ದಿನ ಭವಿಷ್ಯ: ಆಗಸ್ಟ್ 23, 2025 ಶನಿವಾರ–ಷೇರು ವ್ಯವಹಾರದವರಿಗೆ ಈ ದಿನ ಅದೃಷ್ಟದಾಯಕ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 22 ಆಗಸ್ಟ್ 2025, 18:31 IST
Last Updated 22 ಆಗಸ್ಟ್ 2025, 18:31 IST
ದಿನ ಭವಿಷ್ಯ
ಮೇಷ
ಸಣ್ಣ ಕೈಗಾರಿಕಾ ಉದ್ಯಮಿಗಳು ಉತ್ಪಾದನೆ ಹೆಚ್ಚಿಸುವ ಬಗ್ಗೆ ಶ್ರಮ ಪಡಬಹುದು. ಸಹೋದ್ಯೋಗಿಗಳ ಅಥವಾ ನೆರೆಹೊರೆಯವರ ಉಪಟಳದಿಂದ ನೋವು ಉಂಟಾಗುವ ಸನ್ನಿವೇಶಗಳು ಎದುರಾಗಬಹುದು.
ವೃಷಭ
ವಾಣಿಜ್ಯ ಕಟ್ಟಡಗಳ ನಿರ್ಮಾಣ ಕಾರ್ಯಗಳಿಗೆ ಹಣಕಾಸಿನ ಹೊಂದಾಣಿಕೆ ಸುಲಭವಾಗಿ ಆಗುವುದು. ವಿದ್ಯಾರ್ಥಿಗಳ ಮನೋಕಾಮನೆಗಳು ಪೂರ್ಣಗೊಳ್ಳಲಿವೆ. ಆನುವಂಶಿಕ ಆಸ್ತಿ ಅನುಭವಿಸುವ ಯೋಗ ಬರಲಿದೆ.
ಮಿಥುನ
ಮನೆಯ ಆಗುಹೋಗುಗಳ ವಿಷಯಗಳನ್ನು ತಂದೆಯೊಡನೆ ಚರ್ಚಿಸುವುದರಿಂದ ಉತ್ತಮ ಸಲಹೆ ಪ್ರಾಪ್ತಿ. ನ್ಯಾಯಯುತವಾಗಿ ಮಾಡಿದ ಕುಟುಂಬ ಕಾರ್ಯಗಳು ಉತ್ತಮ ಫಲಗಳನ್ನೇ ನೀಡುತ್ತವೆ.
ಕರ್ಕಾಟಕ
ಮಾನಸಿಕವಾಗಿ ಗಟ್ಟಿಯಾಗುವುದುರಿಂದ ಇಷ್ಟಕ್ಷೇತ್ರದಲ್ಲಿ ಜಯವನ್ನು ಸಾಧಿಸುವ ಹಾದಿ ಸುಗಮ. ಶಿಕ್ಷಣ ಮುಂದುವರಿಸಲು ಬಂಧುಗಳ ಸಹಾಯ ದೊರಕುವುದು. ಶುಭಕ್ಕಾಗಿ ಗಣಪತಿಯನ್ನು ಆರಾಧಿಸಿ.
ಸಿಂಹ
ಕೆಲಸದಲ್ಲಿ ಪ್ರಮುಖ ಬೆಳವಣಿಗೆ ಗಮನಕ್ಕೆ ಬರಲಿದೆ. ಸಮುದಾಯದ ಮುಖ್ಯಸ್ಥರ ಮಾತುಗಳಿಗೆ ಪ್ರಶ್ನೆ ಮಾಡುವ ಹಕ್ಕು ಇರುವುದರಿಂದ ಚಲಾಯಿಸುವುದು ತಪ್ಪಲ್ಲ.
ಕನ್ಯಾ
ಬೇರೆಯವರಿಗೆ ಎದುರಾದ ಸೋಲು, ಅಪವಾದಗಳಿಗೆ ಹೆದರಿ ಹೊಸ ಕೆಲಸಗಳನ್ನು ಪ್ರಾರಂಭಿಸದೆ ಇರಬೇಡಿ. ಯಾವುದಕ್ಕೂ ಸರ್ವಸಿದ್ಧರಾಗಿರಿ. ದೇವಸ್ಥಾನದ ದರ್ಶನದಿಂದಾಗಿ ವಿಶೇಷವಾದ ಅನುಭೂತಿಯಾಗುತ್ತದೆ.
ತುಲಾ
ಸಣ್ಣ ಹಾಗೂ ಮಧ್ಯಮ ಪ್ರಮಾಣದ ರೈತವರ್ಗಕ್ಕೆ ಆತಂಕ ಮೂಡಿಸುವ ವಾತಾವರಣ ಬಹುದೊಡ್ಡ ಸಮಸ್ಯೆಯಾಗುವುದು. ಸಾರ್ವಜನಿಕರ ಸ್ವತ್ತನ್ನು ಬಳಸುವಾಗ ಸ್ವಂತದ್ದೆನ್ನುವಂತೆ ಬಳಸಿ ಸುಸ್ಥಿತಿಯಲ್ಲಿ ಕಾಪಾಡಿಕೊಳ್ಳಿರಿ.
ವೃಶ್ಚಿಕ
ಯಾವುದೋ ಒಂದು ಸಂದರ್ಭವನ್ನು ನೋಡಿ ನಿಮ್ಮಲ್ಲಿ ಸುಪ್ತವಾಗಿದ್ದ ಮಾತೃತ್ವದ ಭಾವನೆ ಜಾಗೃತವಾಗುತ್ತದೆ. ಆಸ್ತಿಗೆ ಸಂಬಂಧಿಸಿದಂತೆ ಸಹೋದರರಲ್ಲಿ ಭಿನ್ನಾಭಿಪ್ರಾಯ ಮೂಡಲಿದೆ.
ಧನು
ಸೋಲಿನಿಂದ ಜೀವನದ ಬಗ್ಗೆ ನಿರುತ್ಸಾಹವನ್ನು ತಾಳದಿರಿ. ಬಿಡಿ ಯಂತ್ರೋಪಕರಣಗಳ ಮಾರಾಟದಿಂದ ಲಾಭ. ಉದ್ಯೋಗ ವಲಯದಲ್ಲಿ ಅಕ್ಕ ಪಕ್ಕದವರ ಅನುಕಂಪ ಮತ್ತು ಸಹಾಯಕ್ಕೆ ಮರಳಾಗಬೇಡಿ.
ಮಕರ
ಷೇರು ವ್ಯವಹಾರದವರಿಗೆ ಈ ದಿನ ಅದೃಷ್ಟದಾಯಕ. ಭೂಮಿ ಖರೀದಿ ತೀರ್ಮಾನದ ಮೊದಲಾಗಿ ದಾಖಲಾತಿಯ ಬಗ್ಗೆ ಮತ್ತು ಕಾನೂನಿಗೆ ಸಂಬಂಧಿಸಿದಂತೆ ಗಮನ ಹರಿಸಬೇಕು. ವಿಘ್ನ ಉಂಟಾಗಬಹುದು.
ಕುಂಭ
ವಿದ್ಯಾರ್ಥಿಗಳಿಗೆ ಸರ್ವತೋಮುಖ ಅಭಿವೃದ್ಧಿ ಕಂಡುಬರುವುದು. ನಾಯಕತ್ವದ ಹೊಣೆ ಹೊತ್ತಿರುವ ನೀವು ಪರಿಸ್ಥಿತಿಯನ್ನು ನಿಭಾಯಿಸುವ ಸಾಮರ್ಥ್ಯ ಪ್ರದರ್ಶಿಸುವಿರಿ. ಚಿಂತೆಗಳನ್ನು ಮೈಮೇಲೆ ಎಳೆದುಕೊಳ್ಳಬೇಡಿ.
ಮೀನ
ಔಷಧವಿಜ್ಞಾನದ ಬಗ್ಗೆ ಓದಿಕೊಂಡವರು ಕೆಲಸಕ್ಕೆ ಪ್ರಯತ್ನಿಸುವ ಬದಲು ಉನ್ನತ ವ್ಯಾಸಂಗ ನಡೆಸುವುದು ಒಳ್ಳೆಯದು. ಪ್ರಶಾಂತತೆ ಅಪೇಕ್ಷಿಸುವ ನಿಮಗೆ ವಿನಾಕಾರಣದ ಗದ್ದಲಗಳು ತೊಂದರೆ ಉಂಟುಮಾಡುತ್ತವೆ.