ADVERTISEMENT

ದಿನ ಭವಿಷ್ಯ: ಸೆಪ್ಟೆಂಬರ್ 2 ಸೋಮವಾರ 2024– ಹೊಸ ವಾಹನ ಖರೀದಿಸುವ ಯೋಗವಿದೆ

ದಿನ ಭವಿಷ್ಯ: ಸೆಪ್ಟೆಂಬರ್ 2 ಸೋಮವಾರ 2024

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 1 ಸೆಪ್ಟೆಂಬರ್ 2024, 18:51 IST
Last Updated 1 ಸೆಪ್ಟೆಂಬರ್ 2024, 18:51 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ನಿಶ್ಚಿತ ಕಾರ್ಯಗಳು ಪ್ರಕೃತಿಯಲ್ಲಿನ ಅನಿಶ್ಚಿತ ಬದಲಾವಣೆಗಳಿಂದಾಗಿ ಹಿಂದುಮುಂದಾಗಬಹುದು. ಹೊಸ ಕೆಲಸವನ್ನು ಆರಂಭ ಮಾಡುವುದು ಸರಿಯಲ್ಲ. ರಾಜಕೀಯ ರಂಗದಲ್ಲಿ ಉತ್ತಮ ಅನುಕೂಲಗಳ ಸಂಭವವಿದೆ.
  • ವೃಷಭ
  • ಅಣ್ಣ-ತಮ್ಮಂದಿರ ಮನೆಯಲ್ಲಿನ ಶುಭಕಾರ್ಯಗಳಲ್ಲಿ ಜವಾಬ್ದಾರಿ ವಹಿಸುವಿರಿ. ಮನೆಯಲ್ಲಿ ಆಗಾಗ ಅಶಾಂತಿಯ ವಾತಾವರಣ ಸೃಷ್ಟಿಯಾಗಬಹುದು. ನಿವೇಶನ ಖರೀದಿಸುವ ಯೋಜನೆ ಹಾಕಿಕೊಳ್ಳಬಹುದು.
  • ಮಿಥುನ
  • ಕನ್ನಡ ಅಥವಾ ಮಾತೃಭಾಷೆಯ ಸಾಹಿತ್ಯದಲ್ಲಿ ಸಂಶೋಧನೆ ನಡೆಸುತ್ತಿರುವವರಿಗೆ ಸಮ್ಮಾನವಾಗುವ ಸಾಧ್ಯತೆ ಇದೆ. ಉದ್ಯೋಗಕ್ಕಾಗಿ ಪರಿಶ್ರಮ ಮತ್ತು ದೇವರ ಕೃಪಾಕಟಾಕ್ಷ ಪಡೆಯಬೇಕಾಗುವುದು.
  • ಕರ್ಕಾಟಕ
  • ನಿಮ್ಮ ಜತೆ ಸ್ಪರ್ಧಿಸುತ್ತಿದ್ದವರಿಗೆ ನೀವು ಎಚ್ಚರ ತಪ್ಪಿದಲ್ಲಿ ಜಯ ಸಿಗುವುದು. ಸಮಯವನ್ನು ಅರಿತು ಎಚ್ಚರಿಕೆಯಿಂದ ವರ್ತಿಸುವುದರಿಂದ ಯಶಸ್ಸು ಹಾಗೂ ಅಭಿವೃದ್ಧಿಗೆ ಕಾರಣವಾಗುತ್ತದೆ. ಹೆಚ್ಚಿನ ಉತ್ಸಾಹವಿರುವುದು.
  • ಸಿಂಹ
  • ಮನೆಯ ಹಿರಿಯರ ಮಧ್ಯಸ್ಥಿಕೆಯಿಂದ ವಿವಾದಗಳು ಬಗೆಹರಿದು ಪುನಃ ಮೊದಲಿನಂತೆ ಸಂಬಂಧ ಗಟ್ಟಿಯಾಗಲಿದೆ. ಹತ್ತಾರು ಜನರಿಗೆ ಮಾರ್ಗದರ್ಶಕ ವ್ಯಕ್ತಿಯಾಗಿ ನೇಮಕಗೊಳ್ಳುವ ಯೋಗವಿದೆ.
  • ಕನ್ಯಾ
  • ಪ್ರವಾಸಕ್ಕಾಗಿ ಹೋದ ಪ್ರದೇಶದಲ್ಲಿ ಕೆಲವು ತೊಂದರೆಗಳಾಗುವಂಥ ಸಂದರ್ಭಗಳಿವೆ. ಸತ್ಯ ಮಾರ್ಗದಿಂದ ಕಾರ್ಯ ಪ್ರವೃತ್ತರಾದಲ್ಲಿ ಅಭಿವೃದ್ಧಿ ಅನುಭವಕ್ಕೆ ಬರಲಿದೆ. ಹೊಸ ವಾಹನ ಖರೀದಿಸುವ ಯೋಗವಿದೆ.
  • ತುಲಾ
  • ಪ್ರಕೃತಿಸಹಜವಾದ ಅವಿನಾಭಾವ ಸಂಬಂಧಗಳನ್ನು ಕಂಡು ನಿಮ್ಮಲ್ಲಿನ ಸಾಹಿತ್ಯ ಅಥವಾ ಚಿತ್ರಕಲಾ ಪ್ರಜ್ಞೆಯು ಎಚ್ಚೆತ್ತುಕೊಳ್ಳುವುದು. ಪುಸ್ತಕ ಮುದ್ರಕ ಹಾಗೂ ಮಾರಾಟಗಾರರಿಗೆ ಅಧಿಕ ಕೆಲಸ ಇರುತ್ತದೆ.
  • ವೃಶ್ಚಿಕ
  • ವಾತ ಅಥವಾ ಪಿತ್ತದಿಂದ ಉಂಟಾದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಪ್ರಾಣಾಯಾಮ ಯೋಗದಂಥ ಮಾರ್ಗ ಉತ್ತಮ . ದುರ್ಗಾ ದೇವಿಯನ್ನು ಆರಾಧಿಸಿದಲ್ಲಿ ಶುಭವು ಪ್ರಾಪ್ತಿಯಾಗುವುದು.
  • ಧನು
  • ಪತ್ನಿಯ ಮೇಲೆ ಗೌರವ ಹೆಚ್ಚಾಗುವುದು. ಇಷ್ಟ ಬಂಧುಗಳಿಂದ ವಿಶೇಷ ವಸ್ತು ಉಡುಗೊರೆಯ ರೂಪದಲ್ಲಿ ದೊರೆಯುವುದು. ಹಾಲು ಮಾರಾಟಗಾರರಿಗೆ ಲಾಭ ಇರುವುದು.
  • ಮಕರ
  • ಬಹುಕಾಲ ನೆನಪಿನಲ್ಲಿ ಉಳಿಯುವಂಥ ಮಧುರ ಘಟನೆ ಮನೆಯಲ್ಲಿ ನಡೆಯಲಿದೆ. ಔದ್ಯೋಗಿಕವಾಗಿ ಅನುಭವಸ್ಥರಿಂದ ಕೇಳಿ ಪಡೆದ ಸಲಹೆ ಸೂಚನೆಗಳಿಂದಾಗಿ ಅಭಿವೃದ್ಧಿ ಹೊಂದುವಿರಿ.
  • ಕುಂಭ
  • ಮನೆಯಲ್ಲಿ ದೇವರ ಪ್ರಾರ್ಥನೆಯನ್ನು ನಡೆಸಿದ ನಂತರ ದೊರೆತ ಸಂತಾನಭಾಗ್ಯದ ಫಲವಾಗಿ ಹರ್ಷ ತುಂಬಿರುತ್ತದೆ. ವಾತಾವರಣದ ಫಲವಾಗಿ ಮಂಡಿಯಲ್ಲಿ ನೋವು ಕಾಣಿಸುತ್ತದೆ. ಹಸಿರು ಬಣ್ಣ ಶುಭ ತರುವುದು.
  • ಮೀನ
  • ಕೆಲಸದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲಿಕ್ಕಾಗಿ ತರಬೇತಿಗಳನ್ನು ತೆಗೆದುಕೊಳ್ಳಲು ಯೋಚನೆ ನಡೆಸುವಿರಿ. ಮಗನಿಗೆ ಹೆಚ್ಚಿನ ಪರಿಶ್ರಮವಿಲ್ಲದೇ ಕೆಲಸ ದೊರೆತಿದ್ದಕ್ಕೆ ಕುಟುಂಬ ಸಂತಸದಲ್ಲಿರುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.