ADVERTISEMENT

ದಿನ ಭವಿಷ್ಯ: ಈ ರಾಶಿಯ ಸಣ್ಣ ಕೈಗಾರಿಕೋದ್ಯಮಿಗಳಿಗೆ ರಫ್ತು ಮಾರಾಟದಿಂದ ಹೇರಳ ಲಾಭ

ಜುಲೈ 02 ಮಂಗಳವಾರ 2024

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 1 ಜುಲೈ 2024, 18:52 IST
Last Updated 1 ಜುಲೈ 2024, 18:52 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ನಿಂತು ಹೋಗಿರುವ ವ್ಯವಸಾಯದಲ್ಲಿಯೇ ಹೆಚ್ಚು ಆದಾಯ ಎಂಬುದನ್ನು ಕಂಡುಕೊಳ್ಳುವಿರಿ. ಧರ್ಮಾಚರಣೆಯಲ್ಲಿ ಕುಂದುಕೊರತೆಗಳನ್ನು ಮಾಡುವುದು ಶ್ರೇಯಸ್ಕರವಾಗಿರುವುದಿಲ್ಲ.
  • ವೃಷಭ
  • ಅನುಪಯುಕ್ತ ವಸ್ತುಗಳನ್ನು ಮನೆಯಿಂದ ಹೊರ ಹಾಕದ ಹೊರತು ಮನೆಯನ್ನು ಚೊಕ್ಕಗೊಳಿಸಲು ಸಾಧ್ಯವಾಗುವುದಿಲ್ಲ. ಸ್ನೇಹಿತರ ಒತ್ತಡದಿಂದಾಗಿ ಮಗಳಿಗೆ ವಿವಾಹ ಸಂಬಂಧ ಕೂಡಿ ಬರಲಿದೆ.
  • ಮಿಥುನ
  • ಅಪರೂಪದ ಅಳಿವಿನಂಚಿನಲ್ಲಿರುವ ವಿದ್ಯೆಯ ಬಗ್ಗೆ ಸಂದರ್ಶನ ಕೊಡುವಂತೆ ಪತ್ರಿಕೆ ಅಥವಾ ದೂರದರ್ಶನ ಮಾಧ್ಯಮದವರು ಬರುವರು. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಅಧ್ಯಯನ ಅಗತ್ಯ.
  • ಕರ್ಕಾಟಕ
  • ದಾಂಪತ್ಯ ಜೀವನದಲ್ಲಿ ಕೆಲವು ಮಾತುಗಳು ಕಿವಿಯ ಮೇಲೆ ಬಿದ್ದರೂ ನಿರ್ಲಕ್ಷಿಸುವುದು ಒಳ್ಳೆಯದು. ಜೀವನದಲ್ಲಿನ ಸಂತೋಷ ಪಡೆಯಲು ಸಾಕಷ್ಟು ಅವಕಾಶಗಳು ಲಭಿಸಲಿವೆ. ಎಲ್ಲಾ ವಿಚಾರದಲ್ಲೂ ಎಚ್ಚರದ ನಡೆ ಇರಲಿ.
  • ಸಿಂಹ
  • ಕೋಪದಿಂದ ಪರಿಹಾರವಾಗದ ಕೌಟುಂಬಿಕ ಸಮಸ್ಯೆಗಳು ಮೃದು ಮಾತಿನಿಂದ ಪರಿಹಾರವಾಗುತ್ತದೆ. ಮುಗಿದ ಸಮಾರಂಭದ ಉಳಿದ ಕೆಲಸಗಳು ಮಾಡಿದಷ್ಟೂ ಇದ್ದಂತೆ ಭಾಸವಾಗುತ್ತದೆ. ಪ್ರಯತ್ನವು ಮುಖ್ಯವಾಗಿರುತ್ತದೆ.
  • ಕನ್ಯಾ
  • ಸಣ್ಣ ಕೈಗಾರಿಕೋದ್ಯಮಿಗಳಿಗೆ ರಫ್ತು ಮಾರಾಟದಿಂದ ಹೇರಳ ಲಾಭ. ಅಭಿಪ್ರಾಯಗಳಿಗೆ ಕುಟುಂಬದವರು ಸಮ್ಮತಿಯನ್ನು ಕೊಡಲಿದ್ದಾರೆ. ವ್ಯಾಪಾರದಲ್ಲಿ ಮಿಶ್ರಫಲವಿರುವುದು.
  • ತುಲಾ
  • ಅಧಿಕಾರಿಗಳಿಗೆ ಆಹ್ವಾನವನ್ನು ಮಾಡುವ ದಿನಗಣನೆಯನ್ನು ಶುರುಮಾಡುವಿರಿ. ಸುಖ-ದುಃಖದ ಸಮ ಫಲವನ್ನು ಅನುಭವಿಸುವಂತಾಗುವುದು. ಗುರು ಹಿರಿಯರಲ್ಲಿ ಅಗೌರವ ತೋರದಿರಿ.
  • ವೃಶ್ಚಿಕ
  • ಎಂಜಿನಿಯರಿಂಗ್‌ ಕ್ಷೇತ್ರದಲ್ಲಿರುವವರಿಗೆ ಅವಕಾಶಗಳ ಜತೆಯಲ್ಲಿ ಬಯಸಿದ ಜಾಗ ಹಾಗೂ ಹೆಸರಾಂತ ಕಂಪೆನಿಯಲ್ಲಿ ಕೆಲಸ ಸಿಗುವ ಸಾಧ್ಯತೆಗಳು ಇವೆ. ವಾದ ವಿವಾದಗಳಿಂದ ದೂರ ಉಳಿಯುವ ಪ್ರಯತ್ನ ಮಾಡಿರಿ.
  • ಧನು
  • ಮಕ್ಕಳ ಪ್ರತಿ ಹೆಜ್ಜೆಯ ಮೇಲೂ ಎಚ್ಚರಿಕೆಯ ಕಣ್ಣನ್ನು ಇಟ್ಟಿರಲೇಬೇಕಾಗುತ್ತದೆ. ಬದಲಾದ ದಿನಚರಿಗೆ ಹೊಂದಿಕೊಳ್ಳುವುದು ಕಷ್ಟದ ಕೆಲಸವಾಗಿ ಪರಿಣಮಿಸಬಹುದು. ಹಣದ ಅಡಚಣೆ ಇರುವುದಿಲ್ಲ.
  • ಮಕರ
  • ಎಷ್ಟೇ ದೊಡ್ಡ ಸಮಾರಂಭದಲ್ಲಿ ಭಾಗವಹಿಸುವುದಾದರೂ ನೋಡುವವರ ಕಣ್ಣಿಗೆ ಹೆಚ್ಚೆಂದು ಕಾಣುವಂಥ ನಡವಳಿಕೆಗಿಂತ ಸರಳತೆಗೆ ಸ್ಥಾನಮಾನ ದೊರಕುತ್ತದೆ. ಲೇವಾದೇವಿ ವ್ಯವಹಾರ ಮುಂದುವರಿಯುವುದು.
  • ಕುಂಭ
  • ಯಾವುದೋ ಪುಸ್ತಕಗಳನ್ನು ಓದುವುದರಿಂದಾಗಿ ಮನಸ್ಸು ಶೂನ್ಯದ ಕಡೆಗೆ ವಾಲುತ್ತಿರುವಂತೆ ಭಾಸವಾಗುತ್ತದೆ. ವಿಷಜಂತುಗಳ ಕಡಿತಕ್ಕೆ ಒಳಗಾಗುವಂಥ ಸಾಧ್ಯತೆ ಇರುವುರಿಂದ ಎಚ್ಚರದಲ್ಲಿರಿ.
  • ಮೀನ
  • ಸಾಮ್ಯತೆಗಳನ್ನೇ ಹುಡುಕಿ ಗೆಳೆತನ ಮಾಡಿದರೂ ಗೆಳೆತನದಲ್ಲಿ ಭಿನ್ನಾಭಿಪ್ರಾಯಗಳೇ ಹೆಚ್ಚಾಗಿ ಕಾಣುವುದು. ತಂದೆ ತಾಯಿಯರನ್ನು ಸಂತೋಷ ಪಡಿಸುವಂಥ ಕ್ಷಣಗಳಿಗೆ ಹೆಮ್ಮೆ ಎಂದೆನಿಸುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.