ಮಾಸ ಭವಿಷ್ಯ | ಮಾರ್ಚ್ 2025: ಈ ರಾಶಿಯವರಿಗೆ ಷೇರು, ಹೋಟೆಲ್ ಉದ್ಯಮದಲ್ಲಿ ಲಾಭ
ಅರುಣ ಪಿ.ಭಟ್ಟ
Published 1 ಮಾರ್ಚ್ 2025, 5:46 IST
Last Updated 1 ಮಾರ್ಚ್ 2025, 5:46 IST
ಮೇಷ
ಈ ತಿಂಗಳು ನಿಮಗೆ ಶುಭಕರವಾಗಿದೆ ಹೊಸ ವಾಹನ ವಸ್ತುಗಳ ಕ್ರಯವಿಕ್ರಯಗಳಿಗೆ ಸೂಕ್ತ ಕಾಲ. ಸಾಮಾಜಿಕ ಜೀವನದಲ್ಲಿ ಜನತೆಯ ಗೌರವಕ್ಕೆ ಪಾತ್ರರಾಗಿರುವಿರಿ. ಅನಿರೀಕ್ಷಿತವಾಗಿಧನಲಾಭ. ಷೇರು, ಹೂಟೆಲ್ ಉದ್ಯಮದವರಿಗೆ ಉತ್ತವು ಲಾಭವಾಗುವುದು. ಕೃಷಿ ವ್ಯವಹಾರಗಳಲ್ಲಿ ಕೂಡ ಲಾಭವಾಗುವುದು. ಕೋರ್ಟ ಕಚೇರಿಯ ಕೆಲಸಗಳು ಮಧ್ಯಮ ಗತಿಯಲ್ಲಿ ಸಾಗುತ್ತವೆ. ಆಗಾಗ ಮನಸಿನಲ್ಲಿ ಚಂಚಲತೆ ಉಂಟಾಗಬಹುದು. ಅದರ ಬಗ್ಗೆ ಗಮನ ಕೊಡದೆ ಅಂದುಕೊಂಡ ಕಾರ್ಯವನ್ನು ಮುಂದುವರೆಸಿ. ವಿದ್ಯಾರ್ಥಿಗಳಿಗೆ ತಿಂಗಳ ಮಧ್ಯಭಾಗದಲ್ಲಿ ಶುಭ.
ವೃಷಭ
ಧೈರ್ಯ ಉತ್ಸಾಹ ಮತ್ತು ಅರ್ಥಿಕವಾಗಿ ಉನ್ನತಿಯಾಗುವುದು. ರಾಜಕಿಯ ಸಾಮಾಜಿಕ ಕ್ಷೇತ್ರದಲ್ಲಿ ಕೂಡ ಮನ್ನಣೆ ದೊರೆಯುವುದು. ಧಾರ್ಮಿಕ ಪೂಜಾ ಕಾರ್ಯಗಳನ್ನು ಮಾಡುವಿರಿ. ಕುಟುಂಬದಲ್ಲಿ ಮಂಗಲ ಕಾರ್ಯಕ್ರಮ ನಡೆಯಬಹುದು ಇದರಿಂದ ಕುಟುಂಬದ ವಾತಾವರಣವು ಉತ್ತಮವಾಗಿರುತ್ತದೆ. ಪ್ರೇಮಿಗಳ ವೈವಾಹಿಕ ಜೀವನಕ್ಕಾಗಿ ಉತ್ತಮ ಸಮಯ. ವಿದ್ಯಾರ್ಥಿಗಳಿಗೆಅನುಕೂಲಕರವಾಗಿದೆ. ಬಂಗಾರ ಹವಳ ತಾಮ್ರ ಇವುಗಳ ವ್ಯಾಪಾರದಲ್ಲಿ ಉತ್ತವು ಲಾಭವನ್ನು ಪಡೆಯಬಹುದು. ಉನ್ನತಪದವೀಧರರಿಗೆ ಸರಕಾರಿ ಕೆಲಸದ ಯೋಗವಿದೆ.
ಮಿಥುನ
ನೀವು ಹಲವಾರು ಕೆಲಸ ಕಾರ್ಯಗಳನ್ನು ಪರಿಶ್ರಮದಿಂದ ಮಾಡುವಿರಿ. ಷೇರು ಹೊಟೆಲ್ಉದ್ಯಮದವರಿಗೆ ಮಧ್ಯಮ. ನಿಮ್ಮ ಸಂಬಂಧಿಕರು ಸ್ನೇಹಿತರು ಮತ್ತು ಆಪ್ತರನ್ನು ಭೇಟಿ ಮಾಡುವ ಅವಕಾಶ ಸಿಗುತ್ತದೆ . ಅವರಿಂದ ನೀವು ಮಾಡುವ ಕೆಲಸಗಳಿಗೆ ಅನೀರಿಕ್ಷಿತ ಬೆಂಬಲ ದೊರಕಿ ನಿಮ್ಮ ಉತ್ಸಾಹ ಇಮ್ಮಡಿಗೊಳಿಸಿತ್ತದೆ. ಸಮಾಜದ ಗೌರವಾನ್ವಿತ ಪದವಿ ಪುರಸ್ಕಾರ ಲಭಿಸುವಸಾದ್ಯತೆಇದೆ. ಅತಿಯಾದ ಕಾರ್ಯನಿರತತೆಯಿಂದ ನಿಮಗೆ ಸುಸ್ತಾಗಬಹುದು ಮತ್ತು ಇದರ ಪರಿಣಾಮವು ನಿಮ್ಮ ಕೆಲಸ ದೇಹದ ಮೇಲೆ ಬೀರಬಹುದು. ನಿಮ್ಮಪ್ರವಾಸಗಳು ಕಡಿಮೆ ಇರುತ್ತದೆ ಮತ್ತು ಆರ್ಥಿಕವಾಗಿ ನೀವು ಪ್ರಗತಿ ಹೊಂದುತ್ತೀರಿ.
ಕರ್ಕಾಟಕ
ಈ ತಿಂಗಳು ನಿಮಗೆ ಮಧ್ಯಮ ಫಲಗಳಿಂದ ಕೂಡಿದೆ. ಯಾವುದೇ ನೂತನ ವ್ಯವಹಾರಪ್ರಾರಂಭಿಸುವದಕ್ಕಿಂತ ಇರುವ ವ್ಯವಹಾರವನ್ನು ಹೆಚ್ಚಿನ ದರ್ಜಿಗೆ ಏರಿಸುವುದು ಉತ್ತಮ. ಕೃಷಿ ಭೂಮಿ ಅಥವಾ ಕೃಷಿ ಸಲಕರಣೆ ವ್ಯವಹಾರದವರಿಗೆ ಉತ್ತವ ಲಾಭವಿದೆ. ಉನ್ನತ ಪದವೀಧರರಿಗೆ ಉದ್ಯೋಗ ನಿಮಿತ್ತ ವಿದೇಶ ಪ್ರವಾಸ ಯೋಗವಿದೆ. ಅರ್ಥಿಕವಾಗಿ ತಿಂಗಳಾರಂಬದಲ್ಲಿ ಅನಿಶ್ಚಿತತೆ ಇದ್ದರೂ ತಿಂಗಳಾಂತ್ಯದಲ್ಲಿ ಸ್ಥಿರವಾದ ಪ್ರಗತಿಯೊಂದಿಗೆನೆಮ್ಮದಿಯಾಗಿರುವಾಗಿರಿ ಈ ಆರೋಗ್ಯದಲ್ಲಿ ಮಧುಮೇಹ ಮೂತ್ರದ ಕಿರಿಕಿರಿ ಸಂಬಂಧಿತ ಸಮಸ್ಯೆಗಳನ್ನುಎದುರಿಸಬೇಕಾಗಬಹುದು. ವಿದ್ಯಾರ್ಥಿಗಳಿಗೆ ಯಶಸ್ಸು.
ಸಿಂಹ
ನಿಮ್ಮ ಆರ್ಥಿಕ ಪರಿಸ್ಹಿತಿ ಸುಧಾರಿಸುತ್ತದೆ ಮತ್ತು ನಿಮ್ಮ ಆದಾಯವು ವೃದ್ಧಿಯಾಗುತ್ತದೆ. ವಾಹನ ಚಲಾಯಿಸುವಾಗ ಎಚ್ಚರಿಕೆಯಿಂದ ಇರಿ. ಕುಟುಂಬ ಜೀವನದಲ್ಲಿ ಸ್ವಲ್ಪ ಕಡಿಮೆ ಅನುಕೂಕರವಾಗಲಿದೆ. ಯಾವುದೋ ಕೆಲಸದ ಕಾರಣದಿಂದಾಗಿ ನೀವು ನಿಮ್ಮ ಮನೆಯಿಂದ ದೂರ ಹೋಗಬೇಕಾಗಬಹುದು ಈ ಕಾರಣದಿಂದ ನಿಮ್ಮ ಸ್ವಭಾವದಲ್ಲಿ ಕಿರಿಕಿರಿಯನ್ನು ಉಂಟುಮಾಡಬಹುದು ಕೆಲಸದ ಸ್ಹಳದಲ್ಲಿನ ಹೆಚ್ಚು ಕಾರ್ಯದ ಕಾರಣ ನೀವು ನಿಮ್ಮ ಕುಟುಂಬದ ಸದಸ್ಯರಿಗೆ ಸಮಯ ನೀಡಲಾಗುವುದಿಲ್ಲ. ತಂದೆ ತಾಯಿಯವರು ಆರೋಗ್ಯದ ಸಮಸ್ಯೆಗಳನ್ನು ಹೊಂದಿರುವ ಸಾಧ್ಯತೆ ಇದೆ. ಡಿಸೆಂಬರ್ ತಿಂಗಳಿನಿಂದ ಪರಿಸ್ಥಿತಿಗಳು ಉತ್ತಮವಾಗಿ ಸುಧಾರಿಸುತ್ತದೆ. ನೀವು ಉದ್ಯೋಗದಲ್ಲಿದ್ದರೆ ಕೆಲಸದ ಸ್ಥಳದಲ್ಲಿ ನೀವು ಉನ್ನತ ಸ್ಥಾನವನ್ನ ಪಡೆಯುತ್ತೀರಿ ಇದರಿಂದ ನಿಮ್ಮ ಹಿರಿಯ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳು ನಿಮ್ಮಿಂದ ಸಂತೋಷಪಡುತ್ತಾರೆ ನೀವು ವ್ಯಾಪಾರಿಗಳಾಗಿದ್ದರೆ ಕಠಿಣ ಸವಾಲುಗಳನ್ನು ಎದುರಿಸಬೇಕಾಗಬಹುದು. ಪ್ರೇಮಿಗಳಿಗೆ ವಿವಾಹ ಯೋಗವಿದೆ.
ಕನ್ಯಾ
ನಿಮ್ಮ ಕುಟುಂಬ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ಎದುರಿಸಬೇಕಾಗುತ್ತದೆ ನಿಮ್ಮ ಪೋಷಕರ ಆರೋಗ್ಯದಲ್ಲಿ ಏರುಪೇರು ಸಾಧ್ಯತೆ ಇದೆ ಅಂತಹ ಪರಿಸ್ಥಿತಿಯಲ್ಲಿ ಮಾನಸಿಕ ಚಿಂತೆಗಳು ನಿಮ್ಮನ್ನು ಕಾಡುತ್ತದೆ. ಕುಟುಂಬದ ಸದಸ್ಯರ ಮೇಲೆ ನಿಮ್ಮ ಹಣ ಖರ್ಚಾಗುತ್ತದೆ ಜಮೀನು ಖರೀದಿಸುವ ಸಾಧ್ಯತೆ ಇದೆ. ಈ ಸಮಯದಲ್ಲಿ ಯಾವುದೇದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಮನೆಯ ಹಿರಿಯರ ಸಲಹೆಯನ್ನು ಪಡೆದುಕೊಳ್ಳಿ ಮನೆಯಲ್ಲಿ ಮಂಗಲ ಕಾರ್ಯಕ್ರಮವನ್ನು ಆಯೋಜಿಸುವ ಸಂಭವವಿದೆ.ಇದರಿಂದಾಗಿ ಮನೆಯ ವಾತಾವರಣವು ಸಂತೋಷದಿಂದ ತುಂಬಿರುತ್ತದೆ ಕುಟುಂಬದ ಸದಸ್ಯರ ನಡುವೆ ಒಗ್ಗಟ್ಟುಮೂಡುತ್ತದೆ. ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನ ಸಾಮಾನ್ಯವಾಗಿರುತ್ತದೆ. ಈ ಸಮಯದಲ್ಲಿ ಯಾರಿಗೂ ಸಾಲ ನೀಡದಿರಿ.
ತುಲಾ
ನೀವು ನಿಮ್ಮ ಉದ್ಯೋಗವನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ ಈ ಸಮಯದಲ್ಲಿ ನಿಮ್ಮ ಪ್ರಯತ್ನವನ್ನು ವೇಗಗೊಳಿಸಿ. ನೀವು ಯಶಸ್ವಿಯಾಗುವಿರಿ. ನೀವು ವ್ಯಾಪಾರಸ್ಥರಾಗಿದ್ದರೆ ನೀವು ಸ್ವಲ್ಪ ಜಾಗರೂಕರಾಗಿರಬೇಕು. ಯಾವುದೇ ರೀತಿಯ ವಹಿವಾಟುಗಳನ್ನು ಮಾಡುವ ವೊದಲು ಚೆನ್ನಾಗಿ ಯೋಚಿಸಬೇಕು ನೀವು ನಿಮ್ಮ ವೆಚ್ಚಗಳನ್ನು ನಿಯಂತ್ರಣ ಅಗತ್ಯವಿದೆ. ಇಲ್ಲದಿದ್ದರೆ ಆರ್ಥಿಕ ಬಿಕ್ಕಟ್ಟು ಉಂಟಾಗಬಹುದು . ನಿಮ್ಮ ಕೆಲವು ಖರ್ಚುಗಳು ಕುಟುಂಬಸ್ಥರ ಮೇಲೂ ಇರಬಹುದು. ಅವರು ಏನನ್ನಾದರೂ ಬೇಡಿಕೆಯಿಡುವ ಸಾಧ್ಯತೆ ಇದೆ ಇದನ್ನು ಪೂರ್ಣಗೊಳಿಸುವಲ್ಲಿ ನೀವು ಆರ್ಥಿಕ ದುರ್ಬಲತೆಯನ್ನು ಅನುಭವಿಸಬಹುದು ಅಂತಹ ಸಂದರ್ಭದಲ್ಲಿ ಅವರ ಆಸೆಯನ್ನು ಈಡೇರಿಸುವ ಮೊದಲು ನಿಮ್ಮ ಆರ್ಥಿಕತೆಯತ್ತ ಗಮನ ಹರಿಸಿ. ನೀವು ಸರ್ಕಾರಿ ಉದ್ಯೋಗದಲ್ಲಿದ್ದರೆ ಅದೃಷ್ಟದ ಬೆಂಬಲವನ್ನು ಪಡೆಯುತ್ತೀರಿ ಮತ್ತು ಸರ್ಕಾರದ ಕಡೆಯಿಂದ ನೀವು ಯಾವುದೇ ಮನೆ ಮತ್ತು ವಾಹನವನ್ನು ಪಡೆಯಬಹುದು.
ಆರೋಗ್ಯ ಸ್ಡಿರವಾಗಿರುತ್ತದೆ ಅವಿವಾಹಿತರಿಗೆ ವಿವಾಹ ಯೋಗ.
ವೃಶ್ಚಿಕ
ನಿಮ್ಮ ಆರ್ಥಿಕ ಜೀವನವು ಉತ್ತಮವಾಗಿರಲಿದೆ. ಆದಾಯವು ನಿರಂತರವಾಗಿಹೆಚ್ಚಾಗಲಿದೆ ಇದರಿಂದಾಗಿ ನೀವು ಹಣಕಾಸು ಸಂಗ್ರಹಿಸುವಲ್ಲಿ ಕೂಡ ಯಶಸ್ವಿಯಾಗುವಿರಿ.ಈ ವಾಹನ ಅಥವಾ ಮನೆಯನ್ನು ಖರೀದಿಸಲು ನಿರ್ಧಾರ ತೆಗೆದುಕೊಳ್ಳಬಹುದು. ವ್ಯಾಪಾರವನ್ನುವಿಸ್ತರಿಸುವಲ್ಲಿ ಸಹ ನಿಮ್ಮ ಹಣವನ್ನು ಖರ್ಚಾಗಿಸಬಹುದು. ವಿದ್ಯಾರ್ಥಿಗಳಿಗೆ ಈ ತಿಂಗಳ ಆರಂಭದಲ್ಲಿ ಕೆಲವು ಒತ್ತಡಗಳನ್ನು ಉಂಟುಮಾಡಬಹುದು. ನಂತರ ಅನುಕೂಲತೆಉಂಟಾಗುವುದರಿಂದಾಗಿ ಖಂಡಿತವಾಗಿಯೂ ಅವರು ಯಶಸ್ಸು ಪಡೆಯುತ್ತಾರೆ. ನ್ಯಾಯಾಲಯದಲ್ಲಿ ಸಂಪತ್ತು ಅಥವಾ ಹಣಕಾಸಿಗೆ ಸಂಬಂಧಿಸಿದಯಾವುದೇ ವಿವಾದ ನಡೆಯುತ್ತಿದ್ದರೆ ಅದರ ನಿರ್ಧಾರವು ನಿಮ್ಮ ಪರವಾಗಿ ಬರುವಸಾದ್ಯತೆ ಇದೆ ನಿಮ್ಮ ಪೂರ್ವಜರ ಆಸ್ತಿಯ ಮಾರಾಟದಿಂದ ನೀವು ಲಾಭವನ್ವು ಗಳಿಸುವಿರಿ. ಪೋಷಕರ ಆರೋಗ್ಯವು ಸುಧಾರಿಸುತ್ತದೆ ಇದರಿಂದಾಗಿ ನೀವು ಹೆಚ್ಚಿನ ಮಟ್ಟಿಗೆ ಒತ್ತಡ ಮುಕ್ತರಾಗಿ ಸಂತಸ ಅನುಭವಿಸುವಿರಿ.
ಧನು
ನೀವು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ ಆಗ ಮಾತ್ರ ನೀವು ಅಪೇಕ್ಷಿತ ಫಲಿತಾಂಶಗಳನ್ನುಪಡೆಯಲು ಸಾಧ್ಯವಾಗುತ್ತದೆ.ಉದ್ಯೋಗವನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿರುವ ಜನರು ಬದಲಾವಣೆಯಲ್ಲಿ ಯಶಸ್ಸುಪಡೆಯುತ್ತಾರೆ. ಅಪೇಕ್ಷಿತ ವರ್ಗಾವಣೆಯನ್ನು ಪಡೆಯುವ ಸಾಧ್ಯತೆ ಇದೆ.ನಿಮ್ಮ ಈ ಉದ್ಯೋಗವು ನಿಮ್ಮ ಹಿಂದಿನ ಉದ್ಯೋಗಕ್ಕಿಂತ ಹೆಚ್ಚು ಉತ್ತಮವೆಂದು ಸಾಬೀತಾಗುತ್ತದೆ. ಇದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುತ್ತದೆ ನೀವು ವ್ಯಾಪಾರ ವ್ಯವಹಾರ ಮಾಡುತ್ತಿದ್ದರೆ ನಿಮ್ಮ ಕೆಲಸಗಳಿಗೆ ಅತ್ಯಂತ ಆದ್ಯತೆ ಕೊಡಬೇಕು. ಅನೇಕ ಹೊಸ ಹೂಡಿಕೆದಾರರು ಸಿಗುವರು. ತಾಯಿಯಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಉತ್ತಮ ವೈದ್ಯರ ಮೂಲಕ ಅವರಿಗೆ ಚಿಕಿತ್ಸೆ ನೀಡಿ.
ಮಕರ
ವಾಹನವನ್ನು ಚಲಾಯಿಸುವ ಸಮಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಆರೋಗ್ಯಕ್ಕೆ ಸಂಬಂದಿಸಿದಂತೆ ಅನೇಕ ಕಷ್ಟಗಳನ್ನು ನೀವು ಎದುರಿಸಬೇಕಾಗುತ್ತದೆ. ಕಾಲ ಕಾಲಕ್ಕೆ ಉತ್ತಮ ವೈದ್ಯರ ಸಲಹೆಯನ್ನು ತೆಗೆದುಕೊಳ್ಳಿ. ಮನೆಯಿಂದ ಹೊರಹೋಗುವಸಮಯದಲ್ಲಿ ಸರಿಯಾಗಿ ಆಹಾರವನ್ನು ಸೇವಿಸಿ. ಉದ್ಯೋಗಿಗಳಿಗೆ ಕೆಲಸಕ್ಕೆ ಸಂಬಂಧಿಸಿದಂತೆವಿದೇಶ ಪ್ರಯಾಣ ಅವಕಾಶ ಪಡೆಯುವಿರಿ. ವ್ಯಾಪಾರಸ್ಥರಿಗೆ ಉತ್ತಮ ಲಾಭದ ಅವಕಾಶ ಇದೆ. ಈ ಸಮಯದಲ್ಲಿ ನಿಮ್ಮ ವ್ಯಾಪಾರವು ಬೆಳೆಯುತ್ತದೆ ಇದಲ್ಲದೆ ಹೊಸ ಮೂಲಗಳಿಂದ ಹಣವನ್ನುಗಳಿಸಲು ಅವಕಾಶಗಳನ್ನುಪಡೆಯುತ್ತೀರಿ. ಸಮಾಜದಲ್ಲಿ ನಿಮ್ಮ ಗೌರವ ಮತ್ತು ಪ್ರತಿಷ್ಠೆ ಕೂಡ ಬೆಳೆಯುತ್ತದೆ. ಕುಟುಂಬದಲ್ಲಿ ಸಹೋದರ ಸಹೋದರಿಯರೊಂದಿಗಿನ ನಿಮ್ಮಸಂಬಂಧವು ಸುಧಾರಿಸುತ್ತದೆ.
ಕುಂಭ
ಕುಟುಂಬದ ಎಲ್ಲಾ ಸದಸ್ಯರಲ್ಲಿ ಸಹೋದರತ್ವ ಮತ್ತು ಒಗ್ಗಟ್ಟು ಹೆಚ್ವಾಗುತ್ತದೆ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸುವಿರಿ. ಮನೆಯ ದುರಸ್ತಿ ಕಾರ್ಯವನ್ನು ನಡೆಸುವ ನಿರ್ಧಾರವನ್ನುತೆಗೆದುಕೊಳ್ಳುವಿರಿ. ಮನೆಯ ವಾತಾವರಣವು ಸಂತೋಷದಿಂದ ತುಂಬಿರುತ್ತದೆ ಕುಟುಂಬದಲ್ಲಿಯಾರಾದರೂ ಮದುವೆಗೆ ಅರ್ಹರಾಗಿದ್ದರೆ ಶುಭಸುದ್ದಿ ಲಭಿಸಿತು. ತಂದೆ ತಾಯಿಯಜೊತೆ ತೀರ್ಥಯಾತ್ರೆ ಕ್ಷೇತ್ರದರ್ಶನ ಮಾಡುವಿರೀ . ತಂದೆ ನಿಮ್ಮನ್ನು ಬೆಂಬಲಿಸುತ್ತಾರೆ. ಅವರ ಆರೋಗ್ಯವು ಸುಧಾರಿಸುತ್ತದೆ. ನಿಮಗೆ ಜ್ವರಕೆಮ್ಮು ಅಥವಾ ಶೀತದಂತಹ ಸಣ್ಣ ಸಮಸ್ಯೆ ಬಾದಿಸುತ್ತದೆ ಆದರೆ ಇದು ನಿಮ್ಮ ಕೆಲಸದ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ. ಕೆಲಸದ ಸ್ಮಳದಲ್ಲಿ ನೀವು ಸಂಪೂರ್ಣ ಯಶಸ್ಸುಪಡೆಯುವಿರಿ ನಿಮ್ಮಸಹೋದ್ಯೋಗಿಗಳು ಮತ್ತು ನಿಮ್ಮ ಹಿರಿಯ ಅಧಿಕಾರಿಗಳು ನಿಮಗೆ ಸಂಪೂರ್ಣ ಬೆಂಬಲ ನೀಡುತ್ತಾರೆ.
ಮೀನ
ನೀವು ಮನೆಗೆ ಅನುಗುಣವಾಗಿ ಖರ್ಚು ವೆಚ್ಚ ಮಾಡುವಿರಿ. ಇದರಿಂದ ಮನೆಯ ಸದಸ್ಯರ ನಡುವೆ ನಿಮ್ಮ ಗೌರವವು ಹೆಚ್ಚಾಗುತ್ತದೆ. ಈ ಸಮಯದಲ್ಲಿ ಮನೆಗೆ ಅತಿಥಿಗಳ ಆಗಮನದ ಸಾದ್ಯತೆಯೂ ಇದೆ. ಜೊತೆಜೊತೆಗೆ ಕುಟುಂಬಕ್ಕೆ ಸಂಬಂಧಿಸಿದ ಯಾವುದೋ ವಿಷಯದ ಕಾರಣದಿಂದಾಗಿ ನಿಮಗೆ ಮಾನಸಿಕ ಒತ್ತಡವಾಗುವಸಾಧ್ಯತೆಯೂ ಇದೆ. ನಿಮ್ಮ ಸ್ನೇಹಿತಮತ್ತು ಸಹೋದರ ಸಹೋದರಿಯರು ನಿಮಗೆ ಸಹಕರಿಸುವರು ಮತ್ತು ಎಲ್ಲಾ ಪರಿಸ್ಥಿತಿಯಲ್ಲೂ ನಿಮ್ಮೊಂದಿಗೆ ನಿಂತಿರುತ್ತಾರೆ. ನಿಮ್ಮ ಸಹೋದ್ಯೋಗಿಗಳ ಸಹಾಯದಿಂದ ಅನೇಕ ಅವಕಾಶಗಳನ್ನು ಪಡೆಯುತ್ತೀರಿ. ಇದರಿಂದ ನಿಮಗೆಉತ್ತವು ಲಾಭವಾಗುತ್ತದೆ.ಹಿರಿಯ ಅಧಿಕಾರಿಗಳು ನಿಮ್ಮ ಬಡ್ತಿಯ ಬಗ್ಗೆ ಆಲೋಚಿಸಬಹುದು ವ್ಯಾಪಾರಿಗಳಿಗೆ ವಿದ್ಯಾರ್ಥಿಗಳಿಗೆ ಯಶಸ್ಸು.