ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ಮಕ್ಕಳೊಂದಿಗೆ ವಿದೇಶ ಪ್ರಯಾಣ ಮಾಡುವ ಸಂದರ್ಭ ಬರಲಿದೆ

04 ಜುಲೈ 2024, ಗುರುವಾರ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 3 ಜುಲೈ 2024, 19:30 IST
Last Updated 3 ಜುಲೈ 2024, 19:30 IST
   
ಮೇಷ
  • ತುಂಬ ಮೃದುವಾಗಿ ಬದುಕನ್ನು ಸಾಗಿಸಿದವರಿಗೆ ಕಳೆಯಬೇಕಾದ ಬದುಕು ಸ್ವಲ್ಪ ಕಷ್ಟಕರವೆಂದು ತೋರಬಹುದು. ಹಣ್ಣು ತರಕಾರಿ ವ್ಯಾಪಾರಿಗಳಿಗೆ ಸರಕು ಸಾಗಣೆಯಲ್ಲಿ ತೊಂದರೆಗಳಾಗಬಹುದು.
  • ವೃಷಭ
  • ತಾಳ್ಮೆಯಿಂದ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಎಚ್ಚರಿಕೆಯ ಮಾತುಗಳು ಹಿರಿಯರಿಂದ ಕೇಳಬೇಕಾಗಬಹುದು. ಹಾಗೆ ನಡೆದುಕೊಳ್ಳಿ. ಮದುವೆಯ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ದುಡುಕುವುದು ಬೇಡ.
  • ಮಿಥುನ
  • ಮುಖ್ಯ ವ್ಯಕ್ತಿಯ ಬಳಿ ಮಾತನಾಡುವಾಗ ಪೂರ್ವ ತಯಾರಿ ಮಾಡಿಕೊಳ್ಳುವುದು ಪ್ರಮುಖವಾಗುವುದು. ರಾಸಾಯನಿಕ ವಸ್ತುಗಳ ಮಾರಾಟಗಾರರಿಗೆ ಲಾಭಾಂಶ ವೃದ್ಧಿ. ದೇವತಾ ಅನುಗ್ರಹ ಸದಾ ಇರಲಿದೆ.
  • ಕರ್ಕಾಟಕ
  • ಸುಲಭವಾಗಿ ಕೆಲವೊಂದು ವಿಷಯಗಳು ಎಲ್ಲರಿಗೂ ಲಭ್ಯವಾಗುವುದು; ಕೆಲವೊಂದು ಸಮಯದಲ್ಲಿ ಕುಟುಂಬದವರಿಗೆ ತೊಂದರೆಯಾಗುತ್ತದೆ. ಮಕ್ಕಳೊಂದಿಗೆ ವಿದೇಶ ಪ್ರಯಾಣ ಮಾಡುವ ಸಂದರ್ಭ ಬರಲಿದೆ.
  • ಸಿಂಹ
  • ರಾಜಕೀಯದವರಿಂದ ಸಾಮಾಜಿಕ ಕಾರ್ಯ ಸಾಧಿಸಿಕೊಳ್ಳುವಲ್ಲಿ ಪಾತ್ರ ಮುಖ್ಯವಾಗಿರಲಿದೆ. ವರ್ಗಾವಣೆಯಿಂದಾಗಿ ದೂರದೂರಿನಲ್ಲಿ ವಾಸಿಸುವ ಸಂದರ್ಭ ಬರಲಿದೆ. ಅಕ್ಕ ಪಕ್ಕದವರಲ್ಲಿ ಅನುಕಂಪ ತೋರುವಿರಿ.
  • ಕನ್ಯಾ
  • ದೇಹ ಪ್ರಕೃತಿಗೆ ಸರಿ ಹೊಂದದಂಥ ಆಹಾರವನ್ನು ಸ್ವೀಕರಿಸಿದ ಕಾರಣಕ್ಕೆ ಅನಾರೋಗ್ಯ ಉಂಟಾಗುವುದು. ಸಾಮಾಜಿಕ ಜೀವನದಲ್ಲಿ ಮತ್ತು ಭಾವನಾತ್ಮಕ ಸಂಬಂಧಗಳಲ್ಲಿ ಉತ್ತಮ ಪ್ರಗತಿ ಹೊಂದುವಿರಿ.
  • ತುಲಾ
  • ಸಹೋದರ ಅಥವಾ ಸಹೋದರಿಯರ ಆರೋಗ್ಯ ವಿಚಾರವಾಗಿ ಹಣ, ಸಮಯ ಕೊಡುವಿರಿ. ನಿತ್ಯ ಕೆಲಸಗಳನ್ನೇ ವಿಶೇಷವಾಗಿ ಮಾಡುವ ರೀತಿಯನ್ನು ಕಂಡುಕೊಳ್ಳುವಿರಿ. ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುವ ಬಗ್ಗೆ ಯೋಚಿಸಿ.
  • ವೃಶ್ಚಿಕ
  • ಆಸ್ತಿಯನ್ನು ಸೇರಬೇಕಾದವರಿಗೆಲ್ಲರಿಗೂ ಸೇರಿಸುವಂಥ ಕೆಲಸವನ್ನು ಮಾಡಬೇಕಾದೀತು . ಪ್ರಾರಂಭಿಕ ವಿಫಲತೆಯ ಬಗ್ಗೆ ನೀವು ನಿರಾಶೆಗೊಳ್ಳಬಾರದು. ಅಧಿಕ ಸುತ್ತಾಟದಿಂದ ಆಯಾಸವಾಗುವುದು.
  • ಧನು
  • ಸರಿ ರೀತಿಯಲ್ಲಿ ರೂಪುರೇಷೆಯನ್ನು ಹಾಕಿಕೊಳ್ಳದೆ ಶುರು ಮಾಡಿದ ಕೆಲಸವು ಶುರುವಿನಲ್ಲಿ ವಿಘ್ನಗಳನ್ನು ಎದುರಿಸುವುದು. ತಾಂತ್ರಿಕ ಕ್ಷೇತ್ರದಲ್ಲಿರುವವರು ಸಾಧನೆಯನ್ನು ಮಾಡುವಿರಿ. ಬಟ್ಟೆ ವ್ಯಾಪಾರಿಗಳಿಗೆ ಲಾಭವಿರುವುದು.
  • ಮಕರ
  • ಅಪ್ರಿಯ ಸತ್ಯವನ್ನು ಸ್ವೀಕರಿಸಲು ಅಸಾಧ್ಯವಾಗುವಂಥ ಹಿರಿಯ ನಾಗರಿಕರ ಬಳಿ ಹೇಳದಿರುವುದು ಒಳ್ಳೆಯದೆಂದು ಯೋಚಿಸುವಿರಿ. ಹೊಸ ಕೆಲಸಗಳ ಬಗ್ಗೆ ಯೋಜನೆಗಳನ್ನು ರೂಪಿಸಿಕೊಳ್ಳುವಿರಿ.
  • ಕುಂಭ
  • ಭಾಗವತ ಅಥವಾ ಮಹಾಭಾರತದಂತಹ ಧಾರ್ಮಿಕ ಉಪನ್ಯಾಸಗಳಲ್ಲಿ ಭಾಗವಹಿಸುವ ಅವಕಾಶ ದೊರೆಯುವ ಸಾಧ್ಯತೆ ಇದೆ. ವ್ಯವಹಾರ ನಿಮಿತ್ತವಾಗಿ ವಿದೇಶಯಾನವನ್ನು ಮಾಡುವ ಅವಕಾಶ ಸಿಗಲಿದೆ.
  • ಮೀನ
  • ವೃತ್ತಿ ವಿಷಯದಲ್ಲಿ ಏಳುಬೀಳುಗಳು ಸಹಜ ಎಂದು ಕಂಡುಕೊಂಡದ್ದನ್ನು ಕಿರಿಯರಿಗೂ ತಿಳಿಸುವಂಥ ಕೆಲಸ ಮಾಡುವಿರಿ. ಆರ್ಥಿಕವಾಗಿ ಬೆಳೆಯುವ ಅವಕಾಶವನ್ನು ಪಡೆಯಲಿದ್ದೀರಿ. ದೂರ ಸಂಚಾರದ ಸಾಧ್ಯತೆ ಇದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.