ADVERTISEMENT

ದಿನ ಭವಿಷ್ಯ: ಸೆಪ್ಟೆಂಬರ್ 7 ಶನಿವಾರ 2024- ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ

ದಿನ ಭವಿಷ್ಯ: ಸೆಪ್ಟೆಂಬರ್ 7 ಶನಿವಾರ 2024

ಪ್ರಜಾವಾಣಿ ವಿಶೇಷ
Published 6 ಸೆಪ್ಟೆಂಬರ್ 2024, 18:33 IST
Last Updated 6 ಸೆಪ್ಟೆಂಬರ್ 2024, 18:33 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಲೇಖನಗಳಿಂದ ಜನ ಸಂಪರ್ಕ ಅಭಿವೃದ್ಧಿಯಾಗಲಿದೆ. ಮದುವೆಯ ನಿಮಿತ್ತವಾಗಿ ಒಡವೆಗಳ ಖರೀದಿ ಮಾಡುವಿರಿ. ದೂರದ ಪ್ರಯಾಣದ ಮೊದಲು ಅಲ್ಲಿಯ ಸ್ಥಿತಿಗತಿಗಳನ್ನು ಬಲ್ಲವರಿಂದ ವಿಚಾರಿಸುವುದು ಸೂಕ್ತ.
  • ವೃಷಭ
  • ಸ್ಪರ್ಧಾತ್ಮಕ ಪರೀಕ್ಷೆಗಾಗಿ ತಯಾರಾಗುತ್ತಿರುವವರು ಯಾವುದೇ ಸಣ್ಣ ವಿಷಯಗಳನ್ನು ಸಹ ನಿರ್ಲಕ್ಷ್ಯ ಮಾಡುವಂತಿಲ್ಲ. ನಿಮ್ಮ ಕಠಿಣ ಪರಿಶ್ರಮದಿಂದಾಗಿ ಬೆಳೆಸಿದ ಸಂಸ್ಥೆ ಜನಮಾನಸವನ್ನು ಗೆಲ್ಲುವುದು. ವಿಶೇಷ ಖಾದ್ಯ ತಿನ್ನುವಿರಿ
  • ಮಿಥುನ
  • ನಿಮ್ಮ ಜೀವನದಲ್ಲಿ ನೀವು ನಿರೀಕ್ಷಿಸಿದ ಫಲಿತಾಂಶದ ಬದಲು ಬಂದಂತಹಾ ಫಲಿತಾಂಶವು ಹೆಚ್ಚಿನ ಸಂತೋಷವನ್ನು ನೀಡುವುದು. ಮನೆಯಲ್ಲಿ ಸಂತೋಷದ ವಾತಾವರಣವು ಇರಲಿದೆ.
  • ಕರ್ಕಾಟಕ
  • ನಿಮ್ಮ ವಿಷಯಗಳನ್ನು ಸೋರಿಕೆ ಮಾಡುತ್ತಿರುವವರು ಕುಟುಂಬದವರೇ ಇರಬಹುದು ಎಂಬ ಅನುಮಾನದಿಂದ ಪರೀಕ್ಷಿಸುವಿರಿ. ಕೋರ್ಟಿನ ಮೆಟ್ಟಿಲು ಹತ್ತಿಳಿಯಬೇಕಾಗುವುದು, ಜಯ ನಿಮ್ಮದೆ ಆಗಿರುತ್ತದೆ.
  • ಸಿಂಹ
  • ವೃತ್ತಿಯಲ್ಲಿ ಸ್ಥಾನಪಲ್ಲಟ ಬಯಸಿದ ನಿಮಗೆ ಹೊಸ ಕಾರ್ಯಸ್ಥಾನವು ಹಳೆಯದಕ್ಕಿಂತ ಕಳಪೆ ಮಟ್ಟದಲ್ಲಿ ತೋರಬಹುದು. ನಿಮ್ಮ ಕೆಲಸಗಳಲ್ಲಿ ಯಾವುದೇ ವಿಘ್ನಗಳು ಎದುರಾದರು ಸಹ ಅದು ಕ್ಷಣ ಮಾತ್ರದ್ದಾಗಿರುತ್ತದೆ.
  • ಕನ್ಯಾ
  • ಅನಿವಾರ್ಯ ಕಾರಣದಿಂದ ಬಹುಮುಖ್ಯವಾದ ಒಂದು ಕೆಲಸವನ್ನು ತಪ್ಪಿಸಿಕೊಳ್ಳಬೇಕಾಗುತ್ತದೆ. ನೀವು ನಡೆಸುತ್ತಿರುವ ಶುಭ ಕಾರ್ಯಕ್ರಮಗಳಿಗೆ ಅಶೌಚದ ಆತಂಕ ಎದುರಾಗುವುದು. ಆರೋಗ್ಯವನ್ನು ನಿರ್ಲಕ್ಷಿಸಬೇಡಿ.
  • ತುಲಾ
  • ಮಧ್ಯಮವರ್ಗದ ಕುಟುಂಬದಲ್ಲಿ ಸಂಬಂಧಿಕರ ಎದುರು ಕೆಲವು ಇರಿಸು ಮುರಿಸುಗಳು ಆಗಬಹುದು. ಬೇಸರ ಪಡುವುದು ಬೇಡ. ಮಾತಿಗಿಂತ ಕೃತಿ ಮುಖ್ಯ ಎನ್ನುವ ರೀತಿಯಲ್ಲಿ ನಿಮ್ಮ ಸಾಮರ್ಥ್ಯ ತೋರಿಬರಲಿದೆ.
  • ವೃಶ್ಚಿಕ
  • ಉತ್ತಮವಾಗಿ ಅಂಕಗಳನ್ನು ಪಡೆಯುತ್ತಿದ್ದ ಮಕ್ಕಳು ಏಕಾಗ್ರತೆಯನ್ನು ಕಡಿಮೆ ಮಾಡಿದ ಕಾರಣ ನೀವು ಗಮನ ಹರಿಸಬೇಕಾಗುತ್ತದೆ. ನಿಮ್ಮ ವೃತ್ತಿ ಜೀವನವು ಅಭಿವೃದ್ಧಿಯ ಪಥದಲ್ಲಿ ಸಾಗಲು ಬದಲಾವಣೆಗಳು ಬರುವವು.
  • ಧನು
  • ಗೃಹ ವಸ್ತುಗಳ ಖರೀದಿ ಮಾಡಿ ಬಂದ ನಂತರ ನೀವು ಕೊಟ್ಟ ಹಣ ದುಬಾರಿಯಾಯಿತೆಂಬ ಪಶ್ಚಾತಾಪವಾಗಬಹುದು. ಸಣ್ಣ ಪುಟ್ಟ ವಿಷಯಗಳಿಗೆ ತಾಳ್ಮೆ ಕಳೆದುಕೊಂಡು ಸಹೋದರರ ಜೊತೆ ಕಲಹಗಳನ್ನು ಮಾಡುವಿರಿ.
  • ಮಕರ
  • ವ್ಯವಹಾರದಲ್ಲಿ ನಿಮಗೆ ಬೇಕಾದ ರೀತಿಯಲ್ಲಿ ಲಾಭ ಮಾಡಿಕೊಳ್ಳಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳುವಿರಿ. ಕೆಲಸ ಕಾರ್ಯಗಳ ಬಗ್ಗೆ ಹೆಚ್ಚಿನ ನಿಗಾ ಕೊಡುವಂತೆ ಅಧಿಕಾರಿಗಳಿಂದ ಆದೇಶವಾಗುವುದು.
  • ಕುಂಭ
  • ಆದಾಯ ಎಲ್ಲರ ಕಣ್ಣಿಗೂ ಅಧಿಕವಾಗಿ ಕಂಡರೂ ಅಧಿಕವಾದ ಖರ್ಚೂ ಸಹ ಇರುವುದರಿಂದ ಯಾವುದೇ ರೀತಿಯ ಉಳಿತಾಯ ಸಾಧ್ಯವಾಗುವುದಿಲ್ಲ. ಕ್ಷುಲ್ಲಕ ಕಾರಣಕ್ಕೆ ಉಂಟಾದ ಮನಸ್ತಾಪಗಳು ಬಗೆಹರಿದು ನೆಮ್ಮದಿ ಕಾಣುವಿರಿ.
  • ಮೀನ
  • ಅನುಕೂಲಕರ ವಾತಾವರಣವಿದ್ದಲ್ಲಿ ಇಂದು ನಿಮ್ಮ ವಿಶೇಷ ದಿನಗಳಿಗೆ ಬೇಕಾದ ವಸ್ತು ಖರೀದಿ ಮಾಡಿ. ವಾಣಿಜ್ಯ ವ್ಯವಹಾರಗಳಿಗೆ ಸಂಬಂಧಿಸಿ ಮುಖ್ಯವಾದ ವ್ಯಕ್ತಿಗಳ ಭೇಟಿಗೆ ವಿಘ್ನ ಇರಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.