ADVERTISEMENT

ದಿನ ಭವಿಷ್ಯ: ಫೆಬ್ರುವರಿ 19 ಸೋಮವಾರ 2024– ಇಂದು ಸ್ವಂತ ಕೆಲಸ ಪೂರ್ತಿಗೊಳಿಸುವಿರಿ

ದಿನ ಭವಿಷ್ಯ: ಫೆಬ್ರುವರಿ 19 ಸೋಮವಾರ 2024

ಪ್ರಜಾವಾಣಿ ವಿಶೇಷ
Published 18 ಫೆಬ್ರುವರಿ 2024, 18:31 IST
Last Updated 18 ಫೆಬ್ರುವರಿ 2024, 18:31 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಆಸ್ತಿ ವ್ಯವಹಾರಗಳಿಂದ ಉತ್ತಮ ಲಾಭ. ವೃತ್ತಿ ಕ್ಷೇತ್ರದಲ್ಲಿ ನಿಮ್ಮ ನಿಷ್ಠೆ, ಪ್ರಾಮಾಣಿಕತೆಗೆ ಹೆಚ್ಚಿನ ಗೌರವಾದರಗಳು ಸಿಗುವುದು. ಸ್ವಂತ ಕೆಲಸ ಪೂರ್ತಿಗೊಳಿಸುವಿರಿ.
  • ವೃಷಭ
  • ಅನವಶ್ಯಕ ಚಿಂತೆ, ದೂರ ಪ್ರವಾಸದಿಂದ ಖರ್ಚು ಹಾಗೂ ಹಾಳು ವ್ಯಸನಗಳು ಈ ದಿನ ಕಡಿಮೆಯಾಗಲಿದೆ. ವ್ಯವಹಾರದಲ್ಲಿ ಹೆಚ್ಚಿನ ಸಮಯ ವ್ಯಯಿಸುವುದರಿಂದ ಕಾರ್ಯಗಳನ್ನು ಸುಸ್ಥಿತಿಗೆ ತರಬಹುದು.
  • ಮಿಥುನ
  • ನೂತನ ವ್ಯವಹಾರದ ಪ್ರಾರಂಭ ಯೋಚನೆಯಲ್ಲಿರುವವರು ಅದರ ಸಾಧಕ ಬಾಧಕದ ಬಗ್ಗೆ ಸಂಪೂರ್ಣವಾಗಿ ಗಮನಹರಿಸುವುದು ಉತ್ತಮ. ಜೀವನ ಸಂಗಾತಿಯ ಆಯ್ಕೆ ವಿಚಾರದಲ್ಲಿ ಹಿರಿಯರ ಮಾತಿನತ್ತ ಗಮನ ಕೊಡಿ.
  • ಕರ್ಕಾಟಕ
  • ಧಾರ್ಮಿಕ ಕ್ಷೇತ್ರದಲ್ಲಿರುವವರು ವೃತ್ತಿ ಜೀವನದತ್ತ ಹೆಚ್ಚಿನ ಗಮನ ಹರಿಸುವುದು ಒಳ್ಳೆಯದು. ಕೋರ್ಟು ವ್ಯವಹಾರಗಳಲ್ಲಿ ಹಿನ್ನಡೆ ಅಥವಾ ನಿರೀಕ್ಷಿಸಿದ ಯಾವುದೇ ತೀರ್ಮಾನ ಸಿಗದಂತಾಗುತ್ತದೆ.
  • ಸಿಂಹ
  • ನಿಮಗೆ ಜನ್ಮತಃ ಬಂದಿರುವ ಧೈರ್ಯ ಹಾಗೂ ಸಹಿಷ್ಣುತೆ ನೆರವಿಗೆ ಬರಲಿದೆ. ನಿಮ್ಮಿಚ್ಛೆಯ ಭೂಮಿಯನ್ನೇ ಖರೀದಿಸುವ ಭಾಗ್ಯ ನಿಮ್ಮದಾಗಲಿದೆ. ವಿವಾಹದ ಬಗ್ಗೆ ಯೋಚನೆ ಬರಲಿದೆ.
  • ಕನ್ಯಾ
  • ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಜವಾಬ್ದಾರಿ ಜತೆಗೆ ಕಲಿಕೆಗಾಗಿ ಪ್ರಯಾಣ ಮಾಡಬೇಕಾಗುತ್ತದೆ. ಹೊಸ ಕಾರ್ಯದ ಸಂಪೂರ್ಣ ಜವಾಬ್ದಾರಿ ಯಶಸ್ವಿಯಾಗಿ ನಿರ್ವಹಿಸಿದ ಹೆಗ್ಗಳಿಕೆ ನಿಮ್ಮದಾಗಲಿದೆ. ಸ್ನೇಹಿತರು ಇನ್ನಷ್ಟು ಹತ್ತಿರವಾಗುವರು.
  • ತುಲಾ
  • ಜನರೊಂದಿಗಿನ ಹೆಚ್ಚಿನ ಸಂಪರ್ಕದಿಂದ ಅನಿವಾರ್ಯದ ಸಮಯ ಎದುರಿಸಬಹುದು. ನ್ಯಾಯವಾದಿಗಳಿಗೆ ಜಯ ದೊರೆತು ಧನಾಗಮವಾಗಲಿದೆ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ.
  • ವೃಶ್ಚಿಕ
  • ನಿರೀಕ್ಷೆಗೆ ಅಥವಾ ಪ್ರಯತ್ನಕ್ಕೆ ನಿಲುಕದ ವ್ಯಕ್ತಿಗಾಗಲಿ ಅಥವಾ ವಸ್ತುವಿಗಾಗಲೀ ಕಾಲಹರಣ ಮಾಡದಿರಿ. ನಿಮಗೆ ಬರಬೇಕಾದದು ನಿಮ್ಮನ್ನು ಅರಸಿ ಬಂದೇ ಬರುವುದು. ಬಿಳಿ ಬಣ್ಣದ ಉಡುಗೆ ಶುಭ ತರುವುದು.
  • ಧನು
  • ದೊಡ್ಡ ಮೊತ್ತದ ಅಥವಾ ಹೆಚ್ಚಿನ ಜವಾಬ್ದಾರಿಯ ಯಾವುದೇ ಕೆಲಸವನ್ನು ಒಪ್ಪಿಕೊಳ್ಳಬೇಡಿ. ಆರ್ಥಿಕವಾಗಿ ಲೇವಾದೇವಿ ವ್ಯವಹಾರದಲ್ಲಿ ಜಾಗರೂಕತೆ ಇರಲಿ. ವೈಯಕ್ತಿಕ ನಿಲುವುಗಳಿಗೆ ಆದ್ಯತೆ ಕೊಡುವುದು ಲೇಸು.
  • ಮಕರ
  • ಸಾಲವನ್ನು ತೀರಿಸಿದ ಸಂತೃಪ್ತಿ ಸಿಗಲಿದೆ. ಮಗಳಿಗೆ ಆಪ್ತರ ಸಹಾಯ ದಿಂದ ಉತ್ತಮ ಉದ್ಯೋಗ ಲಭಿಸಲಿದೆ. ಕೆಲಸವನ್ನು ತ್ವರಿತಗೊಳಿಸುವುದರಿಂದ ಉಂಟಾಗುವ ನಷ್ಟದ ಪ್ರಮಾಣವನ್ನು ಕಡಿಮೆಗೊಳಿಸಿಕೊಳ್ಳಬಹುದು.
  • ಕುಂಭ
  • ಇಷ್ಟು ದಿನ ತೋರಿದ ತಾಳ್ಮೆಗೆ ಪ್ರತಿಯಾಗಿ ನಿಮ್ಮ ನಿಜವಾದ ಕಾರ್ಯಗಳಿಗೆ ಕಾಲ ಕೂಡಿಬರಲಿದೆ. ವಿದ್ಯುತ್ ಉಪಕರಣಗಳ ಮಾರಾಟದಿಂದ ಲಾಭ ಪಡೆಯುವಿರಿ. ವಾಗ್ಮಿಗಳಿಗೆ ಶುಭವಾಗುವುದು.
  • ಮೀನ
  • ಮನಸ್ಸಿನ ನಾಗಾಲೋಟಕ್ಕೆ ಕಡಿವಾಣ ಹಾಕಿ. ಸಂಯಮದ ನಡವಳಿಕೆ ಅಗತ್ಯ. ಹೊಸ ವ್ಯಕ್ತಿಗಳಿಂದ ಪ್ರಚೋದನೆಗೆ ಒಳಗಾಗದಿರಿ. ಚಾಲಕ ವೃತ್ತಿಯವರು ಉದ್ಯೋಗದಲ್ಲಿ ಜಾಗ್ರತರಾಗಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.