ADVERTISEMENT

ದಿನ ಭವಿಷ್ಯ: ಜುಲೈ 13 ಗುರುವಾರ 2023– ಈ ರಾಶಿಯವರಿಗೆ ಭಿನ್ನಾಭಿಪ್ರಾಯಗಳು ದೂರಾಗುವವು

ದಿನ ಭವಿಷ್ಯ: ಜುಲೈ 13 ಗುರುವಾರ 2023

ಪ್ರಜಾವಾಣಿ ವಿಶೇಷ
Published 12 ಜುಲೈ 2023, 18:35 IST
Last Updated 12 ಜುಲೈ 2023, 18:35 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ಪ್ರತಿಭೆಗೆ ಅನುಗುಣವಾದ ಉದ್ಯೋಗ ಅವಕಾಶ ದೊರೆತು ಸಂತಸವಾಗಲಿದೆ. ಸಂಜೆಯ ಸಮಯದಲ್ಲಿ ಸಣ್ಣ ವಿಹಾರಕ್ಕೆ ತೆರಳುವಂತೆ ಆಗುವುದು. ಮನೆಯಲ್ಲಿ ಶುಭ ಕಾರ್ಯಗಳ ತಯಾರಿ ಉತ್ತಮ ರೀತಿಯಲ್ಲಿ ನಡೆಯುವುದು.
  • ವೃಷಭ
  • ಇಂದು ನಿಮ್ಮ ಅದೃಷ್ಟವು ಚೆನ್ನಾಗಿರುವ ಕಾರಣ ಬಂದ ಅವಕಾಶಗಳನ್ನು ಸದುಪಯೋಗಿಸಿಕೊಂಡಲ್ಲಿ ವ್ಯಾಪಾರ ವ್ಯವಹಾರದಲ್ಲಿ ಅಧಿಕ ಲಾಭ ಕಾಣಬಹುದು. ಉದ್ಯೋಗಸ್ಥರಿಗೆ ಬಡ್ತಿ ದೊರೆತು ಉತ್ತಮ ಫಲ ದೊರೆಯಲಿದೆ.
  • ಮಿಥುನ
  • ಹಿರಿಯರನ್ನು ತೀರ್ಥಯಾತ್ರೆಗೆ ಕಳುಹಿಸುವ ಬಗ್ಗೆ ತೀರ್ಮಾನವನ್ನು ತೆಗೆದುಕೊಳ್ಳಿ. ಕಾಗದದ ಉದ್ಯಮದವರಿಗೆ ಅಧಿಕ ಲಾಭ ಇರುವುದು. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಗಮನವಹಿಸುವುದರಿಂದ ಯಶಸ್ಸು.
  • ಕರ್ಕಾಟಕ
  • ಸ್ನೇಹಿತರ ಹಾಗೂ ಬಂಧುಗಳ ಸಹಕಾರದಿಂದ ವ್ಯಾಪಾರ ವಹಿವಾಟುಗಳ ಆದಾಯದಲ್ಲಿ ಗಣನೀಯ ಏರಿಕೆ ಕಾಣಲಿರುವಿರಿ. ಆರೋಗ್ಯದಲ್ಲಿ ಸುಧಾರಣೆ ಕಂಡು ಬರುವುದು. ಭಿನ್ನಾಭಿಪ್ರಾಯಗಳು ದೂರಾಗುವವು.
  • ಸಿಂಹ
  • ಖಾಸಗೀ ಸಂಸ್ಥೆಯಿಂದ ಅಥವಾ ಒಬ್ಬ ವ್ಯಕ್ತಿಯಿಂದ ಸಾಲದ ರೂಪದಲ್ಲಿ ಹಣ ಪಡೆದುಕೊಂಡು ಸ್ವಂತ ಉದ್ಯಮವನ್ನು ಆರಂಭಿಸುವ ಸಂಭವವಿದೆ. ಈ ಬಾರಿ ಅವಕಾಶವನ್ನು ಸದುಪಯೋಗಿಸಿಕೊಳ್ಳಿ. ಕೆಂಪು ಶುಭ ತರುವುದು.
  • ಕನ್ಯಾ
  • ನಿರುದ್ಯೋಗಿಗಳಿಗೆ ಜೀವನ ನಿರ್ವಹಿಸಲು ಸಾಕಾಗುವಂತಹ ವರಮಾನವಿರುವ ಸಣ್ಣಮಟ್ಟದ ಕೆಲಸ ದೊರೆತು ಸಂತಸವಾಗಲಿದೆ. ಹೊಸ ಏಜೆನ್ಸಿಯೊಂದನ್ನು ಪ್ರಾರಂಭಿಸುವವರಿಗೆ ಸಕಾಲ. ವಾಹನಗಳಿಂದ ಆದಾಯವನ್ನು ನಿರೀಕ್ಷಿಸಬಹುದು.
  • ತುಲಾ
  • ಆದಾಯ ಅಧಿಕವಾಗಿಯೇ ಇದ್ದರೂ ಸಹ ನಿಮ್ಮ ಖರ್ಚಿಗೆ ಬೇಕಾದಂತಹಾ ಒಂದು ಸಂದರ್ಭದಲ್ಲಿ ಅದು ಕೈಗೆ ಎಟುಕದೇ ಇರುವಂತಹಾ ಪರಿಸ್ಥಿತಿ ಉಂಟಾಗುತ್ತದೆ. ಉತ್ತಮ ಕಾರ್ಯಗಳಿಗೆ ಎಂದಿನAತೆಯೇ ಶ್ಲಾಘನೆ ಸಿಗುತ್ತದೆ.
  • ವೃಶ್ಚಿಕ
  • ಅನಾರೋಗ್ಯ ಅಥವಾ ಇನ್ನಿತರ ಕಾರಣಗಳಿಂದಾಗಿ ಏರುಪೇರಾಗಿದ್ದ ಮಕ್ಕಳ ವೇಳಾಪಟ್ಟಿಯು ನಿಧಾನವಾಗಿ ಸರಿಯಾಗುತ್ತದೆ. ಜಾನುವಾರುಗಳು ಮಾಡಿದ ತಪ್ಪಿಗೆ ಅವುಗಳನ್ನು ದಂಡಿಸುವುದನ್ನು ಮಾಡದಿರಿ.
  • ಧನು
  • ನಿಮ್ಮ ಶಕ್ತಿಗೂ ಮೀರಿ ನೀವು ಮಾಡಿದ ಕೆಲಸಗಳಿಂದಾಗಿ ದೈಹಿಕ ಆಯಾಸ ಉಂಟಾಗಬಹುದು. ಸುಖಕರವಾಗಿರುವ ದಾಂಪತ್ಯದಲ್ಲಿ ಬೇರೆಯವರ ಹುಳಿ ಮಾತಿಗೆ ಆಸ್ಪದ ಕೊಟ್ಟು ಮೋಸ ಹೋಗುವುದು ಬೇಡ.
  • ಮಕರ
  • ತಾಂತ್ರಿಕ ವಿದ್ಯೆಯಲ್ಲಿ ಯಶಸ್ಸನ್ನು ಹೊಂದುವ ಎಲ್ಲಾ ಲಕ್ಷಣಗಳೂ ಕಂಡರೂ ವಿದ್ಯಾಭ್ಯಾಸಕ್ಕೆ ತೊಂದರೆಯಾಗುವ ಪರಿಸ್ಥಿತಿ ಎದುರಾಗಬಹುದು. ವೀರಾಂಜನೇಯನಿಗೆ ಜೇನುತುಪ್ಪ ಅಭಿಷೇಕದಿಂದ ವ್ಯಾಧಿಗಳು ದೂರವಾಗುತ್ತದೆ.
  • ಕುಂಭ
  • ಬಂಧುಗಳ ಮನೆಯ ಶುಭಕಾರ್ಯಗಳಲ್ಲಿ ಹೆಚ್ಚಿನ ಜವಾಬ್ದಾರಿ ಮತ್ತು ಓಡಾಟವಿರುವುದು. ಉನ್ನತ ಓದಿನೆಡೆಗೆ ಹೆಚ್ಚಿನ ಗಮನ ನೀಡಬೇಕಾಗುವುದು. ಆಹಾರ ಸೇವನೆಯ ವಿಷಯದಲ್ಲಿ ಆದಷ್ಟು ಜಾಗ್ರತರಾಗಿರಿ.
  • ಮೀನ
  • ಸಂತೋಷದ ಸುದ್ದಿಯನ್ನು ಮಾತ್ರ ತಿಳಿಸಿ ದುಃಖದ ವಿಷಯವನ್ನು ತಿಳಿಸದಿರುವುದು ನಿಮ್ಮ ಪ್ರವೃತ್ತಿಗೆ ಸರಿ ಎನ್ನಿಸುವುದಿಲ್ಲ. ಮುತ್ತು ರತ್ನದ ವ್ಯಾಪರಿಗಳಿಗೆ ಉತ್ತಮ ವ್ಯಾಪಾರ. ಕಫದಿಂದ ತೊಂದರೆಯಗಬಹುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.