ವಾರ ಭವಿಷ್ಯ: 21-7-2024ರಿಂದ 27-7-2024ರವರೆಗೆ; ಬಡ್ತಿ ದೊರೆಯುವ ಸಂದರ್ಭಗಳಿವೆ
ವಾರ ಭವಿಷ್ಯ: 21-7-2024ರಿಂದ 27-7-2024ರವರೆಗೆ
ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
Published 20 ಜುಲೈ 2024, 18:31 IST
Last Updated 20 ಜುಲೈ 2024, 18:31 IST
ವಾರ ಭವಿಷ್ಯ
ಮೇಷ
ಈ ವಾರವು ನಿಮಗೆ ಶುಭದಾಯಕ ವಾಗಲಿದೆ. ನೀವು ಕೈಹಾಕಿದ ಕೆಲಸಗಳುಯಶಸ್ವಿ ಯಾಗಿ ಕೈಗೂಡುತ್ತವೆ. ವೃತ್ತಿಯಲ್ಲಿರುವವರಿಗೆ ಹೆಚ್ಚಿನ ಸ್ಥಾನಮಾನಗಳು ದೊರೆಯುವ ಸಾಧ್ಯತೆ ಗಳಿವೆ. ಸ್ಥಾನಬದಲಾವಣೆಅಥವಾವರ್ಗಾವಣೆಗೆ ಯತ್ನಿಸುತ್ತಿರುವವರಿಗೆ ಹೆಚ್ಚಿನ ಅನುಕೂಲವಾ ಗುತ್ತದೆ. ಆರೋಗ್ಯದ ಸಮಸ್ಯೆ ಕಾಣಬಹುದು. ಈ ಬಗ್ಗೆ ಸರಿಯಾಗಿ ತಿಳುವಳಿಕೆ ಪಡೆಯಿರಿ. ಮಕ್ಕಳಿಗೆ ಹಿರಿಯರಿಗೆ ಅಜೀರ್ಣ ಸಮಸ್ಯೆ ಕಾಡಬಹುದು. ಕೃಷಿ ಬೆಳಗಾರರಿಗೆ ನಿರೀಕ್ಷಿತಮಟ್ಟದ ಲಾಭ ದೊರೆ ಯದಿರಬಹುದು. ಹಣದ ವ್ಯವಹಾರ ಮಾಡುವ ವರಿಗೆ ಸ್ವಲ್ಪ ಮಟ್ಟಿನ ಲಾಭವಿರುತ್ತದೆ. ಉದ್ಯೋಗ ದಲ್ಲಿ ನಿರೀಕ್ಷಿತಪ್ರಗತಿ ಇರುವುದಿಲ್ಲ ಆದರೂ ಸ್ವಲ್ಪ ಮಟ್ಟಿನ ಪ್ರಗತಿ ಇರುತ್ತದೆ.
ವೃಷಭ
ಸ್ವಲ್ಪ ಈ ವಾರ ನಿಮ್ಮ ಕೆಲಸಕಾರ್ಯ ಗಳಲ್ಲಿ ಹಿನ್ನಡೆಯನ್ನು ಕಾಣಬಹುದು. ಆರಂಭಿ ಸಿದ ಕೆಲಸಗಳು ಮುಗಿಯದೇ ಹೆಚ್ಚು ಒತ್ತಡ ವನ್ನು ಅನುಭವಿಸುವಿರಿ. ಮನೆಯನ್ನು ಕಟ್ಟುತ್ತಿ ರುವವರಿಗೆ ಕೆಲಸ ಕಾರ್ಯಗಳು ನಿಧಾನವಾಗ ಬಹುದು. ಸ್ಟೇಷನರಿ ವಸ್ತುಗಳನ್ನು ಮಾರಾಟ ಮಾಡುವವರಿಗೆ ಲಾಭ ಹೆಚ್ಚುತ್ತದೆ. ಕೃಷಿಕರಿಗೆ ಆದಾಯ ಕಡಿಮೆಯಾಗಬಹುದು , ಕೃಷಿಯಲ್ಲಿ ಸ್ವಲ್ಪ ತೊಂದರೆಗಳನ್ನು ಕಾಣಬಹುದು. ವಿದೇಶ ದಲ್ಲಿರುವವರಿಗೆ ಕೆಲಸ ಕಾರ್ಯಗಳಲ್ಲಿ ಸ್ವಲ್ಪ ಹಿನ್ನೆಡೆ ಆಗಬಹುದು. ನಿಂತಿದ್ದ ಕೃಷಿಚಟುವಟಿಕೆ ಗಳು ಪುನಃ ಆರಂಭವಾಗುತ್ತವೆ. ಹೆಚ್ಚಿನ ಒಳಿತಿ ಗಾಗಿ ದೇವಿ ಆರಾಧನೆಯನ್ನು ಮಾಡುವುದು ಉತ್ತಮ.ವೃತ್ತಿಯಲ್ಲಿ ಏರಿಳಿತ ವಿರುವುದಿಲ್ಲ.
ಮಿಥುನ
ಈ ವಾರ ಬಹಳ ಅದ್ಭುತವಾಗಿರುತ್ತದೆ. ಕೈ ಹಾಕಿದ ಕೆಲಸಗಳಲ್ಲಿ ಯಶಸ್ಸನ್ನುಕಾಣುವಿರಿ. ಆದಾಯವು ನಿಮ್ಮ ನಿರೀಕ್ಷೆಯಷ್ಟಿರುತ್ತದೆ. ಈಗ ನಿಂತು ಹೋಗಿದ್ದ ಕೆಲಸಗಳನ್ನು ಪೂರೈಸಿ ಕೊಳ್ಳ ಬಹುದು. ಕೆಲವರಿಗೆ ಕೀರ್ತಿ ಗೌರವಗಳು ದೊರೆ ಯುತ್ತವೆ. ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚು ಅಭಿವೃದ್ಧಿ ಇರುತ್ತದೆ. ಕೆಲವರಿಗೆ ಸಂಧಿವಾತ ಅಥವಾ ತಲೆನೋವು ಕಾಡಬಹುದು.ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚುಗಮನ ಕೊಡಿರಿ. ಮಾತ ನಾಡುವಾಗ ಎಚ್ಚರವಿರಲಿ. ಕೃಷಿಯಿಂದ ಅನಿ ರೀಕ್ಷಿತ ಲಾಭವಿರುತ್ತದೆ.ವಿದೇಶದಲ್ಲಿ ಉದ್ಯೋಗ ಅರಸುತ್ತಿರುವವರಿಗೆ ಈಗ ಉತ್ತಮ ಅವಕಾಶ ಗಳು ದೊರೆಯುತ್ತವೆ. ಭೂಮಿ ವ್ಯಾಪಾರ ಮಾಡುವವರಿಗೆ ಲಾಭವಿರುತ್ತದೆ.
ಕರ್ಕಾಟಕ
ವಾರದ ಆರಂಭ ಅಂತಹ ಶುಭದಾಯಕ ವಾಗಿರುವುದಿಲ್ಲ.ತಕ್ಷಣದನಷ್ಟಗಳು ಆಗಬಹುದು. ಕೆಲಸ ಕಾರ್ಯಗಳಲ್ಲಿ ನಿದಾನತೆಯನ್ನು ಕಾಣಬ ಹುದು. ಒಂದೆರಡು ದಿನಗಳ ನಂತರ ಕೆಲಸ ಕಾರ್ಯಗಳಲ್ಲಿ ಚುರುಕುತನವನ್ನುಕಾಣಬಹುದು. ಭೂಮಿ ವ್ಯಾಪಾರ ಮಾಡುವುದು ಅಂತಹ ಶ್ರೇಯಸ್ಕರವಲ್ಲ. ಕೃಷಿಕರಿಗೆ ಸ್ವಲ್ಪ ಹಿನ್ನಡೆಯಾ ದರೂ ಬೆಳೆದ ಬೆಳೆಗೆ ಉತ್ತಮ ಲಾಭದೊರೆಯು ತ್ತದೆ. ಪಾಲುದಾರಿಕೆ ವ್ಯವಹಾರಗಳಲ್ಲಿ ಹೆಚ್ಚು ಎಚ್ಚರವಾಗಿರಿ. ಗಣಿಗಾರಿಕೆ ಯಂತ್ರಗಳನ್ನು ನಡೆ ಸುವವರಿಗೆ ಹೆಚ್ಚು ವ್ಯವಹಾರವಿರುತ್ತದೆ. ವಿದೇಶ ಗಳಲ್ಲಿ ಆಹಾರ ವಸ್ತುಗಳನ್ನು ತಯಾರಿಸಿ ಮಾರು ವವರಿಗೆ ಲಾಭವಿರುತ್ತದೆ. ಉದ್ಯೋಗ ಸ್ಥಳದಲ್ಲಿ ನಾಯಕರಾಗುವ ಅವಕಾಶಗಳು ಇರುತ್ತವೆ.
ಸಿಂಹ
ವೃತ್ತಿಪರ ವ್ಯಾಸಂಗ ಮಾಡುವವರಿಗೆ ಹೆಚ್ಚಿನ ಅನುಕೂಲವಿರುತ್ತದೆ. ಸಾಮಾನ್ಯ ವಿದ್ಯಾರ್ಥಿಗಳಿಗೆ ಸ್ವಲ್ಪ ಒತ್ತಡಗಳು ಹೆಚ್ಚಾಗುವ ಸಾಧ್ಯತೆ ಇದೆ. ಆದಾಯವು ಸಾಮಾನ್ಯ ಗತಿ ಯಲ್ಲಿರುತ್ತದೆ. ಸರ್ಕಾರಿ ಅಧಿಕಾರಿಗಳಿಗೆ ಬಡ್ತಿ ದೊರೆಯುವ ಸಂದರ್ಭಗಳಿವೆ. ಕೆಲವರಿಗೆ ದೂರಪ್ರದೇಶಗಳಿಗೆ ವರ್ಗಾವಣೆಯಾದರೂ ಸಹ ಹೆಚ್ಚಿನ ಹಣಕಾಸು ಅನುಕೂಲಗಳು ದೊರೆ ಯುತ್ತವೆ. ಹಿರಿಯರೊಂದಿಗೆ ಸಂಬಂಧವನ್ನು ಚೆನ್ನಾಗಿ ಇಟ್ಟುಕೊಳ್ಳಿರಿ. ಸ್ವಯಂ ಉದ್ಯೋಗ ಮಾಡುವವರಿಗೆ ಹೆಚ್ಚು ಅನುಕೂಲವಿರುತ್ತದೆ. ಉದ್ಯೋಗದ ಸ್ಥಿರತೆಗಾಗಿ ಹಿರಿಯಅಧಿಕಾರಿಗಳ ಮೊರೆ ಹೋಗುವಿರಿ. ಸರ್ಕಾರಿ ಸಂಸ್ಥೆಗಳ ಜೊತೆ ವ್ಯವಹಾರ ಮಾಡುವವರಿಗೆಅಭಿವೃದ್ಧಿಇರುತ್ತದೆ.
ಕನ್ಯಾ
ಆರಂಭದಲ್ಲಿ ನಿಮ್ಮ ಕೆಲಸ ಕಾರ್ಯಗಳು ವೇಗವಾಗಿ ನಡೆಯುತ್ತವೆ. ಆದಾಯವು ನಿಮ್ಮ ಅಗತ್ಯವನ್ನು ಪೂರೈಸುತ್ತದೆ.ಸಾಕುಪ್ರಾಣಿಗಳಿಂದ ತೊಂದರೆ ಬರಬಹುದು. ಹಂಗಾಮಿ ಉದ್ಯೋಗ ದಲ್ಲಿರುವವರು ಶ್ರದ್ಧೆಯಿಂದ ಕೆಲಸ ಮಾಡಿದಲ್ಲಿ ಉದ್ಯೋಗ ಖಾಯಂ ಆಗುವ ಸಾಧ್ಯತೆ ಇದೆ. ಆರೋಗ್ಯದಲ್ಲಿ ದಿಡೀರ್ ಸಮಸ್ಯೆಗಳು ಆಗುವ ಸಂದರ್ಭವಿದೆ. ಪಾಲುದಾರಿಕೆಯ ವ್ಯವಹಾರ ಗಳಿಂದ ಆದಾಯ ಬರುತ್ತದೆ.ಕುಸ್ತಿಪಟುಗಳಿಗೆ ಅನಿರೀಕ್ಷಿತ ಅವಕಾಶ ದೊರೆತು ಸಾಧನೆ ಮಾಡ ಬಹುದು . ದೊಡ್ಡ ಪಂಡಿತರುಗಳಿಗೆ ಉತ್ತಮ ವೇದಿಕೆ ದೊರೆಯುತ್ತದೆ. ದ್ರವ ರೂಪದ ಆಹಾರ ವಸ್ತುಗಳನ್ನು ತಯಾರಿಸಿ ಮಾರುವವರಿಗೆ ಲಾಭ ವಿದೆ. ಹೆಚ್ಚಿನಒಳಿತಿಗಾಗಿ ಈಶ್ವರನಧ್ಯಾನಅಗತ್ಯ.
ತುಲಾ
ಮನಸ್ಸು ನಿಮ್ಮ ಹತೋಟಿಯಲ್ಲಿ ಇರುವುದಿಲ್ಲ. ಕೋಪತಾಪಗಳು ಹೆಚ್ಚಾಗಿ ಕಾಡು ತ್ತವೆ. ಕೆಲಸ ಕಾರ್ಯಗಳು ಬಹಳ ನಿಧಾನವಾಗಿ ಮಾನಸಿಕ ಒತ್ತಡ ಹೆಚ್ಚುತ್ತದೆ. ಯಾವುದೇ ದ್ವಂದ್ವ ವಿಲ್ಲದೆ ಹೊಸ ಕಾರ್ಯಗಳನ್ನು ಆರಂಭಿಸಿದಾಗ ಉತ್ತಮಫಲ ಸಿಗುತ್ತದೆ. ವಾರದ ಮಧ್ಯ ಭಾಗ ದಲ್ಲಿ ಧನಲಾಭ ಆಗುವ ಸಾಧ್ಯತೆಗಳಿವೆ.ಮನಸ್ಸಿನ ಒತ್ತಡದಿಂದ ರಕ್ತದಒತ್ತಡ ಅಥವಾ ಇತರೆನೋವು ಗಳು ಕಾಣಿಸಬಹುದು. ಕುಲದೇವರ ಪ್ರಾರ್ಥನೆ ಯಿಂದ ಒಳಿತನ್ನು ಕಾಣಬಹುದು. ವೃತ್ತಿಯಲ್ಲಿ ಸ್ತ್ರೀ ಮಹಿಳಾಧಿಕಾರಿಗಳ ಕೈಯಲ್ಲಿ ಸಿಕ್ಕಿ ಬೀಳುವ ಸಾಧ್ಯತೆ ಇದೆ. ಸರ್ಕಾರಿ ಏಜೆಂಟರಗಳಾಗಿ ಕೆಲಸ ಮಾಡುವವರಿಗೆ ಲಾಭವಿದೆ. ವೃತ್ತಿಯಲ್ಲಿ ಸ್ಥಿರತೆ ಇರುತ್ತದೆ.
ವೃಶ್ಚಿಕ
ಮಾಮೂಲಿಯ ಜೀವನ ನಡೆಯುತ್ತದೆ. ಆದಾಯವು ನಿರೀಕ್ಷೆಯಷ್ಟಿರುತ್ತದೆ. ಸ್ಥಿರಾಸ್ತಿ ಮಾಡುವ ವಿಚಾರದಲ್ಲಿ ನಿಧಾನ ಮಾಡಿರಿ. ವಿದ್ಯಾರ್ಥಿಗಳಿಗೆ ಉತ್ತಮವಾದ ವಾರ. ವಿದೇಶ ದಲ್ಲಿ ಓದಬೇಕೆನ್ನುತ್ತಿರುವವರಿಗೆ ಅವಕಾಶ ಮತ್ತು ಅನುಕೂಲಗಳು ದೊರೆಯುತ್ತವೆ. ವೃತ್ತಿ ಪರ ವ್ಯಾಸಂಗಕ್ಕೆ ಅನುಕೂಲತೆಗಳು ದೊರೆಯು ತ್ತವೆ. ಕುಟುಂಬದಲ್ಲಿ ಹೊಂದಾಣಿಕೆಯನ್ನು ಮಾಡಿಕೊಳ್ಳುವುದು ಬಹಳ ಮುಖ್ಯ. ತಾಯಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿರಿ. ಕೆಲವು ತೆರಿಗೆ ತಜ್ಞರಿಗೆ ವಿದೇಶಕ್ಕೆಹೋಗಿ ಬರುವ ಅವಕಾಶವಿರುತ್ತದೆ. ಪಶುಸಂಗೋಪನೆ ಮಾಡು ವವರಿಗೆ ಹೆಚ್ಚುಅನುಕೂಲವಿರುತ್ತದೆ. ಧಾರ್ಮಿಕ ವೃತ್ತಿಯನ್ನು ಮಾಡುತ್ತಿರುವವರಿಗೆ ಆದಾಯ ಹೆಚ್ಚುತ್ತದೆ.
ಧನು
ಕಾರ್ಯಸಿದ್ಧಿಯಾಗುವ ಕಾಲ ಒದಗಿ ಬಂದಿದೆ. ನಿಮ್ಮ ಆಸೆಗಳು ಬಹುತೇಕ ಪೂರ್ಣ ಗೊಳ್ಳಬಹುದು. ಚುರುಕುತನದಿಂದ ಕೆಲಸ ಮಾಡುವುದು ನಿಮಗೆ ಒಳಿತು. ಇದರಿಂದ ಯಶಸ್ಸು ನಿಮಗೆ ದೊರೆಯುತ್ತದೆ. ನಿಮ್ಮ ಕಾಲ ವನ್ನು ಸರಿಯಾಗಿ ಬಳಸಿಕೊಂಡಲ್ಲಿ ಆರ್ಥಿಕ ಸ್ಥಿತಿಯಲ್ಲಿ ಮೇಲೆರಬಹುದು. ಆದಾಯವು ಸಾಮಾನ್ಯವಾಗಿರುತ್ತದೆ. ಸಿದ್ಧಉಡುಪುಗಳನ್ನು ತಯಾರಿಸುವವರಿಗೆ ಬೇಡಿಕೆ ಹೆಚ್ಚುತ್ತದೆ. ಕ್ರೀಡಾ ಪಟುಗಳಿಗೆ ಬೇಕಾಗಿದ್ದ ಸೌಲಭ್ಯಗಳು ದೊರೆ ಯುತ್ತವೆ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅಡ್ಡಿ ಬಂದರೂ ಕೆಲಸಗಳಾಗುತ್ತವೆ. ಹಿರಿಯರಿಂದ ನಿರೀಕ್ಷಿಸಿದ್ದ ಧನಸಹಕಾರಗಳು ಸಿಗದಿರ ಬಹುದು. ಕ್ರೀಡಾ ತರಬೇತುದಾರರಿಗೆ ಹೆಚ್ಚಿನ ಕೆಲಸವಿರುತ್ತದೆ.
ಮಕರ
ಶ್ರಮಪಟ್ಟು ಮೇಲೆ ಬರುವಿರಿ. ನೀವು ನ್ಯಾಯವಾಗಿ ಮಾತನಾಡುವುದರಿಂದ ಶತ್ರುಗ ಳಷ್ಟೇ ಮಿತ್ರರೂ ಇರುವರು.ಆದಾಯವು ಸಾಮಾನ್ಯವಾಗಿದ್ದು ಅದರಲ್ಲೇ ನಿರ್ವಹಣೆ ಮಾಡುವಿರಿ. ನಿಮ್ಮ ಪರಾಕ್ರಮವನ್ನು ಕಂಡು ಶತ್ರುಗಳು ದಂಗಾಗುವರು. ಕೃಷಿಯಿಂದಆದಾಯ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ದಯೋಗ ಇರುತ್ತದೆ. ಸ್ತ್ರೀಯರ ಸಿದ್ದ ಉಡುಪು ಗಳನ್ನು ತಯಾರು ಮಾಡುವವರಿಗೆ ವ್ಯಾಪಾರ ಹೆಚ್ಚುತ್ತದೆ. ಹೈನುಗಾರಿಕೆ ಮಾಡುವವರಿಗೆ ಆದಾಯ ಕಡಿಮೆಯಾಗಬಹುದು. ಪ್ರೀತಿಯ ವಿಷಯದಲ್ಲಿ ಶುಭವಾರ್ತೆಗಳು ಕೇಳಿ ಬರುತ್ತವೆ. ಸರ್ಕಾರಿ ಕೆಲಸದಲ್ಲಿರುವವರಿಗೆ ಆದಾಯವು ಕಡಿಮೆಯಾಗಬಹುದು. ವೃತ್ತಿಯಲ್ಲಿ ಏಳಿಗೆ ಇರುತ್ತದೆ.
ಕುಂಭ
ಹಿರಿಯರು ತಾಳ್ಮೆಯಿಂದ ಕಷ್ಟ ಸಹಿಷ್ಣು ಗಳಾಗಿರುವರು. ಆದಾಯವು ಮಂದಗತಿಯಲ್ಲಿ ರುತ್ತದೆ. ವಿದೇಶದಲ್ಲಿರುವವರಿಗೆ ಆದಾಯ ಹೆಚ್ಚು ತ್ತದೆ. ವಿದೇಶಿ ವ್ಯವಹಾರ ಮಾಡುವವರಿಗೆ ಲಾಭ ವಿರುತ್ತದೆ. ಬಂಧುಗಳನ್ನು ಒಗ್ಗೂಡಿಸಲು ಹಿರಿ ಯರು ಶ್ರಮಪಡುವರು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ರುವವರಿಗೆ ಅಭಿವೃದ್ಧಿ ಇರುತ್ತದೆ. ತಲೆ ನೋವು ಮತ್ತು ಗುಪ್ತ ರೋಗಗಳಿರುವವರು ಎಚ್ಚರ ವಹಿ ಸಿರಿ. ಸಂಗಾತಿ ಮಾಡಿದ ವ್ಯವಹಾರಗಳಲ್ಲಿ ಹೆಚ್ಚು ಲಾಭವಿರುತ್ತದೆ. ಯುವಕರ ಹುಚ್ಚಾಟಗಳು ಅವರಿಗೆ ತೊಂದರೆ ತರಿಸಬಹುದು. ಸ್ತ್ರೀಯರು ನಡೆಸುವ ವ್ಯವಹಾರಗಳಲ್ಲಿ ಹೆಚ್ಚು ಆದಾಯ ವಿರುತ್ತದೆ. ದ್ರವರೂಪದ ವಸ್ತುಗಳನ್ನು ಮಾರುವವರಿಗೆ ಅಧಿಕ ಲಾಭ ವಿರುತ್ತದೆ.
ಮೀನ
ನಿಮ್ಮಲ್ಲಿ ದ್ವಿಮುಖ ನೀತಿ ಇರುತ್ತದೆ. ಆದಾಯವು ಮಧ್ಯಮ ಗತಿಯಲ್ಲಿರುತ್ತದೆ. ಕೃಷಿ ಯಿಂದ ಹೆಚ್ಚಿನ ಆದಾಯವಿರುತ್ತದೆ. ನಿಮ್ಮ ಉದ್ಯೋಗದ ಜಾಗದಲ್ಲಿ ಹಿರಿಯ ಅಧಿಕಾರಿಗ ಳನ್ನು ಓಲೈಕೆ ಮಾಡಿ ಮುನ್ನಡೆಯುವಿರಿ. ಕಬ್ಬಿಣದ ವ್ಯಾಪಾರಿಗಳಿಗೆ ಉತ್ತಮ ವ್ಯಾಪಾರ ವಿರುತ್ತದೆ. ಉದ್ದಿಮೆದಾರರಿಗೆ ಕೆಲಸಗಾರರಿಂದ ತೊಂದರೆ ಬರಬಹುದು. ಆಭರಣ ವ್ಯಾಪಾರಿ ಗಳಿಗೆ ವ್ಯಾಪಾರಗಳು ಹೆಚ್ಚುತ್ತದೆ. ಬರಬೇಕಿದ್ದ ಹಿರಿಯರ ಒಡವೆಗಳು ಬರುವುದು ನಿಧಾನವಾಗು ತ್ತದೆ. ವೃತ್ತಿಯಲ್ಲಿ ಏರಿಳಿತವಿರುವುದಿಲ್ಲ. ಕಬ್ಬಿಣದ ಅಲಂಕಾರಿಕ ವಸ್ತುಗಳನ್ನು ತಯಾರಿಸುವವರಿಗೆ ವ್ಯವಹಾರ ಹೆಚ್ಚುತ್ತದೆ.ಕೃಷಿಯಿಂದ ಹೆಚ್ಚು ಆದಾಯವಿರುತ್ತದೆ.