ADVERTISEMENT

ಮಾಸ ಭವಿಷ್ಯ | ಮೇ 2025: ಈ ರಾಶಿಯವರಿಂದ ಸಂಗಾತಿಗೆ ಉಡುಗೊರೆ ದೊರಯಲಿದೆ

ಅರುಣ ಪಿ.ಭಟ್ಟ
Published 30 ಏಪ್ರಿಲ್ 2025, 22:30 IST
Last Updated 30 ಏಪ್ರಿಲ್ 2025, 22:30 IST
   
ಮೇಷ
  • ಆಕಸ್ಮಿಕ ಧನಲಾಭ. ಕಲಾವಿದರಿಗೆ ಸಾಹಿತಿಗಳಿಗೆ ಸನ್ಮಾನ ಯೋಗ. ಅರ್ಧದಲ್ಲಿ ನಿಂತ ಕಟ್ಟಡ ಮನೆ ನಿರ್ಮಾಣ ಕಾರ್ಯಗಳಿದ್ದರೆ ಪೂರ್ಣಗೊಳ್ಳುವುದು. ಚಿಕ್ಕ ಪ್ರವಾಸ. ಆರ್ಥಿಕ ಅನುಕೂಲತೆ. ಉದ್ಯೋಗ ವ್ಯವಹಾರಗಳಲ್ಲಿ ಉತ್ತಮ ಲಾಭ. ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ ಹೊಸ ಸ್ನೇಹಿತರು ದೊರೆಯುವರು. ಒಟ್ಟಾರೆಯಾಗಿ ಸಂತಸದ ವಾತಾವರಣ ಇರುತ್ತದೆ.
  • ವೃಷಭ
  • ಮನೆಯಲ್ಲಿ ವಿವಾದಗಳು. ಬಂಧುಗಳಿಂದ ಕಿರಿಕಿರಿ. ಅನಾವಶ್ಯಕ ಖರ್ಚು. ಉನ್ನತ ಶಿಕ್ಷಣ ಮಾಡುತ್ತಿರುವವರಿಗೆ ಉತ್ತಮ ಪ್ರಗತಿ ಇದೆ. ತಿಂಗಳ ಅಂತ್ಯಕ್ಕೆ ಸರಿಯುತ್ತಾ ಆದಾಯದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ವ್ಯಾಪಾರಸ್ಥರಿಗೆ ವ್ಯಾಪಾರ ವ್ಯವಹಾರದಲ್ಲಿ ಚೆನ್ನಾಗಿ ಲಾಭವಾಗುತ್ತದೆ. ಮಂಗಲ ಕಾರ್ಯದಲ್ಲಿ ಭಾಗಿಯಾಗುವಿರಿ.
  • ಮಿಥುನ
  • ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು. ಸ್ವತಂತ್ರ ಉದ್ಯೋಗದಲ್ಲಿ ಉತ್ತಮ ಲಾಭ. ಮನೆಯ ಹಿರಿಯರ ಪ್ರೀತಿ ಆಶೀರ್ವಾದ ಲಭಿಸುವುದು. ಆಸ್ತಿ ಖರೀದಿ ಬಗ್ಗೆ ಚಿಂತನೆ ಕಲಾವಿದರಿಗೆ ಸಾಹಿತಿಗಳಿಗೆ ಉತ್ತಮ. ಸಂಘ ಸಂಸ್ಥೆಗಳಿಂದ ಧನಲಾಭ. ಶತ್ರುಗಳು ಹಿಂದೆ ಸರಿಯುವರು. ವೃತ್ತಿ ವ್ಯವಹಾರದಲ್ಲಿ ಲಾಭ ವ್ಯಾವಹಾರಿಕ ಅನುಕೂಲತೆ. ಸರ್ಕಾರಿ ಕೆಲಸ ಶೀಘ್ರ ಆಗುವುದು.
  • ಕರ್ಕಾಟಕ
  • ಪಾಲುದಾರಿಕೆ ಉದ್ಯೋಗದಲ್ಲಿ ತೊಂದರೆ ಭಿನ್ನಾಭಿಪ್ರಾಯ ತಲೆದೊರಬಹುದು. ವಿಚಿತ್ರ ಆರ್ಥಿಕ ಮುಗ್ಗಟ್ಟಿನ ತಿಂಗಳು ಇದು. ಸ್ವತಂತ್ರ ವೃತ್ತಿಪರರಿಗೆ ಉತ್ತಮ ಲಾಭ. ಸರ್ಕಾರಿ ಉದ್ಯೋಗಿಗಳಿಗೆ ಅನಿರೀಕ್ಷಿತ ವರ್ಗಾವಣೆ. ವಿದ್ಯಾರ್ಥಿಗಳಿಗೆ ಶುಭ. ತಿಂಗಳಾಂತ್ಯದಲ್ಲಿ ಮನೆಯಲ್ಲಿ ಮಂಗಳ ಕಾರ್ಯದಿಂದ ಮನಸ್ಸಿಗೆ ನೆಮ್ಮದಿ. ಸೋದರರಿಂದ ಶುಭಸುದ್ದಿ.
  • ಸಿಂಹ
  • ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ಪ್ರಗತಿ. ನಿಮ್ಮ ಆರೋಗ್ಯವು ಉತ್ತಮವಾಗಿ ಇರುತ್ತದೆ. ಹೆಚ್ಚು ಉತ್ಸಾಹ ಹಾಗೂ ಸಂತೋಷದಿಂದ ಕಾಣಿಸಿಕೊಳ್ಳುತ್ತೀರಿ. ತಿಂಗಳಾಂತ್ಯದಲ್ಲಿ ವ್ಯಾಪಾರ ವ್ಯವಹಾರ ಲಾಭದಾಯಕವಾಗಿ ಇರುತ್ತದೆ. ನಿಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಕಾಣಿಸುತ್ತದೆ. ನಿಮ್ಮ ಸಂಗಾತಿಗೆ ಕೆಲವು ಉಡುಗೊರೆಗಳನ್ನು ನೀಡುವ ಸಾಧ್ಯತೆ ಇದೆ.
  • ಕನ್ಯಾ
  • ಯುವ ಜನರಿಗೆ ಉತ್ತಮ ಸಮಯ. ಹೊಸ ಯೋಜನೆಯನ್ನು ರೂಪಿಸಿದ್ದರೆ ಸಾಕಾರಗೊಳ್ಳುತ್ತದೆ. ಆರ್ಥಿಕ ವ್ಯವಹಾರಗಳನ್ನು ಎಚ್ಚರಿಕೆಯಿಂದ ಮಾಡಿ. ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ನಿಮಗೂ ಕೆಮ್ಮು ನೆಗಡಿಯಂಥ ಅನಾರೋಗ್ಯ ಸಮಸ್ಯೆಗಳು ಕಾಡಬಹುದು. ತಿಂಗಳ ಮೊದಲಾರ್ಧದ ನಂತರ ಆರ್ಥಿಕವಾಗಿ ಬಲ ಬರುತ್ತದೆ. ಬಾಕಿ ಹಣ ಬರಬೇಕಾಗಿದ್ದಲ್ಲಿ ಬರುವ ಅವಕಾಶ ಹೆಚ್ಚಿರುತ್ತದೆ.
  • ತುಲಾ
  • ವ್ಯಾಪಾರ ವ್ಯವಹಾರಸ್ಥರಿಗೆ ಉತ್ತಮ ಲಾಭ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವ ಸಾಧ್ಯತೆ. ಸಂತತಿ ಇಲ್ಲದವರಿಗೆ ಸಂತತಿಯ ಸೂಚನೆ. ವಿವಾಹಾಪೇಕ್ಷಿಗಳಿಗೆ ಸಂಗಾತಿ ಲಭ್ಯ. ಕುಟುಂಬ ಸೌಖ್ಯ. ಮನೆಗೆ ಹೊಸ ಪೀಠೋಪಕರಣ ಅಲಂಕಾರಿಕ ವಸ್ತು ಖರೀದಿ ಸಾಧ್ಯತೆ. ಒಟ್ಟಾರೆಯಾಗಿ ಶುಭ.
  • ವೃಶ್ಚಿಕ
  • ಈಗ ಮಾಡುತ್ತಿರುವುದಕ್ಕಿಂತ ಉತ್ತಮವಾಗಿ ಕೆಲಸ ಮಾಡಲು ಪ್ರಯತ್ನಿಸುತ್ತೀರಿ. ಹಲವು ಸವಾಲುಗಳು ಏಕಕಾಲಕ್ಕೆ ಎದುರಾಗುತ್ತದೆ. ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳಬೇಕಾಗುತ್ತದೆ. ತಿಂಗಳ ಮಧ್ಯಭಾಗದಲ್ಲಿ ವ್ಯಾಪಾರ ಉದ್ಯಮ ವಿಸ್ತರಣೆಗೆ ಹೆಚ್ಚಿನ ಅವಕಾಶಗಳು ದೊರೆಯಲಿವೆ. ಹಣಕಾಸಿನ ವೆಚ್ಚ ಹೆಚ್ಚಾಗಲಿದೆ.
  • ಧನು
  • ವ್ಯಾಪಾರ ಉದ್ಯಮ ನಡೆಸುತ್ತಿರುವವರು ಈಗ ನೀಡುತ್ತಿರುವ ಸೇವೆಗಳ ಜತೆಗೆ ಇನ್ನಷ್ಟು ಸೇರ್ಪಡೆ ಮಾಡಲಿದ್ದೀರಿ. ಬಿಡುವಿಲ್ಲದ ಉದ್ಯೋಗದ ಮಧ್ಯೆಯೂ ಕುಟುಂಬ ಜೀವನಕ್ಕೆ ಹೆಚ್ಚಿನ ಸಮಯವನ್ನು ಇಡಬೇಕಾಗುತ್ತದೆ. ತಿಂಗಳ ಮಧ್ಯ ಭಾಗದಲ್ಲಿ ವ್ಯಾಪಾರ, ವೈಯಕ್ತಿಕ ವಿಚಾರಗಳಲ್ಲಿ ಸವಾಲುಗಳು ಎದುರಾಗುತ್ತವೆ. ಇದರಿಂದ ವೈಯಕ್ತಿಕವಾಗಿ ಚಿಂತೆ ಎದುರಾಗುತ್ತದೆ. ನೆಗಡಿ, ಕೆಮ್ಮು, ತಲೆ ನೋವು ಕಾಡಬಹುದು.
  • ಮಕರ
  • ಮನೆಗೆ ಹಳೆಯ ಮಿತ್ರರ ಆಗಮನ. ಆದಾಯಕ್ಕೆ ಸಂಬಂಧಿಸಿದ ಮೂಲಗಳಿಂದ ಉತ್ತಮ ಲಾಭ ಪಡೆಯುವ ಅವಕಾಶ ಇದೆ. ಇದರಿಂದ ಹೆಚ್ಚು ಉತ್ಸಾಹಭರಿತರಾಗಿ, ಉಲ್ಲಸಿತರಾಗಿ ಕಾಣಿಸಿಕೊಳ್ಳಲಿದ್ದೀರಿ. ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಯಶಸ್ಸು ಪಡೆಯುವ ಅವಕಾಶಗಳು ದೊರೆಯಲಿವೆ. ನಿಮ್ಮ ಮಗ ಅಥವಾ ಮಗಳ ಮದುವೆಯ ವಿಚಾರವನ್ನು ಅಂತಿಮಗೊಳಿಸುವಿರಿ. ಕಾಲು ನೋವಿನ ಸಮಸ್ಯೆ ಕಾಡಬಹುದು.
  • ಕುಂಭ
  • ಹೊಸ ಉತ್ಸಾಹದಿಂದ ಪುಟಿಯಲಿದ್ದೀರಿ. ಪಾರ್ಟನರ್ಶಿಪ್ ವ್ಯವಹಾರಗಳನ್ನು ಮಾಡುತ್ತಿರುವವರಿಗೆ ಹೊಸ ಅವಕಾಶಗಳು ದೊರೆಯಲಿವೆ. ಕೆಲವು ಅನಿರೀಕ್ಷಿತ ಖರ್ಚುಗಳಿಗಾಗಿ ಹಣ ಮೀಸಲಿಡಲು ಆಲೋಚನೆ ಮಾಡುತ್ತೀರಿ. ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಏರುಪೇರುಗಳಾಗಬಹುದು. ಪಿತ್ರಾರ್ಜಿತ ಆಸ್ತಿ ಹಂಚಿಕೆ ವಿಚಾರದಲ್ಲಿ ಸೋದರ ಸೋದರಿಯರ ಜತೆ ಸಂಘರ್ಷ ಏರ್ಪಡಬಹುದು.
  • ಮೀನ
  • ನೀವು ಹಾಕಿದ ಶ್ರಮಕ್ಕೆ ಅತ್ಯುತ್ತಮ ಫಲಿತಾಂಶ ದೊರೆಯಲು ಆರಂಭ ಆಗುತ್ತದೆ. ಉದ್ಯಮಿಗಳು ವ್ಯಾಪಾರಿಗಳು ಬೇಡಿಕೆಗೆ ತಕ್ಕಂತೆ ಪೂರೈಕೆ ಒದಗಿಸಲು ಸಿದ್ಧತೆ ಮಾಡಿಕೊಳ್ಳುತ್ತೀರಿ. ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ಹಣಕಾಸಿನ ಹರಿವು ಹೆಚ್ಚಳವಾಗಲಿದೆ. ಸಂಬಂಧಗಳು ಸುಮಧುರವಾಗಿರುತ್ತವೆ. ಆರೋಗ್ಯದಲ್ಲಿ ಸ್ವಲ್ಪ ಸಮಸ್ಯೆಯಾಗಿ ಚಿಕಿತ್ಸೆ ಪಡೆಯಬೇಕಾಗುತ್ತದೆ. ವೈಯಕ್ತಿಕ ಸಂಬಂಧದಲ್ಲಿ ಸಂಗಾತಿ ಜತೆಗೆ ಸಿಟ್ಟಾಗಲಿದ್ದೀರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.