಸ್ಯೆಗಳು ಪರಿಹಾರವಾಗಲಿವೆ. ಕೌಟುಂಬಿಕ ವಿಚಾರಗಳಲ್ಲಿ ತಪ್ಪುಗಳು ಪುನರಾವರ್ತನೆಯಾಗದಂತೆ ಎಚ್ಚರ ವಹಿಸಿ.
  • ಮಿಥುನ
  • ದಾಂಪತ್ಯದಲ್ಲಿ ಅನ್ಯೋನ್ಯತೆಯನ್ನು ಅಳವಡಿಸಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ. ಕೆಲಸಗಳು ಮಂದಗತಿಯಲ್ಲಿ ಸಾಗಲಿವೆ. ಪುತ್ರನ ಸಾಧನೆಗಳಿಂದ ಸಂತೋಷ ಉಂಟಾಗಲಿದೆ.
  • ಕರ್ಕಾಟಕ
  • ಲೇವಾದೇವಿ ವ್ಯವಹಾರದವರಿಗೆ ಅತಿ ವಿಶ್ವಾಸದ ವ್ಯಕ್ತಿಗಳಿಂದಲೇ ನಂಬಿಕೆದ್ರೋಹ ಉಂಟಾಗಬಹುದು. ರಾಜಕೀಯ ವಿಚಾರಗಳ ಬಗ್ಗೆ ಚರ್ಚಿಸಲು ರಾಜಕೀಯ ಗುರುವನ್ನು ಭೇಟಿಯಾಗುವ ಸಾಧ್ಯತೆ ಇರಲಿದೆ.
  • ಸಿಂಹ
  • ಲೋಪ ದೋಷಗಳನ್ನು ತಿದ್ದಿಕೊಳ್ಳುವಂತೆ ಹಿರಿಯರು ತಮ್ಮ ಅನುಭವದ ಮಾತುಗಳನ್ನು ಹೇಳಬಹುದು. ಆರೋಗ್ಯದಲ್ಲಿ ಸುಧಾರಣೆ ಕಂಡುಬಂಡು ಮಕ್ಕಳೊಡನೆ ಆಟ ಪಾಠಗಳಲ್ಲಿ ತೊಡಗಿಕೊಳ್ಳುವಿರಿ.
  • ಕನ್ಯಾ
  • ಆಸ್ತಿಗೆ ಸಂಬಂಧಿಸಿದ ಕೆಲಸ ಕಾರ್ಯಗಳು ಹಾಗೂ ಸರಕಾರಿ ಕೆಲಸಗಳು ಮೇಲಧಿಕಾರಿಗಳ ಸಹಾಯದಿಂದ ಸಂಪನ್ನಗೊಳ್ಳಲಿವೆ. ಆಯಕಟ್ಟಿನ ಹುದ್ದೆಗಾಗಿ ಸಮಬಲದಿಂದ ಹೋರಾಡಲು ತೀರ್ಮಾನಿಸಬಹುದು.
  • ತುಲಾ
  • ನಿಮ್ಮ ಸಲಹೆ ಸೂಚನೆಗಳನ್ನು ಮೇಲಧಿಕಾರಿಗಳು ಯಥಾವತ್ತಾಗಿ ಒಪ್ಪಿಕೊಳ್ಳುವರು. ಮೂತ್ರಕೋಶಕ್ಕೆ ಸಂಬಂಧಿಸಿದ ಸಮಸ್ಯೆ ಕಂಡುಬಂದಲ್ಲಿ ನಿರ್ಲಕ್ಷ್ಯ ಬೇಡ ಹಾಗೂ ಮನೆಮದ್ದು ಪ್ರಯೋಗಿಸುವುದು ಸೂಕ್ತವಲ್ಲ.
  • ವೃಶ್ಚಿಕ
  • ಸಂಸ್ಥೆಯ ಅಭಿವೃದ್ಧಿಗೆ ನಿಮ್ಮ ಕೊಡುಗೆಯ ಬಗ್ಗೆ ಹೆಚ್ಚಿನ ಅಧ್ಯಯನ ನೆಡೆಸುವುದು ಉತ್ತಮ. ನೂತನ ಯೋಜನೆ ರೂಪಿಸುವ ಬಗ್ಗೆ ತಜ್ಞರೊಂದಿಗೆ ಚರ್ಚಿಸಲು ಈ ದಿನ ಸೂಕ್ತವಾಗಿದೆ.
  • ಧನು
  • ವ್ಯವಹಾರದಲ್ಲಿ ಹೆಚ್ಚಿನ ಬಂಡವಾಳ ಹೂಡಲು ತಂದೆಯವರ ಸಮ್ಮತಿಯನ್ನು ಪಡೆಯುವುದು ಒಳ್ಳೆಯದು. ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯುವುದರಿಂದ ಮನಸ್ಸಿಗೆ ಆನಂದ, ನೆಮ್ಮದಿ ಮೂಡಲಿದೆ.
  • ಮಕರ
  • ತಾಂತ್ರಿಕ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವವರಿಗೆ ಕನಸಿನ ಅವಕಾಶಗಳು ಅರಸಿ ಬರಲಿವೆ. ನಿಮ್ಮೊಳಗಿನ ನಾಯಕತ್ವದ ಗುಣವು ಸಹೋದ್ಯೋಗಿಗಳ ಸಹಕಾರದಿಂದ ಅಭಿವೃದ್ಧಿಯಾಗುತ್ತದೆ.
  • ಕುಂಭ
  • ವ್ಯಾಪಾರ ವ್ಯವಹಾರದಲ್ಲಿ ನಿಮಗಾಗಿರುವ ಮೋಸ, ವಂಚಕರ ಕೈವಾಡದಂತಹ ಸಂಗತಿಗಳು ಬೆಳಕಿಗೆ ಬರುತ್ತದೆ. ಸೋದರಿಯ ವಿಷಯದಲ್ಲಿ ಅನುಕಂಪ ಮೂಡಲಿದೆ. ವಿದೇಶಯಾನ ಮಾಡಬೇಕಾಗಬಹುದು.
  • ಮೀನ
  • ಅಧಿಕಾರಿಗಳು ಎಚ್ಚರಿಕೆಯಿಂದ ಪರಿಸ್ಥಿತಿ ಅವಲೋಕಿಸಿ ಮುಂದಿನ ಹೆಜ್ಜೆ ಇರಿಸಿ. ಹೊಸ ಜವಾಬ್ದಾರಿ ವಹಿಸಿಕೊಳ್ಳುವ ಮೊದಲು ಮಹಾಗಣಪತಿಯನ್ನು ಸ್ತುತಿಸಿ. ದಿನ ನಿತ್ಯದ ಕೆಲಸಗಳು ಎಂದಿನಂತೆ ಸಾಗಲಿವೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.