ADVERTISEMENT

ಮಾಸ ಭವಿಷ್ಯ | ಜೂನ್ 2024: ಈ ರಾಶಿಯವರಿಗೆ ತಿಂಗಳ ಪ್ರಾರಂಭದಲ್ಲಿ ಕಾರ್ಯಸಿದ್ಧಿ

ಅರುಣ ಪಿ.ಭಟ್ಟ
Published 31 ಮೇ 2024, 23:15 IST
Last Updated 31 ಮೇ 2024, 23:15 IST
   
ಮೇಷ
  • ತಿಂಗಳ ಪ್ರಾರಂಭದಲ್ಲಿ ಕಾರ್ಯಸಿದ್ಧಿ. ಬಂಧುಗಳ ಆಗಮನದಿಂದ ಕುಟುಂಬದಲ್ಲಿ ಸಂತಸ. ಮನೆ ಬಾಡಿಗೆಯಿಂದ ಧನಲಾಭ. ಸ್ವತಂತ್ರ ಉದ್ಯೋಗಸ್ಥರಿಗೆ ಲಾಭ. ದೂರ ಪ್ರಯಾಣ. ಗ್ರಂಥರಚನೆಯಲ್ಲಿ ಆಸಕ್ತಿ. ವಾಹನ ಸೌಖ್ಯ. ಮಕ್ಕಳಿಂದ ಕಿರಿಕಿರಿ. ಬರತಕ್ಕ ಬಾಕಿ ಬರುವುದು.
  • ವೃಷಭ
  • ಸಹೋದರಿಯರಿಂದ ಶುಭವಾರ್ತೆ. ಗೃಹಾಲಂಕಾರ ವಸ್ತು ಖರಿದಿ. ಉದ್ಯಮಿಗಳಿಗೆ ಹೊಸ ಯೋಜನೆ ಪ್ರಾರಂಭಿಸಲು ಸಕಾಲ. ತಿಂಗಳ ಮಧ್ಯದಲ್ಲಿ ಜ್ವರ ಪೀಡೆ ವೈದ್ಯಕೀಯ ಖರ್ಚು. ಕೋರ್ಟ್‌ ಪ್ರಕರಣದಲ್ಲಿ ಗೆಲುವು ಅವಮಾನಕರ ಪ್ರಸಂಗ. ವಿವಾಹ ಪ್ರಸ್ತಾವದಲ್ಲಿ ಯಶಸ್ಸು
  • ಮಿಥುನ
  • ದೈಹಿಕ ಜಾಡ್ಯ, ಅಲರ್ಜಿ. ವಿನಾಕಾರಣ ಹೆದರಿಕೆ. ಆದರೆ ಬಹುದಿನಗಳ ನಂತರ ಕುಟುಂಬದಲ್ಲಿ ಸಂತೋಷದ ಸಮಾರಂಭ. ಕಲಾವಿದರು ಮತ್ತು ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಯಶಸ್ಸು. ಉತ್ತಮ ವಾಗ್ಜರಿ ಪ್ರದರ್ಶನ. ಮಾನ ಸನ್ಮಾನ. ಮೂತ್ರ ಜನಕಾಂಗ ಪೀಡೆ ಸಾಧ್ಯತೆ.
  • ಕರ್ಕಾಟಕ
  • ಮನೆಕಟ್ಟುವ ಸಮಸ್ಯೆ ಬಗೆಹರಿಯುವುದು. ಕ್ರಯ ವಿಕ್ರಯದಲ್ಲಿ ವಂಚನೆ ನಡೆಯುವ ಸಂಭವ, ಜಾಗ್ರತೆ. ತಿಂಗಳಿಡಿ ಒಂದಿಲ್ಲೊಂದು ವಿವಾದದಲ್ಲಿ ಸಿಲುಕುವಿರಿ. ತಂದೆಯಿಂದ ಹಣಕಾಸಿನ ಸಹಾಯ ಸಾದ್ಯತೆ. ಕಾಲಿಗೆ ನೋವು. ಆಸ್ಪತ್ರೆ ಖರ್ಚು. ನಿರೀಕ್ಷಿತ ಸ್ಪರ್ಧೆಯಲ್ಲಿ ಯಶಸ್ಸು.
  • ಸಿಂಹ
  • ಉತ್ಸಾಹ ವೃದ್ಧಿಸುವುದು. ಸರಕಾರಿ ಕೆಲಸಗಳು ತ್ವರಿತ ಗತಿಯಲ್ಲಿ ನಡೆಯುವವು. ಪರಿಚಿತ ವ್ಯಕ್ತಿಗಳಿಂದ ವಿರೋಧ ಕಾಣಿಸುವುದು. ಪಶುಗಳ ವಿಕ್ರಯದಾರರಿಗೆ ಲಾಭ. ಹೊಟ್ಟೆನೋವು. ಅಜ್ಞಾತವಾಸದಿಂದ ಬಿಡುಗಡೆ. ಮಹತ್ವದ ಮಾತುಕತೆ. ಸರಕಾರಿ ಪರೀಕ್ಷೆಗಳಲ್ಲಿ ಯಶಸ್ಸು.
  • ಕನ್ಯಾ
  • ವಿಶೇಷ ಸಾಲಗಳು ತೀರುವವು. ತಿಂಗಳ ಮಧ್ಯದಲ್ಲಿ ಅನಿರೀಕ್ಷಿತ ಖರ್ಚಿನ ಪ್ರಸಂಗ. ಸ್ವಂತ ಉದ್ಯೋಗಸ್ಥರಿಗೆ ಉತ್ತಮ ಲಾಭ. ಸರಕಾರಿ ಕೆಲಸದಲ್ಲಿ ವ್ಯತ್ಯಯ. ಸೇವಕರಿಂದ ಹಾನಿ, ತೊಂದರೆ. ಬಂಧುಗಳಿಗೆ ಆಪತ್ತು. ಮನೆಕೆಲಸ ಅರ್ದಕ್ಕೆ ನಿಲ್ಲುವುದು. ಪ್ರೇಮ ವೈಫಲ್ಯ. ಅಧಿಕಾರಿಗಳಿಗೆ ಹಿನ್ನಡೆ.
  • ತುಲಾ
  • ಉತ್ತಮ ಫಲ ಪ್ರಾಪ್ತಿ. ಆಕಸ್ಮಿಕ ಧನಲಾಭ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವುದು. ಸಂತತಿ ಇಲ್ಲದವರಿಗೆ ಸಂತತಿಯ ಸೂಚನೆ. ವಿವಾಹಾಪೇಕ್ಷಿಗಳಿಗೆ ಸಂಗಾತಿ ಲಭ್ಯ. ಹಳೆಯ ವ್ಯಾದಿಗಳು ಮರುಕಳಿಸುವ ಸಾದ್ಯತೆ ಇದೆ. ಆಹಾರದ ಬಗ್ಗೆ ಎಚ್ಚರವಿರಲಿ.
  • ವೃಶ್ಚಿಕ
  • ಕಷ್ಟದಲ್ಲೂ ಇಷ್ಟ ಫಲ ಪ್ರಾಪ್ತಿಯಾಗುವುದು. ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆಯಿಂದ ಇರಿ. ರಾಜಕಾರಣದಿಂದ ಮಾನಹಾನಿ ಸಂಭವ. ಪರದೇಶ ಪ್ರವಾಸಕ್ಕೆ ಸಿದ್ದತೆ ನಡೆಯುವುದು. ಸರಕಾರಿ ಅಧಿಕಾರ ಪ್ರಾಪ್ತಿಯೋಗ. ಶಿಕ್ಷಕರಿಗೆ ಪದೋನ್ನತಿಯೊಡನೆ ವರ್ಗಾವಣೆ ಸಂಭವ.
  • ಧನು
  • ಆರೋಗ್ಯದಲ್ಲಿ ಏರುಪೇರು. ಸಂಗಾತಿಯೊಡನೆ ಜಗಳ. ಕಚೇರಿ ಕಾಗದ ಪತ್ರಗಳು ಹಟಾತ್ ಕಾಣೆಯಾಗುವಿಕೆ. ದೂರದಿಂದ ಶುಭವಾರ್ತೆ ಬರುವುದು. ದೈನಂದಿನ ಕೆಲಸಗಳು ಸರಾಗ. ದಿಢೀರ್ ಹಿರಿಯ ಅಧಿಕಾರಿಗಳ ಆಗಮನ. ಸ್ತ್ರೀ ಮೂಲಕ ದ್ರವ್ಯ ಲಾಭ. ದೇವತಾ ಪೂಜೆ.
  • ಮಕರ
  • ವಾಹನ ಚಲಾಯಿಸುವಾಗ ಎಚ್ಚರಿಕೆ ಇರಲಿ. ಕಾಲು ನೋವಿನ ಸಮಸ್ಯೆ. ಕೌಟುಂಬಿಕ ಖರ್ಚು ಜಾಸ್ತಿಯಾಗುವುದು. ಶತ್ರುಗಳು ತಲೆ ತಗ್ಗಿಸುವರು. ಹಳೆಯ ಮಿತ್ರರ ಆಗಮನ. ಮಕ್ಕಳಿಂದ ಶುಭವಾರ್ತೆ. ಮನೆಯಲ್ಲಿ ವಿಶೇಷ ಸಮಾರಂಭ ನಡೆಯುವುದು. ದಾಂಪತ್ಯ ಸೌಖ್ಯ.
  • ಕುಂಭ
  • ಶುಭಯೋಗ. ಯಾಂತ್ರಿಕ ವಸ್ತುಗಳ ಖರೀದಿ. ಶೈಕ್ಷಣಿಕ ಖಾತೆಯಲ್ಲಿ ಕೆಲಸದಲ್ಲಿರುವವರಿಗೆ ತಾತ್ಕಾಲಿಕ ಬಡ್ತಿ. ಬ್ಯಾಂಕ್ ನೌಕರರಿಗೆ ವರ್ಗಾವಣೆ ಸಂಭವ. ಕೈಗೊಂಡ ಕೆಲಸಗಳಲ್ಲಿ ನೀರಿಕ್ಷೆಗಿಂತ ಲಾಭ. ಕಂಟ್ರಾಕ್ಟರದಾರರಿಗೆ ಉತ್ತಮ ಧನ ಲಾಭ ಕಾಣುವಿರಿ. ಮಿತ್ರರಿಂದ ವಂಚನೆ ಸಂಭವ.
  • ಮೀನ
  • ವಿನಾಕಾರಣ ಮಿತ್ರರು ಶತ್ರುಗಳಾವುರು. ಮೇಲಾಧಿಕಾರಿಗಳಿಂದ ಭಯದ ನೋಟಿಸು ಬರಬಹುದು. ಕಲಾವಿದರಿಗೆ ಸಂಗೀತಗಾರರಿಗೆ ತಿಂಗಳ ಮೊದಲರ್ಧ ಉತ್ತಮ. ಸೊಂಟನೊವು ಕಾಣಿಸುವುದು. ಮಕ್ಕಳ ಆರೋಗ್ಯದಲ್ಲಿ ಪ್ರಗತಿ. ವಿದ್ಯಾರ್ಥಿಗಳಿಗೆ ಹಿನ್ನಡೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.