ADVERTISEMENT

ದಿನ ಭವಿಷ್ಯ: ಜನವರಿ 10 ಬುಧವಾರ 2024– ಇಂದು ಮನರಂಜನೆಯ ಕಾರ್ಯಕ್ರಮಗಳಲ್ಲಿ ಭಾಗಿ

ದಿನ ಭವಿಷ್ಯ: ಜನವರಿ 10 ಬುಧವಾರ 2024– ಇಂದು ಈ ರಾಶಿಯವರು ಮನರಂಜನೆಯ ಕಾರ್ಯಕ್ರಮಗಳಲ್ಲಿ ಭಾಗಿ

ಪ್ರಜಾವಾಣಿ ವಿಶೇಷ
Published 9 ಜನವರಿ 2024, 18:40 IST
Last Updated 9 ಜನವರಿ 2024, 18:40 IST
<div class="paragraphs"><p>ದಿನ ಭವಿಷ್ಯ: ಜನವರಿ 10 ಬುಧವಾರ 2024– ಇಂದು ಮನರಂಜನೆಯ ಕಾರ್ಯಕ್ರಮಗಳಲ್ಲಿ ಭಾಗಿ</p></div>

ದಿನ ಭವಿಷ್ಯ: ಜನವರಿ 10 ಬುಧವಾರ 2024– ಇಂದು ಮನರಂಜನೆಯ ಕಾರ್ಯಕ್ರಮಗಳಲ್ಲಿ ಭಾಗಿ

   
ಮೇಷ
  • ದೇವರ ಆಶೀರ್ವಾದ ನಿಮ್ಮ ಮೇಲಿರುವುದರಿಂದ ಇಂದಿನ ಪ್ರಯಾಣ ಅನುಕೂಲಕರವಾಗಿ, ಅನಾಯಾಸವಾಗಿ ಇರುತ್ತದೆ. ಜೀವನಶೈಲಿಗೆ ವಿರುದ್ಧವಾದ ಘಟನೆ ಈ ದಿನ ನಡೆಯಬಹುದು.
  • ವೃಷಭ
  • ಜಮೀನಿನ ಕೆಲಸ ಕಾರ್ಯಗಳು ಮನಸ್ಸಿನಲ್ಲಿ ತೀರ್ಮಾನಿಸಿದಂತೆ ನಡೆಯುವುದು ಕಷ್ಟವಾಗಲಿದೆ. ಬಂಧುಗಳಲ್ಲಿ ನಿಷ್ಠುರ ವರ್ತನೆಗೆ ಆಸ್ಪದ ನೀಡುವುದು ಸರಿಯಲ್ಲ. ಮಗಳ ಶಿಕ್ಷಣ ಮುಂದುವರಿಸುವ ಬಗ್ಗೆ ತೀರ್ಮಾನಿಸಿ.
  • ಮಿಥುನ
  • ಕಾನೂನು ವಿದ್ಯಾರ್ಥಿಗಳಿಗೆ ಅಥವಾ ನ್ಯಾಯಾಂಗ ಇಲಾಖೆಯವರಿಗೆ ಗೊಂದಲದ ವಾತಾವರಣ ಎದುರಾಗುವುದು. ಕಾರ್ಯದೊತ್ತಡ ಸದ್ಯಕ್ಕೆ ಕಡಿಮೆಯಾಗಿರುವಂತೆ ತೋರಿ ಮನಸ್ಸಿಗೆ ನಿರಾಳವಾಗುವುದು.
  • ಕರ್ಕಾಟಕ
  • ಗೆಳೆಯನ ಅನಿರೀಕ್ಷಿತ ಆಗಮನ ಸಮಯವನ್ನು ವ್ಯರ್ಥ ಮಾಡಿಸಿದರೂ ಮನಸ್ಸಿಗೆ ಸಂತೋಷ ಉಂಟಾಗುವುದು. ಮನೆಯವರೊಂದಿಗೆ ಮನರಂಜನೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ.
  • ಸಿಂಹ
  • ವಿದೇಶದಲ್ಲಿ ಉದ್ಯೋಗದ ಸಂಪಾದನೆಗೆ ಪ್ರಯತ್ನ ಮಾಡಬಹುದು. ಪರಿಣತರ ಸಲಹೆ, ಸೂಚನೆಗಳೊಂದಿಗೆ ಮುಂದುವರಿದರೆ ಪರಿಸ್ಥಿತಿ ತಿಳಿಯಾಗುತ್ತದೆ. ಹೆಂಡತಿಯ ಆರೋಗ್ಯದ ಬಗ್ಗೆ ಭೀತಿ ಅಗತ್ಯವಿಲ್ಲ.
  • ಕನ್ಯಾ
  • ಸಂಬಂಧಗಳನ್ನು ಗಟ್ಟಿ ಮಾಡಿಕೊಳ್ಳುವುದರಿಂದ ವೈಯಕ್ತಿಕ ಜೀವನದಲ್ಲಿ ವಿಷಾದ, ದುಃಖ ಆವರಿಸುವ ಲಕ್ಷಣಗಳು ಗೋಚರಿಸುತ್ತಿರುವುದನ್ನು ಸರಿಪಡಿಸಿಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಸಾಧನೆಗೆ ಪೂರಕ ದಿನ.
  • ತುಲಾ
  • ಸಹೋದರರಲ್ಲಿ ಭಿನ್ನಾಭಿಪ್ರಾಯ ಮೂಡಿಸುವ ಕೆಲಸವು ನಿಮ್ಮ ದಾಯಾದಿಗಳಿಂದ ನಡೆಯಬಹುದು. ಸಮಸ್ಯೆಗೆ ಸಿಲುಕಿರುವ ನೀವು ನ್ಯಾಯ ಹೊಂದಲು ಕಷ್ಟ ಪಡಬೇಕಾಗಲಿದೆ. ಮೆಕ್ಯಾನಿಕ್‌ಗಳಿಗೆ ಆದಾಯ ತರುವ ದಿನ.
  • ವೃಶ್ಚಿಕ
  • ಸಾಕಷ್ಟು ಸಮಸ್ಯೆಗಳು ಆತ್ಮವಿಶ್ವಾಸಕ್ಕೆ ಅಡ್ಡಿಯನ್ನು ಉಂಟುಮಾಡಲಿದೆ. ಪರಿಸ್ಥಿತಿಯ ಲಾಭ ಪಡೆಯಲು ವಿಫಲರಾಗಬೇಡಿ. ಸಂದರ್ಭಗಳನ್ನು ಬಳಸಿಕೊಳ್ಳುವ ಜಾಣತನವನ್ನು ಅಭ್ಯಸಿಸಿಕೊಳ್ಳಿರಿ.
  • ಧನು
  • ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳುವಾಗ ಗೊಂದಲ ಉಂಟಾಗಬಹುದು. ಬೇರೆಯವರ ಸಹಾಯ ಅಪೇಕ್ಷಿಸದೆ ವಿಶ್ವಾಸದಿಂದ ಕಾರ್ಯೋನ್ಮುಖರಾಗಿ. ಜಯ ನಿಮ್ಮ ಪಾಲಿಗೆ ಒದಗುತ್ತದೆ.
  • ಮಕರ
  • ಅಭಿವೃದ್ಧಿಯ ಅಥವಾ ಕ್ರೋಡೀಕರಣದ ಬಗ್ಗೆ ಪ್ರಮುಖ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಸರಿ ಸಮಯ. ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಲೇಬೇಕಾದ ಪರಿಸ್ಥಿತಿ ತೋರಲಿದೆ. ಮದುವೆ ವಿಷಯ ಪ್ರಸ್ತಾಪವಾಗಲಿದೆ.
  • ಕುಂಭ
  • ಆದಾಯ ಮೂಲಗಳನ್ನು ಹೆಚ್ಚಿಸಿಕೊಳ್ಳಲು ಹೊಸ ಯೋಜನೆಗಳನ್ನು ರೂಢಿಸಿಕೊಳ್ಳಬಹುದು. ಮಕ್ಕಳ ಬೆಳವಣಿಗೆ ವಿಚಾರದಲ್ಲಿ ಕಾಳಜಿ ತೋರುವ ಅನಿವಾರ್ಯತೆ ಹೆಚ್ಚಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸಲಿದೆ.
  • ಮೀನ
  • ಸಮಸ್ಯೆಗಳಿಗೆ ಕಾರಣವಾಗಿರುವ ಜನ, ಪರಿಸ್ಥಿತಿ ಬಗ್ಗೆ ನಿಮಗೆ ಮಾಹಿತಿ ಇಲ್ಲದಿದ್ದರೆ ತೊಂದರೆ ಉಲ್ಬಣಿಸುವ ಸಾಧ್ಯತೆಗಳಿವೆ. ಶ್ರಮಕ್ಕೆ ಮನೆಯವರ ಸಂಪೂರ್ಣ ಸಹಾಯ ಸಹಕಾರಗಳು ಒದಗಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.