ADVERTISEMENT

ದಿನ ಭವಿಷ್ಯ: ಈ ರಾಶಿಯವರ ದಾಂಪತ್ಯದಲ್ಲಿ ಕಿರಿಕಿರಿ ಉಂಟಾಗಬಹುದು

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 4 ಮಾರ್ಚ್ 2024, 23:50 IST
Last Updated 4 ಮಾರ್ಚ್ 2024, 23:50 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

ಮೇಷ
  • ಅತಿಯಾದ ಮಾತುಗಳಿಂದ ಸಮಾಜದಲ್ಲಿ ಅವಮಾನಕ್ಕೆ ಒಳಗಾಗುವ ಪರಿಸ್ಥಿತಿ ಎದುರಾಗಬಹುದು. ಕುಟುಂಬ ವರ್ಗದಲ್ಲಿ ಭಿನ್ನಾಭಿಪ್ರಾಯ ಕಂಡುಬರಬಹುದು. ದೇವತಾನುಗ್ರಹವನ್ನು ಸಂಪಾದಿಸಬೇಕು.
  • ವೃಷಭ
  • ಮಹಿಳೆಯರಿಗೆ ಮನ್ನಣೆ ಹೆಚ್ಚಲಿದ್ದು, ರಾಜಕೀಯವಾಗಿ ಹೆಚ್ಚಿನ ಲಾಭ ಪಡೆದುಕೊಳ್ಳುವಿರಿ. ಸಮಾಜ ಸೇವೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುವಿರಿ. ನೀರಿನ ವ್ಯತ್ಯಾಸಗಳಾಗಿ ಅನಾರೋಗ್ಯ ಸಂಭವಿಸಬಹುದು.
  • ಮಿಥುನ
  • ವಿದ್ಯಾರ್ಥಿಗೆ ಶಿಕ್ಷಣ ಮುಂದುವರಿಸಲು ಸರ್ಕಾರದಿಂದ ಅಥವಾ ಬಂಧುಗಳಿಂದ ಸಹಾಯ ದೊರಕುವುದು. ಸಾಮಾಜಿಕ ಕಾರ್ಯಕ್ರಮಗಳಿಂದ ಖ್ಯಾತಿ ಪಡೆಯಲಿದ್ದೀರಿ. ಕುತೂಹಲಕಾರಿ ವಿಷಯ ತಿಳಿದು ಅಚ್ಚರಿಯಾಗುವಿರಿ.
  • ಕರ್ಕಾಟಕ
  • ಮನೆ ಮತ್ತು ಕೆಲಸದ ನಡುವೆ ಸಮನ್ವಯತೆ ಕಾಪಾಡಿಕೊಳ್ಳಲು ಕಷ್ಟವೆನಿಸಬಹುದು. ಪತ್ನಿ ವರ್ಗದವರ ಆಗಮನದಿಂದ ಸಂತಸದ ವಾತಾವರಣವಿರುವುದು. ಸಾಧನೆ ಹಾಗೂ ಅಭಿವೃದ್ಧಿ ಸಾಧಿಸುವ ದಿನವೆನಿಸಲಿದೆ.
  • ಸಿಂಹ
  • ದಾಂಪತ್ಯದಲ್ಲಿ ಕಿರಿಕಿರಿ ಉಂಟಾಗಿ ಮನೆಯಲ್ಲಿ ಅಶಾಂತಿಯ ವಾತಾವರಣ ತೋರಿಬರಲಿದೆ. ಅಧಿಕಾರಿಗಳ ಮೇಲೆ ಗೌರವಾನ್ವಿತ ದೃಷ್ಟಿಕೋನವನ್ನು ಇಟ್ಟುಕೊಳ್ಳುವುದರಿಂದ ಹೆಚ್ಚಿನ ಪ್ರಯೋಜನ ಪಡೆಯಲಿದ್ದೀರಿ.
  • ಕನ್ಯಾ
  • ಹಿತಶತ್ರುಗಳ, ಪ್ರತಿಸ್ಪರ್ಧಿಗಳ ವಿದ್ರೋಹ ಅನುಭವಕ್ಕೆ ಬಂದೀತು. ಮಾತಿನ ಚತುರತೆಯಿಂದ ನೀವಾಡುವ ಮಾತಿಗೆ ಮರುಳಾಗುವರು. ಕಲಾವಿದರಿಗೆ ಇಂದು ಅತ್ಯುತ್ತಮ ದಿನವಾಗಿರುವುದು.
  • ತುಲಾ
  • ವ್ಯಕ್ತಿ ಗೌರವ ಕಾಪಾಡಿಕೊಳ್ಳಲು ಸುತ್ತಲಿನ ವಾತಾವರಣಕ್ಕೆ ಹೊಂದಿಕೊಳ್ಳಲೇಬೇಕಾದ ಅನಿವಾರ್ಯತೆ ಬರಲಿದೆ. ಮನೋಭಿಲಾಷೆಗಳು ಈಡೇರಿ ಮನಸ್ಸಿಗೆ ಸಂತೋಷವಾಗುವುದು.
  • ವೃಶ್ಚಿಕ
  • ಜೀವನ ಶೈಲಿಗೆ ಸಂಬಂಧಿಸಿದಂತೆ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸುಸಮಯ. ಆಭರಣ ಅಥವಾ ಕಲಾವಸ್ತುಗಳನ್ನು ಖರೀದಿಸುವ ಮನಸ್ಸಾಗುವುದು. ಈ ದಿನ ಕೃಷಿಕರಿಗೆ ವರಮಾನ ಹೆಚ್ಚಲಿದೆ.
  • ಧನು
  • ಚರ್ಮಸಂಬಂಧ ಅನಾರೋಗ್ಯವು ಕಾಣಿಸಿದಲ್ಲಿ ಆಯುರ್ವೇದದ ಮೊರೆ ಹೋಗುವುದರಿಂದ ಸಮಸ್ಯೆಗೆ ಶಾಶ್ವತವಾಗಿ ಉತ್ತರ ದೊರಕಲಿದೆ. ಲೇವಾದೇವಿ ವ್ಯವಹಾರದಿಂದ ಸಮಸ್ಯೆ ಉದ್ಭವಿಸಬಹುದು.
  • ಮಕರ
  • ಹೊಸದನ್ನು ಕಲಿಯುವ ಉತ್ಸಾಹ ನಿಮ್ಮಲ್ಲಿದೆ. ಅದರ ಜೊತೆಗೆ ಬದುಕಿನ ಅನುಭವಗಳು ನಿಮ್ಮನ್ನು ಯಶಸ್ಸಿನತ್ತ ಕರೆದೊಯ್ಯಬಹುದು. ಸಹನೆಯನ್ನು ಪರೀಕ್ಷಿಸುವ ಸಂದರ್ಭ ಎದುರಾಗಬಹುದು.
  • ಕುಂಭ
  • ವೈದ್ಯರ ಸಲಹೆಯಂತೆ ದೇಹಾರೋಗ್ಯಕ್ಕಾಗಿ ಪೌಷ್ಟಿಕವಾದ ಆಹಾರ ಸೇವನೆ ಮತ್ತು ಕೆಲಸದ ತೀವ್ರತೆಯ ಸಡಿಲಿಕೆಯಂಥ ಬದಲಾವಣೆ ಮಾಡಿಕೊಳ್ಳಬೇಕಾಗಬಹುದು. ನಿರ್ದಿಷ್ಟ ಕೆಲಸಗಳಿಗೆ ಗಮನ ಕೊಡುವುದು ಒಳ್ಳೆಯದು.
  • ಮೀನ
  • ಸ್ವಾರ್ಥಕ್ಕಾಗಿ ಅಥವಾ ಇಷ್ಟಾರ್ಥದ ಈಡೇರಿಕೆಗಾಗಲಿ ಪರರಿಗೆ ಹಿಂಸೆಯನ್ನು ಮಾಡಬೇಡಿ. ಕಮಿಷನ್ ವ್ಯಾಪಾರದ ವೃತ್ತಿಯಲ್ಲಿರುವವರಿಗೆ ಈ ದಿನ ಲಾಭಾಂಶ ವೃದ್ಧಿಯಾಗುವುದು. ಆರೋಗ್ಯದ ಕಡೆ ಗಮನವಿರಲಿ.
  • ಮೇಷ

  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.