ದಿನ ಭವಿಷ್ಯ: ಮೇ 10 ಶನಿವಾರ 2025– ಪ್ರೇಮಿಗಳ ಪಾಲಿಗೆ ಈ ದಿನ ಅತ್ಯುತ್ತಮ
ದಿನ ಭವಿಷ್ಯ: ಮೇ 10 ಶನಿವಾರ 2025
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 9 ಮೇ 2025, 20:18 IST
Last Updated 9 ಮೇ 2025, 20:18 IST
ದಿನ ಭವಿಷ್ಯ
ಮೇಷ
ಪ್ರೇಮಿಗಳ ಪಾಲಿಗೆ ಈ ದಿನ ಅತ್ಯುತ್ತಮ. ಸಕಾರಾತ್ಮಕವಾದ ಒಳ್ಳೆಯ ಕನಸುಗಳಿಗೆ ಪುನಃ ಜೀವ ಬಂದಂತೆ ಆಗಲಿದೆ. ದಿನಸಿ ವರ್ತಕರಿಗೆ ವ್ಯಾಪಾರ ಇರಲಿದೆ. ಜಗದ್ಗುರುವಿನ ಸೇವೆಯಿಂದ ಪುಣ್ಯ ಪ್ರಾಪ್ತಿ .
ವೃಷಭ
ಕೆಲಸ ಕಾರ್ಯದಲ್ಲಿ ಸಮಾನ ಮನಸ್ಕರರು ಸಿಗುವುದರಿಂದ ವ್ಯವಸ್ಥಿತವಾಗಿ ಮಾತುಕತೆ ನಡೆದು ಕಾರ್ಯಭಾರ ಸುಗಮ. ದೇವತಾ ಕಾರ್ಯಗಳತ್ತ ಗಮನ ನೀಡಿ. ಬಂಧುಗಳ ಆಗಮನ ಸಂತೋಷವನ್ನು ಉಂಟುಮಾಡುತ್ತದೆ.
ಮಿಥುನ
ವೃತ್ತಿ ರಂಗದಲ್ಲಿ ನಾನಾ ಮೂಲಗಳಿಂದ ಆದಾಯ ಬರಲಿದೆ. ಸ್ನೇಹಿತರ ಅನಿವಾರ್ಯ ಸಂಧರ್ಭಗಳಿಗೆ ಉದಾರ ಮನೋಭಾವ ತೋರುವಿರಿ. ಚಲನಚಿತ್ರ, ಧಾರವಾಹಿಯ ನಟಿಯರಿಗೆ ಅವಕಾಶಗಳು ದೊರೆಯಲಿವೆ.
ಕರ್ಕಾಟಕ
ವಿದ್ಯಾರ್ಥಿಗಳಿಗೆ ಶುಭಸಮಯ. ವ್ಯಾಪಾರಕ್ಕೆ ಎದುರಾದ ಎಲ್ಲಾ ಬಗೆಯ ಸಮಸ್ಯೆಗಳಿಂದ ಮುಕ್ತಗೊಳ್ಳುವ ಬಗ್ಗೆ ಅಧಿಕಾರಿಗಳಿಂದ ಸಲಹೆ ಸ್ವೀಕರಿಸಿ. ಶ್ರೀನಿವಾಸ ದೇವರ ದರ್ಶನ ಭಾಗ್ಯ ದೊರೆಯುವುದು.
ಸಿಂಹ
ಸಂಸಾರದ ಹುಳುಕನ್ನು ಹೊರಹೋಗದಂತೆ ಕಾಪಾಡಿಕೊಳ್ಳುವುದರಿಂದ ಗೌರವ ಉಳಿಸಿಕೊಳ್ಳಬಹುದು. ವಾಹನ ಮಾರಾಟ ಮಾಡುವವರಿಗೆ ಆದಾಯ ಬರಲಿದೆ. ರಫ್ತು ಮಾರಾಟದಿಂದ ಲಾಭವಿರುವುದು.
ಕನ್ಯಾ
ಸರ್ಕಾರಿ ಕೆಲಸದಲ್ಲಿ ಬಡ್ತಿ ದೊರೆತು ವರ್ಗಾವಣೆಯಾಗುವ ಸುದ್ದಿ ಖಚಿತಪಡಿಸಿಕೊಳ್ಳುವಿರಿ. ಎಲ್ಲಾ ಕೆಲಸಗಳಲ್ಲಿಯೂ ವೈಯಕ್ತಿಕ ಪ್ರಯತ್ನದಿಂದ ಕಾರ್ಯಗಳು ಸಿದ್ಧಿಸುವುದು. ಮರೆಗುಳಿತನ ಕಾಡಲಿದೆ.
ತುಲಾ
ಕೃಷಿಕರಿಗೆ ಉತ್ತಮ ಫಸಲು ದೊರಕುವ ಲಕ್ಷಣಗಳಿದ್ದು, ಮನಸ್ಸಿಗೆ ಹರ್ಷವಿರುವುದು. ಸಣ್ಣ ಕೈಗಾರಿಕೋದ್ಯಮಿಗಳಿಗೆ ಸರ್ಕಾರದಿಂದ ಸಹಾಯ ದೊರಕಲಿದೆ. ವ್ಯವಹಾರದ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ಯೋಚಿಸಿ.
ವೃಶ್ಚಿಕ
ಕೃಷಿಕರು ಪ್ರಯತ್ನಿಸಿದ ಹೊಸ ಕೆಲಸವು ಯಶಸ್ಸನ್ನು ಕೊಡುವುದು. ವಿದ್ಯುತ್‌ಚಾಲಿತ ಯಂತ್ರೋಪಕರಣಗಳ ಮಾರಾಟದ ಮಧ್ಯಸ್ಥಿಕೆಯಲಿ ಸ್ನೇಹಿತರ ಸಹಕಾರಗಳು ದೊರೆತು ಅಧಿಕ ಲಾಭ ಹೊಂದುವಿರಿ.
ಧನು
ಕುಶಾಗ್ರಮತಿಗಳ ಸಂಪರ್ಕದಿಂದ ಪ್ರಗತಿಪರ ಯೋಜನೆ ಇರುವುದು. ವಿದೇಶಿ ಉತ್ಪನ್ನಗಳ ಮಾರಾಟ ನಡೆಸುವವರಿಗೆ ವ್ಯವಹಾರದಲ್ಲಿ ಸಂಕಷ್ಟ ಎದುರಾಗಬಹುದು. ಋಣಬಾಧೆಯಿಂದ ಹೊರಬರುವ ಯೋಚನೆ ಮಾಡಿರಿ.
ಮಕರ
ಮದುವೆಯ ವಿಚಾರದಲ್ಲಿ ಮಗಳಿಗೆ ತಿಳಿವಳಿಕೆ ನೀಡಬೇಕಾಗಬಹುದು. ಉದ್ವೇಗಕ್ಕೆ ಒಳಗಾಗದೇ ಸಮಾಧಾನಚಿತ್ತದಿಂದ ಉದಾಹರಣೆ ಕೊಟ್ಟು ಮನಮುಟ್ಟುವಂತೆ ತಿಳಿಹೇಳಿ. ಯೋಗಾಭ್ಯಾಸದಿಂದ ಆರೋಗ್ಯ ವೃದ್ಧಿ.
ಕುಂಭ
ನಿರುದ್ಯೋಗಿಗಳು ಕೇಂದ್ರ ಸರ್ಕಾರದ ಹುದ್ದೆಯ ನೇಮಕಾತಿಯ ಬಗ್ಗೆ ಮಾಹಿತಿ ಕಲೆಹಾಕಿ ಪ್ರಯತ್ನಿಸಿ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಭ್ಯಾಸ ದಲ್ಲಿ ಗಮನವಿರಲಿ. ಲೆಕ್ಕ ಪರಿಶೀಲನೆ ಮಾಡಿ.
ಮೀನ
ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ಹೆಸರು ಗಳಿಸಿಕೊಳ್ಳುವಿರಿ. ನೂತನ ದಂಪತಿಗೆ ಸಂತಾನ ಭಾಗ್ಯವಿರುವುದು. ಉದ್ಯೋಗ ಬದಲಾವಣೆಯ ವಿಚಾರವಾಗಿ ಮಾರ್ಗದರ್ಶಕರ ನುಡಿಯಂತೆ ನಡೆಯಿರಿ.