ADVERTISEMENT

ಮಾಸ ಭವಿಷ್ಯ |ಏಪ್ರಿಲ್ 2025: ಈ ರಾಶಿಯ ಅವಿವಾಹಿತರಿಗೆ ವಿವಾಹ ಭಾಗ್ಯ ಒದಗಿ ಬರಲಿದೆ

ಅರುಣ ಪಿ.ಭಟ್ಟ
Published 31 ಮಾರ್ಚ್ 2025, 23:30 IST
Last Updated 31 ಮಾರ್ಚ್ 2025, 23:30 IST
   
ಮೇಷ
  • ಉದ್ಯೋಗಿಗಳಿಗೆ ಕೆಲಸದಲ್ಲಿ ವಿರೋಧ. ಸ್ಥಳ ಬದಲಾವಣೆ ಸಾಧ್ಯತೆ. ಸಾರ್ವಜನಿಕ ಕ್ಷೇತ್ರದಲ್ಲಿನ ಜನರಿಗೆ ತೊಂದರೆ. ತಿಂಗಳ ಉತ್ತರಾರ್ಧದಲ್ಲಿ ಯುವಕರ ಜೀವನದಲ್ಲಿ ಸ್ಥಿರತೆ. ದೊಡ್ಡ ಆರ್ಥಿಕ ವ್ಯವಹಾರ ವಹಿವಾಟುಗಳು ಪೂರ್ಣಗೊಳ್ಳುವವು.
  • ವೃಷಭ
  • ಕಲಾವಿದರಿಗೆ ಉತ್ತಮ ಸಮಯ, ಉತ್ತಮ ಅವಕಾಶ ಬರುವುದು. ಸರ್ಕಾರಿ ಕೆಲಸಗಳಲ್ಲಿ ಯಶಸ್ಸು. ಗೃಹ ನಿರ್ಮಾಣ ಅಥವಾ ನೂತನ ಮನೆ ಕೊಳ್ಳುವ ಯೋಗ. ಸಾಲದ ಬಾಕಿ ಹಣ ಬರುವುದು. ತಿಂಗಳ ಉತ್ತರಾರ್ಧದಲ್ಲಿ ದುಃಖಗಳು ದೂರಾಗುವವು.
  • ಮಿಥುನ
  • ಮಕ್ಕಳ ವಿದ್ಯಾಭ್ಯಾಸದಲ್ಲಿ ಸ್ವಲ್ಪ ಹಿನ್ನಡೆ. ವಾಹನ ಖರೀದಿ ಯೋಗ. ಉದ್ಯೋಗ ವ್ಯವಹಾರದಲ್ಲಿ ಬಡ್ತಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಅನಗತ್ಯ ಅಲೆದಾಟ ಜಾಸ್ತಿ ಇರುತ್ತದೆ. ಬಂಧು-ಮಿತ್ರರಲ್ಲಿ ಸ್ನೇಹದ ಒಡನಾಟ ಜಾಸ್ತಿ ಇರುತ್ತದೆ. ಮನೆಯಲ್ಲಿ ಧಾರ್ಮಿಕ ಕಾರ್ಯ ನಡೆಸುವಿರಿ.
  • ಕರ್ಕಾಟಕ
  • ಸಮಾಜದಲ್ಲಿ ಉತ್ತಮ ಮಾನ, ಸನ್ಮಾನಯೋಗ. ವಿವಿಧ ಮೂಲಗಳಿಂದ ಧನಲಾಭ. ವಿಲಾಸಿ ವಸ್ತು ಖರೀದಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಮನೆಗೆ ಬಂಧುಮಿತ್ರರ ಆಗಮನ ಸಂತಸ. ವಿವಾಹ ಅಪೇಕ್ಷಿತ ವಧೂ–ವರರಿಗೆ ಉತ್ತಮ ಸಮಯ.
  • ಸಿಂಹ
  • ಸಾಮಾಜಿಕ ಆರ್ಥಿಕ ಕ್ಷೇತ್ರದಲ್ಲಿ ಪ್ರಗತಿ ಮುಂದುವರೆಯುತ್ತದೆ. ಕೆಲಸಗಳಲ್ಲಿ ಬಹಳ ಶ್ರಮ ವಹಿಸುವಿರಿ. ಬಹಳ ವರ್ಷಗಳಿಂದ ಆಗದಿರುವ ಕಾರ್ಯ ಬಂಧುಮಿತ್ರರ ಸಹಾಯದಿಂದ ಶುಭವಾಗುವುದು. ಕೋರ್ಟ್ ಕಚೇರಿ ವ್ಯವಹಾರಗಳಿದ್ದರೆ ಸಮಾಧಾನಕರ ಹಂತಕ್ಕೆ ತಲುಪುದು.
  • ಕನ್ಯಾ
  • ನೆರೆಹೊರೆಯವರಿಂದ ಉತ್ತಮ ಸಹಕಾರ ಸ್ನೇಹಮಯ ವಾತಾವರಣ ಇರುತ್ತದೆ. ಮನೆಯಲ್ಲಿ ಮಂಗಳ ಕಾರ್ಯ ನಡೆಸುವಿರಿ. ಆರ್ಥಿಕವಾಗಿ ಉತ್ತಮ ತಿಂಗಳು. ರಾಜಕೀಯದಲ್ಲಿರುವವರಿಗೆ ಉತ್ತಮ ಫಲಿತಾಂಶ. ಕಬ್ಬಿಣದ ವ್ಯಾಪಾರಿಗಳಿಗೆ ಉತ್ತಮ ಲಾಭದ ಅವಕಾಶ.
  • ತುಲಾ
  • ಹತ್ತಿರದ ಬಂಧುಗಳಿಗೆ ನಿಮ್ಮ ಸಹಾಯದ ಅವಶ್ಯಕತೆ ಬರುವುದು. ಉದ್ಯೋಗದಲ್ಲಿ ಮೇಲಧಿಕಾರಿಗಳ ತೊಂದರೆ ಇರುವುದು. ಅವಿವಾಹಿತರಿಗೆ ವಿವಾಹ ಭಾಗ್ಯ. ವಾಹನ ಖರೀದಿಗೆ ಉತ್ತಮ ಅವಕಾಶ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು.
  • ವೃಶ್ಚಿಕ
  • ಸಹೋದರರಿಂದ ಸಹಾಯ ಸಹಕಾರ. ನೂತನ ಮನೆ ಅಥವಾ ಭೂಮಿ ಖರೀದಿಗೆ ಯೋಚಿಸಿದ್ದಲ್ಲಿ ಇದು ಸಕಾಲ. ಹತ್ತಿರದ ಸ್ನೇಹಿತರಿಂದ ಆರ್ಥಿಕ ಸಹಾಯ. ಮಕ್ಕಳಿಂದ ಶುಭ ವಾರ್ತೆ. ಶಿಕ್ಷಣ ಹಣಕಾಸು ಕ್ಷೇತ್ರದಲ್ಲಿರುವವರಿಗೆ ಪ್ರಮೋಷನ್ ಸಾಧ್ಯತೆ.
  • ಧನು
  • ಹೊಸ ಉದ್ಯೋಗ ಪ್ರಸ್ತಾಪ ಬರುತ್ತದೆ. ಅರ್ಹರಿಗೆ ನೌಕರಿ ಸಿಗುವ ಯೋಗವಿದೆ. ಬರತಕ್ಕ ಬಾಕಿ ಹಣ ಬರುವುದು. ಸಾಹಿತ್ಯ, ಸಂಗೀತಜ್ಞರಿಗೆ ಗೌರವ, ವಸ್ತ್ರೋದ್ಯಮ ಹೊಟೇಲ್ ಉದ್ದಿಮೆದಾರರಿಗೆ ಲಾಭ. ಹಿರಿಯರೊಂದಿಗೆ ಮನಸ್ತಾಪ ಇದ್ದಲ್ಲಿ ಬಗೆಹರಿಯುವುದು.
  • ಮಕರ
  • ಹಣಕಾಸು ವ್ಯವಹಾರವನ್ನು ಬಹಳ ಎಚ್ಚರಿಕೆಯಿಂದ ನಡೆಸಿ. ಖರ್ಚು ಹೆಚ್ಚಾಗಬಹುದು. ನಿಮ್ಮ ಇಚ್ಛೆಯಂತೆ ನಡೆಯಲು ಅಡೆತಡೆ ಸಾಧ್ಯತೆ. ಆಪ್ತಮಿತ್ರರ ಭೇಟಿ, ಗುಡಿಕೈಗಾರಿಕಾ ಉದ್ಯಮದವರಿಗೆ ಅನುಕೂಲ. ಭೂಮಿ, ಚಿನ್ನ ಖರೀದಿ ಬಗ್ಗೆ ವಿಶೇಷ ಆಸಕ್ತಿ.
  • ಕುಂಭ
  • ಕೃಷಿಕರಿಗೆ ಲಾಭದಾಯಕ. ಆಕಸ್ಮಿಕವಾಗಿ ಭೂಮಿ ಖರೀದಿ ಯೋಗ. ಹಣಕಾಸು ಸಂಸ್ಥೆ ಹೊಂದಿರುವವರಿಗೆ ಉತ್ತಮ ಲಾಭ. ವೈಜ್ಞಾನಿಕ ಕ್ಷೇತ್ರದಲ್ಲಿರುವವರಿಗೆ ಬಡ್ತಿ ಸಾಧ್ಯತೆ. ವಿದ್ಯಾರ್ಥಿಗಳಿಗೆ ಒಳಿತಾಗಲಿದೆ.
  • ಮೀನ
  • ಸಮಾಜದಲ್ಲಿ ಗೌರವಾದರ ಸಿಗಲಿವೆ. ಹಣಕಾಸಿನ ವಿಚಾರದಲ್ಲಿ ಕೆಲವರು ಆಪ್ತಮಿತ್ರರಂತೆ ನಟಿಸಿ ಮೋಸ ಮಾಡಬಹುದು. ಷೇರು ವ್ಯವಹಾರದಲ್ಲಿ ಲಾಭ. ವಾಹನ ಖರೀದಿ ಯೋಗ. ಮನೆಗೆ ಅಲಂಕಾರಿಕ ವಸ್ತು ಪೀಠೋಪಕರಣ ಖರೀದಿ ಮಾಡುವಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.