ADVERTISEMENT

ದಿನ ಭವಿಷ್ಯ: ಡಿಸೆಂಬರ್ 15 ಶುಕ್ರವಾರ 2023– ಇಂದು ಸಾಲ ತೆಗೆದುಕೊಳ್ಳಬೇಡಿ

ಪ್ರಜಾವಾಣಿ ವಿಶೇಷ
Published 14 ಡಿಸೆಂಬರ್ 2023, 18:31 IST
Last Updated 14 ಡಿಸೆಂಬರ್ 2023, 18:31 IST
<div class="paragraphs"><p>ದಿನ ಭವಿಷ್ಯ: ಡಿಸೆಂಬರ್ 14 ಗುರುವಾರ 2023– ಇಂದಿನ ಕೆಲಸಕ್ಕೆ ಹಿರಿಯರ ಆಶೀರ್ವಾದ</p></div>

ದಿನ ಭವಿಷ್ಯ: ಡಿಸೆಂಬರ್ 14 ಗುರುವಾರ 2023– ಇಂದಿನ ಕೆಲಸಕ್ಕೆ ಹಿರಿಯರ ಆಶೀರ್ವಾದ

   
ಮೇಷ
  • ಸಂಗೀತ ಕಲಾವಿದರಿಗೆ ಉತ್ತಮ ವೇದಿಕೆ ಸಿಗುವ ಮುನ್ಸೂಚನೆ. ವಿವಾಹ ಯೋಗ್ಯ ವಯಸ್ಕರಿಗೆ ಮನುಷ್ಯ ಪ್ರಯತ್ನವಿದ್ದರೆ ಮದುವೆ ನಿಶ್ಚಯವಾಗುವುದು. ಕಬ್ಬಿಣ ಅಥವಾ ಗ್ಲಾಸ್‌ಗಳಿಂದ ಗಾಯಗಳಾಗುವ ಲಕ್ಷಣಗಳಿವೆ.
  • ವೃಷಭ
  • ಸರಿಸಮಾನ ಮನಸ್ಸನ್ನು ಹೊಂದಿದವರಲ್ಲಿ ಒಪ್ಪಂದ ವ್ಯವಹಾರ ನಡೆಸಬಹುದು. ನಿಮಗೆ ಕಾಡುವ ಸಮಸ್ಯೆಯಿಂದಾಗಿ ಯಾರಲ್ಲೂ ನಂಬಿಕೆ ಇಡದಂಥ ಪರಿಸ್ಥಿತಿ ತೋರಿಬರುವುದು. ಆತ್ಮ ಬಲದ ಮೇಲೆ ನಂಬಿಕೆ ಇಡಿ.
  • ಮಿಥುನ
  • ಆಳವಾದ ಅಧ್ಯಯನದಲ್ಲಿ ತೊಡಗಿದವರಿಗೆ ಆಶ್ಚರ್ಯಕರ ವಿಷಯ ತಿಳಿಯಲಿದೆ. ನಿಮ್ಮನ್ನು ನೀವೇ ವಿಮರ್ಶಿಕೊಳ್ಳಿ. ನಿಮ್ಮ ಸರಿ ತಪ್ಪುಗಳು ನಿಮಗೇ ಅರಿವಾಗುವುದು. ಸ್ನೇಹಿತರಿಂದ ಅಪೇಕ್ಷಿಸುವ ಸಹಕಾರವು ಸಿಗಲಿದೆ.
  • ಕರ್ಕಾಟಕ
  • ಹೊಸ ಉದ್ಯೋಗಕ್ಕಾಗಿ ನಡೆಸಿದ ತೀವ್ರ ಪ್ರಯತ್ನ ಈ ದಿನ ಫಲ ನೀಡಲಿದೆ. ಇನ್ನೊಬ್ಬರನ್ನು ಅರ್ಥೈಸಿಕೊಳ್ಳುವ ಗುಣ ನಿಮ್ಮಲ್ಲಿ ಕಡಿಮೆಯಾಗಲಿದೆ. ವ್ಯವಹಾರ ನೆಡೆಸುವುದಕ್ಕಾಗಿ ಸಾಲ ತೆಗೆದುಕೊಳ್ಳಬೇಡಿ.
  • ಸಿಂಹ
  • ಒದಗಿ ಬರಲಿರುವ ಅವಕಾಶವನ್ನು ಕೈತಪ್ಪಿ ಹೋಗದಂತೆ ನೋಡಿಕೊಳ್ಳಿ. ವೃತ್ತಿ ಪರವಾಗಿ ಯಾವುದೇ ಬದಲಾವಣೆಗೆ ಇಂದು ಸಮಂಜಸ ದಿನವಾಗಿರುವುದಿಲ್ಲ. ಲಕ್ಷ್ಮೀ ನರಸಿಂಹನನ್ನು ಆರಾಧಿಸಿ ಶುಭವಾಗುವುದು.
  • ಕನ್ಯಾ
  • ಶೀಘ್ರ ಹಾಗೂ ಕಾಲಕ್ಕೆ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ಹಣ ಕಾಸಿನ ಲಾಭವನ್ನು ತರಲಿದೆ. ನಿಮ್ಮ ವಾಕ್ಚಾತುರ್ಯಕ್ಕೆ ಸಾಮಾಜಿಕವಾಗಿ ಗೌರವ ಪ್ರಶಂಸೆಗಳು ಉಂಟಾಗುವುದು. ನಿಮ್ಮ ಅದೃಷ್ಟದ ಪರೀಕ್ಷೆ ನೆಡೆಯಲಿದೆ.
  • ತುಲಾ
  • ಮುಕ್ತ ಮಾತುಕತೆಯಿಂದ ಕಾರ್ಮಿಕರ ಸಮಸ್ಯೆ ಬಗೆಹರಿಸಿಕೊಂಡು ಇರುವ ಅವಕಾಶಗಳನ್ನು ಮುಂದುವರಿಸುವುದು ಬುದ್ಧಿವಂತಿಕೆ ಲಕ್ಷಣ. ಮನಸ್ಸಿಗೆ ಮುದ ನೀಡುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ.
  • ವೃಶ್ಚಿಕ
  • ನೇರ ನಡೆ ನುಡಿಯಿರುವವರೊಂದಿಗೆ ಮಾತ್ರ ವ್ಯವಹಾರ ಮುಂದು ವರೆಸಿಕೊಂಡು ಹೋಗುವುದು ಉತ್ತಮ. ಸಹೋದರರಲ್ಲಿ ಅಥವಾ ಮನೆಯ ಸದಸ್ಯರಲ್ಲಿ ಭಿನ್ನಾಭಿಪ್ರಾಯ, ವಾದ ವಿವಾದ, ಕಲಹಗಳು ಇಲ್ಲವಾಗುವುದು.
  • ಧನು
  • ರಾಜಕೀಯ ವಲಯದಲ್ಲಿ ಉಂಟಾಗುವ ಸಣ್ಣ ಪುಟ್ಟ ಬದಲಾವಣೆಯನ್ನೂ ಗಮನಿಸಿ, ನಂತರದಲ್ಲಿ ಬೆಂಬಲಿಸುವ ಕೆಲಸ ಮಾಡಿ. ಕುಟುಂಬದ ಸದಸ್ಯರೊಂದಿಗೆ ನಿಮ್ಮ ಬಾಲ್ಯದ ಕ್ಷಣಗಳನ್ನು ನೆನಪಿಸಿಕೊಳ್ಳುವಿರಿ.
  • ಮಕರ
  • ರಾಜಕೀಯ ವಲಯದಲ್ಲಿ ಉಂಟಾಗುವ ಸಣ್ಣ ಪುಟ್ಟ ಬದಲಾವಣೆಯನ್ನೂ ಗಮನಿಸಿ, ನಂತರದಲ್ಲಿ ಬೆಂಬಲಿಸುವ ಕೆಲಸ ಮಾಡಿ. ಕುಟುಂಬದ ಸದಸ್ಯರೊಂದಿಗೆ ನಿಮ್ಮ ಬಾಲ್ಯದ ಕ್ಷಣಗಳನ್ನು ನೆನಪಿಸಿಕೊಳ್ಳುವಿರಿ.
  • ಕುಂಭ
  • ನಿಮ್ಮ ಕೃಷಿ ಪ್ರದೇಶವನ್ನು ವ್ಯವಸ್ಥಿತ ರೀತಿಯಲ್ಲಿಡಲು ತೀರ್ಮಾನಿ ಸುವುದು ಉತ್ತಮ. ಎದುರಾಗುವ ಸಂದಿಗ್ಧ ಪರಿಸ್ಥಿತಿಗಳನ್ನು ಧೈರ್ಯದಿಂದ ಎದುರಿಸಿ. ಧೈರ್ಯ ಮತ್ತು ಜನರನ್ನು ಸಂಬಾಳಿಸುವ ಶಕ್ತಿಯನ್ನು ಹೊಂದುವಿರಿ.
  • ಮೀನ
  • ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಅವಲೋಕಿಸಿಕೊಂಡು ಉಳಿತಾಯದ ತೀರ್ಮಾನ ಕೈಗೊಳ್ಳುವುದು ಉತ್ತಮ. ಕೆಲವೊಂದು ಸಾಂಸಾರಿಕ ಸಮಸ್ಯೆಗಳಿಗೆ ಈ ದಿನ ನೀವು ಅತ್ಯಂತ ಭಾವುಕರಾಗುವಂತಾಗುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.