ADVERTISEMENT

ದಿನ ಭವಿಷ್ಯ: ಸೆಪ್ಟೆಂಬರ್ 18 ಸೋಮವಾರ 2023– ಈ ರಾಶಿಯವರಿಗೆ ತೃಪ್ತಿಕರ ಲಾಭ

ದಿನ ಭವಿಷ್ಯ: ಸೆಪ್ಟೆಂಬರ್ 18 ಸೋಮವಾರ 2023

ಪ್ರಜಾವಾಣಿ ವಿಶೇಷ
Published 17 ಸೆಪ್ಟೆಂಬರ್ 2023, 18:56 IST
Last Updated 17 ಸೆಪ್ಟೆಂಬರ್ 2023, 18:56 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ನಿಮ್ಮ ಯೋಜನೆಗಳಿಗೆ ಸ್ತ್ರೀ ವರ್ಗದಿಂದ ಮಹತ್ವದ ಸಹಾಯ ಪ್ರಾಪ್ತವಾಗಲಿದೆ. ಒಂದು ವಿಚಾರದ ಬಗೆಗಿನ ಯೋಚನೆಯಿಂದಾಗಿ ಉಳಿದೆಲ್ಲಾ ಕೆಲಸದಲ್ಲಿ ಮನಸ್ಸಿಲ್ಲದಂತಾಗುವುದು. ರಾಜಕೀಯ ರಂಗದಲ್ಲಿ ಜನಪ್ರಿಯತೆ ಬರುವುದು.
  • ವೃಷಭ
  • ಗ್ರಹಗಳ ಚಲನೆಯು ತಿರುಗಾಟವನ್ನು ಮಾಡಿಸುವುದರಿಂದ ಆರೋಗ್ಯದ ಬಗ್ಗೆ ಗಮನಹರಿಸುವುದು ಅನಿವಾರ್ಯ. ಸಹೋದರ ಸಮಾನ, ತಂದೆ-ತಾಯಿಯಿಂದ ಹಿತವಚನ ಕೇಳ ಬೇಕಾಗುವುದು.
  • ಮಿಥುನ
  • ನಿಮ್ಮ ಜೀವನದ ಅಭಿವೃದ್ಧಿಗೆ ಬೇಕಾದ ಕಾರ್ಯಗಳು ನಿರಂತರವಾಗಿ ಮುಂದುವರಿಯಲಿದೆ. ಶ್ರೀ ವಿಷ್ಣು ಸಹಸ್ರನಾಮವನ್ನು ಪಠಿಸಿ ಹೆಚ್ಚಿನ ಅಭಿವೃದ್ಧಿ ಹೊಂದಬಹುದು. ರಾಜಕೀಯ ನಡೆಯಲ್ಲಿ ಉತ್ತಮ ಭವಿಷ್ಯವಿದೆ.
  • ಕರ್ಕಾಟಕ
  • ಕೆಲಸ ಹುಡುಕುತ್ತಿರುವವರಿಗೆ ಈ ದಿನ ಉದ್ಯೋಗ ದೊರೆಯುವ ಸಾಧ್ಯತೆ ಹೆಚ್ಚಾಗಿರುವುದು. ದೇಹದಲ್ಲಿ ಉಷ್ಣಾಧಿಕ್ಯವಾಗಿ ಆರೋಗ್ಯದಲ್ಲಿ ಏರುಪೇರಾಗಬಹುದು. ಚಿಲ್ಲರೆ ವ್ಯಾಪಾರಿಗಳಿಗೆ ತೃಪ್ತಿಕರ ಲಾಭ ಸಿಗಲಿದೆ.
  • ಸಿಂಹ
  • ಆರ್ಥಿಕ, ಮಾನಸಿಕ ಹಾಗೂ ದೈಹಿಕ ಆರೋಗ್ಯದ ವಿಷಯದಲ್ಲಿ ಹೆಚ್ಚಿನ ನೆಮ್ಮದಿಯನ್ನು ಅಪೇಕ್ಷಿಸಬಹುದು. ಗುಡಿ ಕೈಗಾರಿಕೆ ವೃತ್ತಿಯವರಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಚಿನ್ನ ಖರೀದಿ ಯೋಗ ಇರುವುದು.
  • ಕನ್ಯಾ
  • ವಾಣಿಜ್ಯ ಸಂಸ್ಥೆಯೊಂದರಲ್ಲಿ ಕಾಂಟ್ರಾಕ್ಟ್ ಪಡೆಯುವ ಪ್ರಯತ್ನವು ಫಲಕಾರಿ ಆಗಲಿದೆ, ಆದರೆ ಉದ್ಯೋಗಕ್ಕಾಗಿ ಖಾಸಗೀ ಜೀವನವನ್ನೇ ತ್ಯಾಗ ಮಾಡಬೇಕಾಗಬಹುದು. ಅವಿವಾಹಿತರಿಗೆ ಶುಭ ಲಭಿಸುವುದು.
  • ತುಲಾ
  • ಮೇಲಧಿಕಾರಿಗಳೊಂದಿಗೆ ಉದ್ವೇಗಕ್ಕೆ ಒಳಗಾಗದೆ ತಾಳ್ಮೆಯಿಂದ ವ್ಯವಹರಿಸಿದರೆ ನಿಮ್ಮ ಹಾದಿ ಸುಗಮವಾಗಿ ಸಾಗುತ್ತದೆ. ಅಡಿಕೆ ಮಾರಾಟ ಪ್ರತಿನಿಧಿಗಳಿಗೆ ಹೆಚ್ಚಿನ ಕಮಿಷನ್ ಸಿಗಲಿದೆ. ರೈತಾಪಿ ವರ್ಗದವರಿಗೆ ಶುಭ.
  • ವೃಶ್ಚಿಕ
  • ಹಿರಿಯರ ಸಲಹೆಗಳನ್ನು ಪಡೆದುಕೊಂಡು ಕಾರ್ಯಪ್ರವೃತ್ತರಾಗುವುದು ಉತ್ತಮವಾದದ್ದು. ಕೌಟುಂಬಿಕವಾಗಿ ಸರ್ವ ಸದಸ್ಯರ ಜೊತೆಯಲ್ಲಿ ಪೂಜಾ ಸಮಾರಂಭದಲ್ಲಿ ಸಂಭ್ರಮಿಸುವ ಸಮಯವಿದು.
  • ಧನು
  • ಕೃಷಿಕರು, ವ್ಯಾಪಾರಸ್ಥರು ದಲ್ಲಾಳಿಗಳಿಂದ ಮೋಸ ಹೋಗಬಹುದು, ಎಚ್ಚರವಹಿಸಿ. ಚರ್ಮ ವ್ಯಾಧಿಯಂತಹ ಅನಾರೋಗ್ಯವು ಎದುರಾಗಬಹುದು. ಹಾಡುಗಾರರಿಗೆ ನಿಮ್ಮ ಸಾಧನೆಯಿಂದ ಜನಪ್ರಿಯತೆ ಹೆಚ್ಚುತ್ತದೆ.
  • ಮಕರ
  • ಹಾಲು, ಮೊಸರು, ಬೆಣ್ಣೆಯ ವ್ಯಾಪಾರಸ್ಥರಿಗೆ ಹೆಚ್ಚಿನ ಉತ್ಪಾದನೆಯಿಂದ ಲಾಭ ಆಗುವುದು. ವಿದೇಶ ಪ್ರವಾಸಕ್ಕೆ ಸಂಬಂಧಿಸಿದಂತೆ ಸಂತಸಕರ ಬೆಳವಣಿಗೆ ಕಂಡು ಬರಲಿವೆ. ಕೀರ್ತಿ ನಿಮ್ಮನ್ನು ಅರಸಿ ಬರುವುದು.
  • ಕುಂಭ
  • ತಿಳಿಯಾದ ಮನಸ್ಸಿನಿಂದ ಅಲೋಚಿಸಿ ಅಥವಾ ಅನುಭವಸ್ಥರ ಅಭಿಪ್ರಾಯ ತಿಳಿದು ಸೂಕ್ತ ನಿರ್ಧಾರ ಕೈಗೊಳ್ಳಿರಿ. ಪಾಕ ಪ್ರವೀಣರಿಗೆ ಬಿಗುವಿನ ವೇಳಾಪಟ್ಟಿಯೊಂದಿಗೆ ವೃತ್ತಿಯಲ್ಲಿ ಉನ್ನತ ಸ್ಥಾನ ಪಡೆಯುವ ಕಾಲ.
  • ಮೀನ
  • ಕಾರ್ಯಕ್ಷೇತ್ರದಲ್ಲಿ ನೀತಿ-ನಿಯಮಗಳಿಗೆ ಬದ್ಧರಾಗಿರುವ ತೀರ್ಮಾನ ಮಾಡುವುದು ಒಳ್ಳೆಯದು. ಉನ್ನತ ವಿದ್ಯಾಭ್ಯಾಸದಲ್ಲಿ ನಿರತರಾಗಿರುವವರಿಗೆ ಕುಟುಂಬಸ್ಥರ ಜೊತೆ ಸಮಯ ಕಳೆಯುವುರಿಂದ ವಂಚಿತರಾಗುವ ಸಾಧ್ಯತೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.